• ಮೀನುಗಾರಿಕೆಗೆ ಸೂಕ್ತವಾದ ಜಲ ಸಂಗ್ರಹಣಾ ವಿನ್ಯಾಸಗಳಾದ ಕೃಷಿ ಹೊಂಡ, ನಾಲಾ ಬದು, ತಡೆ ಅಣೆ, ಮತ್ತು ಸಣ್ಣ ಕೆರೆಗಳಲ್ಲಿ ಅವುಗಳಲ್ಲಿನ ನೀರು ನಿಲ್ಲುವ ಸಾಮಥ್ರ್ಯ, ನೀರು ನಿಲ್ಲುವ ಅವಧಿ, ಮಣ್ಣಿನ ಗುಣ ಮತ್ತು ರೈತರ/ಸ್ವಸಹಾಯ ಗುಂಪಿಗೆ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಇರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಜಲವಿನ್ಯಾಸಗಳನ್ನು ಗುರುತಿಸುವುದು.
• ರೈತರಿಗೆ ಮೀನು ಮರಿ ಬಿತ್ತುವ ಮುನ್ನ, ಮೀನು ಮರಿ ಬಿತ್ತನೆ ಸಮಯದಲ್ಲಿ ಮತ್ತು ಬಿತ್ತನೆ ನಂತರದ ಮೀನು ಕೃಷಿ ನಿರ್ವಹಣೆ ಕುರಿತು ಮಾಹಿತಿ ನೀಡುವುದು (ತರಬೇತಿ ಕಾರ್ಯಕ್ರಮ).
• ಮೀನು ಮರಿ ಬಿತ್ತನೆ ಸಂಖ್ಯೆ (ಸಾಂದ್ರತೆ) ಮತ್ತು ಕಾರ್ಯ ನಿರ್ವಹಣೆಯ ಬೇಡಿಕೆಗಳನ್ನು ಪ್ರತಿ ಜಲ ವಿನ್ಯಾಸಕ್ಕನುಗುಣವಾಗಿ ನಿರ್ಧರಿಸುವುದು.
• ಜಲ ಸಂಗ್ರಹಣಾ ಕೃಷಿ ವಿನ್ಯಾಸಗಳಿಗನುಗುಣವಾಗಿ ನಿರ್ಧರಿಸಿದ ನಂತರ ತಳಿ ಬಿತ್ತನೆ ಮೀನು ಮರಿಗಳನ್ನು ಹತ್ತಿರದ ಮೀನು ಮರಿ ಉತ್ಪಾದನಾ/ಪಾಲನಾ ಕೇಂದ್ರದಿಂದ ಪಡೆದು ಬಿತ್ತನೆ ಮಾಡುವುದು.
• ಸೂಚನೆ : ಮೀನುಗಳ ಬೆಳವಣಿಗೆ ಮತ್ತು ಬದುಕುಳಿಯುವಿಕೆ ಹೆಚ್ಚಿಸಲು ರೈತರು ಬಹು ಮುಖ್ಯವಾಗಿ ಮೀನು ಮರಿ ಬಿತ್ತನೆಗೆ ಮುನ್ನ ಮತ್ತು ಮೀನು ಮರಿ ಬಿತ್ತನೆ ನಂತರದ ಕಾರ್ಯಚಟುವಟಿಕೆಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
• ಮೀನಿನ ಬೆಳವಣಿಗೆಯನ್ನು ಪರೀಕ್ಷಿಸಲು ಆಗಿಂದಾಗ್ಗೆ ನೀರಿನ ಗುಣಮಟ್ಟ ಮತ್ತು ಪ್ರಾಯೋಗಿಕವಾಗಿ ಬಲೆಯನ್ನು ಉಪಯೋಗಿಸಿ ಮೀನನ್ನು ಹಿಡಿದು ಪರಿಶೀಲಿಸಬೇಕಾಗುತ್ತದೆ.
• ಮೀನಿನ ಬೆಳವಣಿಗೆ ಮತ್ತು ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ, ಮೀನು ಹಿಡುವಳಿ ಮಾಡುವುದು
ಮೀನುಗಾರಿಕೆ ಅಭಿವೃದ್ಧಿಯನ್ನು ವಿವಿಧ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಈ ಕೆಳಗೆ ತಿಳಿಸಿರುವ ಚಟುವಟಿಕೆಗಳ ಮೂಲಕ ಅನುಷ್ಠಾನಗೊಳಿಸಲಾಗುವುದು.
ತರಬೇತಿ: ಜಲ ವಿನ್ಯಾಸಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಆಸಕ್ತಿ ಇರುವ ರೈತರಿಗೆ ಮೀನು ಪಾಲನೆಯ ಬಗ್ಗೆ ಒಂದು ದಿನದ ತರಬೇತಿಯನ್ನು ನೀಡಲಾಗುವುದು.
• ತರಬೇತಿಯಲ್ಲಿ ಬಿತ್ತನೆಗೆ ಮೊದಲು ಕೊಳಗಳ ತಯಾರಿ, ಪಾಲನೆ, ಯೋಗ್ಯ ತಳಿ ಮೀನುಗಳು, ಮೀನು ಮರಿ ಬಿತ್ತನೆ, ಕೃತಕ ಆಹಾರ ನೀಡುವಿಕೆ ಹಾಗೂ ಫಲವತ್ತತೆಯನ್ನು ಕಾಪಾಡಲು ಸಾವಯವ ಗೊಬ್ಬರ ನೀಡುವುದರ ಬಗ್ಗೆ ತಿಳುವಳಿಕೆ ನೀಡಲಾಗುವುದು.
• ಇದಲ್ಲದೆ ಗ್ರಾಮದ ಕೆರೆಗಳಲ್ಲಿ ಮೀನು ಪಾಲನೆಯನ್ನು ಕೈಗೊಳ್ಳಲು ಅರ್ಹ ಫಲಾನುಭವಿಗಳನ್ನು (ಸ್ವಸಹಾಯ ಗುಂಪಿನ ಸದಸ್ಯರು/ವೈಯಕ್ತಿಕ ಫಲಾನುಭವಿಗಳು) ಆಯ್ಕೆ ಮಾಡಿ 3-4 ದಿನಗಳ ತರಬೇತಿಯನ್ನು ನೀಡಲಾಗುವುದು.
• ಫಲಾನುಭವಿಗಳ ಆಯ್ಕೆಯನ್ನು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅನುಷ್ಠಾನಾಧಿಕಾರಿಗಳು ನಿರ್ವಹಿಸುವುದು.
• ಕೃಷಿ ಹೊಂಡ/ನಾಲಾಬದು ಮುಂತಾದ ಜಲ ವಿನ್ಯಾಸಗಳಲ್ಲಿ ಮೀನು ಪಾಲನೆ ಬಗ್ಗೆ ಒಂದು ದಿನದ ತರಬೇತಿಯನ್ನು ರೈತರ ಸಂಖ್ಯೆಯನ್ನು ಆಧರಿಸಿ ಸ್ಥಳೀಯವಾಗಿ ಹಮ್ಮಿಕೊಳ್ಳಬಹುದಾಗಿದೆ ಮತ್ತು ಸ್ವ ಸಹಾಯ ಗುಂಪಿನ ಸದಸ್ಯರಿಗೆ 3-4 ದಿನಗಳ ತರಬೇತಿಯನ್ನು ಸಮೀಪದ ಮೀನುಗಾರಿಕೆ ಇಲಾಖೆಯ/ಮೀನು ಕೃಷಿಕರ ಅಭಿವೃದ್ಧಿ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳುವುದು.
• ವಿವಿಧ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಮೀನುಸಾಕಾಣಿಕೆ:
ಕೊನೆಯ ಮಾರ್ಪಾಟು : 6/19/2020