1. ಮೀನು ಮರಿ ಬಿತ್ತನೆ ಮತ್ತು ಕೃತಕ ಆಹಾರ ಸಾಗಾಣಿಕೆ:
ದೊಡ್ಡ ಗಾತ್ರದ ಬಿತ್ತನೆ ಮೀನು ಮರಿಗಳನ್ನು ಮೀನುಗಾರಿಕೆ ಇಲಾಖೆಯ ಮೀನುಮರಿ ಉತ್ಪಾದನಾ ಕೇಂದ್ರ/ಮೀನುಮರಿ ಪಾಲನಾ ಕೇಂದ್ರ ಅಥವಾ ಸರ್ಕಾರದಿಂದ ಅನುಮೋದಿಸಲ್ಪಟ್ಟ ಖಾಸಗಿ ಮೀನುಮರಿಗಳ ಉತ್ಪಾದನಾ ಕೇಂದ್ರಗಳಿಂದ ಖರೀದಿಸಿ, ಬಿತ್ತನೆ ಮಾಡುವ ಪ್ರದೇಶಗಳಿಗೆ ಸಾಗಿಸಬೇಕಾಗುತ್ತದೆ ಮತ್ತು ಕೃತಕ ಆಹಾರ ಸರಬರಾಜುದಾರರಿಂದ ಖರೀದಿಸಿ ಸಣ್ಣ ಸಣ್ಣ ಚೀಲಗಳಲ್ಲಿ ಪ್ಯಾಕ್ ಮಾಡಿ ಫಲಾನುಭವಿಗಳಿಗೆ ಒದಗಿಸಬೇಕು.
2. ಮೀನು ಮರಿ ಬೆಳವಣಿಗೆಯ ಪರಿಶಿಲನೆ:
ಸ್ಥಳೀಯ ಮೀನುಗಾರರನ್ನು ನೇಮಿಸಿಕೊಂಡು ಮೀನು ಮರಿಗಳ ಬೆಳವಣಿಗೆಯನ್ನು ಕಾಲ ಕಾಲಕ್ಕೆ ಬಲೆಗಳ ಸಹಾಯದಿಂದ ಹಿಡಿದು ಬೆಳವಣಿಗೆಯನ್ನು ಪರೀಕ್ಷಿಸಬೇಕಾಗುತ್ತದೆ. ಬೀಸುವ ಬಲೆ(ಅಚಿsಣ ಟಿeಣ), ಬಿಡು ಬಲೆ (giಟಟ ಟಿeಣ) ಅಥವಾ ಎಳೆ ಬಲೆ (ಜಡಿಚಿg ಟಿeಣ) ಗಳ ಸಹಾಯದಿಂದ ಮೀನುಗಾರರು ಮೀನಿನ ಬೆಳವಣಿಗೆಯನ್ನು ಪರಿಶೀಲಿಸಬೇಕಾಗುತ್ತದೆ.
ಈ ಮೇಲೆ ವಿವರಿಸಿರುವ ಎಲ್ಲಾ ಚಟುವಟಿಕೆಗಳನ್ನು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಹಾಯಕ ಕೃಷಿ ನಿರ್ದೇಶಕರು ಒಟ್ಟಾರೆ ಉಸ್ತುವಾರಿ ನಿರ್ವಹಿಸುವುದು.
ಈ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳು ಸ್ಥಳೀಯ ಮೀನುಗಾರಿಕೆ ಇಲಾಖೆ/ ಮೀನು ಕೃಷಿಕರ ಅಭಿವೃದ್ಧಿ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು.
ಕೊನೆಯ ಮಾರ್ಪಾಟು : 2/15/2020