অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವರ್ಮಿ ಕಾಂಪೋಸ್ಟಿಂಗ್

ವರ್ಮಿ ಕಾಂಪೋಸ್ಟಿಂಗ್

ತ್ಯಾಜ್ಯಗಳು ಕಳೆತು ಹೋಗುವ ಸಂಪನ್ಮೂಲಗಳಲ್ಲದೆ ಬೇರೇನೂ ಅಲ್ಲ. ಕೃಷಿ, ಹೈನಗಾರಿಕ ಮತ್ತು ಪ್ರಾಣಿ ಸಾಕಣೆ ಚಟುವಟಿಕೆ ಯಿಂದ ದೊಡ್ಡ ಪ್ರಮಾಣದ ಸಾವಯವ ವಸ್ತುಗಳ ಉತ್ಪಾದನೆ ಯಾಗುವುದು. ಅವನ್ನು ದನದ ಕೊಟ್ಟಿಗೆಯಲ್ಲಿ ರಾಶಿ ಹಾಕಿದ ಆ ವಸ್ತುಗಳು ಕೊಳೆಯುವುದರಿಂದ ಕೆಟ್ಟವಾಸನೆ ಹೊರಡುವುದು. ಆದರೆ ಈ ಮೌಲ್ಯಯುತವಾದ ಸಂಪನ್ಮೂಲವನ್ನು ಕಂಪೋಸ್ಟು/ಗೊಬ್ಬರ ಮಾಡಿ ಸರಿಯಾಗಿ ಬಳಸಿದರೆ ಮೌಲ್ಯ ವರ್ಧಿತವಾದ ಉತ್ಪನ್ನ ದೊರಕುವುದು. ಅದೆ ಕೊಟ್ಟಿಗೆ ಗೊಬ್ಬರ.ಇದರ ಮುಖ್ಯ ಉದ್ಧೇಶ ಸಾವಯವ ತ್ಯಾಜ್ಯಗಳನ್ನು ಕಾಂಪೋಸ್ಟು ಮಾಡುವುದ, ಅದು ಬರಿ ಘನ ತ್ಯಾಜ್ಯಗಳ ವಿಲೆವಾರಿ ಮಾತ್ರವಲ್ಲ ಉತ್ತಮ ಗುಣ ಮಟ್ಟದ ಗೊಬ್ಬರ ಉತ್ಪಾದಿಸಿ “ಪೌಷ್ಟಿಕ/ ಸಾವಯವ ಹಸಿವೆ ಇರುವ ” ಮಣ್ಣಿಗೆ ಆಹಾರ ಒದಗಿಸುವುದೆ ಆಗಿದೆ.

ಸ್ಥಳಿಯ ಎರೆ ಹುಳ ಉಪಯೋಗಿಸ ಕಾಂಪೋಸ್ಟು ತಯಾರಿ

ಜಗತ್ತಿನಲ್ಲಿಎರಡು ಸಾವಿರದ ಐದು ನೂರು ಪ್ರಬೇಧದ ಎರೆ ಹುಳುಗಳನ್ನು ಗುರುತಿಸಲಾಗಿದೆ.ಅವುಗಳಲ್ಲಿ ಐದು ನೂರು ವಿಧಗಳು ಭಾರತದಲ್ಲಿವೆ. ಎರೆ ಹುಳುಗಳು ಮಣ್ಣಿನ ವೈವಿದ್ಯಕ್ಕೆ ಅನುಗುಣವಾಗಿವೆ. ಆದ್ದರಿಂದ ಸ್ಥಳಿಯ ವಾಗಿ ದೊರೆಯುವ ಎರೆ ಹುಳುವನ್ನು ಸ್ಥಳೀಯ ಮಣ್ಣಿನಲ್ಲಿ ವರ್ಮಿ ಕಾಂಪೋಸ್ಟು ಮಾಡಲು ಬಳಸುವುದು ಪ್ರಮುಖ ಹೆಜ್ಜೆಯಾಗಿದೆ.ಬೇರೆ ಕಡೆಯಿಂದ ಎರೆ ಹುಳುವನ್ನು ಆಮದು ಮಾಡಿಸಿಕೊಳ್ಳುವ ಅವಶ್ಯಕತೆಇಲ್ಲ.ಭಾರತದಲ್ಲಿ ಉಪಯೋಗಿಸುವ ಸ್ಥಳೀಯ ಎರೆಹುಳುಗಳು ಪೆರಿಯೊನಿಕ್ಸ ಎಕ್ಸಕ್ಯಾಟಸ್ ಮತ್ತು ಲ್ಯಾಂಪಿಟೊ ಮಾವರಿಟೈ. ಈ ಎರೆಹುಳುಗಳನ್ನು ಕಲ್ಚರ್ ಮಾಡಬಹುದು. ಅಥವ ಗುಂಡಿಗಳಲ್ಲಿ, ತೊಟ್ಟಿ ಸಿಮೆಂಟಿನ ರಿಂಗ್ ಗಳಲ್ಲಿ, ಅಥವ ಯಾವದೆ ಕಂಟೈನರುಗಳಲ್ಲಿ ಸರಳ ರೀತಿಯಲ್ಲಿ ಕಾಂಪೋಸ್ಟು ಮಾಡಲು ಬಳಸಬಹುದಾಗಿದೆ

ದೇಶಿಯ ಎರೆಹುಳುಗಳನ್ನು ಸಗ್ರಹಿಸುವುದು ಹೇಗೆ ?

ಎರೆಹುಳುಇರುವ ಮಣ್ಣನ್ನು ಅವು ಭೂಮಿಯ ಮೇಲ್ಭಾಗದಲ್ಲಿ ಹಾಕಿದ ಎದ್ದು ಕಾಣುವ ವಿಸರ್ಜನೆಯಿಂದ ಗುರುತಿಸ ಬಹುದಾಗಿದೆ.ಬೆಲ್ಲ 500ಗ್ರಾಂ ಮತ್ತು 500ಗ್ರಾಂ ಹಸಿ ಸೆಗಣಿಯನ್ನು 2 ಲೀಟರ್ ನೀರಿನಲ್ಲಿ ಕಲಸಿ. ಅದನ್ನು 1ಮಿ x 1ಮಿ ಭೂಮಿಯ ಮೆಲ್ಭಾಗದಲ್ಲಿರುವ ಮಣ್ಣೀನ ಮೇಲೆ ಚಿಮುಕಿಸಿ.ಅದರ ಮೇಲೆ ಹುಲ್ಲು ಹರಡಿ ಹಳೆಯ ಗೋಣಿ ಚೀಲದಿಂದ ಮುಚ್ಚಿರಿ.ಅದರ ಮೇಲೆ ನೀರನ್ನು 20 ರಿಂದ 30 ದಿನಗಳ ವರೆಗೆ ಚಿಮುಕಿಸುತ್ತಾಇರಿ. ಎಪಿಗೆಗಿಟಿಕ್ ಮತ್ತು ಅನೆಸಿಕ್ ದೇಸಿಯ ಎರಹುಳುಗಳು ಅಸ್ಥಳದಲ್ಲಿ ಕುಪ್ಪೆಯಾಗಿ ಕಾಣಿಸಿಕೊಳ್ಳುತ್ತವೆ ಆಗ ಅವನ್ನು ಸಂಗ್ರಹಿಸಿ.

ಕಾಂಪೋಸ್ಟು ಗುಂಡಿಯ ತಯಾರಿ

ಯಾವುದೆ ಅಳತೆಯ ಕಾಂಪೋಸ್ಟು ಗುಂಡಿಯನ್ನು ಹಿತ್ತಲ ತೋಟದಲ್ಲಿ ತೋಡಬಹುದು. ಅದು ಒಂದೆ ಗುಂಡಿ ಅಥವ ಯಾವದೆ ಅಳತೆಯ ಸಿಮೆಂಟು ತೊಟ್ಟಿಯೂ ಅಗಿರಬಹುದು.. ಆದರೆ ನೀರು ಹೋಗಲು ಸರಿಯಾದ ಅವಕಾಶವಿರಬೇಕು. ತುಂಬ ಅನುಕೂಲವಾದ ಗುಂಡಿಅಥವ ತೊಟ್ಟಿಯು ಸುಲಭವಾಗಿ ನಿರ್ವಹಿಸಬಹುದು ಅದು 2ಮಿx 1ಮಿ x 0.75ಮಿ ಅಳತೆಯದ್ದಾಗಿದ್ದರೆ ಕೆಲಸ ಸುಲಭ.ನಮಗೆ ಸಿಗಬಹುದಾದ ಜೈವಿಕ ತ್ಯಾಜ್ಯ ಮತ್ತುಕೃಷಿ ತ್ಯಾಜ್ಯಗಳಿಗೆ ಅನುಗುಣ ವಾಗಿ ಗುಂಡಿಯ ಅಥವ ತೋಟದ ಅಳತೆ ಇರಬೇಕು.ಇರುವೆಗಳ ದಾಳಿ ತಪ್ಪಿಸಲು ಎರೆಹುಳುವಿನ ಗೊಬ್ಬರದಗುಂಡಿಯ ಪ್ಯಾರಪೆಟ್ ಗೋಡೆಯ ನಡುವೆ ನೀರಿನ ಸಂಗ್ರಹ ವಿರಬೇಕು .

ನಾಲ್ಕು ಕೋಣೆಗಳ ತೊಟ್ಟಿ / ಗುಂಡಿ ಪದ್ದತಿ

“ನಾಲ್ಕು ಕೋಣೆಗಳ ತೊಟ್ಟಿ” ವಿಧಾನದ ಅಳವಡಿಕೆಯು ಎರೆಹುಳುಗಳ ಸುಗಮ ಚಲನೆಗೆ ಅವಕಾಶ ಕೊಡುತ್ತವೆ.ಹುಳುಗಳು ಪೂರ್ಣ ಕಾಂಪೋಸ್ಟ ಆದ ಒಂದು ಕೋಣೆಯಿಂದ ತ್ಯಾಜ್ಯ ವಸ್ತುಗಳಿರುವ ಇನ್ನೊಂದಕ್ಕೆ ಚಲಿಸುವವು.

ಹುಳುಹಾಸಿಗೆ ಬೆಡ್ ತಯಾರಿಕೆ

  • ಹುಳು ಹಾಸಿಗೆ (ಹುಳು= ಎರೆ ಹುಳುಗಳು ಹಾಸಿಗೆ= ಬೆಳಸುವ ಜಾಗ) ಗುಂಡಿಯ ತಳದಲ್ಲಿ ಒಂದು ಪದರ ಹಸಿಯಾದ ಜೇಡಿ ಮಣ್ಣನ್ನು ಹಾಕಬೇಕು. ಅದು 15 - 20 ಸೆಮಿ ದಪ್ಪವರವುದು. ಅದನ್ನು 5 ಸೆಮಿ ತಪ್ಪದ ತೆಳುವಾದ ಇಟ್ಟಂಗಿಯ ಪುಡಿ ಮತ್ತು ಒರಟು ಮರಳಿನ ಪದರದ ಮೇಲೆ ಹಾಕಬೇಕು.
  • ಎರೆಹುಳಗಳನ್ನು ಜೇಡಿಮಣ್ಣಿಲ್ಲಿ ಬಿಡಬೇಕು.ಸುಮಾರು150 ಹುಳುಗಳು ಅಲ್ಲೆ ಮನೆ ಮಾಡಿಕೊಳ್ಳವವು.ಕಾಪೋಸ್ಟು ಗುಂಡಿಯು ಅಂದಾಜು 2ಮಿ x 1ಮಿ x 0.75ಮಿ ಅಳತೆ ಹೊಂದಿದ್ದು ಹುಳು ಹಾಸಿಗೆಯು 15 ರಿಂಧ 20 ಸೆ.ನಿ ದಪ್ಪವಿರುವುದು.
  • ಹುಳು ಹಾಸಿಗೆಯ ಮೇಲೆ ಅಲ್ಲಿಲ್ಲಿ ದನದ ಹಸಿ ಸೆಗಣಿಯನ್ನು ಹಿಡಿಯಷ್ಟು ಹಾಕಬೇಕು.ನಂತರ ಕಾಂಪೋಸ್ಟು ಗುಂಡಿಯಲ್ಲಿ ಸುಮಾರು 5ಸೆ.ಮಿ ದಪ್ಪದ ಒಣಗಿದ ಎಲೆಗಳು ,ಅಥವ ಕತ್ತರಿಸಿದ ಹುಲ್ಲು ಅಥವ ಕೃಷಿಯಸಾವಾಯವ ವಸ್ತುಗಳ ಪದರವಿರುವುದು.ಮುಂದಿನ 30 ದಿನಗಳು ಅಗತ್ಯಬಿದ್ಧಾಗ ನೀರು ಹಾಕಿ ಅದರ ತೇವಾಂಶ ಕಡಿಮೆ ಯಾಗದಂತೆ ನೋಡಿಕೊಳ್ಳಲಾಗುವುದು.
  • ತಳದಲ್ಲಿ ಪ್ಲಾಸಟಿಕ್ ಹಾಳೆ ಹಾಕಬಾರದು. ಅವು ಉಷ್ಣವನ್ನು ಹಿಡಿದಿಡುತ್ತವೆ. ಮೊದಲ 30ದಿನಗಳ ನಂತರ ಹೋಟೇಲಿನ , ಹಾಸ್ಟೆಲಿನ, ಮನೆಯ ತೋಟದ ಪ್ರಾಣಿಗಳ , ಸಸ್ಯಗಳ ಈಗಾಗಲೆ ತುಸು ಕೊಳೆತ ಸಾವಯವ ತ್ಯಾಜ್ಯಗಳನ್ನು 5 ಸೆಮಿ ದಪ್ಪವಿರವಂತೆ ಹರಡಬೇಕು.ಇದನ್ನು ವಾರಕ್ಕೆ ಎರಡು ಸಲ ಮಾಡಬಹುದು.
  • ಈ ಎಲ್ಲ ಸಾವಯವ ತ್ಯಾಜ್ಯಗಳನ್ನು ಆಗಾಗ ಗುದ್ದಲಿ ಅಥವ ಸನಿಕೆಯಿಂದ ಮೇಲೆ ಕೆಳಗೆ ಮಾಡಿ ಚೆನ್ನಾಗಿ ಮಿಶ್ರಣಮಾಡಿ.

ಕಾಂಪೋಸ್ಟು ಯಾವಾಗ ಸಿದ್ದವಾಗುವುದು ?

ಕಾಂಪೋಸ್ಟ 60 ರಿಂದ 90 ದಿನಗಳಲ್ಲಿ (ಗುಂಡಿಯ ಅಳತೆಯ ಮೇಲೆ ಅವಲಂಬಿಸಿದೆ) ಸಿದ್ದ ವಾಗುತ್ತದೆ. ಅದು ಎರೆಹುಳುಗಳ ವಿಸರ್ಜನೆಯು ಮೇಲಿನ ಪದರದಲ್ಲಿ ಕಂಡಾಗ ಗೊತ್ತಾಗುತ್ತದೆ. ಈಗ ವರ್ಮಿ ಪೋಸ್ಟನ್ನು ಉಪಯೋಗಿಸಬಹುದು. ಕಾಂಪೋಸ್ಟಿನಿಂದ ಹುಳುಗಳನ್ನು ಬೇರ್ಪಡಿಸಲು , ಅದಕ್ಕೆ ನೀರುಹಾಕುವುದನ್ನು ನಿಲ್ಲಿಸಬೇಕು. ಇದರಿಂದ ಶೇಕಡಾ 80 ರಷ್ಟು ಹುಳುಗಳು ಹುಳು ಹಾಸಿಗೆಯ ತಳಕ್ಕೆ ಹೋಗುತ್ತವೆ.

  1. ಎರೆ ಹುಳುಗಳನ್ನು ಜರಡಿ ಅಥವ ತಂತಿಯ ಜಾಲರಿ ಬಳಸಿ ಬೇರ್ಪಡಿಸಬಹುದು. ಹುಳುಗಳು ಮೇಲ್ಭಾಗದಲ್ಲಿಯೆ ಉಳಿಯುತ್ತವೆ ಅವನ್ನಪುನಃ ಗುಂಡಿಗೆ ಹಾಕಿದರೆಪ್ರಕ್ರಿಯೆ ಮೊದಲಾಗುತ್ತದೆ.ಕಾಂಪೋಸ್ಟು ಮಣ್ಣಿನ ವಾಸನೆ ಹೊಂದಿರುವುದು. ಯಾವದೆ ಕಟ್ಟ ವಾಸನೆ ಇದ್ದರೆ ಕಾಂಪೋಸ್ಟು ಸಿದ್ದವಾಗಿಲ್ಲ, ಬ್ಯಾಕ್ಟೀರಿಯಾಗಳ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅರ್ಥ. ಹಳಸಿದ ವಾಸನೆ ಬಂದರೆ ಮೋಲ್ಟು ಇದೆ ಎನ್ನಬಹುದು. ಅಥವ ಶಾಖವು ಹೆಚ್ಚಾಗಿ ಸಾರಜನಕದ ನಷ್ಟವಾಗಿರಬಹುದು. ಹೀಗಾಗಿದ್ದರೆ ಅದನ್ನು ಚೆನ್ನಾಗಿ ಗಾಳಿಯಾಡಲು ಬಿಡಬೇಕು.ಅಥವ ಮೊದಲಿನಿಂದ ಶುರು ಮಾಡಬೇಕು..ಹೆಚ್ಚು ನಾರಿನ ಅಂಶಗಳನ್ನು ಸೇರಿಸ ಬೇಕು. ಅದನ್ನು ಶುಷ್ಕವಾಗಿಡಬೇಕು.ನಂತರ ಕಾಂಪೋಸ್ಟ ಅನ್ನು ಜರಡಿ ಹಿಡಿದು ಪ್ಯಾಕ್ ಮಾಡಬೇಕು.
  2. ಕುಯಿಲು ಮಾಡಿದ ಸಾಮಗ್ರಿಯನ್ನು ಹೊರಗೆ ಬಿಸಿಲಿಗೆ ಬಿಡಬೇಕು. ಆಗ ಬಹುತೇಕ ಎರೆಹುಳುಗಳು ತಂಪಾದ ತಳದೆಡಗೆ ಹೋಗುತ್ತವೆ.
  3. ಎರಡು ಅಥವ ನಾಲ್ಕು ಗುಂಡಿಯ ಪದ್ದತಿಯಲ್ಲಿ . ಪ್ರಥಮವಾಗಿ ಮೊದಲ ಭಾಗಕ್ಕೆ ನೀರು ಹಾಕುವುದನ್ನು ನಿಲ್ಲಿಸಬೇಕು.ಇದರಿಂದ ಎರೆ ಹುಳುಗಳು ತಮಗೆ ಹಿತವಾದ ವಾತಾವರಣ ವಿರುವ ಭಾಗಕ್ಕೆ ತಾವಾಗಿಯೇ ಹೋಗುವವು. ಈ ಕೆಲಸವನ್ನು ವೃತ್ತೀಯ ಕ್ರಮದಲ್ಲಿ ಮಾಡಿದರೆ ಸತತವಾಗಿ ಗೊಬ್ಬರವನ್ನು ಪಡೆಯಬಹುದು.

ಎರೆಹುಳು ಕಾಂಪೋಸ್ಟಿಂಗ್ ನ ಅನುಕೂಲಗಳು

  • ಸಾವಯವ ತ್ಯಾಜ್ಯಗಳು ಎರೆಹುಳುಗಳಿಂದ ಬಹು ತಿವ್ರವಾಗಿ ವಿಘಟನೆ ಹೊಂದದುವವು.ಅದರಿಂದ ಸ್ಥಿರವಾದ ವಿಷವಲ್ಲದ ಸಾಮಗ್ರಿಯಾಗುವವು. ಅವಕ್ಕೆ ಉತ್ತಮ ಆರ್ಥಿಕ ಮೌಲ್ಯ ಬರುವ ಸಂಭವ ಇದೆ. ಅವು ಸಸ್ಯಗಳ ಬೆಳವಣಿಗೆಗೆ ನಿಯಂತ್ರಕಗಳಾಗಿ ಕೆಲಸ ಮಾಡುವವು.
  • ವರ್ಮಿ ಕಾಂಪೋಸ್ಟ ಸೂಕ್ತವಾದ ಲವಣಾಂಶಗಳ ಸಮತೋಲನ, ಪೌಷ್ಟಿಕತೆ ದೊರೆಯುವುವಿಕೆ ಮತ್ತು ಸಂಕೀರ್ಣ-ಗೊಬ್ಬರದ ಹರಳುಗಳಾಗಿ ಕೆಲಸ ಮಾಡುವುದು.
  • ಎರೆಹುಳು ಗೊಬ್ಬರ ತಯಾರಿಕೆಯು ರೋಗ ಹರಡುವ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಸಹಾಯಕ. ಆದ್ದರಿಧ ಇದು ಕಾಂಪೋಸ್ಟಿಘ ಗಿಂತ ಭಿನ್ನವೇನಲ್ಲ.
  • ಎರೆಹುಳು ಗೊಬ್ಬರ ತಯಾರಿಕೆಯು ಪರಿಸರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯಕ. ತ್ಯಾಜ್ಯಗಳನ್ನು ಹಾಗೆಯೇ ಬಿಟ್ಟರೆ ಬರಬಹುದಾದ ತೊಂದರೆಗಳು ತಪ್ಪುತ್ತವೆ.
  • ಎರೆಹುಳು ಗೊಬ್ಬರತಯಾರಿಕೆಯು ಆರ್ಥಿಕವಾಗಿ ದುರ್ಬಲವಾಗಿರುವ , ಅವಕಾಶ ವಂಚಿತರಿಗೆ ಒಂದು ಉಪಯುಕ್ತ ಗೃಹ ಕೈಗಾರಿಕೆ ಇದು ಅವರಿಗೆ ಹೆಚ್ಚುವರಿ ಆದಾಯತರುವುದು.
  • ಎಲ್ಲ ಗ್ರಾಮಗಳು ನಿರುದ್ಯೋಗಿ ಯುವಕರ / ಮಹಿಳಾ ಗುಂಪುಗಳ ಸಹಕಾರಿ ಸಂಘಗಳನ್ನು ರಚಿಸಿದರೆ, ಅವರನ್ನು ಎರೆಗೊಬ್ಬರ ತಯಾರಿಕೆ ಮಾಡಲು ತೊಡಗಿಸುವುದು ಜಾಣತನ. ಅದನ್ನು ಗ್ರಾಮದಲ್ಲೆಶಿಫಾರ್ಸು ಮಾಡಿದ ಬೆಲೆಗೆ ಮರಾಟಮಾಡಬಹುದು. ಯುವಕರಿಗೆ ಹಣ ಸಂಪಾದನೆ ಆಗುವುದು. ಜತೆಗೆ ಸಮಾಜಕ್ಕೂ ಸಹಾಯವಾಗುವುದು. ಅದರಿಂದ ಸುಸ್ಥಿರ ಕೃಷಿಗೆ ಸಾವಯವ ಗೊಬ್ಬರ ಬಳಸಬಹುದು.
ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate