ಮಣ್ಣು, ಭೂಮಿಯ ಮೇಲ್ಭಾಗದಲ್ಲಿರುವ ಹವಾಮಾನ ಕ್ರಿಯೆಗೊಂಡ ತೆಳುವಾದ ಹಾಸಿಗೆ, ಇದು ಖನಿಜ ಮತ್ತು ಸೇಂದ್ರೀಯ ದ್ರವ್ಯಗಳಿಂಧ ಸಿದ್ಧವಾಗಿದೆಯಲ್ಲದೆ ಸಸ್ಯ ವರ್ಗದ ಬೆಳವಣಿಗೆಗೆ ಆಧಾರವಾಗಿದೆ. ಸಸ್ಯಗಳ ಬೇರುಗಳು ಬೆಳೆಯಲು ಮಣ್ಣು ಆಧಾರವನ್ನೊದಗಿಸುತ್ತದೆ. ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು. ಅಲ್ಲದೆ, ಸಸ್ಯಗಳಿಗೆ ಬೇಕಾಗುವ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ.
ಆಹಾರಗಳ ಉತ್ಪಾದನೆ, ಸೌದೆ ಮತ್ತು ವಸತಿಗೆ ಅವಶ್ಯವಿರುವ ವಸ್ತುಗಳ ಉತ್ಪಾದನೆಯಲ್ಲೂ ಮಾನವನು ಭೂಮಿಯ ಮೇಲೆ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಮಣ್ಣನ್ನು ಅವಲಂಬಿಸಿದ್ದಾನೆ.
ಮಣ್ಣಿನ ಉತ್ಪಾದನಾ ಸಾಮಥ್ರ್ಯವನ್ನು ಉನ್ನತ ಮಟ್ಟದಲ್ಲಿಟ್ಟುಕೊಂಡು ಉತ್ತಮ ಸ್ಥಿತಿಯಲ್ಲಿಯೇ ಅದನ್ನು ಮುಂದಿನ ಪೀಳಿಗೆಗೆ ವಹಿಸಿಕೊಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ.
ಮಣ್ಣನ್ನು ಒಂದು ಬಹು ಸ್ಥಿತಿಯುಳ್ಳ ವ್ಯವಸ್ಥೆ ಎಂದು ಹೇಳಬಹುದು. ಈ ವ್ಯವಸ್ಥೆಯಲ್ಲಿ ಈ ಕೆಳಕಂಡ ಸ್ಥಿತಿಗಳನ್ನು ಗುರುತಿಸಬಹುದು.
ಇವುಗಳು ತಟಸ್ಥವಾಗಿರದೆ ಒಂದು ಮತ್ತೊಂದರೊಡನೆ ಅಂತಕ್ರಿಯೆ ಹೊಂದುತ್ತಿರುತ್ತದೆ. ಈ ಕಾರಣದಿಂದ ಮಣ್ಣಿನ ಸಂಯೋಜನೆಯು ಸದಾಕಾಲವೂ ಒದಲಾದ ರೀತಿಯಲ್ಲಿರುತ್ತದೆ.
ಇವುಗಳು ಮೂಲತ: ಭೂಮಿಯ ಮೇಲೆ ಇರುವ ಶಿಲೆ ಹಾಗೂ ಖನಿಜ ವಸ್ತುಗಳ ವಿಘಟನೆಯಿಂದ ಉಂಟಾಗುತ್ತವೆ. ಮಣ್ಣು ಶೇ. 45 ರಷ್ಟು ಭಾಗ ನಿರವಯವ ವಸ್ತುಗಳಿದ್ದು ದೊಡ್ಡ ಗಾತ್ರದ ಕಲ್ಲು, ಗುಂಡುಗಳಿಂದ ಹಿಡಿದು ಅತಿ ಸಣ್ಣ ಗಾತ್ರದ ಜೇಡಿ ಕಣಗಳವರೆಗೂ ಇರುತ್ತವೆ. ಈ ಅಸಂಖ್ಯಾತ ಗಾತ್ರದ ಕಣಗಳನ್ನು ವರ್ಗಗಳಾಗಿ ವಿಂಗಡಿಸಬಹುದು. ಗರಸು, ದಪ್ಪ ಮರಳು, ಸಣ್ಣ ಮರಳು, ಒಂಡು ಮತ್ತು ಜೇಡಿ.
ದೊಡ್ಡ ಗಾತ್ರದ ಕಣಗಳನ್ನು ಒಳಗೊಂಡ ಗರಸು, ಮರಳು ಮತ್ತು ಒಂಡುಗಳು ಸಸ್ಯ ಪೋಷಕಾಂಶಗಳ ದೃಷ್ಠಿಯಿಂದ ಅಷ್ಟು ಪ್ರಾಮುಖ್ಯವೆನಿಸುವುದಿಲ್ಲ. ಏಕೆಂದರೆ ಇವುಗಳಲ್ಲಿ ಪೋಷಕಗಳು ಪ್ರಾಥಮಿಕ ಖನಿಜಗಳ ರೂಪದಲ್ಲಿರುತ್ತದೆ. ಆದರೆ ಈ ಗಾತ್ರದ ಕಣಗಳು ಸಸ್ಯಗಳಿಗೆ ಬೇಕಾದ ಆಧಾರವನ್ನು ಒದಗಿಸುತ್ತವೆ.
ಅತಿ ಸಣ್ಣ ಗಾತ್ರದ ಜೇಡಿ ಖನಿಜವು ಸಸ್ಯ ಪೋಷಕಾಂಶಗಳ ದೃಷ್ಠಿಯಿಂದ ಬಹಳ ಮುಖ್ಯವೆನಿಸುತ್ತವೆ. ಇವುಗಳು ಸಸ್ಯ ಪೋಷಕಾಂಶಗಳನ್ನು ಹಿಡಿದಿಟ್ಟುಕೊಂಡಿರುತ್ತವೆ. ಮತ್ತು ಸಸ್ಯಗಳಿಗೆ ಒದಗಿಸುತ್ತದೆ.
ಮಣ್ಣಿನಲ್ಲಿರುವ ಸಾವಯವ ವಸ್ತುಗಳು
ಮಮಣ್ಣಿನಲ್ಲಿರುವ ಸಾವಯವ ವಸ್ತುಗಳು ಈ ಕೆಳಗಿನ ರೂಪದಲ್ಲಿರುತ್ತವೆ. :
ಸಾವಯವ ಪದಾರ್ಥದ ಮೂಲ : ಹಲವಾರು ಮೂಲಗಳಿಂದ ಸಾವಯವ ಪದಾರ್ಥಗಳು ಮಣ್ಣಿನಲ್ಲಿ ಸಂಗ್ರಹವಾಗುತ್ತದೆ, ಅವುಗಳೆಂದರೆ :
ಶಿಲೆಗಳು ಹವಾ ಕ್ರಿಯೆಗೊಳಗಾಗಿ ಪರಿವರ್ತನೆ ಹೊಂದಿ ಮಣ್ಣಿನ ರೂಪವನ್ನು ಹೊಂದುವುದಕ್ಕೆ ಮಣ್ಣಿನ ಉತ್ಪತ್ತಿ ಎನ್ನುವರು. ಶಿಲೆಗಳು, ಖನಿಜಗಳು ಮತ್ತು ಸೇಂದ್ರೀಯ ದ್ರವ್ಯಗಳ ಬೌತಿಕ ಮತ್ತು ರಾಸಾಯನಿಕ ಸವಕಳಿಯಂದ ಮಣ್ಣಿನ ಉತ್ಪತ್ತಿಯಾಗುತ್ತದೆ.
ಮಣ್ಣಿನ ನಿರ್ಮಾಣವು ಪ್ರಮುಖವಾಗಿ ಮೂಲ ಶಿಲಾವಸ್ತು (ಶ), ಹವಾಮಾನ (ಹ), ಭೂಮಿಯ ಇಳಿಜಾರು (ಇ), ಜಿವಿಗಳು (ಜಿ), ಮತ್ತು ಸಮಯ (ಸ), ಈ ಅಂಶ (ಅ) ಗಳನ್ನು ಅವಲಂಬಿಸಿದೆ.
ಹವಾಮಾನ ಮತ್ತು ಜೀವಿಗಳ ಸಮಗ್ರ ಕ್ರಿಯೆಯು ಮೂಲ ಶಿಲಾವಸ್ತುಗಳ ಮೇಲೆ ನೂರಾರು ವರ್ಷಗಳ ಕಾಲ ನಡೆಯುವುದರಿಂದ ಮಣ್ಣಿನ ಉತ್ಪತ್ತಿಯಾಗುತ್ತದೆ.
ಭೂಮಿಯ ಮೇಲ್ಭಾಗದಲ್ಲಿರುವ ಹಲವಾರು ಶಿಲೆ ಮತ್ತು ಖನಿಜಗಳ ಮೇಲೆ ಉಂಟಾಗುವ ಹವಾ ಕ್ರಿಯೆಯಿಂದ ಮಣ್ಣು ಉತ್ಪತ್ತಿಯಾಗುತ್ತದೆ. ಹವಾಕ್ರಿಯೆಯಲ್ಲಿ ಎರಡು ವಿಧದ ಹವಾಕ್ರಿಯೆಯನ್ನು ಗುರುತಿಸಬಹುದು.
ಭೌತಿಕ ಹವಾಕ್ರಿಯೆ ಮತ್ತು ರಾಸಾಯನಿಕ ಹವಾಕ್ರಿಯೆ
ಭೌತಿಕ ಹವಾಕ್ರಿಯೆಯಿಂದ ಮೂಲ ಶಿಲೆಗಳು ಛಿದ್ರ ಛಿಧ್ರಗೊಂಡು ಸಣ್ಣ ಗಾತ್ರದ ವಸ್ತುಗಳಾಗಿ ಮಾರ್ಪಾಡಾಗುತ್ತವೆ. ರಾಸಾಯನಿಕ ಹವಾಕ್ರಿಯೆಯಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತವೆ.
ಭೌತಿಕ ಮತ್ತು ರಾಸಾಯನಿಕ ಕ್ರೀಯೆಗಳೆರಡು ಏಕ ಸಮಯದಲ್ಲಿಯೇ ಸಾಗಿರುತ್ತವೆ. ಅದ್ರ್ರ ಮತ್ತು ಉಷ್ಣ ವಾತಾವರಣದಲ್ಲಿ ರಾಸಾಯನಿಕ ಕ್ರಿಯೆಯು ಜಾಗೃತವಾಗಿರುತ್ತದೆ.
ಇನ್ನೂ ಹವಾಕ್ರಿಯೆಗೊಳ್ಳದಿರುವ ಶಿಲೆಗಳು ಮತ್ತು ಖನಿಜಗಳು, ದ್ರಾವಣ, ಉತ್ಕರ್ಷಣ, ಜಲಸಂಯೋಗ, ಜಲವಿಶ್ಲೇಷಣೆ, ಇಂಗಾಲೀಕರಣ ಮೊದಲಾದ ಪ್ರಕ್ರಿಯೆಗಳಿಂದ ವಿಭಜನೆಯಾಗುತ್ತದೆ.
ವಿಭಜನೆಯಿಂದ ಉಂಟಾದ ಸಾಮಗ್ರಿಗಳು ಹೊಸ ಸಂಯುಕ್ತ ವಸ್ತುಗಳಾಗಿ ಸಂಶ್ಲೇಷಣೆ ಹೊಂದುತ್ತವೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ, ವಿವಿಧ ಬಗೆಯ ಜೇಡಿ ಖನಿಜಗಳು, ಹ್ಯೂಮಸ್, ಜಲಸಂಯುಕ್ತಸಿಲಿಕಾ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಜಲಸಂಯುಕ್ತ ಹೈಡ್ರಾಕ್ಸೈಡ್, ಮೆಗ್ನೀಶಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಸೋಡಿಯಂಗಳ ಕಾರ್ಬೋನೇಟುಗಳು ಹಾಗೂ ಮ್ಯಾಂಗನೀಸ್ ಮತ್ತು ಟೈಟಾನಿಯಂ ಅಕ್ಸೈಡ್‍ಗಳು ಇತ್ಯಾದಿಗಳು.
ಇಲ್ಯೂಮಿಯೇಷನ್ ಕ್ರಿಯೆಯಲ್ಲಿ ಮಣ್ಣಿನ ದ್ರಾವಣದಲ್ಲಿ ಕರಗಿದ ಸಾಮಗ್ರಿಗಳ ಸಂಯುಕ್ತ ವಸ್ತುಗಳು ಮತ್ತು ಜೇಡಿ ಕಣಗಳು ಕೆಳ ಪದರದಲ್ಲಿ ಮಂದಗಟ್ಟುತ್ತವೆ. ಮೇಲ್ಭಾಗದಲ್ಲಿರುವ ಜೇಡಿ ಮತ್ತು ಹ್ಯೂಮಸ್, ಮೇಲ್ಪದರದಿಂದ ಕೆಳಪದರದಲ್ಲಿ ಮಂದಗಟ್ಟುವಿಕೆಯಾಗುವುದರಿಂದ ಕೆಲವು ಧನ ವಿದ್ಯುತ್‍ಕಣಗಳು ಮತ್ತು ಋಣ ವಿದ್ಯುತ್‍ಕಣಗಳನ್ನು ಹಿಡಿದುಕೊಂಡಿರುತ್ತದೆ. ಇದನ್ನೇ ಇಲ್ಲೂವಿಯಲ್ ಪದರವೆಂದು ಕರೆಯುತ್ತಾರೆ.
ಇದು ಇಲ್ಯೂವಿಯೇಷನ್‍ಗೆ ವಿರುದ್ದವಾದದ್ದು, ಎಲ್ಯೂವಿಯೇಷನ್ ಎಂದರೆ ಮಣ್ಣಿನ ಮೇಲಿನ ಪದರದಲ್ಲಿರುವ ವಸ್ತುಗಳನ್ನು ಹೊರತೆಗೆಯುವುದು ಎಂದರ್ಥ. ಜೇಡಿ ಹ್ಯೂಮಸ್ ಮತ್ತು ವಿದ್ಯುತ್ ಕಣಗಳು (ಸಲ್ಫೇಟ್, ನೈಟ್ರೇಟ್ ಮತ್ತು ಕ್ಯಾಲ್ಸಿಯಂ ಇತ್ಯಾದಿ) ಬಸಿಯುವಿಕೆ ನೀರಿನಲ್ಲಿ ತೊಳೆದು ಹೋಗುತ್ತವೆ.
ಈ ಕ್ರಿಯೆಯು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ನಡೆಯುವುದು. ಶುಷ್ಕ ಪ್ರದೇಶಗಳಲ್ಲಿ, ಮಣ್ಣಿನ ಕೆಳಪದರಗಳಲ್ಲಿ ಕ್ಯಾಲ್ಸಿಯಂ ಕಾರ್ಬೋನೆಟಿನ ಸಂಗ್ರಹವಾಗುತ್ತದೆ. ಕ್ಯಾಲ್ಸಿಫಿಕೇಷನ್ ಕ್ರಿಯೆಯಿಂದ ಉತ್ಪತ್ತಿಯಾದ ಮಣ್ಣುಗಳ ಪ್ರಮುಖ ಗುಣಧರ್ಮಗಳೆಂದರೆ :
ಪಾಡ್‍ಸೋಲೈಜೇಷನ್ : ಅಧಿಕ ಆದ್ರಂತೆ, ಕಡಿಮೆ ಉಷ್ಣತಾಪಮಾನ ಮತ್ತು ಕಾಡು ಇರುವಲ್ಲಿ ಈ ಕ್ರಿಯೆಯು ನಡೆಯುವುದು. ಮಣ್ಣಿನ ಮೇಲ್ಭಾಗದಲ್ಲಿ ಸಾವಯವ ಪದಾರ್ಥದ ಸಂಗ್ರಹವಿರುವುದು. ಸೆಸ್ಕ್ವಿಆಕ್ಸೈಡ್ ಮತ್ತು ಕಬ್ಬಿಣದ ಲವಣಗಳು ಮೇಲಿನ ಪದರದಿಂದ ಕೆಳಗಿನ ಪದರಕ್ಕೆ ಬಸಿದುಹೋಗಿ, ಕೆಳಗಿನ ಪದರವು ಬಿಳಿಚಿಕೊಂಡಿರುತ್ತದೆ.
ಸಸ್ಯಗಳು ಬೆಳೇದು ಅಭಿವೃದ್ಧಿಗೊಂಡು ತಮ್ಮ ಜೀವನಚಕ್ರವನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಲು ಬೆಳಕು, ಉಷ್ಣತೆ, ಆಮ್ಲಜನಕ, ಇಂಗಾಲದ ಡೈ ಆಕ್ಸೈಡ್, ನೀರು ಪೋಷಕಾಂಶಗಳ ಅವಶ್ಯಕತೆ ಇದೆ. ಕೃಷಿ ವಿಜ್ಞಾನಗಳ ಪ್ರಕಾರ ಒಟ್ಟು 17 ಜಲಜನಕ ಮತ್ತು ಆಮ್ಲಜನಕಗಳು ಬಹಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳು ಬೇಕಾಗುತ್ತವೆ. ಇವುಗಳನ್ನು ಸಸ್ಯಗಳು ಗಾಳಿ ಮತ್ತು ನೀರಿನಿಂಧ ಪಡೆದುಕೊಳ್ಳುತ್ತವೆ. ಉಳಿದ 14 ಪೋಷಕಾಂಶಗಳು ಸಸ್ಯಗಳು ಪ್ರುಖವಾಗಿ ಮಣ್ಣಿನ ಮೂಲಕ ದೊರೆಯುತ್ತದೆ.
ಈ ಪೋಷಕಾಂಶಗಳನ್ನು ಸಸ್ಯಗಳಿಗೆ ಬೇಕಾಗುವ ಪ್ರಮಾಣದ ಆಧಾರದ ಮೇಲೆ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ.
ಪ್ರಧಾನ ಪೋಷಕಾಂಶಗಳು ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಪೈಕಿ ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ ಹಲವು ಕಿಲೋಗ್ರಾಂಗಳಷ್ಟು ಪ್ರಮಾಣದಲ್ಲಿ ಬೇಕಾಗುವ ಕಪೋಷಕಾಂಶಗಳನ್ನು ಪ್ರಧಾನ ಪೋಷಕಾಂಶಗಳೆನ್ನುತ್ತಾರೆ. ಅವುಗಳೆಂದರೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್.
ಸಾರಜನಕವು ಸಸ್ಯಗಳಲ್ಲಿ ಒಂದು ಬಹು ಮುಖ್ಯ ಪೋಷಕ ಮೂಕವಸ್ತು. ಮಣ್ಣಿನಲ್ಲಿ ಸಾರಜನಕವು ಮುಖ್ಯವಾಗಿ ಸಾವಯವ ರೂಪದಲ್ಲಿರುತ್ತದೆ. ಸಾರಜನಕವು ನ್ಯಟ್ರೇಟ್ ಮತ್ತು ಅಮೋನಿಯಂ ವಿದ್ಯತ್ ಕಣಗಳ ರೂಪದಲ್ಲಿರುತ್ತದೆ. ಈ ಪೋಷಕಾಂಶವಿಲ್ಲದೆ, ಸಸ್ಯಗಳ ಜೀವನಚಕ್ರ ಪೂರ್ತಿಯಾಗುವುದಿಲ್ಲ. ಸಸ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕದ ಅಗತ್ಯವಿದೆ. ಪ್ರತಿ ಸಸ್ಯಕೋಶವು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಸಾಕಷ್ಟು ಪ್ರಮಾನದಲ್ಲಿ ವಿವಿಧ ಸಾರಜನಕಯುಕ್ತ ಸಂಯುಕ್ತಗಳ ಪೂರೈಕೆ ಅಗತ್ಯ.
ಸಸ್ಯಗಳ ಜೀವನಕ್ಕಾಗಿ ರಂಜಕದ ಅವಶ್ಯಕತೆ ಇದೆ ಎಂಬುದನ್ನು ಎಸ್. ಸ್ರೀನ್‍ಜೆಲ್ 1839 ರಲ್ಲಿ ಕಂಡುಹಿಡಿದರು. ರಂಜಕವು ಬೆಳೆಗಳ ಪೋಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಪ್ರಾಮುಖ್ಯತೆಯನ್ನು ಈ ಕೆಳಗಿನ ಪ್ರಕ್ರಿಯೆಯಲ್ಲಿ ಕಾಣಬಹುದು
ಪೊಟ್ಯಾಷಿಯಂ : ಸಸ್ಯ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಪೊಟ್ಯಾಷಿಯಂ ಕೂಡ ಒಂದು. ಪೊಟ್ಯಾಷಿಯಂ ಬೆಳೆಗಳಿಗೆ ಜಾಸ್ತಿ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶ. ಪೊಟ್ಯಾಷಿಯಂ ಯಾವುದೇ ಪ್ರಮುಖ ಸಸ್ಯ ಘಟಕಗಳ ಒಂದು ಅವಿಭಾಜ್ಯ ಅಂಗವಲ್ಲ. ಸಸ್ಯಗಳಲ್ಲಿ ನೀರಿನ ಸಮತೋಲನವನ್ನು ನಿರ್ವಹಣೆ ಮಾಡುತ್ತದೆ.
ಪ್ರಧಾನ ಪೋಷಕಾಂಶಗಳು : ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಪೈಕಿ ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ ಹಲವು ಕಿಲೋಗ್ರಾಂಗಳಷ್ಟು ಪ್ರಮಾಣದಲ್ಲಿ ಬೇಕಾಗುವ ಕಪೋಷಕಾಂಶಗಳನ್ನು ಪ್ರಧಾನ ಪೋಷಕಾಂಶಗಳೆನ್ನುತ್ತಾರೆ. ಅವುಗಳೆಂದರೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್.
ಸಾರಜನಕವು ಸಸ್ಯಗಳಲ್ಲಿ ಒಂದು ಬಹು ಮುಖ್ಯ ಪೋಷಕ ಮೂಕವಸ್ತು. ಮಣ್ಣಿನಲ್ಲಿ ಸಾರಜನಕವು ಮುಖ್ಯವಾಗಿ ಸಾವಯವ ರೂಪದಲ್ಲಿರುತ್ತದೆ. ಸಾರಜನಕವು ನ್ಯಟ್ರೇಟ್ ಮತ್ತು ಅಮೋನಿಯಂ ವಿದ್ಯತ್ ಕಣಗಳ ರೂಪದಲ್ಲಿರುತ್ತದೆ. ಈ ಪೋಷಕಾಂಶವಿಲ್ಲದೆ, ಸಸ್ಯಗಳ ಜೀವನಚಕ್ರ ಪೂರ್ತಿಯಾಗುವುದಿಲ್ಲ. ಸಸ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕದ ಅಗತ್ಯವಿದೆ. ಪ್ರತಿ ಸಸ್ಯಕೋಶವು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಸಾಕಷ್ಟು ಪ್ರಮಾನದಲ್ಲಿ ವಿವಿಧ ಸಾರಜನಕಯುಕ್ತ ಸಂಯುಕ್ತಗಳ ಪೂರೈಕೆ ಅಗತ್ಯ.
ಸಸ್ಯಗಳ ಜೀವನಕ್ಕಾಗಿ ರಂಜಕದ ಅವಶ್ಯಕತೆ ಇದೆ ಎಂಬುದನ್ನು ಎಸ್. ಸ್ರೀನ್‍ಜೆಲ್ 1839 ರಲ್ಲಿ ಕಂಡುಹಿಡಿದರು. ರಂಜಕವು ಬೆಳೆಗಳ ಪೋಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಪ್ರಾಮುಖ್ಯತೆಯನ್ನು ಈ ಕೆಳಗಿನ ಪ್ರಕ್ರಿಯೆಯಲ್ಲಿ ಕಾಣಬಹುದು
ಪೊಟ್ಯಾಷಿಯಂ : ಸಸ್ಯ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಪೊಟ್ಯಾಷಿಯಂ ಕೂಡ ಒಂದು. ಪೊಟ್ಯಾಷಿಯಂ ಬೆಳೆಗಳಿಗೆ ಜಾಸ್ತಿ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶ. ಪೊಟ್ಯಾಷಿಯಂ ಯಾವುದೇ ಪ್ರಮುಖ ಸಸ್ಯ ಘಟಕಗಳ ಒಂದು ಅವಿಭಾಜ್ಯ ಅಂಗವಲ್ಲ. ಸಸ್ಯಗಳಲ್ಲಿ ನೀರಿನ ಸಮತೋಲನವನ್ನು ನಿರ್ವಹಣೆ ಮಾಡುತ್ತದೆ.
ಸಾರಜನಕವು ಸಸ್ಯಗಳಲ್ಲಿ ಒಂದು ಬಹು ಮುಖ್ಯ ಪೋಷಕ ಮೂಕವಸ್ತು. ಮಣ್ಣಿನಲ್ಲಿ ಸಾರಜನಕವು ಮುಖ್ಯವಾಗಿ ಸಾವಯವ ರೂಪದಲ್ಲಿರುತ್ತದೆ. ಸಾರಜನಕವು ನ್ಯಟ್ರೇಟ್ ಮತ್ತು ಅಮೋನಿಯಂ ವಿದ್ಯತ್ ಕಣಗಳ ರೂಪದಲ್ಲಿರುತ್ತದೆ. ಈ ಪೋಷಕಾಂಶವಿಲ್ಲದೆ, ಸಸ್ಯಗಳ ಜೀವನಚಕ್ರ ಪೂರ್ತಿಯಾಗುವುದಿಲ್ಲ. ಸಸ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕದ ಅಗತ್ಯವಿದೆ. ಪ್ರತಿ ಸಸ್ಯಕೋಶವು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಸಾಕಷ್ಟು ಪ್ರಮಾನದಲ್ಲಿ ವಿವಿಧ ಸಾರಜನಕಯುಕ್ತ ಸಂಯುಕ್ತಗಳ ಪೂರೈಕೆ ಅಗತ್ಯ.
ಸಾವಯವ ರೂಪದ ಸಾರಜನಕವು ಸೂಕ್ಷ್ಮಜೀವಿಗಳ ಚಟುವಟಿಕೆಗಳಿಂದ ಭೂಮಿಯಿಂದ ಮತ್ತು ಮಣ್ಣಿನ ಸವಕಳಿಗಳಿಂದ ನಷ್ಟವಾಗುತ್ತದೆ. ಪದೇ ಪದೇ ಉಳುಮೆ ಮಾಡುವುದರಿಂದಲೂ, ಬೆಳೆಯುವುದರಿಂದಲೂ ಸಾರಜನಕ ಕಡಿಮೆಯಾಗುತ್ತದೆ.
ಸಾರಜನಕದಿಂದ ಎಲೆಗಳು ವಿಶಾಲವಾಗಿ, ಕಾಂಡವು ದಪ್ಪವಾಗುತ್ತದೆ. ಕಾಳುಗಳು ದೊಡ್ಡಗಾತ್ರವಾಗುವವು. ಆದರೆ, ಅನೇಕ ಮೇಳೆ ಅತಿಯಾದ ಸಾರಜನಕದ ಬಳಕೆಯಿಂದ ಕಾಳಿನ ಉತ್ಪಾದನೆ ಕಡಿಮೆಯಾಗಿ ಸೊಪ್ಪು ಉತ್ಪಾದನೆ ಹೆಚ್ಚುವುದುಂಟು. ಅತಿ ಹೆಚ್ಚು ಸಾರಜನಕವನ್ನು ಬೆಳೆಗೆ ಕೊಟ್ಟರೂ ಕಾಳು ಬಲಿಯುವುದು ತಡವಾಗುವುದಲ್ಲದೆ ಬೆಳೆಗಳು ರೋಗರುಜಿನಗಳಿಗು ಈಡಾಗುತ್ತವೆ. ಬೆಳೆಗಳು ದಟ್ಟ ಹಸುರು ಬಣ್ಣವನ್ನು ತಾಳಿ ರಸವತ್ತಾಗಿ ಬೆಳೆಯುತ್ತದೆ.
ಸಾರಜನಕವು ಪತ್ರಹರಿತ್ತಿನ ರಚನೆಯಲ್ಲಿ ಪಾಲ್ಗೊಳ್ಳುತ್ತವೆ. ಈ ರೀತಿ ಹಸಿರು ವರ್ಣವು ದ್ಯುತಿಸಂಶ್ಲೇಷಣೆಗೆ ಅತ್ಯಗತ್ಯ. ಸಾರಜನಕದ ಕೊರತೆಯ ಲ್ಷಣಗಳು ಮೊದಲು ಹಳೆಯ ಎಲೆಗಳಲ್ಲಿ ಕಾಣಿಸಿಕೊಂಡು ನಂತರ ಹೊಸ ಎಲೆಗಳ ಕೆಡೆಗೆ ಮುಂದುವರೆಯುತ್ತದೆ. ಸಾರಜನಕದ ಕೊರತೆಯಿಂದ ಹರಿದ್ರೇಣುವಿನ ಪ್ರಮಾಣ ಕಡಿಮೆಯಾಗುವುದರಂದ ಎಲೆಗಳು ತಿಳಿ ಹಸಿರು ಬಣ್ಣ ಹೊಂದುತ್ತವೆ. ಸಾರಜನಕಕದ ಕೊರತೆಯಿದ್ದಾಗ ಕಾರ್ಬೋಹೈಡ್ರೇಟ್‍ಗಳ ಕ್ರೋಢೀಕರಣದಿಂದ ಸಸ್ಯಗಳ ಎಲೆಗಳು ಹಳದಿ ಅಧವಾ ಸಾಂಧರ್ಭಿಕ ಕೆಂಪು ಬಣ್ಣವಾಗಿ ಪರಿವರ್ತಿತವಾಗುತ್ತದೆ. ಸಾರಜನಕದ ಕೊರತೆಯಿಂದ ಹಳೆಯ ಎಲೆಗಳು ಉದುರಲು ಪ್ರಾರಂಭಿಸುತ್ತವೆ. ಇದರಿಂದ ಸಾರಜನಕವು ಕಿರಿಯ ಎಲೆಗಳಿಗೆ ಸ್ಥಳಾಂತರವಾಗುತ್ತದೆ. ಕೊನೆಯದಾಗಿ, ಎಲೆಗಳು ಉದುರಲು ಪ್ರಾರಂಭಿಸುತ್ತವೆ. ಪ್ರಾರಂಭದಲ್ಲಿ ಎಲೆಯ ತುದಿ ಹಾಗೂ ಅಂಚುಗಳು ಒಣಗಳು ಪ್ರಾರಂಭಿಸಿ, ಹಳದಿ ಕಂದು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗುತ್ತದೆ.
ಸಾರಜನಕದ ಪ್ರಮಾಣವು ಹೆಚ್ಚು ಇದ್ದಾಗ ಸಸ್ಯಗಳು ಸೊಂಪಾಗಿ ಬೆಳೆಯುತ್ತದೆ. ಇದರಿಂದ ಕಡಿಮೆ ತಾಪಮಾನದ ಸಹಿಷ್ಣತಾ ಶಕ್ತಿ ಮತ್ತು ಕ್ರಿಮಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ, ರೋಗಗಳಿಗೆ ತುತ್ತಾಗುತ್ತದೆ.
ಗರಿಷ್ಠ ಮಟ್ಟದ ಸಾರಜನಕದ ಜೊತೆ ಇತರ ಪೋಷಕಾಂಶಗಳ್ನು ಒದಗಿಸಿದರೆ ಸಾಕಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ. ಸಾರಜನಕವು ಹಣ್ಣು, ಮೊಗ್ಗುಗಳ ರಚನೆಯನ್ನು ಉತ್ತೇಜಿಸುತ್ತದೆ. ಸಾರಜನಕದ ಕೊರತೆಯಿಂದ, ಲೈಂಗಿಕ ಅಂಗಗಳ ಅಪೂರ್ಣ ಅಭಿವೃದ್ಧಿಯಿಂದ ಕಡಿಮೆ ಧಾರಣಸಾಮಥ್ರ್ಯವನ್ನು ಹೊಂದಿರುತ್ತದೆ.
ಸಾರಜನಕವು ಅಮೈನೋ ಆಮ್ಲ ಮತ್ತು ಪ್ರೋಟೀನ್ ಕಣಗಳ ಒಂದು ಅವಶ್ಯಕ ಘಟಕ. ಇದು ನ್ಯೂಕ್ಲಿಯಿಕ್ ಆಮ್ಲದ ಡಿ.ಎನ್.ಎ. ಮತ್ತು ಆರ್.ಎನ್.ಎ.ಗಳ ಸಂಶ್ಲೇಷಣೆಗೆ ಅತ್ಯಗತ್ಯ.
ಸಾರಜನಕವು ಸಸ್ಯಪ್ರಚೋದಕಗಳ ಮತ್ತು ಪಾಲಿಪೆಪ್ಪೈಡ್‍ಗಳ ಒಂದು ಘಟಕವಾಗಿದೆ.
ಸಾರಜನಕದ ಮೂಲಗಳು : ಸಾವಯವ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳಾದ ಯೂರಿಯ, ಡೈ ಅಮೋನಿಯಂ ಫಾಸ್ಫೇಟ್, ಅಮೋನಿಯಂ ಸಲ್ಫೇಟ್ ಇತ್ಯಾದಿ.
ಸಸ್ಯಗಳ ಜೀವನಕ್ಕಾಗಿ ರಂಜಕದ ಅವಶ್ಯಕತೆ ಇದೆ ಎಂಬುದನ್ನು ಎಸ್. ಸ್ರೀನ್‍ಜೆಲ್ 1839 ರಲ್ಲಿ ಕಂಡುಹಿಡಿದರು. ರಂಜಕವು ಬೆಳೆಗಳ ಪೋಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಪ್ರಾಮುಖ್ಯತೆಯನ್ನು ಈ ಕೆಳಗಿನ ಪ್ರಕ್ರಿಯೆಯಲ್ಲಿ ಕಾಣಬಹುದು.
ರಂಜಕದ ಕೊರತೆಯಿರುವ ಸಸ್ಯಗಳಲ್ಲಿ ಸಣ್ಣ ಮತ್ತು ಹಳೆಯ ಎಲೆಗಳು ಉದುರಲು ಪ್ರಾರಂಭಿಸುತ್ತದೆ. ಹಾಗೂ ಇದು ಬೇಗ ಪಕ್ವವಾಗುತ್ತದೆ. ಎಲೆಗೊಂಚಲು ನೇರಳೆಯಂತಿರುವ ಬಣ್ಣ ಮತ್ತು ಹಳೆಯ ಎಲೆಯ ತುದಿಯು ಆಗಾಗ್ಗೆ ಸತ್ತಂತಿರುತ್ತದೆ. ರಂಜಕದ ಕೊರತೆಯಿಂದ ಸಸ್ಯಗಳ ಬೆಳವಣಿಗೆಯು ನಿಧಾನಗೊಳ್ಳುತ್ತದೆ. ರಂಜಕದ ಕೊರತೆಯಿಂದ ಮರದ ಕಾಂಡದಂತಿರುವ ಅಂಗಾಂಶಗಳಿದ್ದು ಮೃದುತನ ಕಡಿಮೆಯಾಗುತ್ತದೆ. ರಂಜಕದ ಕೊರತೆಯಿಂದ ಮರಗಳಲ್ಲಿ ಹಿಮಕ್ಕೆ ( ಪ್ರಾಸ್ಟ )ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ.
ರಂಜಕವು ಸಸ್ಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಸಂತಾನಾಭಿವೃದ್ಧಿಯ ಮೇಲೆ ಪರಿಣಾಮಬೀರುತ್ತದೆ. ರಂಜಕವು ಸಸ್ಯಗಳ ಹೂವು ಹಾಗೂ ಬೀಜದಲ್ಲಿ ಕೇಂದ್ರೀಕೃತವಾಗಿದೆ. ಬೀಜಗಳ ಬಲಿಯುವಿಕೆ ಹಾಗೂ ಹಣ್ಣುಗಳ ಪಕ್ವಗೊಳ್ಳುವಿಕೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ರಂಜಕದ ಕೊರತೆಯಿರುವ ಸಸ್ಯಗಳಲ್ಲಿ ಹೂಬಿಡುವಿಕೆ ಕಡಿಮೆಯಾಗಿ ಬೇಗ ಪಕ್ವಗೊಳಿಸುತ್ತದೆ. ಸಾರಜನಕದ ತೀವ್ರ ಕೊರತೆಯಿರುವಾಗ ನಿರ್ದಿಷ್ಟವಾಗಿ ವಿಳಂಬವಾಗುತ್ತದೆ.
ರಂಜಕವು ಶರ್ಕರ ಪಿಷ್ಟದ ರಚನೆಗೆ ಬಹಳ ಅಗತ್ಯ ಸಕ್ಕರೆಯನ್ನು ಪಿಷ್ಟವಾಗಿ ಪರಿವರ್ತಿಸುವ ಇನ್ವರ್ಟೇಸ್ ರಂಜಕವನ್ನು ಹೊಂದಿರುತ್ತದೆ. ರಂಜಕದ ಕೊರತೆಯಿಂದ ಪಿಷ್ಟದ ಮತ್ತು ಸೆಲ್ಯೂಲೇಸ್ ಸಂಶ್ಲೇಷಣೆಯನ್ನು ನಿಷೇಧಗೊಳಿಸಿ ಅಸಾಮಾನ್ಯವಾಗಿ ಅಧಿಕ ಸಕ್ಕರೆ ಪ್ರಮಣಕ್ಕೆ ಕಾರಣವಾಗುತ್ತದೆ.
ರಂಜಕವು ಪ್ರೋಟೀನ್, ಫಾಸ್ಫೋ ಪ್ರೋಟೀನ್ ಹಾಗೂ ಫಾಸ್ಫೋಲಿಪಿಡ್‍ಗಳು ಮುಂತಾದ ಅಗತ್ಯ ಜೀವಕೋಶಗಳ ಘಟಕಗಳ ಒಂದು ಅಂಶವಾಗಿದೆ.
ಫಾಸ್ಫೇಟ್ ಸಂಯುಕ್ತಗಳು ಸಸ್ಯಗಳ ಒಳಗೆ ಶಕ್ತಿಯ ಕರೆನ್ಸಿಯಾಗಿ ವರ್ತಿಸುತ್ತದೆ. ರಂಜಕವು ಎಟಿಪಿ ಮತ್ತು ಇತರ ಹೆಚ್ಚಿನ ಶಕ್ತಿ ಸಂಯುಕ್ತಗಳ ಸಾರಭೂತ ಘಟಕವಾಗಿದೆ. ಎಲ್ಲಾ ಜೀವರಾಸಾಯನಿಕ ಪ್ರಕ್ರಿಯೆಗಳಿಂದ ಅಯಾನುಗಳ ಅಣು ಸಂಯೋಜನೆ, ಹೀರುವಿಕೆ ಮತ್ತು ಕೆಲವು ಅಯಾನುಗಳ ವರ್ಗಾವಣೆಯು ಎಟಿಪಿಯಿಂದ ಪೂರೈಕೆಯಾಗುವ ಶಕ್ತಿಯನ್ನು ಅವಲಂಬಿರುತ್ತದೆ. ವಿಶೇಷವಾಗಿ ರಂಜಕ ಕೊರತೆಯಿರುವ ಮಣ್ಣುಗಳಲ್ಲಿ ರಂಜಕದ ಬಳಕೆಯಿಂದ ಗಣನೀಯವಾಗಿ ಚಳಿಯಿಂದಾಗುವ ಅಪಾಯವನ್ನು ತಗ್ಗಿಸುತ್ತದೆ.
ರಂಜಕವು ಪ್ರೋಟೀನ್‍ಗಳ ರಚನೆಗೆ ಬಹಳ ಅಗತ್ಯ. ಇದು ಪ್ರೋಟೀನ್ ಸಂಶ್ಲೇಷಣೆಯಲ್ಲಿ ಅಮೈನೋ ಆಮ್ಲಗಳನ್ನು ಸಕ್ರೀಯಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತದೆ.
ರಂಜಕವು ನ್ಯೂಕ್ಲಿಯಿಕ್ ಆಮ್ಲದ ಒಂದು ಘಟಕವಾಗಿದೆ. ಆರ್.ಎನ್.ಎ. ಮತ್ತು ಡಿ.ಎನ್.ಎ. ಎರಡರಲ್ಲೂ ರೈಬೋನ್ಯೂಕ್ಲಿಯೋಸೈಡ್ ಘಟಕಗಳಲ್ಲಿ ಫಾಸ್ಫೇಟ್ ಅಣುಗಳು ಸೇತುವೆಯನ್ನು ರೂಪಿಸುತ್ತವೆ. ಹೀಗಾಗಿ ರಂಜಕವು ನ್ಯೂಕ್ಲಿಯಿಕ್ ಆಮ್ಲದ ರಚನೆಯಲ್ಲಿ ಅಗತ್ಯವಿದೆ.
ರಂಜಕವು ಸಹಕಿಣ್ವಗಳಾದ ನಿಕೋಟಿನಮೈಡ್, ಅಡಿನೈನ್, ನ್ಯೂಕ್ಲಿಯೋಡೈಡ್, ಅಡಿನೈನ್‍ನ್ಯೂಕ್ಲಿಯೋಡೈಡ್ ಫಾಸ್ಫೇಟ್‍ಗಳ ಒಂದು ಘಟಕವಾಗಿದೆ. ಈ ಸಹ ಕಿಣ್ವಗಳು ಉತ್ಕರ್ಷಣ-ಅಪಕರ್ಷಣ ಪ್ರಕ್ರಿಯೆಯಲ್ಲಿ ಜಲಜನಕ ವಗರ್Áವಣೆಗೆ ಸಹಾಯ ಮಾಡುತ್ತದೆ.
ಅಪಟೈಟ್, ಸಾವಯವ ಗೊಬ್ಬರ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಲ್ಯೂಮೀನಿಯಂ ಫಾಸ್ಪೇಟ್, ಫೈಟಿನ್ ಮತ್ತು ರಾಸಾಯನಿಕ ಗೊಬ್ಬರಗಳಾದ ಸೂಪರ್ ಫಾಸ್ಫೇಟ್, ಡೈಅಮೋನಿಯಂ ಇತ್ಯಾದಿ.
ದ್ವಿತೀಯ ಪೋಷಕಾಂಶ ಎನ್ನುವ ಪದವನ್ನು ಆಗಾಗ್ಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಗಂಧಕಗಳಿಗೆ ಬಳಸಲಾಗುತ್ತದೆ. ದ್ವಿತೀಯ ಪೋಷಕಾಶಗಳೆಂದು ಕರೆಯಲು ಕಾರಣ ಇವುಗಳನ್ನು ಮುಖ್ಯ ಪೋಷಕಾಂಶಗಳನ್ನು ಹೊಂದಿರುವ ರಾಸಾಯನಿಕ ಗೊಬ್ಬರಗಳನ್ನು ಹಾಕಿದಾಗ ಇವುಗಳೂ ಸಸ್ಯಗಳಿಗೆ ಒದಗುತ್ತವೆ. ಅಂದರೆ ಈ ಪೋಷಕಾಂಶಗಳನ್ನು ಮಣ್ಣಿಗೆ ಪರೋಕ್ಷವಾಗಿ ಹಾಕಲಾಗುತ್ತದೆ. ಹೀಗಾಗಿ ಪ್ರಮುಖ ಸಸ್ಯ ಪೋಷಕಾಂಶಗಳ ರಸಗೊಬ್ಬರಗಳ ಉತ್ಪಾದಕರಿಗೆ, ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಗಂಧಕವು ದ್ವಿತೀಯ ಪ್ರಾಮುಖ್ಯತೆಯನ್ನು ಹೊಂದಿದೆ. ದ್ವಿತೀಯ ಪೋಷಕಾಂಶಗಳು ಆರೋಗ್ಯಕರ ಸಸ್ಯ ಬೆಳವಣಿಗೆಗೆ ಅವಶ್ಯಕ. ಆದರೆ ಇವುಗಳ ಕೊರತೆಯು ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗಂಧಕದ ಕೊರತೆಯು ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗಂಧಕದ ಕೊರತೆಯು ಹೆಚ್ಚಿನ ಪ್ರದೇಶದಲ್ಲಿ ಕಂಡುಬರುತ್ತದೆ.
ಪೊಟ್ಯಾಷಿಯಂ : ಸಸ್ಯ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಪೊಟ್ಯಾಷಿಯಂ ಕೂಡ ಒಂದು. ಪೊಟ್ಯಾಷಿಯಂ ಬೆಳೆಗಳಿಗೆ ಜಾಸ್ತಿ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶ. ಪೊಟ್ಯಾಷಿಯಂ ಯಾವುದೇ ಪ್ರಮುಖ ಸಸ್ಯ ಘಟಕಗಳ ಒಂದು ಅವಿಭಾಜ್ಯ ಅಂಗವಲ್ಲ. ಸಸ್ಯಗಳಲ್ಲಿ ನೀರಿನ ಸಮತೋಲನವನ್ನು ನಿರ್ವಹಣೆ ಮಾಡುತ್ತದೆ.
ದ್ಯುತಿಸಂಶ್ಲೇಷಣೆ ಮತ್ತು ಭಾಷ್ಪವಿಸರ್ಜನೆ ಪ್ರಕ್ರಿಯೆಗಳಿಂದ ಉತ್ಪಾದನೆಯಾಗುವ ಹೆಚ್ಚಿನ ಶಕ್ತಿ ಅಣುಗಳಾಗಿ ಸಸ್ಯಕ್ಕೆ ಪೊಟ್ಯಾಷಿಯಂ ಅಗತ್ಯವಿದೆ. ಎಟಿಪಿಯ ರಚನೆಯಲ್ಲಿ ಅಗತ್ಯವಿರುವ ಹರಿದ್ರೇಣುವಿನ ವಿದ್ಯುತ್ ಮೌಲ್ಯಗಳ ಸಮತೋಲನವನ್ನು ಪೊಟ್ಯಾಷಿಯಂ ನಿರ್ವಹಿಸುತ್ತದೆ. ಆದ್ದರಿಂದ ಪೊಟ್ಯಾಷಿಯಂ ವಿಕಿರಣ ಶಕ್ತಿಯಿಂದ ಪ್ರಾಥಮಿಕ ರಾಸಾಯನಿಕ ಶಕ್ತಿಯ ಮೂಲದ ವರ್ಗಾವಣೆಯನ್ನು ಸುಧಾರಿಸಿ ಇದು ಎಟಿಪಿ ಮತ್ತು ಎನ್.ಎ.ಡಿ.ಪಿ.ಎಚ್. ರೂಪಕ್ಕೆ ಮಾರ್ಪಡಿಸುತ್ತದೆ. ಈ ರೀತಿಯ ಶಕ್ತಿಯ ವರ್ಗಾವಣೆಯು ಸಸ್ಯಗಳಲ್ಲಿ ಒಂದು ಮೂಲಭೂತ ಪ್ರಕ್ರಿಯೆ ಮತ್ತು ಸಾಕಷ್ಟು ಪ್ರಮಾಣದ ಪೊಟ್ಯಾಷಿಯಂ ಪೂರೈಕೆಯು ಹೆಚ್ಚಿನ ಮಟ್ಟದ ಎ.ಟ.ಪಿ. ಹಾಗೂ ಎನ್.ಎ.ಡಿ.ಪಿ.ಹೆಚ್. ರೂಪದಲ್ಲಿಂiÀÉುೀ ಇರುಂತೆ ಮಾಡುತ್ತದೆ. ಇದರಿಂದ ಕಾರ್ಬೋಹೈಡ್ರೇಟ್, ಪ್ರೋಟೀನ್ ಹಾಗೂ ಲಿಪಿಡ್‍ಗಳ ಉತ್ಪಾದನೆಯಾಗಿ ಬೆಳೆಗಳ ಗುಣಮಟ್ಟವನ್ನು ವೃದ್ಧಿಪಡಿಸುತ್ತದೆ.
ಕಿಣ್ವಗಳು ರಾಸಾಯನಿಕ ಕ್ರೀಯೆಯಲ್ಲಿ ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪೊಟ್ಯಾಷಿಯಂ ಸಸ್ಯಗಳ ಬೆಳವಣಿಗೆ ಅಗತ್ಯವಿರುವ ತೊಡಗಿಸಿಕೊಂಡಿರುವ ಕನಿಷ್ಠ 60 ವಿವಧ ಕಿಣ್ಚಗಳನ್ನು ಸಕ್ರಿಯಗೊಳಿಸುತ್ತದೆ. ವಿವಿಧ ಸಾವಯವ ಆಮ್ಲಗಳನ್ನು ತಟಸ್ಥೀಕರಿಸುತ್ತದೆ. ಮತ್ತು ಸಸ್ಯಗಳ ಒಳಗಿನ ಇತರ ಸಂಯುಕ್ತಗಳು ಮತ್ತು ರಸಸಾರವು 7 ಮತ್ತ 8 ರ ಇರುವಂತೆ ಮಾಡಿ ಹೆಚ್ಚಿನ ಕಿಣ್ವಗಳ ಪ್ರತಿಕ್ರಯೆಗಳು ಜರುಗಲು ಸಹಾಯಮಾಡುತ್ತದೆ.
ಸಸ್ಯ ಇರುವ ಸ್ಪೊಮ್ಯಾಟ ರಂಧ್ರದ ತೆರೆಯುವಿಕೆ ಹಾಗೂ ಮುಚ್ಚುವ ನಿಯಂತ್ರಣವು ಪೊಟ್ಯಾಷಿಯಂ ಅನ್ನು ಅವಲಂಬಿಸಿರುತ್ತದೆ. ಈ ರಂಧ್ರಗಳ ಮೂಲಕ, ಎಲೆಗಳು ಇಂಗಾಲದ ಡೈ ಆಕ್ಸೈಡ್ ವಿನಿಮಯ, ನೀರಿನ ಆವಿ ಹಾಗೂ ಆಮ್ಲಜನಕದ ವಿನಿಮಯ ಮಾಡುತ್ತದೆ.
ಸಸ್ಯ ಅಂಗಾಶಗಳು ರಚನೆಯಾಗಲು ಮುಖ್ಯ ಪ್ರಕ್ರಿಯೆ ದ್ಯುತಿ ಸಂಶ್ಲೇಷನೆಯಲ್ಲಿ ಪೊಟ್ಯಾಷಿಯಂ ಪಾತ್ರ ಬಹಳ ಮುಖ್ಯ.
ಸೂರ್ಯನ ಶಕ್ತಿಯ ಬಳಕೆಯಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ನೀರಿನ ಸಂಯೋಜನೆಯಿಂದ ಗ್ಲೂಕೋಸ್ ಸಕ್ಕರೆಯ ಉತ್ಪತ್ತಿಯಾಗುತ್ತದೆ. ಪೊಟ್ಯಾಷಿಯಂ ಕೊರತೆಯಿದ್ದರೆ, ದ್ಯುತಿಸಂಶ್ಲೇಷಣೆಯ ದರ ಹಾಗೂ ಎಟಿಪಿ ಉತ್ಪಾದನಾ ದರ ಕಡಿಮೆಯಾಗುತ್ತದೆ ಮತ್ತು ಇತರ ಎಲ್ಲಾ ಪ್ರಕ್ರೀಯೆಗಳು ವ್ಯತಿರಿಕ್ತವಾಗುತ್ತದೆ. ಸಸ್ಯಗಳ ಹೆಚ್ಚಿನ ಉಸಿರಾಟದಿಂದ ನಿಧಾನಗತಿಯ ಬೆಳವಣಿಗೆಯಾಗಿ ಅಭಿವೃದ್ಧಿ ಕಡಿಮೆ ಮಾಡುತ್ತದೆ.
ಪೊಟ್ಯಾಷಿಯಂ ಪೋಷಕಾಂಶಗಳ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದ್ಯುತಿಸಂಶ್ಲೇಷಣೆಯ ಉತ್ಪನ್ನಗಳನ್ನು ಎಲೆಗಳಿಂದ ಶೇಖರಣಾ ತಾಣದೊಳಕ್ಕೆ ರವಾನೆ ಮಾಡಲು ಪೊಟ್ಯಾಷಿಯಂ ಅಗತ್ಯ.
ನೀರು ಮತ್ತು ಪೋಷಕಾಂಶಗಳನ್ನು ಸಸ್ಯದ ಉದ್ದಕ್ಕೂ ನೀರ್ಗೊಳವೆ ಮೂಲಕ ವರ್ಗಾವಣೆ ಮಾಡುವಲ್ಲಿ ಪೊಟ್ಯಾಷಿಯಂ ಬಹಳ ಪ್ರಮುಖ ಪಾತ್ರವಹಿಸುತ್ತದೆ.
ಪ್ರೋಟೀನ್ ಸಂಯೋಜನೆಯ ಪ್ರತಿಯೊಂದು ಹಂತದಲ್ಲಿಯೂ ಪೊಟ್ಯಾಷಿಯಂ ಅಗತ್ಯವಿದೆ. ಸಸ್ಯಗಳಲ್ಲಿ ಪೊಟ್ಯಾಷಿಯಂ ಕೊರತೆ ಉಂಟಾದಾಗ, ಸಾರಜನಕದ ಲಭ್ಯತೆ ಇಲ್ಲದಾಗ, ಪ್ರೋಟೀನ್ ಸಂಯೋಜನೆ ನಡೆಯುವುದಿಲ್ಲ. ಪ್ರೋಟೀನ್ ಉತ್ಪಾದನೆಗೆ ಕಚ್ಚಾ ವಸ್ತುಗಳಾದ ಅಮೈನೋ ಆಮ್ಲಗಳು, ಅಮೈಡ್ಸ್, ನೈಟ್ರೇಟ್‍ಗಳು ಶೇಖರಿಸಲ್ಪಡುತ್ತದೆ.
ಪಿಷ್ಟದ ಸಂಶ್ಲೇಷೆಯಲ್ಲಿ ಬಳಸುವ ಕಿಣ್ವವು ಪೊಟ್ಯಾಷಿಯಂನಿಂದ ಸಕ್ರಿಯಗೊಳಿಸಲ್ಪಡುತ್ತದೆ. ಹೀಗಾಗಿ ಅಸಮರ್ಪಕ ಪೊಟ್ಯಾಷಿಯಂನಿಂದ ಪಿಷ್ಟದ ಮಟ್ಟ ಕಡಿಮೆಯಾಗಿ ಕರಗುವ ಕಾರ್ಬೋಹೈಡ್ರೇಟ್ ಹಾಗೂ ಸಾರಜನಕ ಸಂಯುಕ್ತಗಳನ್ನು ಸಂಗ್ರಹಣೆ ಮಾಡುತ್ತದೆ. ಹೆಚ್ಚಿನ ಪೊಟ್ಯಾಷಿಯಂ ಮಟ್ಟದಿಂದ ಪಿಷ್ಟವು ಉತ್ಪಾದನೆಯ ಭಾಗದಿಂದ ಶೇರಣೆಯ ಅಂಗಗಳಿಗೆ ಸಮರ್ಥವಾಗಿ ಸ್ಥಳಾಂತರವಾಗುತ್ತದೆ.
ಅಗಲ ಎಲೆಯುಳ್ಳ, ದ್ವಿದಳ ಧಾನ್ಯ ಬೆಳೆಗಳಲ್ಲಿ ಪೊಟ್ಯಾಷಿಯಂ ಕೊರತೆಯಿಂದಾಗಿ, ಎಲೆಗಳ ಮೇಲೆ ಅವ್ಯವಸ್ಥಿತವಾದ ಹಳದಿ ಕಲೆಗಳು ಸಂಚುಗಳ ಸುತ್ತಲೂ ಕಾಣಿಸಿಕೊಳ್ಳುತ್ತವೆ. ಹಳದಿ ಭಾಗವು ಬೇಗನೆ ಮುರುಟಿಹೋಗಿ ಎಲೆಯು ಕೆಳಗಡೆಗೆ ಮುದುಡಿಕೊಳ್ಳುತ್ತವೆ.
ಕ್ಯಾಲ್ಸಿಯಂ ಸಹ ಪ್ರಮುಖ ಪೋಷಕಾಂಶಗಳಂತೆಯೇ ಹೆಚ್ಚಿನ ಪ್ರಮಾಣದಲ್ಲಿ ಸಸ್ಯಗಳಲ್ಲಿ ಕಂಡುಬರುತ್ತದೆ. ಆದರೆ ಇದರ ನೈಜ್ಯ ಅಗತ್ಯವು ಮುಖ್ಯ ಪೋಷಕಾಂಶಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ.
ಕೋಶ ವಿಭಜನೆ ಹಾಗೂ ವರ್ಣತಂತುವಿನ ಸ್ಥಿರತೆಯಲ್ಲಿ ಕ್ಯಾಲ್ಸಿಯಂ ಅಗತ್ಯವಿದೆ. ಕ್ಯಾಲ್ಸಿಯಂ ವರ್ಣತಂತುವಿನ ಒಂದು ಘಟಕವಾಗಿದೆ. ಕ್ಯಾಲ್ಸಿಯಂ ಸಸ್ಯಗಳಲ್ಲಿ ಎಲೆಗಳು ಹಾಗೂ ಸಸ್ಯಾಂಗಗಳಲ್ಲಿ ಕಂಡುಬರುತ್ತದೆ. ಬೇರಿನ ಅಭಿವೃದ್ಧಿಗೆ ಒಂದು ಪ್ರಮುಖ ಪೋಷಕಾಶವಾಗಿದೆ. ಕ್ಯಾಲ್ಸಿಯಂ ಪೂರೈಕೆ ಕಡಿಮೆಯಾದರೆ, ಬೇರುಗಳು ಕಂದುಬಣ್ಣಕ್ಕೆ ತಿರುಗಿ ಕಾಲಕ್ರಮೇಣ ಸಾಯುತ್ತದೆ. ಮತ್ತೊಂದೆಡೆ ಕ್ಯಾಲ್ಸಿಯಂನ ಪೂರೈಕೆಯಿಂದ ಬೇರಿನ ಕೂದಲಿನ ಬೆಳವಣಿಗೆಯು ಉದ್ದೀಪನಗೊಂಡು ಬೇರಿನ ಸಂಪೂರ್ಣ ವ್ಯವಸ್ಥೆ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತದೆ.
ಬೇರುಗಳ ಹಾಗೂ ಹೊಸ ಮೊಗ್ಗುಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಅಗತ್ಯವಿದೆ. ಅಲ್ಪ ಪ್ರಮಾಣದ ಕ್ಯಾಲ್ಸಿಯಂ ಸಾಮಾನ್ಯ ಕೋಶ ವಿಭಜನೆಗೆ ಅತ್ಯಗತ್ಯ. ಕ್ಯಾಲ್ಸಿಯಂ ಕ್ರೊಮ್ಯಾಟಿನ್ ಅಥವಾ ಕೋಶವಿಭಜಕ ಕಾರ್ಯದಲ್ಲಿ ತೊಡಗಿರುತ್ತದೆ. ಕ್ಯಾಲ್ಸಿಯಂ ಕೊರತೆಯ ಪರಿಣಾಮವಾಗಿ ವರ್ಣತಂತುವಿನ ರಚನೆ ಹಾಗೂ ಸ್ಥಿರತೆಯ ಕಾರಣದಿಂದ ಅಸಹಜ ಕೋಶ ವಿಭಜನೆಗೆ ಕಾರಣವಾಗುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ, ಬೆಳೆಯುತ್ತಿರುವ ತುದಿ ಹಾಗೂ ಅಂಚುಗಳು ಸಾಯುತ್ತವೆ. ಬೇರಿನ ಹಾಗೂ ಕಾಂಡದ ವ್ಯವಸ್ಥೆಯು ಅಭಿವೃದ್ಧಿ ಹೊಂದಿರುವುದಿಲ್ಲ.
ಕ್ಯಾಲ್ಸಿಯಂ ಜೀವಕೋಶದ ಗೋಡೆಯ ಒಂದು ಘಟಕವಾಗಿದೆ. ಕ್ಯಾಲ್ಸಿಯಂ, ಕ್ಯಾಲ್ಸಿಯಂ ಪೆಕ್ಟೇಟ್ ಆಗಿ ರೂಪಗೊಂಡು ಸಿಮೆಂಟಿನ ವಸ್ತುವಾಗಿದ್ದು ಜೀವಕೋಶ ಗೋಡೆಯಲ್ಲಿರುತ್ತದೆ. ಹಾಗಾಗಿ ಕ್ಯಾಲ್ಸಿಯಂ ರೋಗಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ.
ಅನೇಕ ಕಿಣ್ವಗಳ ವ್ಯವಸ್ಥೆಗೆ ಪರೋಕ್ಷವಾಗಿ ಕ್ಯಾಲ್ಸಿಯಂ ಪ್ರಭಾವ ಬೀರುತ್ತದೆ. ಈ ಪೋಷಕಾಂಶಗಳ ಪ್ರಭಾವಕ್ಕೆ ಒಳಭಾಗದ ಅನೇಕ ಕಿಣ್ವ ವ್ಯವಸ್ಥೆಗಳ ಪೈಕಿ, ಅಮೈಲೇಸ್ ಹಾಗೂ ಎಟಿಪಿಯೇಸ್‍ನಲ್ಲಿ ಕ್ಯಾಲ್ಸಿಯಂ ಪಾತ್ರವನ್ನು ಚೆನ್ನಾಗಿ ಗುರುತಿಸಬಹುದು. ಕಿಣ್ವಗಳಾದ ಅರ್ಜೀನೈನ್ ಕೈನೇಸ್, ಅಡಿನೋಸಿಸ್ ಟ್ರ ಪರೋಕ್ಷವಾಗಿ ಕ್ಯಾಲ್ಸಿಯಂ ಪ್ರಭಾವ ಬೀರುತ್ತದೆ. ಈ ಪೋಷಕಾಂಶಗಳ ಪ್ರಭಾವಕ್ಕೆ ಒಳಭಾಗದ ಅನೇಕ ಕಿಣ್ವ ವ್ಯವಸ್ಥೆಗಳ ಪೈಕಿ, ಅಮೈಲೇಸ್ ಹಾಗೂ ಎಟಿಪಿಯೇಸ್‍ನಲ್ಲಿ ಕ್ಯಾಲ್ಸಿಯಂ ಪಾತ್ರವನ್ನು ಚೆನ್ನಾಗಿ ಗುರುತಿಸಬಹುದು. ಕಿಣ್ವಗಳಾದ ಅರ್ಜೀನೈನ್ ಕೈನೇಸ್, ಅಡಿನೋಸಿಸ್ ಟ್ರೈಫಾಸ್ಫೇಟ್ ಹಾಗೂ ಅಡಿನೈಲ್ ಕೆಸ್‍ಗಳಲ್ಲಿ ಕ್ಯಾಲ್ಸಿಯಂ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತ ಟ್ರೈಫಾಸ್ಫೇಟ್ ಹಾಗೂ ಅಡಿನೈಲ್ ಕೆಸ್‍ಗಳಲ್ಲಿ ಕ್ಯಾಲ್ಸಿಯಂ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ.
ಧನಾತ್ಮಕ – ಅಯಾನುಗಳ ಸಮತೋಲನ ಕಾಪಾಡಲು ಕ್ಯಾಲ್ಸಿಯಂನ ಅಗತ್ಯವಿದೆ. ಸಸ್ಯಗಳ ಚಯಾಪಚಯ ಪ್ರಕ್ರಿಯೆಯಲ್ಲಿ ಕ್ಯಾಲ್ಸಿಯಂ ಕೆಲವು ಆಮ್ಲಗಳನ್ನು ತಟಸ್ಥೀಕರಿಸುತ್ತದೆ.
ಕ್ಯಾಲ್ಸಿಯಂನ ಮೂಲಗಳು : ಫೆಲ್‍ಸ್ಫಾರ್ಸ್ ಹಾರನ್ ಬ್ಲೆಂಡ್, ಕ್ಯಾಲ್ಸೈಟ್, ಡೊಲಮೈಟ್, ಸರ್‍ಪೆನ್‍ಟೈನ್, ಸುಣ್ಣ, ಜಿಪ್ಸಂ ಹಾಗೂ ರಾಸಾಯನಿಕ ಗೊಬ್ಬರಗಳು.
ಮೆಗ್ನೀಷಿಯಂ ಸಸ್ಯಗಳಲ್ಲಿ ಈ ಕೆಳಗಿನ ಶರೀರಿಕ ಪಾತ್ರಗಳಿಗೆ ಅಗತ್ಯವಿದೆ.
ಮೆಗ್ನೀಷಿಯಂ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಪತ್ರಹರಿತ್ತಿನ ಅಣುವಿನ ರಚನೆಯ ಘಟಕವಾಗಿದೆ. ಮೆಗ್ನೀಷಿಯಂ ಇಲ್ಲದಿದ್ದರೆ ದ್ಯುತಿಸಂಶ್ಲೇಷಣೆ ಕ್ರಿಯೆ ಸಂಭವಿಸುವುದಿಲ್ಲ.
ಮೆಗ್ನೀಷಿಯಂ ವಿಶೇಷವಾಗಿ ಹರಿದ್ರೇಣುವಿನ ಪ್ರಮಾಣ ಮತ್ತು ಕ್ರಿಯೆ ಮೇಲೆ ಪ್ರಭಾವ ಬೀರುತ್ತದೆ.
ಕಾರ್ಬೊಹೈಡ್ರೇಟ್‍ಗಳ ಚಯಪಚಯ ಕ್ರಿಯೆಯಲ್ಲಿನ ಹಲವಾರು ಕಿಣ್ವಗಳ ವ್ಯವಸ್ಥೆಯಲ್ಲಿ ಮೆಗ್ನೀಷಿಯಂ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇದು ತೈಲ ಹಾಗೂ ಕೊಬ್ಬಿನ ರಚನೆಗೆ ಅಗತ್ಯ ಹಾಗೂ ಸಸ್ಯಗಳ ಒಳಗೆ ರಂಜಕದ ವರ್ಗಾವಣೆ ಸಂಬಂಧಿಸಿದಂತೆ ಮೆಗ್ನೀಷಿಯಂ ಬಹಳ ಅವಶ್ಯಕವಾಗಿ ಬೇಕಾಗುತ್ತದೆ. ಎಲೆಗಳಿಂದ ಸಸ್ಯಗಳ ಕಾಂಡಗಳಿಗೆ ಕಾರ್ಬೊಹೈಡ್ರೇಟ್ ಚಲನೆಯಲ್ಲಿ ಮೆಗ್ನೀಷಿಯಂ ಬಹಳ ಅವಶ್ಯಕ.
ಕಾರ್ಬೋಹೈಡ್ರೇಟ್ ಚಯಾಪಚಯ ಕ್ರಿಯೆಯಲ್ಲಿ ಮೆಗ್ನೀಷಿಯಂ ಮುಖ್ಯ ಪಾತ್ರನ್ನು ವಹಿಸುತ್ತದೆ.
ಮೇಗ್ನೀಷಿಯಂ ರೈಬೋಸೋಮ್ ಕಣಗಳ ಸ್ಥಿರತೆಯಲ್ಲಿ ಅವಶ್ಯಕ ಇದು ಪಾಲಿಪೆಪ್ಪೈಡ್ ಸರಣಿಗ ಸಂಶ್ಲೇಷಣೆ ಸಮಯದಲ್ಲಿನ ಅನುವಂಶಿಕ ಸಂಖ್ಯೆಯನ್ನು ವರ್ಗಾಂತರಿಸುತ್ತದೆ. ಮತ್ತು ಅದ್ದರಿಂದ ಪ್ರೋಟೀನ್ ಸಂಶ್ಲೇಷಣೆಯಲ್ಲಿ ಅಗತ್ಯವಿದೆ. ಮೆಗ್ನೀಷಿಯಂ ಪ್ರೋಟೀನ್‍ನ ಸಂಶ್ಲೇಷಣೇಯಲ್ಲಿ ಎರಡು ಪ್ರಮುಖ ಪಾತ್ರಗಳಲ್ಲಿ ಒಳಗೊಂಡಿರುತ್ತದೆ. ಅವುಗಳೆಂದರೆ ನ್ಯೂಕ್ಲಿಯಿಕ್ ಆಮ್ಲದ ಸಂಶ್ಲೇಷಣೆಯಲ್ಲಿನ ಕೆಲವು ಕಿಣ್ವಗಳ ವ್ಯವಸ್ಥೆಯಲ್ಲಿ ಉತ್ತೇಜಿತವಾಗಿರುತ್ತವೆ.
ಮೆಗ್ನೀಷಿಯಂ ಕೊರತೆಯು ಗಂಟಿನ ಬ್ಯಾಕ್ಟೀರಿಯಾಗಳ ಮೂಲಕ ಸಾರಜನಕ ಸ್ಥೀರೀಕರಣಕ್ಕೆ ಅಡಚಣೆಯನ್ನುಂಟು ಮಾಡುತ್ತದೆ. ಮೆಗ್ನೀಷಿಯಂ ರಂಜಕದ ಬಳಕೆ ಹಾಗೂ ಚಲನಶೀಲತೆಯನ್ನು ಸುಧಾರಿಸುತ್ತದೆ.
ಅಭ್ರಕ, ಹಾರನ್‍ಬ್ಲೆಂಡ್, ಡೊಲೊಮೈಟ್, ಸರ್‍ಪೆಂಟೈನ್, ಸಾವಯವ ಗೊಬ್ಬರಗಳು ಹಾಗೂ ರಾಸಾಯನಿಕ ಗೊಬ್ಬರಗಳು.
ಗಂಧಕವನ್ನು ಸಸ್ಯಗಳು ಸಲ್ಫೇಟ್ ವಿಧ್ಯತ್ ಕಣದ ರೂಪದಲ್ಲಿ ಹೀರಿಕೊಳ್ಳುತ್ತವೆ. ಈ ಕಪೋಷಕಾಂಶವು ಈ ಕೆಳಗಿನ ಶಾರೀರಿಕ ಪಾತ್ರವನ್ನು ನಿರ್ವಹಿಸುತ್ತದೆ.
ಇದು ಎಲೆಗಳಲ್ಲಿನ ಪತ್ರಹರಿತ್ತಿನ ರಚನೆಯಲ್ಲಿ ಒಳಗೊಂಡಿದ್ದು ದ್ಯುತಿಸಂಶ್ಲೇಷಣೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ಹೊಂದಿದೆ. ಎಲೆಗಳಲ್ಲಿ ತೀವ್ರವಾಗಿ ಪತ್ರಹರಿತ್ತಿನ ಅಂಶವು ಕಡಿಮೆಯಾಗುವುದೇ ಗಂಧಕದ ಕೊರತೆಯ ವಿಶಿಷ್ಟ ಲಕ್ಷಣ. ಇದರಿಂದ ಬಿಳಿಚಿಕೊಳ್ಳುವ ಸಸ್ಯದ ವ್ಯಾಧಿಗೆ ಕಾರಣವಾಗುತ್ತದೆ. ಇದು ಸಾರಜನಕ ಕೊರತೆಯಿರುವ ಸಂದರ್ಭದಲ್ಲಿ ಸಹ ಕಂಡುಬರುತ್ತದೆ.
ಗಂಧಕದ ಕೊರತೆಯ ಪರಿಣಾಮವಾಗಿ, ಕೋಶವಿಭಜನೆ ಏರುಪೇರಾಗುತ್ತದೆ. ಮತ್ತು ಹಣ್ಣುಗಳ ಅಭಿವೃದ್ಧಿ ಕಡಿಮೆಗೊಳ್ಳುತ್ತದೆ. ಗಂಧಕವು ಅನೇಕ ಕಿಣ್ವಗಳ ವ್ಯವಸ್ಥೆಗಳು (ಉದಾ : ಪೋಟಿನೇಸ್, ಎಟಿಪೊ ಸಲ್‍ಫಾ ಪೈರಿಲೇಸ್) ಸಹಕಿಣ್ವ ಎ ಮತ್ತು ಅನೇಕ ಜೀವಸತ್ವಗಳ (ಥಯಾಮೈನ್, ಬಯೋಟಿನ್) ಅಂಶವಾಗಿದೆ.
ಗಂಧಕ ಹೊಂದಿರುವ ಸಂಯುಕ್ತಗಳು ನೈಟ್ರೇಟ್ ಉತ್ಪತ್ತಿಯಾಗುವುದನ್ನು ನಿಧಾನಗೊಳಿಸುವುದರಿಂದ ಸಾರಜನಕ ಗೊಬ್ಬರದ ಬಳಕೆ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಮತ್ತು ಸಸ್ಯಗಳಲ್ಲಿನ ಸಾರಜನಕದ ಚಯಾಪಚಯ ಕ್ರಿಯೆಯನ್ನು ವರ್ಧಿಸುತ್ತದೆ.
ಗಂಧಕವು ಪ್ರೋಟೀನ್ ರಚನೆಯಲ್ಲಿ ಬಹಳ ಅವಶ್ಯಕ. ಗಂಧಕವನ್ನು ಹೊಂದಿರುವ ಅಮೈನೊ ಆಮ್ಲಗಳಾದ ಸಿಸ್ಕಪನ್, ಸೈಸ್ಟನ್ ಹಾಗೂ ಮಿಥಿಯೋನಿನ್ ರಚನೆಯಲ್ಲಿ ಮತ್ತು ಪ್ರೋಟೀನ್ ಉತ್ಪತ್ತಿಯಲ್ಲಿ ಮಹತ್ತರ ಪಾತ್ರವಹಿಸುತ್ತದೆ.
ಗಂಧಕವು ಜೀವಸತ್ವ, ಪೇರೆಡಾಕ್ಸಿನ್ ಡೈಅಮೈನ್, ಪೈರೋಫಾಸ್ಫೇಟ್ ಬಯೋಟಿನ್ ಮತ್ತು ಸಹಕಿಣ್ವಗಳ ರಚನಾತ್ಮಕ ಘಟಕ. ಇವು ಸಸ್ಯಗಳ ಚಯಾಪಚಯ ಕ್ರಿಯೆಯಲ್ಲಿ ಪಾತ್ರವಹಿಸುತ್ತವೆ. ಬಯೋಟಿನ್, ಥಯಾಮಿನ್ ಮತ್ತು ಸಹಕಿಣ್ವ-ಎ ಇವುಗಳೂ ಗಂಧಕ ಹೊಂದಿರುವ ಜೀವಸತ್ವಗಳು.
ಪೈರೈಟ್, ಜಿಪ್ಸಂ, ಸಾವಯವ ಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳಾದ ಸೂಪರ್‍ಫಾಸ್ಫೇಟ್, ಅಮೋನಿಯಂ ಸಲ್ಫೇಟ್, 16:20:0:13 ಇತ್ಯಾದಿ.
ಇವು ಸಸ್ಯಗಳಿಗೆ ಅಗತ್ಯವಾದ ಆದರೆ ಕಡಿಮೆ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶಗಳು ಹೆಚ್ಚಾದಾಗ ವಿಷಕಾರಿಯಾಗಿ ಪರಿಣಾಮ ಬೀರಬಹುದು. ಲಘು ಪೋಷಕಾಂಶಗಳ ಸಂಖ್ಯೆ ಎಂಟು ಅವುಗಳೆಂದರೆ ಸತು, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಬೋರಾನ್, ಮಾಲಿಬ್ಡಿನಂ ಕ್ಲೋರಿನ್ ಮತ್ತು ನಿಕ್ಕಲ್, ಸಣ್ಣ ಪ್ರಮಾಣದಲ್ಲಿ ಅಗತ್ಯವಿರುವ ಈ ಪೋಷಕಾಂಶಗಳನ್ನು ಸೂಕ್ಷ್ಮ ಅಥವಾ ಲಘು ಪೋಷಕಾಂಶಗಳೆಂದು ಕರೆಯುತ್ತಾರೆ.
ಈ ಪೋಷಕಾಂಶಗಳು ಸಸ್ಯವ್ಯವಸ್ಥೆಯಲ್ಲಿ ಈ ಕೆಳಗಿನ ಶಾರೀರಿಕ ಪಾತ್ರವನ್ನು ನಿರ್ವಹಿಸುತ್ತದೆ. ದ್ಯುತಿಸಂಶ್ಲೇಷಣೆ ಪ್ರಮುಖ ಪಾತ್ರವಹಿಸುತ್ತದೆ. ಇದು ಪತ್ರಹರಿತ್ತಿನ ಸಂಶ್ಲೇಷಣೆಯ ಮೂಲಕ ಪ್ರೋಟೀನ್, ಕಾರ್ಬೊಹೈಡ್ರೇಟ್ ಉತ್ಪಾದನೆಯಲ್ಲಿ ತೊಡಗಿರುವ ಅನೇಕ ಕಿಣ್ವಗಳ ಘಟಕ.
ಸತುವು ಸಸ್ಯ ಪೇರಕಗಳ ಬೆಳವಣಿಗೆಯ ರಚನೆ ಹಾಗೂ ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಸಾಮಾನ್ಯ ಎಲೆಯ ಅಭಿವೃದ್ಧಿ ಹಾಗೂ ಕಾಂಡದ ಬೆಳವಣಿಗೆಗೆ ಅಗತ್ಯ. ಸತುವು ಟ್ರಿಪ್ಟೋಪೇನ್ ಸಂಶ್ಲೇಷಣೆಗೆ ಅವಶ್ಯಕ. ಇದು ಐ.ಎ.ಎ. ಉತ್ಪತ್ತಿಯಲ್ಲಿ ಅವಶ್ಯವಿರುವ ಆಕ್ಸಿನ್‍ನಂತಹ ಸಸ್ಯಪ್ರೇರಕದ ಉತ್ಪತ್ತಿಯಲ್ಲಿ ಪಾತ್ರ ವಹಿಸುತ್ತದೆ.
ಸತುವಿನ ಕೊರತೆಯಿಂದ ಸಸ್ಯಗಳಲ್ಲಿ ಪ್ರೋಟೀನ್ ಸಂಶ್ಲೇಷಣೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗುವುದರಿಂದ ಅಮೈನೋ ಆಮ್ಲಗಳು ಹಾಗೂ ಅಮೈಡ್‍ಗಳು ಹೆಚ್ಚಾಗಿ ಸಂಗ್ರಹವಾಗುತ್ತದೆ. ನ್ಯೂಕ್ಲಿಯಿಕ್ ಆಮ್ಲದ ಸಂಶ್ಲೇಷಣೆಯಲ್ಲಿ ಸತು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಆರ್.ಎನ್.ಎ. ಉತ್ಪಾದನೆಯಲ್ಲಿ ನೇರವಾಗಿ ಭಾಗಿಯಾಗಿರುವುದರಿಂದ ಪ್ರೋಟೀನ್ ಸಂಶ್ಲೇಷಣೆಯ ಮೇಲೆ ಪ್ರಭಾವವನ್ನು ಹೊಂದಿದೆ.
ಸಾರಜನಕ ಚಯಾಪಚಯ ಕ್ರಿಯೆಯಲ್ಲಿ ಸತುವು ನಿಕಟವಾಗಿ ಪಾತ್ರವಹಿಸುತ್ತದೆ. ಕರಗುವ ಸಾರಜನಕ ಸಂಯುಕ್ತಗಳಾದ ಮೈನೋ ಆಮ್ಲಗಳ ಹಾಗೂ ಅಮೈಡ್‍ಗಳ ಸಂಗ್ರಹವು ಸತುವಿನ ಕೊರತೆ ಇದ್ದಲ್ಲಿ ಗಮನಾರ್ಹವಾಗಿ ಕಂಡುಬರುತ್ತದೆ.
ಪತ್ರಹರಿತ್ತಿನ ರಚನೆಯಲ್ಲಿ ಉತ್ಕರ್ಷಣ-ಅಪಕರ್ಷಣ ಪ್ರಕ್ರಿಯೆಗಳಲ್ಲಿ ತೊಡಗಿರುವ ಹಲವಾರು ಕಿಣ್ವಗಳ ಒಂದು ದೊಡ್ಡ ಸಂಖ್ಯೆಯಲ್ಲಿನ ಸಹವರ್ತಿಯಾಗಿ ವರ್ತಿಸುತ್ತದೆ.
ಸತುವು ನೀರಿನ ಹೀರುವಿಕೆಯನ್ನು ಮತ್ತು ಸಸ್ಯಗಳಲ್ಲಿ ನೀರಿನ ನಡುವಿನ ಸಂಬಂಧಗಳನ್ನು ನಿಯಂತ್ರಿಸುತ್ತದೆ..
ಆಕ್ಸಿನ್ ರಚನೆಯಲ್ಲಿ ಸತು ಅವಶ್ಯಕ ಟ್ರಿಪ್ಟೋಫಾನ್ ಸಂಶ್ಲೇಷಣೆಯಿಂದ ಹೊರಬರುವ ಇಂಡೋಲ್ ಹಾಗೂ ಸೇರಿನ್‍ಗಳ ಸಸ್ಯಗಳಲ್ಲಿನ ಆಕ್ಸಿನ್ ಅಂಶದ ಮೇಲೆ ಪ್ರಭಾವ ಬೀರುತ್ತದೆ.
ಸತುವಿನ ಕೊರತೆಯಿರುವ ಸಸ್ಯಗಳಲ್ಲಿ ಹರಿದ್ರೇಣುವಿನ ಸಂಖ್ಯೆಯು ಕಡಿಮೆ ಇರುತ್ತದೆ. ಕಾರ್ಬೋನಿಕ್ ಆನ್ ಹೈಡ್ರೇಸ್ ಸತುವನ್ನು ಹೊಂದಿರುವ ಕಿಣ್ವ. ಇದು ಹರಿದ್ರೇಣುವಿನಲ್ಲಿ ಇರುತ್ತದೆ.
ಸತುವು ಪರಾಗ ಅಭಿವೃದ್ಧಿ ಹಾಗೂ ಸಂಯೋಜನೆಗೆ ಬಹಳ ಅಗತ್ಯ, ಸತು ಕೊರತೆಯಿರುವ ಸಸ್ಯಗಳಲ್ಲಿ ಬೀಜೋತ್ಪಾದನೆ ಕಡಿಮೆಯಾಗುತ್ತದೆ.
ಸಾವಯವ ಗೊಬ್ಬರಗಳು ಮತ್ತು ರಸಾಯನಿಕ ಗೊಬ್ಬರಗಳಾದ ಸತುವಿನ ಸಲ್ಫೇಟ್ ಇತ್ಯಾದಿ.
ಸಸ್ಯ ವ್ಯವಸ್ಥೆಯಲ್ಲಿ ಕಬ್ಬಿಣವು ಈ ಕೆಳಗಿನ ಕಾರ್ಯಗಳನ್ನು ನಡೆಸುತ್ತದೆ.
ರೆಡಾಕ್ಸ್ ಪ್ರಕ್ರಿಯೆಯಲ್ಲಿ ಕಬ್ಬಿಣವು ಲೋಹದ ಘಟಕವಾಗಿದೆ. ಕಬ್ಬಿಣದ ಕೊರೆಯಿರುವ ಸಸ್ಯಗಳಲ್ಲಿ ಕೆಲವು ಕಿಣ್ವಗಳ ಚಟುವಟಿಕೆಗಳು ದುರ್ಬಲಗೊಂಡು ಮತ್ತು ಆಗಾಗ್ಗೆ ಒಟ್ಟು ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ.
ಕಬ್ಬಿಣವು ವಾಸ್ತವವಾಗಿ ಪತ್ರ ಹರಿತ್ತಿನ ಒಂದು ಘಟಕವಲ್ಲ. ಇದು ಪೆರೋಡಾಕ್ಸಿನ್ ಉತ್ಪಾದನೆಯಲ್ಲಿ ಭಾಗವಹಿಸುತ್ತದೆ. ಇದು ಹರಿದ್ರೇಣುವಿನಲ್ಲಿ ಕಂಡುಬರುವ ಪ್ರಮುಖ ಕಬ್ಬಿಣದ ಸಂಯುಕ್ತ ವಸ್ತು. ಎಲೆಕ್ಟ್ರಾನ್ ವರ್ಗಾವಣೆ ಸರಪಳಿಯ ಮೊದಲ ಸ್ಥಿರ ರೆಡಾಕ್ಸ್ ಸಂಯುಕ್ತ ಪೆರೋಡಾಕ್ಸಿನ್, ಹೀಗಾಗಿ ಕಬ್ಬಿಣವು ಪತ್ರಹರಿತ್ತಿನ ಜೈವಿಕ ಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹರಿದ್ರೇಣುವಿನ ಪ್ರೋಟೀನ್ ಸಂಯೋಜನೆಯಲ್ಲಿ ಕಬ್ಬಿಣವು ಅನಿವಾರ್ಯ.
ಹೊಸ ಎಲೆಗಳಲ್ಲಿ ಕಡಿಮೆ ಪತ್ರಹರಿತ್ತಿನ ಅಂಶವು ಸ್ಪಷ್ಟವಾಗಿ ಗೋಚರವಾಗಿ ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ. ಸಹಜವಾಗಿ ಕಬ್ಬಿಣದ ಕೊರತೆಯಿರುವ ಮರಗಳಲ್ಲಿ ವಿವಿಧ ಮಾದರಿಯ ಅಂತರನಾಳಗಳ ನಡುವೆ ಬಿಳಿಚಿಕೊಳ್ಳುವ ಸಸ್ಯವ್ಯಾಧಿಯನ್ನು ಕಾಣಬಹುದು. ಕಬ್ಬಿಣದ ಕೊರತೆಯಿರುವ ಪರಿಸ್ಥಿತಿಗಳಲ್ಲಿ ಪತ್ರಹರಿತ್ತಿನ ರಚನೆ ಬಹಳಷ್ಟು ದುರ್ಬಲಗೊಂಡು ಪ್ರೋಟೀನ್ ಸಂಶ್ಲೇಷಣೆ ಬಹುತೇಕ ಕಡಿಮೆಯಾಗುತ್ತದೆ. ಕಬ್ಬಿಣಕೊರತೆಯಿರುವ ಎಲೆಗಳಲ್ಲಿ ಪಿಷ್ಟ ಹಾಗೂ ಸಕ್ಕರೆ ಅಂಶಗಳು ಕಡಿಮೆ ಇರುತ್ತವೆ.
ಹಲವಾರು ಕಿಣ್ವಗಳು ಮತ್ತು ಸಸ್ಯ ಸಂಯುಕ್ತಗಳಾದ ಸೈಟೋಕ್ರೋಮ್, ಫೆರೆಡಾಕ್ಸಿನ್, ಹೆಮಿಟಿನ್, ಹೀಮ್, ಮತ್ತು ಸ್ಯೆಟೋಕ್ರೋಮ್ ಆಕ್ಸಿಡೇಸ್‍ಗಳ ಪ್ರಮಾಣವು ಕಬ್ಬಿಣದ ಕೊರತೆಯಿದ್ದರೆ ಕಡಿಮೆಯಾಗುತ್ತದೆ.
ಬಯೋಟೈಟ್, ಹಾರನ್ ಬ್ಲೆಂಡ್, ಹೆಮಟೈಟ್, ಲಿಮೋನೈಟ್, ಸಾವಯವ ಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳಾದ ಕಬ್ಬಿಣದ ಸಲ್ಫೇಟ್ ಇತ್ಯಾದಿ.
ಬಹಳ ಕಡಿಮೆ ಕರಗುವ ಮ್ಯಾಂಗನೀಸ್ ಒಂದು ಉತ್ತೇಜಿಸುವ ಪರಿಣಾಮವನ್ನು ಹೊಂದಿದೆ. ಮ್ಯಾಂಗನೀಸ್ ಮಟ್ಟವು ಅತಿ ಹೆಚ್ಚು ಚಯಾಪಚಯ ಚಟುವಟಿಕೆ ಹೊಂದಿರುವ ಅಂಗಾಂಶ ಮತ್ತು ಹೆಚ್ಚಿನ ಜೀವಸತ್ವ ಹೊಂದಿರುವ ಭಾಗಗಳಲ್ಲಿ ಹೆಚ್ಚಾಗಿರುತ್ತದೆ.
ಮ್ಯಾಂಗನೀಸ್ ದ್ಯುತಿಸಂಶ್ಲೇಷಣೆಯಲ್ಲಿ ಉತ್ಕರ್ಷಣ-ಆಪಕರ್ಷಣಕಾರಿಯಾಗಿ ಪ್ರತಿಕ್ರಿಯೆಯಲ್ಲಿ ಪಾತ್ರವಹಿಸುತ್ತದೆ. ಮ್ಯಾಂಗನೀಸ್ ನೇರವಾಗಿ ಅಥವಾ ಪರೋಕ್ಷವಾಗಿ ಹರಿದ್ರೇಣುವಿನ ರಚನೆಯಲ್ಲಿ ಮತ್ತು ಬಹುಶ: ಅವುಗಳ ವೃದ್ಧಿಯನ್ನು ಒಳಗೊಂಡಿದೆ.
ಮ್ಯಾಂಗನೀಸ್ ಕೊರತೆಯಿರುವ ಸಸ್ಯಗಳಲ್ಲಿ ಪತ್ರಹರಿತ್ತಿನ ಅಂಶ ಮತ್ತು ವಿಶೇಷವಾದ ಹರಿದ್ರೇಣುವಿನ ಪದರದ ಘಟಕಗಳಾದ ಫಾಸ್ಫೊಲಿಪಿಡ್ ಮತ್ತು ಗ್ಲೈಕೋಲಿಪೊಡ್ಸ್‍ಗಳು ಕಡಿಮೆಯಾಗುತ್ತವೆ.
ದ್ವಿದಳ ಧಾನ್ಯದ ಬೆಳೆಗಳಲ್ಲಿ ಅಂತರನಾಳದ ಬಿಳಿಚಿಕೊಳ್ಳುಇವಿಕೆಯು ಹೊಸ ಎಲೆಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಕಂಡುಬರುತ್ತದೆ. ಆದರೆ ಏಕದಳ ಬೆಳೆಗಳಲ್ಲಿ ಬುಡದ ಎಲೆಗಳಲ್ಲಿ ಹಸಿರು ಮಿಶ್ರಿತ ಬೂದು ಮಚ್ಚೆಗಳಿರುತ್ತದೆ. ಮ್ಯಾಂಗನೀಸ್ ಕೊರತೆಯಿರುವ ಸಸ್ಯಗಳಲ್ಲಿ ಹರಿದ್ರೇಣು ಪ್ರಮಾಣ ಇಳಿಕೆಯಾಗುತ್ತದೆ.
ಮ್ಯಾಂಗನೀಸ್ ಸಸ್ಯಗಳ ಚಯಾಪಚಯ ಕ್ರಿಯೆಯಲ್ಲಿ, ಹಲವಾರು ಕಿಣ್ವಗಳ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಾರ್ಬೊಹೈಡ್ರೇಟ್, ಸಾರಜನಕ ಮತ್ತು ಪ್ರೋಟೀನ್ ಚಯಾಪಚಯ ಕ್ರಿಯೆಗಳಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ತೀವ್ರ ಮ್ಯಾಂಗನೀಸ್ ಕೊರತೆಯಿಂದ ಎಲೆಗಳು ಸಾಯುತ್ತವೆ. ಸಸ್ಯ ಬೆಳವಣಿಗೆಯನ್ನು ಪ್ರತಿರೋಧಿಸುತ್ತದೆ. ಹೂಗೊಂಚಲು ಮತ್ತು ಹಣ್ಣುಗಳ ಫಲ ಕುಗ್ಗುತ್ತದೆ. ಮತ್ತು ಇದರ ಫಲಿತಾಂಶವಾಗಿ ಗಿಡ್ಡವಾದ ಎಲೆ ಮತ್ತು ಬೇರಿನ ಬೆಳವಣಿಗೆ ಕಡಿಮೆ ಇರುತ್ತದೆ.
ಹರಿದ್ರೇಣುವಿನ ರಚನೆಯಲ್ಲಿ, ಪತ್ರಹರಿತ್ತಿನ ಸಂಶ್ಲೇಷಣೆಗೆ ಮ್ಯಾಂಗನೀಸ್ ಪಾತ್ರ ವಹಿಸುತ್ತದೆ. ದ್ಯುತಿ ಸಂಶ್ಲೇಷಣೆ ಮತ್ತು ಕಾರ್ಬೋಹೈಡ್ರೇಟ್ ಚಯಾಪಚಯ ಕ್ರಿಯೆಯ ಮೇಲೆ ಮ್ಯಾಂಗನೀಸ್ ಪ್ರಭಾವ ಬೀರುತ್ತದೆ.
ಸಾವಯವ ಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳಾದ ಮ್ಯಾಂಗನೀಸ್ ಸಲ್ಫೇಟ್ ಇತ್ಯಾದಿ.
ತಾಮ್ರವು ಕಡಿಮೆ ಪ್ರಮಾಣದಲ್ಲಿ ಸಸ್ಯಗಳ ಬೆಳವಣಿಗೆಗೆ ಅವಶ್ಯಕ. ಮಿತಿಮೀರಿದ ತಾಮ್ರದ ಲವಣಗಳೂ ಸಣ್ಣ ಪ್ರಮಾಣದಲ್ಲಿ ವಿಷಕಾರಿಯಾಗುತ್ತದೆ. ಸಸ್ಯ ವ್ಯವಸ್ಥೆಯಲ್ಲಿ ತಾಮ್ರವು ಈ ಕೆಳಕಿನ ಕಾರ್ಯಗಳನ್ನು ನಿರ್ವಹಿಸುತ್ತದೆ.
ತಾಮ್ರವು ದ್ಯುತಿಸಂಶ್ಲೇಷಣೆ ಮತ್ತು ಪತ್ರಹರಿತ್ತಿನ ರಚನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
ತಾಮ್ರದ ಕೊರತೆಯು ಸಸ್ಯಾಂಗ ಬೆಳವಣಿಗೆಗಿಂತ ಹೆಚ್ಚಿನ ರಚನೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ರಚನೆಗೆ ಸಮರ್ಪಕ ತಾಮ್ರದ ಪೂರೈಕೆಯ ಅಗತ್ಯವಿದೆ. ತಾಮ್ರದ ಕೊರತೆಯಿರುವ ಸಸ್ಯಗಳಲ್ಲಿ ಹಣ್ಣುಗಳ ಗುಂಪು ಕಡಿಮೆಯಾಗುತ್ತದೆ. ಮೊದಲನೆಯದಾಗಿ, ಹೂಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಎರಡನೆಯದಾಗಿ ಬರಡಾದ ಪರಾಗ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹೀಗಾಗಿ ತಾಮ್ರದ ಕೊರತೆಯಾ ಸಸ್ಯಾಂಗ ಬೆಳವಣಿಗೆಗಿಂತ ಬೀಜ ರಚನೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
ಉತ್ಕರ್ಷಣ-ಅಪಕರ್ಷಣ ಪ್ರತಿಕ್ರಿಯೆಯಲ್ಲಿ ತಾಮ್ರವು ಸಸ್ಯಗಳಿಗೆ ಅಗತ್ಯವಿದೆ. ತಾಮ್ರ ಹೊಂದಿರುವ ಕಿರ್ಣವ ವ್ಯವಸ್ಥೆಗಳಾದ ಸೈಟೋಕ್ರೋಮ್ ಆಕ್ಸಿಡೇಸ್, ಆಸ್ಕೋರ್ಬಿಕ್ ಆಮ್ಲದ ಆಕ್ಸಡೇಸ್ ಮತ್ತು ಪಾಲಿಪಿನಾಲ್ ಆಕ್ಸಿಡೇಸ್‍ಗಳ ಚಯಾಪಚಯ ಕ್ರಿಯಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಬೋರಾನ್ ಲೋಹವಲ್ಲದ ಲಘುಪೋಷಕಾಂಶ. ಇದು ಸಸ್ಯ ವ್ಯವಸ್ಥೆಯಲ್ಲಿ ಈ ಕೆಳಗಿನ ಶಾರೀರಿಕ ಪಾತ್ರಗಳನ್ನು ತನಡೆಸುತ್ತದೆ.
ಬೋರಾನ್ ಸಸ್ಯಗಳ ಫಲೀಕರಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಶೇಷವಾಗಿ ಹೂ ಬಿಡುವ ಸಮಯದಲ್ಲಿ ಬೋರಾನ್ ಅವಶ್ಯಕತೆ ಹೆಚ್ಚಿರುತ್ತದೆ. ಸಂತಾನೋತ್ಪತ್ತಿ ಅಂಗಗಳಲ್ಲಿ ಬೋರಾನ್ ಅಂಶವು ವಿಶೇಷವಾಗಿ ಹೆಚ್ಚಾಗಿರುತ್ತದೆ.
ಬೋರಾನ್ ಹೂ, ಹಣ್ಣು ಮತ್ತು ಬೀಜ ರಚನೆಯಲ್ಲಿ, ಅಂಡಾಂಶಗಳ ಉದುರುವಿಕೆಯನ್ನು ಮತ್ತು ಹೂಗಳ ಉದುರುವುಕೆಯನ್ನು ತಡೆಯುತ್ತದೆ.
ಬೋರಾನ್ ಕಾರ್ಬೋಹೈಡ್ರೇಟ್ ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವವನ್ನು ಬೀರುತ್ತದೆ. ನ್ಯೂಕ್ಲಿಕ್ ಆಮ್ಲ ಮತ್ತು ಪ್ರೋಟೀನ್‍ಗಳ ಚಯಾಪಚಯ ಕ್ರಿಯೆಯ ಮಏಲೆ ಪರಿಣಾಮವನ್ನು ಬೀರುತ್ತದೆ. ಬೋರಾನ್ ಕೊರತೆಯಿರುವ ಸಸ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‍ನ ಅಂಶ ಜಾಸ್ತಿಯಾಗುತ್ತದೆ.
ಸಕ್ಕರೆ-ಬೋರೇಟ್ ಸಂಕಿರ್ಣ ರಚನೆಯಾಗುವುದರಿಂದ ಜೀವ ಕೋಶಗಳ ಪದರಗಳ ಮೂಲಕ ಸ್ಥಳಾಂತರವಾಗಲು ಸಹಾಯವಾಗುತ್ತದೆ. ಬೋರಾನ್ ಇಲ್ಲದಿದ್ದಾಗ, ಎಲೆಗಳಲ್ಲಿ ಸಕ್ಕರೆ ಮತ್ತು ಪಿಷ್ಠದ ಸಂಗ್ರಹಣೇ ಜಾಸ್ತಿಯಾಗುತ್ತದೆ.
ಕ್ಲೂಕೋಸ್ ಸಕ್ಕರೆಯು ಪಾಲಿಮರೈಸೇಷನ್ ಕ್ರಿಯೆಯ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸ್ವಾರ್ಚ್ ಆಗುವುದನ್ನು ತಡೆಯುತ್ತದೆ. ಈ ಕಾರಣಕ್ಕಾಗಿಯೇ ಬೋರಾನ್ ಹಣ್ಣು ಹಾಗೂ ಶೇಖರಣಾ ಅಸಂಗಗಳಲ್ಲಿ ಸಕ್ಕರೆ ಮತ್ತು ಪಿಷ್ಠದ ಅಂಶವನ್ನು ಹೆಚ್ಚಿಸುತ್ತದೆ.
ಜೀವಕೋಶಗಳ ನೀರಿನ ಸಂಬಂಧದಲ್ಲಿ ಬೋರಾನ್ ಒಂದುಪ್ರಮುಖ ಪಾತ್ರವಹಿಸುತ್ತದೆ.
ಬೋರಾನ್ ಸಸ್ಯಗಳಲ್ಲಿನ ದ್ಯುತಿಸಂಶ್ಲೇಷಣೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.
ಬೋರಾನ್ ಪ್ರೋಟೀನ್ ಮತ್ತು ನ್ಯೂಕ್ಲಿಕ್ ಆಮ್ಲದ ಸಂಶ್ಲೇಷಣೆ ಮೇಲೆ ಪ್ರಭಾವ ಬೀರುತ್ತದೆ. ಪ್ರೋಟೀನ್ ಸಂಯೋಜನೆ, ಕೋಶಭಿನ್ನತೆ ಸಸ್ಯಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಬೋರಾನ್ ಕೊರತೆಯು ಆರ್.ಎನ್.ಎ. ಮತ್ತು ಡಿ.ಎನ್.ಎ. ಸಂಶ್ಲೇಷಣೆಯನ್ನು ನಿಧಾನಗೊಳೊಸುತ್ತದೆ.
ಬೋರಾನ್ ಧನಾತ್ಮಕವಾಗಿ ಲಿಗ್ನಿನ್ ಸಂಶ್ಲೇಷಣೆ ಮತ್ತು ಕೋಶಗೋಡೆಗಳ ಕಾಷ್ಟೀಕರಣದ ಮೇಲೆ ಪರಿಣಾಮ ಬೀರುತ್ತದೆ.
ಸಾಕಷ್ಟು ಬೋರಾನ್ ಪೂರೈಕೆಯು ತರಕಾರಿಗಳಲ್ಲಿ ಜೀವಸತ್ವ ‘ಸಿ’ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸಾವಯವ ಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳಾದ ಬೋರ್ಯಾಕ್ಸ್ ಇತ್ಯಾದಿ.
ಇತರ ಪೋಷಕಾಂಶಗಳಿಂದ ಸಸ್ಯಗಳ ಮಾಲಿಬ್ಡಿನಂ ಅವಶ್ಯಕತೆ ಬಹಳಕಡಿಮೆ ಪ್ರಮಾಣದಲ್ಲಿದೆ. ಇದು ಸಸ್ಯ ವ್ಯವಸ್ಥೆಯಲ್ಲಿ ಈ ಕೆಳಗಿನ ಶಾರೀರಿಕ ಪಾತ್ರ ನಿರ್ವಹಿಸುತ್ತದೆ.
ನೈಟ್ರೇಟ್ ರೂಪದ ಸಾರಜನಕವು ನೈಟ್ರೇಟ್ ಆಗಿ ಪರಿವರ್ತನೆ ಹೊಂದುವ ಅಪರ್ಕಷಣ ಕ್ರಿಯೆಯಲ್ಲಿ ನೈಟ್ರೇಟ್ ರೆಡಕ್ಟಸ್ ಕಿಣ್ವದ ವೇಗವರ್ಧಕವಾಗಿ ಮಾಲಿಬ್ಡಿನಂ ಪಾತ್ರ ವಹಿಸುತ್ತದೆ.
ಮಾಲಿಬ್ಡಿನಂ ಕೆಲವು ಪಾಸ್ಫೇಟ್ ವ್ಯವಸ್ಥೆ ಮತ್ತು ಅಸ್ಕಾರ್ಬಿಕ್ ಆಮ್ಲದ ಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಲ್ಫೇಟ್ ಹೀರುವಿಕೆಯನ್ನು ಕೂಡ ತಗ್ಗಿಸುತ್ತದೆ. ಕೆಲವು ಕಿಣ್ವಗಳ ಸಹವರ್ತಿಗಳು ಮಾಲಿಬ್ಡಿನಂ ಅನ್ನು ಕೊಂದಿರುವುದು ಕಂಡುಬಂದಿದೆ. ಮಾಲಿಬ್ಡಿನಂ ಈ ಕಿಣ್ವಗಳ ರಚನಾತ್ಮಕ ಮತ್ತು ವೇಗವರ್ಧಕ ಕಾರ್ಯ ಎರಡನ್ನೂ ಹೊಂದಿದೆ. ಮತ್ತು ನೇರವಾಗಿ ರೆಡಾಕ್ಸ್ ಪ್ರತಿಕ್ರಿಯೆಯಲ್ಲಿ ತೊಡಗಿದೆ. ಕಿಣ್ವಗಳಾದ ನೈಟ್ರೇಟ್ ರಿಡಕ್ಟೇಸ್, ನೈಟ್ರೇಜಿನೇಸ್, ಡಿಹೈಡ್ರೇಜೀನೇಸ್ ಮತ್ತು ಸಲ್ಫೇಟ್ ರೆಡಕ್ಟೇಸ್ಗಳಿವೆ. ಆದ್ದರಿಂದ ಮಾಲಿಬ್ಡಿನಂ ಕ್ರಿಯೆಯು ಸಾರಜನಕ ಚಯಾಪಚಯ ಕ್ರಿಯೆಗೆ ಸಂಬಂಧಿಸಿದೆ.
ಮಾಲಿಬ್ಡಿನಂ ಸಹಜೀವನದ ಸಾಜರನಕ ಸ್ಥರೀಕರಣದಲ್ಲಿ ಪ್ರಮುಖ ಲಘು ಪೋಷಕಾಂಶ ಮತ್ತು ಸಾರಜನಕ ಸ್ಥಿರೀಕರಿಸುವ ಕಿಣ್ವದ ಅತ್ಯಗತ್ಯ ಘಟಕ ನೈಟ್ರೋಜಿನೇಸ್ ಆಗಿದೆ. ನೈಟ್ರೇಜಿನೇಸ್ ಚಟುವಟಿಕೆಯಲ್ಲಿ ಮಾಲಿಬ್ಡಿನಂ ಸಾರಜನಕ ಸ್ಥಿರೀಕರಿಸುವ ವಿವಿಧ ಹಂತದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಮಾಲಿಬ್ಡಿನಂ ಸಂತಾನೋತ್ಪತ್ತಿ ಅಂಗಗಳಲ್ಲಿ ಶೇಖರಣೆ ಯಾಗುತ್ತದೆ. ಬಹುಶ: ಭ್ರೂಣದ ಫಲೀಕರಣ ಮತ್ತು ಅಭಿವೃದ್ಧಿಯಲ್ಲಿ ಮಾಲಿಬ್ಡಿನಂ ನಿರ್ದಿಷ್ಟ ಪಾತ್ರವನ್ನು ವಹಿಸುತ್ತದೆ.
ಮಾಲಿಬ್ಡಿನೈಟ್, ಸಾವಯವ ಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳಾದ ಅಮೋನಿಯಂ ಮಾಲಿಬ್ಡೇಟ್, ಸೋಡಿಯಂ ಮಾಲಿಬ್ಡೇಟ್ ಇತ್ಯಾದಿ.
ಇದು ಸಸ್ಯಾವ್ಯವಸ್ಥೆಯಲ್ಲಿ ಈಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ. ಕ್ಲೋರಿನ್ ಅನ್ನು ಸುಲಭವಾಗಿ ಸಸ್ಯಗಳು ಹೀರಿಕೊಳ್ಳುತ್ತವೆ. ಕ್ಲೋರಿನ್ ಅಯಾನುಗಳ ರೂಪದಲ್ಲಿಸಾವಯವ ಪದಾರ್ಥಗಳಿದ್ದು ಆಯಾನಿಕ್ ರೂಪದಲ್ಲಿ ಮಾತ್ರ ಕಾರ್ಯನಡೆಸುತ್ತದೆ. ಇತರೆ ಸೂಕ್ಷ್ಮಪೋಷಕಾಂಶಗಳಿಗೆ ಹೋಲಿಸಿದರೆ ಸಸ್ಯಗಳಲ್ಲಿ ಕ್ಲೋರಿನ್‍ನ ಅವಶ್ಯಕ ಸಾಕಷ್ಟು ಹೆಚ್ಚಾಗಿರುತ್ತದೆ.
ಸಸ್ಯಗಳ ಚಯಾಪಚಯ ಕ್ರಿಯೆಯಲ್ಲಿ ಕ್ಲೋರಿನ್‍ನ ನಿಖರ ಪಾತ್ರ ಇನ್ನೂ ಅಸ್ಪಷ್ಟವಾಗಿದೆ. ಸಾಮಾನ್ಯವಾಗಿ ವೀಕ್ಷಿಸಿದಾಗ, ಈ ಅಂಶವು ದ್ಯುತಿಸಂಶ್ಲೇಷಣೆಯ ಪೋಟೋಸಿಸ್ಪಮ್ - 2 ರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕ್ಲೋರಿನ್ ಸ್ಟೊಮ್ಯಾಟಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತೊಗಟೆಯ ತೆರೆಯುವಿಕೆ ಮತ್ತು ಮುಚ್ಚುವಿಕೆಯು ಪೊಟ್ಯಾಷಿಯಂ ಪ್ರಸಾರಗಳ ಮಧ್ಯಸ್ಥಿಕೆಯಿಂದ ಮತ್ತು ಜೊತೆಗೂಡಿದ ಕ್ಲೋರೈಡ್‍ಗಳನ್ನು ಒಳಗೊಂಡಿರುತ್ತದೆ.
ಕ್ಲೋರೈಡ್ ಅಯಾನುಗಳು ವಿಶೇಷವಾಗಿ ಕಾಂಡದ ತುದಿ ಮತ್ತು ಬೇರಿನ ಬೆಳವಣಿಗೆಗೆ ಅವಶ್ಯ, ಕ್ಲೋರಿನ್‍ನ ವಿಷಕಾರಿತ್ವ ರೋಗದ ಲಕ್ಷಣಗಳೆಂದರೆ ಸಸ್ಯ ಬೆಳವಣಿಗೆಗೆ ಭಿನ್ನತೆ, ಎಲೆಯ ಸುಳಿ ಹಾಗೂ ಅಂಚುಗಳು ಬಿಳಿಚಿಕೊಂಡು ಸುಟ್ಟಂತಾಗಿರುತ್ತದೆ. ಈ ಲಕ್ಷಣಗಳು ಸಸ್ಯದ ರೀತಿ ಮತ್ತು ಸಸ್ಯ ವಯಸ್ಸಿನ ಮೇಲೆ ಅವಲಂಬಿತವಾಗಿದೆ.
ಹೆಪಟೈಟ್ ಸಾವಯವ ಗೊಬ್ಬರಗಳು ಮತ್ತು ರಸಾಯನಿಕ ಗೊಬ್ಬರಗಳಾದ ಪೊಟ್ಯಾಷಿಯಂ ಕ್ಲೋರೈಡ್ ಇತ್ಯಾದಿ.
ಎಲೆಗಳು ಬಾಡುತ್ತವೆ. ಹಾಗೂ ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ರೋಗಗಳಿಗೊಳಗಾಗುತ್ತವೆ.
ಹದಿನೇಳು ಅವಶ್ಯಕ ಕಪೋಷಕಾಂಶಗಳಲ್ಲದೆ, ಇತರ ಕೆಲವು ಪೋಷಕಾಂಶಗಳು ಕೆಲವು ನಿರ್ದಿಷ್ಟ ಬೆಳೆಗಳಿಗೆ ಪ್ರಯೋಜನಕಾರಿ ಎಂದು ಹೇಳಬಹುದು. ಇವು ಕೆಲವು ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅವುಗಳೆಂದರೆ ಸೋಡಿಯಂ, ಅಲ್ಯೂಮಿನಿಯಂ, ಕೋಬಾಲ್ಟ್, ಅಯೋಡಿನ್, ಸೆಲೆನಿಯಂ, ಸಿಲಿಕಾನ್ ಮತ್ತು ವೆನೆಡಿಯಂ. ಸಾಮಾನ್ಯವಾಗಿ ಇವುಗಳನ್ನು ಅವಶ್ಯ ಪೋಷಕಾಂಶಗಳ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಬೆಳೆಗಳಿಗೆ ಇವು ಬೇಕಾಗುವ ಪ್ರಮಾಣವು ಬಹಳ ಕಡಿಮೆ ಇದ್ದು, ಇತರ ಪೋಷಕಾಂಶಗಳ ಜೊತೆ ಮಿಶ್ರ ಮಾಡಿ ಬಳಸಲಾಗುತ್ತದೆ.
ಸಸ್ಯಜೀವನದಲ್ಲಿ ಒಂದು ಅನುಕೂಲಕರ ಅಂಶವಾಗಿದೆ. ಸೋಡಿಯಂ ಹೆಚ್ಚಿನ ಸಸ್ಯಗಳಲ್ಲಿ ಉಪಯುಕ್ತವಾದ ಪೋಷಕಾಂಶವಾಗಿದೆ.
ಪೊಟ್ಯಾಷಿಯಂ ಸಂರಕ್ಷಕವಾಗಿ ಸೋಡಿಯಂನ ಬಳಕೆ :
ಸಸ್ಯ ಚಯಾಪಚಯ ಕ್ರಿಯೆಯಲ್ಲಿ ಸೋಡಿಯಂ ನಿಖರವಾಗಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಸೋಡಿಯಂ ಅನ್ನು ಭಾಗಶ: ಕೆಲವು ಕಿಣ್ವ ವ್ಯವಸ್ಥೆಗಳ ಪ್ರಮುಖ ಅಂಶಾಗಿ ಪೊಟ್ಯಾಷಿಯಂ ಬದಲಿಗೆ ಬಳಸಬಹುದು. ಶುಗರ್ ಬೀಟ್, ಟರ್ನಿಪ್ ನಂತಹ ಕೆಲವು ಸಸ್ಯ ಪ್ರಬೇದಗಳಲ್ಲಿ ಪೊಟ್ಯಾಷಿಯಂ ಪೂರೈಕೆ ಸೀಮಿತವಾಗಿದಾಗ ಸೋಡಿಯಂ ಬಳಸಬಹುದು. ಸೋಡಿಯಂ ವ್ಯಾಕ್ಯೂಲ್ಸ್‍ನಲ್ಲಿ ಸಂಗ್ರಹಗೊಳ್ಳುತ್ತದೆ. ಸೋಡಿಯಂ ಕೊರತೆಯ ಕ್ಷೇತ್ರ ಸ್ಥಿತಿಗಳಲ್ಲಿ ಬೆಳೆದ ಯಾವುದೇ ತರಕಾರಿಗಳಲ್ಲಿ ಕಂಡುಬಂದಿಲ್ಲ ನೀರಿನ ಸೀಮಿತ ಪೂರೈಕೆ ಮತ್ತು ಶುಷ್ಕ ವಾತಾವರಣದ ಪರಿಸ್ಥಿತಿಯ ಸಸ್ಯಗಳಲ್ಲಿ ನೀರಿನ ಸಮತೋಲನವನ್ನು ಸುಧಾರಿಸುತ್ತದೆ.
ಅನೇಕ ಸಸ್ಯಗಳಲ್ಲಿ ಇದು ಇಂಗಾಲದ ಡೈ ಆಕ್ಸೈಡ್ ಸಜಾತಿಕರಣದಲ್ಲಿ ಪಾಲ್ಗೊಳ್ಳುವುದು ಕಂಡುಬಂದಿದೆ. ಸಿ 4 ಡೈಕಾರ್ಬಾಕ್ಸಿಲಿಕ್ ದ್ಯುತಿಸಂಶ್ಲೇಷಕ ಪ್ರಕ್ರಿಯೆಯಲ್ಲಿ ಹಲವು ಸಸ್ಯಗಳ ಪ್ರಮುಖ ಪೋಷಕಾಂಶವಾಗಿ ಸೋಡಿಯಂ ಅಗತ್ಯವಿದೆ.
ನಂಜು : ಹೆಚ್ಚು ಕ್ಷಾರೀಯ ಪರಿಸ್ಥಿತಿಗಳಲ್ಲಿ ಸಸ್ಯಗಳಲ್ಲಿ ನಂಜು ಉಂಟಾಗುತ್ತದೆ. ಇದು ನಿರ್ದಿಷ್ಟವಾಗಿ ಯಾವುದೇ ವಿಷಕಾರಿ ಪರಿಣಾಮ ಬೀರುವುದಿಲ್ಲ., ಆದರೆ ಇತರ ಲವಣಗಳು, ನೀರಿನ ಕೊರತೆಯಿಂದಾಗಿ ಮಣ್ಣಿನ ದ್ರಾವಣದಲ್ಲಿ ಹೆಚ್ಚಿನ ಉಪ್ಪಿನ ಸಾಂದ್ರತೆಗೆ ಕಾರಣವಾಗುತ್ತದೆ. ಭಾಷ್ಪೀಕರಣ ಹೆಚ್ಚಾದರೆ, ಸಸ್ಯಗಳು ಒಣಗಲು ಪ್ರಾರಂಭಿಸುತ್ತದೆ. ಎಲೆಯ ಹಾನಿಯು ಕೆಲವೊಮ್ಮೆ ಬಿಳಿಚಿಕೆ ಆರಂಭವಾಗಿ ಎಲೆಯ ತುದಿ ಮತ್ತು ಅಂಚುಗಳಲ್ಲಿ ಅಥವಾ ಸ್ತರಗಳ ನಡುವಿನ ಮೃತ ಗಾಯಗಳಾಗುತ್ತವೆ.
ಸಾವಯವ ಗೊಬ್ಬರಗಳು ಮತ್ತು ಕೃತಕ ಗೊಬ್ಬರಗಳಾದ ಸೋಡಿಯಂ ನೈಟ್ರೇಟ್, ಸೋಡಿಯಂ ಮಾಲೊಬ್ಡೇಟ್ ಇತ್ಯಾದಿ.
ಸಸ್ಯಗಳು ಕೋಬಾಲ್ಡಟ್ ಅನ್ನು ಅಯಾನ್ ರೂಪದಲ್ಲಿ ಹೀರಿಕೊಳ್ಳುತ್ತವೆ. ಕೋಬಾಲ್ಟ್ ಕೋಬಾಲಮೈನ್ ಸಹಕಿಣ್ವದ ಲೋಹದ ಘಟಕವಾಗಿದ್ದು ಜೀವಸತ್ವ ಬಿ 12 ರ ಘಟಕವಾಗಿದೆ. ಕೋಬಾಲ್ಟ್ ದಿದ್ವಳ ಧಾನ್ಯಗಳಲ್ಲಿ ಸಾರಜನಕ ಸ್ಥಿರೀಕರಣವನ್ನು ಹೆಚ್ಚಿಸುತ್ತದೆ. ಮತ್ತು ಮೇವಿನ ಬೆಳೆಗಳ ಪೋಷಣೆ ಗುಣಮಟ್ಟವನ್ನು ರೂಮಿನೆಂಟ್ಸ್‍ನಲ್ಲಿ ಸುಧಾರಿಸುತ್ತದೆ. ಮಿಧಿಯೋನಿನ್ ಸಿಂಥಟೇಸ್, ರೈಬೋನೂಕ್ಲಿಯೋಟೈಡ್ ರಿಡಕ್ಟೇಸ್ ಮತ್ತು ಮಿಥೈಲ್ ಮಾಲೋನೈಲ್ - ಸಹಕಿಂವ ಅಮೂಟೈಸ್ ಚಟುವಟಿಕೆಯು ರೈಬೋಜಿಯಂ ಮತ್ತು ಬ್ರಾಡಿರೈಜೋಬಿಯಂ ಪ್ರಭೇದಗಳಲ್ಲಿ ಕೋಬಾಲಾಮೈನ್‍ನ ಮೇಲೆ ಅವಲಂಬಿತವಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ ಕೆಲವು ಬೆಳೆಗಳಾದ ಭತ್ತ, ಕಬ್ಬು ಇತ್ಯಾದಿ ಬೆಳೆಗಳಿಗೆ ಪ್ರಯೋಜನಕಾರಿ ಮತ್ತು ಅತ್ಯಗತ್ಯ ಎಂದು ಕಂಡುಬಂದಿದೆ. ಕೆಲವು ವರದಿಗಳ ಪ್ರಕಾರ ಸಿಲಿಕಾನ್ ರಂಜಕದ ಪೋಷಣೆಗೆ ಸಹಾಯ ಮಾಡುತ್ತದೆ. ಇದು ಕೋಶಗೋಡೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಸಸ್ಯಗಳಲ್ಲಿನ ಸತುವಿನ ಲಭ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಬೆಳೆಗಳಲ್ಲಿ ಕಬ್ಬಿಣ ಹಾಗೂ ಮ್ಯಾಂಗನೀಸ್‍ನ ನಂಜನ್ನು ತಡೆಯುತ್ತದೆ.
ಸೆಲೇನಿಯಂನ ರಸಾಯನಶಾಸ್ತ್ರವು ಗಂಧಕವನ್ನೇ ಹೋಲುತ್ತದೆ. ಸಲೆನಿಯಂನ ಹೆಚ್ಚಿನ ಅಗತ್ಯತೆ ಸಸ್ಯಗಳಿಗಿಂತ ಪ್ರಾಣಿಗಳಿಗಿದೆ.
ವೆನೆಡಿಯಂ ದ್ವಿದಳ ಧಾನ್ಯಗಳಲ್ಲಿ ಸಾರಜನಕ ಸ್ಥೀರೀಕರಣವನ್ನು ವರ್ಧಿಸುತ್ತದೆ. ವೆನೆಡಿಯಂ ರಾಸಾಯನಿಕ ವರ್ತನೆಯು ಮಾಲಿಬ್ಡಿಯಂ ಅನ್ನು ಹೋಲುತ್ತದೆ. ಅಜೋಟೋ ಬ್ಯಾಕ್ಟರ್‍ನಲ್ಲಿ ನೈಟ್ರೋಜಿನೇಸ್ ಕಿಣ್ವದ ವ್ಯವಸ್ಥೆಯಲ್ಲಿ ಮಾಲಿಬ್ಡಿನಂ ಬದಲಿಗೆ ವೆನೆಡಿಯಂ ಬಳಸಬಹುದು.
ಲಕ್ಷಣಗಳು ಅಭಾವ
ಪೂರ್ತಿ ಎಲೆಗುಂಪಿನಲ್ಲಿ ಹರಡಿರುವ ಸ್ಥಿತಿ
ರಂಜಕ
ಸಸ್ಯಗಳ ಎಲೆಗುಂಪುಗಳಲ್ಲಿ ಕೆಲ ಸ್ಥಳಗಳಲ್ಲಿ ಮಾತ್ರ ಬಿಳಿಚಿರುವಿಕೆ, ವಿವಿಧ ವರ್ಣ, ನೆಕ್ರೋಸಿಸ್ ಇತ್ಯಾದಿ
ಮೆಗ್ನೀಷಿಯಂ
ಪೊಟ್ಯಾಷಿಯಂ
ಸೂಕ್ಷ್ಮ ಪೋಷಕಾಂಶ ಸಸ್ಯ ಪೋಷಣೆಯಲ್ಲಿ ಪಾತ್ರ ಕೊರತೆ ಲಕ್ಷಣ ಕೊರತೆ ತುಂಬುವ ಕ್ರಮ
ಕಬ್ಬಿಣ ಶ್ವಾಸೋಚ್ಛ್ವಾಸ ಕ್ರಮದಲ್ಲಿ ಒಂದು ಮುಖ್ಯ ಅಂಗ, ಕೆಲವು ಕಿಣ್ವಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಮತ್ತು ದ್ಯುತಿಸಂಶ್ಲೇಷಣೆ ಮತ್ತು ಇತರ ಅತಿ ಮಹತ್ವದ ಚಟುವಟಿಕೆ ಗಳನ್ನು ಹತೋಟಿಯಲ್ಲಿಡುತ್ತದೆ. ಎಲೆಗಳಲ್ಲಿ ಪತ್ರಹರಿತ್ತಿನ ತಯಾರಿಕೆಗೆ ಅಗತ್ಯ ಉತ್ಕರ್ಷಣೆ ಮತ್ತು ಅಪಕರ್ಷಣೆ ಕ್ರಿಯೆಗಳಲ್ಲಿ ಅಗತ್ಯ. ಎಳೆ ಎಲೆಗಳು ಸಣ್ಣದಾಗಿಯೇ ಉಳಿದು ಬಿಳಿಚಿದ ಹಳದಿ ಬಣ್ಣವನ್ನು ತಾಲುತ್ತವೆ. ಕೊರತೆಯು ವಾರ್ಷಿಕ ಬೆಳೆಗಳಿಗಿಂತ ವಿಶೇಷವಾಗಿ ಬಹುವಾರ್ಷಿಕ ಬೆಳೆಗಳಲ್ಲಿ ಕಾಣಿಸಿ ಕೊಳ್ಳುತ್ತದೆ. ಎಲೆಗಳ ಮೇಲೆ ಶೇ. 1 ರ ಕಬ್ಬಿಣದ ಸಲ್ಫೇಟ್ ದ್ರಾವಣವನ್ನು ಸಿಂಪರಿಸಬೇಕು. ಎಲೆಗಳ ಮೇಲೆ ಸಾವಯವ ಕಬ್ಬಿಣ ಸಮ್ಮಿಶ್ರಿತ ಲವಣಗಳನ್ನು ಕಬ್ಬಿಣದ ಕೀಲೇಟ್ (ಕಬ್ಬಿಣದ ಇಡಿಟಿಯೆ)ಇತ್ಯಾದಿ ರೂಪದಲ್ಲಿ ಸಿಂಪರಿಸಿದರೆ ಗುಣ ಕಾಣುತ್ತದೆ. ಕೀಲೇಟ್‍ಗಳನ್ನು ಮಣ್ಣಿಗೂ ಹಾಕಬಹುದು.
ಮ್ಯಾಂಗನೀಸ್ ಪತ್ರಹರಿತ್ತಿನ ರಚನೆ, ನೈಟ್ರೇಟ್ ಅಪಕರ್ಷಣೆ, ಶ್ವಾಸೋಚ್ಛ್ವಾಸ, ಸಾರಜನಕ ಸಂಶ್ಲೇಷಣೆ ಮತ್ತು ಜೀವಸತ್ವಗಳ ರಚನೆಗೆ ಅಗತ್ಯ ಉತ್ಕರ್ಷಣೆ ಮತ್ತು ಅಪಕರ್ಷಣೆ ಕ್ರಿಯೆಗಳಲ್ಲಿ ಅಗತ್ಯ. ಎಲೆ ಬಿಳಿಚಿಕೊಳ್ಳುತ್ತವೆ. ನಾಳಾಂತರ ಭಾಗಗಳು ಬಿಳುಪಾಗಿ ನಾಳಗಳು ಹಸುರಾಗುತ್ತದೆ. ಕೊರತೆಯ ಮಣ್ಣಿಗೆ ಹೆಕ್ಟೇರಿಗೆ 40 ಎಇಂದ 50 ಕಿ.ಗ್ರಾಂ ಮ್ಯಾಂಗನೀಸ್ ಸಲ್ಫೇಟ್‍ನ್ನು ಉಪಯೋಗಿಸಿದರೆ ಸಹಿಹೋಗುತ್ತದೆ.
ಸತು ಕೆಲವು ಕೋಶಿಕೆಗಳಲ್ಲಿ ಕಿಣ್ವಗಳ ರಾಸಾಯನಿಕ ಕ್ರಿಯೆಗೆ ಮತ್ತು ಸಸ್ಯ ಹರಿತ್ತು ಹಾಗೂ ಕೆಲವು ಆಕ್ಸಿನ್‍ಗಳ ರಚನೆಗೆ ಅಗತ್ಯ. ಕುಂಠಿತ ಬೆಳವಣಿಗೆ ಮತು ಅಲ್ಪಪತ್ರ ಬೀನ್, ಸಿಟ್ರಸ್ ಅಲಸಂದೆ ಮತ್ತು ಸೇಬು ಸಸ್ಯಗಳಲ್ಲಿ ಸಣ್ಣ ಗುಲಾಬಿ ಆಕಾರದ ಸಸ್ಯತುದಿ ಹೆಕ್ಟೇರಿಗೆ 20 ರಿಂದ 25 ಕಿ.ಗ್ರಾಂ. ಸತುವಿನ ಸಲ್ಫೇಟ್ ಬಳಸಬಹುದು ಅಥವಾ ಶೇ. 0.5 ರಿಂದ 1.5 ರ ಸತುವಿನ ಸಲ್ಫೇಟ್ ಇಲ್ಲವೇ ಸತುವಿನ ಕೀಲೇಟ್ನ ಕ್ರಾವಣದ ಸಿಂಪರಣೆ ಅಗತ್ಯ.
ತಾಮ್ರ ಕೆಲವು ಜೀವಕಿಣ್ವಗಳ ಉತ್ಕರ್ಷಣೆ ಮತ್ತು ಅಪಕರ್ಷಣೆ ಕ್ರಯಾಚರಣೆಗಳಲ್ಲಿ ಭಾಗವಹಿಸುವುದು. ಸತತ ಅನಾವೃಷ್ಠಿಯ ಕಾಲದಲ್ಲಿ ತಾಮ್ರದ ಅಭಾವವು ಕಾಣಿಸಿ ಕೊಳ್ಳುತ್ತದೆ. ಎಲೆಗಳು ಬಿಳಿಚುವಿಕೆ ಹಾಗೂ ಎಲೆ ಮತ್ತು ಸಣ್ಣ ಕೊಂಬೆ ಉದುರುತ್ತದೆ. ಹೆಕ್ಟೇರಿಗೆ 1 ರಿಂದ 5 ಕಿ.ಗ್ರಾಮ. ಮೈಲುತುತ್ತದ ಪುಡಿ ಅಥವಾ ಶೇ. 0.5 ರಿಂದ 1.0 ರ ಮೈಲುತುತ್ತದ ದ್ರಾವಣದ ಸಿಂಪರಣೆ
ಬೋರಾನ್ ಕೋಶಿಕೆಗಳ ಚುರುಕು ವಿಭಜನೆ, ಪುಷ್ಪರೇಣು ಮೊಳಕೆ ಹಾಗೂ ಪಲ ಮತ್ತು ಬೇರುಗಳ ರಚನೆಗೆ ಅಗತ್ಯ. ಶರ್ಕರಪಿಷ್ಠ ಮತ್ತು ಸಸಾರಜನಕ ವಸ್ತುಗಳ ಸಾಗಾಣಿಕೆಗೂ ಅವಶ್ಯಕವಿದೆ. ಕೊರತೆಯು ಬೆಳೆಯುವ ತುದಿಗಳಲ್ಲಿ ಮತ್ತು ಎಲೆಯ ಖಂಡಗಳಲ್ಲಿ ಮೊದಲು ಕಾಣಿಸಿಕೊಂಡು ಗುಂಗುರು ಎಲೆ ಮತ್ತು ವಿಆರತೆಯಲ್ಲಿ ಪರಿಣಮಿಸುತ್ತದೆ. ಹೆಕ್ಟೇರಿಗೆ 5.5 ರಿಂದ 11 ಕಿ.ಗ್ರಾಂ. ನಷ್ಟು ಬೋರಾಕ್ಸ್ ಅನ್ನು ಸಾಧಾರಣ ಮಣ್ಣಿಗೆ ಸೇರಿಸಬೇಕು. ಹೆಚ್ಚಾಗಿ ಉಪಯೋಗಿಸಿದಲ್ಲಿ ವಿಷಕಾರಿಯಾಗುತ್ತದೆ. ಅಥವಾ ಶೇ. 1 ರ ಬೋರಾಕ್ಸ್ ದ್ರಾವಣದ ಸಿಂಪರಣೆ
ಕ್ಲೋರಿನ್ ಸ್ಟೂಮ್ಯಾಟದ ತೆರೆಯುವಿಕೆ ಮತ್ತು ಮುಚ್ಚುವಿಕೆಯಲ್ಲಿ ಪಾತ್ರ, ಕಿರಣಜನ್ಯ ಸಂಯೋಜನ ಕ್ರಿಯೆಯಲ್ಲಿ ಪಾತ್ರ. ಎಲೆ ಬಾಡುವಿಕೆ, ಬಿಳಿಚುವಿಕೆ ಮತ್ತು ನೆಕ್ರೋಸಿಸ್ ಹೆಕ್ಟೇರಿಗೆ 15.0 ಕೆ.ಜಿ. ಕ್ಲೋರಿನ್ (ಅಮೋನಿಯಂ ಅಥವಾ ಪೊಟ್ಯಾಷಿಯಂ ಕ್ಲೋರೈಡ್ ರೂಪದಲ್ಲಿ)
ಮಾಲಿಬ್ಡಿನಂ ಸಾರಜನಕ ಸ್ಥಿರಪಡಿಸಬಲ್ಲ ಜೀವಾಣುಗಳು ಮತ್ತು ಸಸ್ಯಗಳಲ್ಲಿ ಸಾರಜನಕ ರೂಪ ವಿನ್ಯಾಸಕ್ಕೆ ಅಗತ್ಯ ಹೂಕೋಸು ಮತ್ತು ಇತರ ಕ್ರೂಸಿಫೆರೇಸಿ ಜಾತಿಯ ಸಸ್ಯಗಳು ಚಾವಟಿ ಬಾಲದ ರೋಗದಿಂದ ಬಳಲುತ್ತವೆ. ನಾಳಾಂತರಗಳಲ್ಲಿ ಖಂಡಗಳು ಸಾಯುತ್ತವೆ. ಸಾಮಾನ್ಯವಾಗಿ ಸಣ್ಣ ನಿಗದಿತ ಪ್ರಮಾಣದಲ್ಲಿ ರಂಜಕ ಗೊಬ್ಬರದ ಜೊತೆಗೆ ಪ್ರಯೋಗಿಸಲಾಗುತ್ತದೆ. ಹೆಕ್ಟೇರಿಗೆ 70-210 ಗ್ರಾಂ ಮಾಲಿಬ್ಡಿನಂ ಅನ್ನು ಉಪಯೋಗಿಸಬೇಕು.
ಯಾವುದೇ ಕೃಷಿ ವ್ಯವಸ್ಥೆಯು ಸುಸ್ಥಿರವಾಗಿರಬೇಕೆಂದರೆ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ನಿರಂತರವಾಗಿ ನಿರ್ವಹಣೆ ಮಾಡಬೇಕು. ಇಂದಿನ ಮತ್ತು ಮುಂದಿನ ಪೀಳಿಗೆಗೆ ಬೇಕಾಗುವ ಆಹಾರ ಧಾನ್ಯ ಹಾಗೂ ಇತರೆ ಅವಶ್ಯಕ ವಸ್ತುಗಳನ್ನು ದೊರೆಯುವಂತೆ ಮಾಡಲು ನೈಸರ್ಗಿಕ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಅದರಲ್ಲೂ ಮುಂದುವರೆಯುತ್ತಿರುವ ದೇಶಗಳಲ್ಲಿನ ಜನಸಂಖ್ಯೆಗೆ ಆಹಾರ ಧಾನ್ಯಗಳನ್ನು ದೊರೆಯುವಂತೆ ಮಾಡಲು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರತೆ ನಿರ್ವಹಣೆಯು ಅವಶ್ಯಕವಾಗಿದೆ.
ನಮ್ಮ ದೇಶದಲ್ಲಿ ಹಸಿರು ಕ್ರಾಂತಿಯ ನಂತರ ನಿಧಾನವಾಗಿ ಬೆಳೆಗಳ ಇಳುವರಿಯು ಕಡಿಮೆಯಾಗುತ್ತಿರುವುದು. ಕಂಡುಬಂದಿತು. ಕಾರಣವೇನೆಂದರೆ ಮಣ್ಣಿನಲ್ಲಿರುವ ಪೋಷಕಾಂಶಗಳ ಅತಿಯಾದ ಬಳಕೆಯ ಜೊತೆಗೆ ರಸಗೊಬ್ಬರಗಳನ್ನು ಅಸಮತೋಲನ ರೀತಿಯಲ್ಲಿ ಬಳಸುತ್ತಿರುವುದು ಮತ್ತು ಸಾವಯವ ಗೊಬ್ಬರಗಳ ಬಳಕೆಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು. ಇಂತಹ ಪರಿಸ್ಥಿತಿಯಲ್ಲಿ ಮುಖ್ಯ ಮತ್ತು ಇತರ ಕೊರತೆ ಇರುವ ಪೋಷಕಾಂಶಗಳನ್ನು ಮಣ್ಣು ಪರೀಕ್ಷೆ ಫಲಿತಾಂಶದ ಮೂಲಕ ಸಮತೋಲನವಾಗಿ ಬಳಸುವುದರಿಂದ ಉತ್ಪಾದನೆಯಲ್ಲಿ ಸುಸ್ಥಿರತೆಯನ್ನು ಕಾಣಬಹುದು.
ಮಣ್ಣಿನಲ್ಲಿ ಸಸ್ಯಗಳಿಗೆ ಬೇಕಾಗಿರುವ ಪೋಷಕಾಂಶಗಳು ಯಾವ ಪ್ರಮಾಣದಲ್ಲಿ ಇವೆ ಎಂಬುದನ್ನು ತಳಿಯಲು ಮಣ್ಣು ಪರೀಕ್ಷೆ ಮಾಡಬೇಕಾಗುತ್ತದೆ. ಆ ನಂತರ ಮಣ್ಣು ಪರೀಕ್ಷೆ ಆಧಾರದ ಮೇಲೆ ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ನಿರ್ಧರಿಸಿ ರಾಸಾಯನಿಕ ಗೊಬ್ಬರಗಳನ್ನು ಕೊಡುವುರಿಂದ ರೈತರು ಸಾಕಷ್ಟು ಹಣವನ್ನು ಉಳಿತಾಯ ಮಾಡುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡಬಹುದು. ಮತ್ತು ಉತ್ತಮ ಇಳುವರಿ ಪಡೆಯಬಹುದು.
ಸಕಲ ಜೀವರಾಶಿಯನ್ನು ಗೊತ್ತಿರುವ ಭೂಮಿಯು ಸಸ್ಯಗಳಿಗೆ ಆಧಾರವನ್ನು ಕೊಡುವುದರ ಜೊತೆಗೆ ಅದರ ಬೆಳವಣಿಗೆಗೆ ಅವಶ್ಯವಿರುವ ನೀರು ಮತ್ತು ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ. ಬೆಳೇಗಳ ಬೆಳವಣಿಗೆ ಮತ್ತು ಇಳುವರಿಯು ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಯಾವ ಮಣ್ಣಿನಲ್ಲಿ ಎಷ್ಟು ಪೋಷಕಾಂಶಗಳಿವೆ ? ಮಣ್ಣಿ ಫಲವತ್ತತೆಯೇನು? ಅದರ ಉತ್ಪಾದನಾ ಸಾಮಥ್ರ್ಯವೇನು? ಎಂಬುದನ್ನು ಮಣ್ಣಿನ ವೈಜ್ಞಾನಿಕ ಪರೀಕ್ಷೆ ಮಾಡಿಯೇ ತಿಳಿಯಬೇಕು. ಮರ್ಣಣಿನ ಪರೀಕ್ಷೆಯ ಆಧಾರದ ಮೇಲೆ ಶಿಫಾರಸ್ಸು ಮಾಡಿದಷ್ಟು ಗೊಬ್ಬರಗಳನ್ನು ಬೆಳೆಗೆ ಹಾಕಬೇಕೆನ್ನುವುದು ತಿಳಿದಿರುವ ವಿಷಯವೇ ಆದರೂ ಬೆಳೆಗಳಲ್ಲಿ ನಿರೀಕ್ಷಿತ ಇಳುವರಿ ದೊರೆಯದೆ ರೈತರು ಕಂಗೆಟ್ಟಿದ್ದಾರೆ.
ಇದಕ್ಕೆ ಮೂಲ ಕಾರಣ ಮಣ್ಣಿನ ಮಾದರಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸದೇ ಇರುವುದೆಂದು ಹೇಳಿದರ ತಪ್ಪಾಗಲಾರದು. ಆದ್ದರಿಂದ ಮಣ್ಣಿನ ಮಾದರಿಯನ್ನು ಸಂಗ್ರಹಿಸುವ ಬಗ್ಗೆ ಇನ್ನೂ ಹೆಚ್ಚಿನ ಗಮನ ಕೊಡಬೇಕಾಗಿರುವುದು ಇಂದು ಅನಿವಾರ್ಯವಾಗಿದೆ.
ಭೂಮಿಯ ಮೇಲ್ಪದರದಲ್ಲಿರುವ ಮಣ್ಣು ಒಂದೇ ಸಮನಾಗಿರದೆ ಬಣ್ಣ, ಕಣವಿನ್ಯಾಸ, ಕಣ ರಚನೆ ಮುಂತಾದವುಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ಈ ಎಲ್ಲಾ ವೈಪರೀತ್ಯಗಳನ್ನು ಗಣನೆಗೆ ತೆಗೆದುಕೊಂಡು ಮಣ್ಣಿನ ಮಾದರಿಯನ್ನು ಬೇರೆ ಬೇರೆಯಾಗಿ ಸಂಗ್ರಹಿಸಿ, ಅದನ್ನು ಸೂಕ್ತ ರೀತಿಯಲ್ಲಿ ಪರೀಕ್ಷಿಸಬೇಕಾಗುತ್ತದೆ. ಆದ್ದರಿಂದ ಮಣ್ಣಿನ ಮಾದರಿಯನ್ನು ಸಂಗ್ರಹಿಸುವ ಪ್ರದೇಶ, ಸಮಯ, ರೀತಿ ಮುಂತಾದವುಗಳ ಬಗ್ಗೆ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕಾಗಿದೆ.
ಮಣ್ಣು ಪರೀಕ್ಷೆಯಿಂದಾಗುವ ಪ್ರಯೋಜನಗಳು
ಮಣ್ಣಿನ ಮಾದರಿಯು ಇಡೀ ಪ್ರದೇಶದ ನೈಜ್ಯ ಸ್ವರೂಪವನ್ನು ತೋರಿಸುವುದರಿಮದ ಅಲ್ಲದೆ ಮಣ್ಣಿ ಪರೀಕ್ಷೆ ಮತ್ತು ವಿಶ್ಲೇಷಣೆಯು ಈ ಮಾದೆಇಯನ್ನೇ ಅವಲಂಬಿಸಿರುವುದರಿಂದ ಜಮೀಮೊಮ ಸುತ್ತ ಓಡಾಡಿ, ಮಣ್ಣಿನ ಬಣ್ಣ, ಕಣ ವಿನ್ಯಾಸ ಮುಂತಾದವುಗಳನ್ನು ಗಮನಿಸಿ ಜಮೀನನ್ನು ಮಾದರಿ ಸಂಗ್ರಹಣ ತಾಲುಗಳಾಗಿ ವಿಂಗಡಿಸಿ, ಪ್ರತಿ ತಾಕಿನಲ್ಲಿ ಬೇರೆ ಬೇರೆ ಮಾದರಿಗಳನ್ನು ಸಂಗ್ರಹಿಸಬೇಕು.
ಬದುಗಳ ಮತ್ತು ಕಾಲುವೆಗಳ ಹತ್ತಿರ, ಜೌಗು ಪ್ರದೇಶಗಳಲ್ಲಿ, ಮರಗಳ ಹತ್ತಿರ, ಬಾವಿಗಳ ಹತ್ತಿರ, ವಿಧ್ಯತ್ ಕಂಬಗಳ ಹತ್ತಿರ, ಗೊಬ್ಬರದ ಗುಂಡಿಗಳ ಹತ್ತಿರ ಹಾಗೂ ರಸಗೊಬ್ಬರಗಳನ್ನು ಹಾಕಿರುವ ಪ್ರದೇಶಗಳಲ್ಲಿ ಸಂಗ್ರಹಿಸಬಾರದು. ಏಕೆಂದರೆ ಈ ಮಾದರಿಯು ಮಣ್ಣಿನ ನೈಜ್ಯ ಫಲವತ್ತತೆಯ ಚಿತ್ರಣವನ್ನು ನೀಡುವುದಿಲ್ಲ. ಆಮೀನಿನಲ್ಲಿ ಅಡ್ಡದಿಡ್ಡಿಯಾಗಿ ಓಡಾಡಿ ಮಾದರಿಯ್ನನು ಸಂಗ್ರಹಿಸಬೇಕು. ಸಾಮಾನ್ಯವಾಗಿ ಒಂದೇ ಸಮನಾಗಿರುವ ಪ್ರದೇಶದಲ್ಲಿ ಪ್ರತಿ ಐದು ಎಕರೆಯಲ್ಲಿ 15-20 ಸ್ಥಳಗಳಲ್ಲಿ ಉಪ ಮಾದರಿಯನ್ನು ಸಂಗ್ರಹಿಸಿ ನಂತರ ಅವುಗಳನ್ನು ಒಂದುಗೂಡಿಸಿ ಸಮಗ್ರ ಮಾದರಿಯನ್ನು ಪಡೆಯಬೇಕು. ಜಮೀನಿನಲ್ಲಿ ಬೆಳೆಗಳಿದ್ದಲ್ಲಿ ಬೆಳೆಗಳ ಸಾಲುಗಳ ನಡುವೆ ಮಾದರಿಯನ್ನು ಸಂಗ್ರಹಿಸಬೇಕು.
ಸಸ್ಯಗಳ ಬೇರುಗಳು ಎಷ್ಟು ಆಳಕ್ಕೆ ಇಳಿಯುತ್ತದೆ ಎಂಬುದರ ಆಧಾರದ ಮೇಲೆ ಮಣ್ಣಿನ ಮಾದರಿಯನ್ನು ಎಷ್ಟು ಆಳದಿಂದ ಸಂಗ್ರಹಿಸಬೇಕೆಂದು ನಿರ್ಧರಿಸಬಹುದು. ಆಹಾರ ಧಾನ್ಯ ಬೆಳೆಗಳನ್ನು ಬೆಳೆಯಬೇಕಾದ ಪ್ರದೇಶದಲ್ಲಿ 15 ಸೆ.ಮೀ. ಆಳದವರೆಗೆ ಮಾದರಿಯನ್ನು ಸಂಗ್ರಹಿಸಬೇಕು. ಮೇವಿನ ಬೆಳೇಗಳಿಗೆ 10 ಸೆ.ಮೀ. ಆಳದಲ್ಲಿ ಸಂಗ್ರಹಿಸಿದರೆ ಸಾಕು. ಹೆಚ್ಚು ಆಳಕ್ಕೆ ಇಳಿಯುವ ಬೇರುಗಳನ್ನು ಹೊಂದಿರುವ ಕಬ್ಬು ಹತ್ತಿ, ಹಿಪ್ಪುನೇರಳೆ, ದ್ರಾಕ್ಷಿ ಇತ್ಯಾದಿ ಬೆಳೆಗಳನ್ನು ಬೆಳೆಯಬೇಕಿದ್ದಲ್ಲಿ 30 ಸೆ.ಮೀ. ವರೆಗೆ ಮಾದರಿಯನ್ನು ಸಂಗ್ರಹಿಸಬೇಕು. ಮಣ್ಣಿನಲ್ಲಿ ಜೈವಿಕ ಕ್ರಿಯೆಗಳು ಕಡಿಮೆ ಇರುವಾಗ ಮಾದರಿಯನ್ನು ಸಂಗ್ರಹಿಸಬೇಕು. ಕ್ಷಾರಯುಕ್ತ ಚೌಳುಮಣ್ಣಿನಲ್ಲಿ ಕಾಣಿಸುವ ಲವಣದ ಪೊರೆಯನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು.
ತೀವ್ರತರಹದ ಬೇಸಾಯ ಪದ್ಧತಿಯನ್ನು ಅನುಸರಿಸುತ್ತಿದ್ದರೆ 2 ವರ್ಷಕ್ಕೊಮ್ಮೆ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸುವುದು ಒಳಿತು. ಇದಲ್ಲದೆ ಜಮೀನಿನಲ್ಲಿ ಪ್ರತಿ ವರ್ಷವೂ ಒಂದೊಂದು ಬೆಳೆಯನ್ನು ಬೆಳೆಯುತ್ತದ್ದರೆ 2 ವರ್ಷಕ್ಕೊಮ್ಮೆ ಮಣ್ಣಿ ಮಾದರಿಯನ್ನು ಸಂಗ್ರಹಿಸಬೇಕಾಗುತ್ತದೆ. ಇಲ್ಲದಿದ್ದರೆ ಮೂರು ವರ್ಷಗಳಿಗೊಮ್ಮೆ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಿದರೆ ಸಾಕು.
ಜಮೀನಿನಲ್ಲಿ ಬೆಳೆ ಇಲ್ಲದಿರುವಾಗಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಬೇಕು. ದೀರ್ಘಾವಧಿ ಬೆಳೆಗಳಿರುವ ಜಮೀನಿನಲ್ಲಿ ಮೇ ತಿಂಗಳಿನಲ್ಲಿ ಹಾಗೂ ಅಲ್ಪಾವಧಿ ಬೆಳೆಗಳಿದ್ದಲ್ಲಿ ಬೆಳೆ ಕಟಾವಾದ ನಂತರ ಇಲ್ಲವೇ ಮಳೆಗಾಲಕ್ಕೆ ಮುನ್ನ (ಏಪ್ರಿಲ್ / ಮೇ ತಿಂಗಳಿನಲ್ಲಿ) ಮಣ್ಣಿನ ಮಾದರಿಯನ್ನು ಸಂಗ್ರಹಿಸಬೇಕು. ಎರಡು ಬೆಳೆ ಬೆಳೇಯುವ ಪ್ರದೇಶದಲ್ಲಿ ಎರಡನೇ ಬೆಳೇಯ ಕಟಾವಿನ ನಂತರ ಮಣ್ನಿನ ಮಾದರಿಯನ್ನು ಸಂಗ್ರಹಿಸಬೇಕು.
ಮಣ್ಣಿನ ಮಾದರಿಯನ್ನು ಸಂಗ್ರಹಿಸಲು ಬಳಸುವ ಸಲಕರಣೆಗಳು ಮಣ್ಣಿನಲ್ಲಿರುವ ತೇವಾಂಶವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ತೇವಾಂಶದಿಂದ ಕೂಡಿರುವ ಮೃದುವಾದ., ಮಣ್ಣಿನ ಮಾದರಿಯನ್ನು ತೆಗೆಯಲು ಸ್ಕ್ರೂ ಅಗಾರ್, ಕುರ್ಪಿ, ಗುದ್ದಲಿಗಳನ್ನು ಬಳಸುತ್ತಾರೆ. ಸ್ವಲ್ಪ ತೇವಾಂಶವುಳ್ಳ ಮಣ್ಣಿನ ಮಾದರಿಯನ್ನು ತೆಗೆಯಲು ಪೋಸ್ಟ್ ಹೋಲ್ ಅಗಾರ್ ಬಳಸುತ್ತಾರೆ. ಅತಿ ಹೆಚ್ಚಾಗಿ ತೇವಾಂಶವಿರುವ ಅಂದರೆ ಭತ್ತದೆ ಗದ್ದೆಗಳಲ್ಲಿ ಮಣ್ಣಿನ ಮಾದರಿಯನ್ನು ತೆಗೆಯಲು ಟ್ಯೂಬ್ ಆಗರ್ ಬಳಸುವುದು ಹೆಚ್ಚು ಸೂಕ್ತ.
ಒಣಗಿದ ಜಮೀನುಗಳಲ್ಲಿ ಗುದ್ದಲಿ / ಹಾರೆ ಬಳಸಬೇಕು. ಜಮೀನಿನಲ್ಲಿ ಹೆಚ್ಚು ಆಳದಿಂದ ಮಣ್ಣಿನ ಮಾದರಿಯನ್ನು ಸಂಗ್ರಹಿಸುವಾಗಲೂ ಸಹ ಅಗಾರ್‍ಗಳನ್ನು ಬಳಸುವುದು ಸೂಕ್ತ. ಗುದ್ದಲಿ ಅಥವಾ ಕುರ್ಪಿ ಬಳಸಿದಾ ‘ವಿ’ ಆಕಾರದಲ್ಲಿ ಭೂಮಿಯನ್ನು ನೇಗಿಲಿನಾಳದವರೆಗೆ (15 ಸಿ.ಮೀ.) ಅಗೆದು ನಂತರ ಎರಡೂ ಕಡೆಗಳಿಂದ 1.5 ಸೆ.ಮೀ. ನಷ್ಟು ದಪ್ಪದ ಮಣ್ಣಿನ ಪದರವನ್ನು ಸಂಗ್ರಹಿಸಬೇಕು. ಮಣ್ಣಿನ ಮಾದರಿಯನ್ನು ಸಂಗ್ರಹಿಸುವಾಗ ಮೇಲಿನ ಕೆಲವು ಸೆಂ.ಮೀ.ಗಳಷ್ಟು ಮಣ್ಣನ್ನೂ ಸೇರಿಸಿ ಸಂಗ್ರಹಿಸಬೇಕು. ಇಲ್ಲದಿದ್ದಲ್ಲಿ ಮಣ್ಣಿನ ಪರೀಕ್ಷೆಯ ಫಲಿತಾಂಶದಲ್ಲಿ ಏರುಪೇರಾಗುತ್ತದೆ.
ಪ್ರತಿ ಜಾಗದಿಂದ ಸಂಗ್ರಹಿಸಿದ ಮಣ್ಣಿನ ಮಾದರಿಯನ್ನು ಶುಭ್ರವಾದ ಕಾಗದ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ ಮಿಶ್ರ ಮಾಡಬೇಕು. ಹೀಗೆ ಮಿಶ್ರ ಮಾಡುವಾಗ ಕಲ್ಲು, ಬೇರು, ಕೊಳೆ ಇತ್ಯಾದಿಗಳನ್ನು ಆರಿಸಿ ತೆಗೆಯಬೇಕು. ನಂತರ ಮಣ್ಣನ್ನು ಗುಪ್ಪೆ ಮಾಡಿ 4 ಭಾಗಗಳಾಗಿ ವಿಂಗಡಿಸಿ. ವಿರುದ್ಧ ದಿಕ್ಕಿನಲ್ಲಿರುವ ಎರಡು ಭಾಗಗಳನ್ನು ಮಾತ್ರ ಆಯ್ದುಕೊಂಡು ಅದನ್ನು ಚೆನ್ನಾಗಿ ಮಿಶ್ರಮಾಡಿ ಮತ್ತೆ 4 ಭಾಗವಾಗಿ ವಿಂಗಡಿಸಿ ಪುನ: ವಿರುದ್ಧ ದಿಕ್ಕಿನಲ್ಲಿರುವ ಎರಡು ಭಾಗಗಳನ್ನು ಆಯ್ಕೆಮಾಡಿ.ಹೀಗೆ ಭಾಗ ಮಾಡುವ ಕ್ರಮವನ್ನು 4-5 ಬಾರಿ ಪುರಾವರ್ತನೆ ಮಾಡಿ. ಕಡೆಯಲ್ಲಿ 500 ಗ್ರಾಂಗಳಷ್ಟು ಮಣ್ಣನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ (ಚಿತ್ರ-5) ಮಣ್ಣಿನ ಮಾದರಿಯ ಜೊತೆಗೆ ಅದನ್ನು ಸಂಗ್ರಹಿಸಿದ ಸ್ಥಳದ ವಿವರಗಳನ್ನೊಳಗೊಂಡ ಚೀಟಿಯನ್ನು ಚೀಲದಲ್ಲಿ ಇರಿಸಬೇಕು. ರೈತನ ಹೆಸರು, ಹಳ್ಳಿಯ ಹಡಸರು, ತಾಲ್ಲೂಕು, ಸರ್ವೆ ಸಂಖ್ಯೆ. ಮಣ್ಣಿನ ಮಾದರಿಯನ್ನು ಸಂಗ್ರಹಿಸಿದ ಆಳ, ದಿನಾಂಕ, ಹಿಂದೆ ಬೆಳೆದ ಬೆಳೇಯ ಹೆಸರು, ಮುಂದೆ ಬೆಳೆಯಬೇಕಾಗಿರುವ ಬೆಳೆ ಮುಂತಾದ ವಿವರಗಳನ್ನು ಚೀಟಿಯಲ್ಲಿ ತುಂಬಿರಬೇಕು.
ಸಂಗ್ರಹಿಸಿದ ಮಣ್ಣಿನ ಮಾದರಿಯನ್ನು ಹೆಚ್ಚು ತೇವಾಂಶವಿಲ್ಲದಂತಹ ಜಾಗದಲ್ಲಿ ಪ್ಲಾಸ್ಟಿಕ್ ಅಥವಾ ಮಂದವಾದ ಕಾಗದದ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಬೇಕು. ಮಣ್ಣಿನ ಮಾದರಿಯನ್ನು ಪುಡಿಮಾಡಿ 2 ಮಿ.ಮೀ. ವ್ಯಾಸವಿರುವ ಜರಡಿಯ ಮೂಲಕ ಜರಡಿ ಹಿಡಿಯಬೇಕು. ಹೀಗೆ ಜರಡಿ ಹಿಡಿದು ಮಣ್ಣನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಶೇಖರಿಸಬೇಕು ಮತ್ತು ಪರೀಕ್ಷೆಗೆ ಬಳಸಬೇಕು.
ಮಣ್ಣನ್ನು ರಾಸಾಯನಿಕವಾಗಿ ಪರೀಕ್ಷಿಸಿ ಅದರಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನುಕಂಡುಹಿಡಿಯಬೇಕು. ನಂತರ ಯಾವ ಬೆಳೆಯನ್ನು ಬೆಳೆಯಬೇಕೋ ಆಯಾ ಬೆಳೆಗೆ ಶಿಫಾರಸ್ಸು ಮಾಡಿರುವ ರಸಗೊಬ್ಬರಗಳನ್ನು ಜಮೀನಿಗೆ ಹಾಕಬೇಕು. ಮಣ್ಣಿನ ಪರೀಕ್ಷೆಯ ಫಲಿತಾಂಶವು ಹೆಚ್ಚು ನಿಖರವಗಿರಬೆಕಾದರೆ ಮಣ್ಣಿನ ಮಾದರಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ಮಣ್ಣಿನ ಮಾದರಿಯ ಸಂಗ್ರಹಣೆಯನ್ನು ಕಡೆಗಣಿಸದೆ ಮೇಲೆ ತಿಳಿಸಿದ ಸೂಕ್ತ ಕ್ರಮಗಳನ್ನು ಅನುಸರಿಸಿದರೆ ತಂತ್ರಜ್ಞಾನಸ ಸಂಪೂರ್ಣ ಪ್ರಯೋಜನವನ್ನು ಪಡೆದಂತಾಗುತ್ತದೆ. ಇದರಿಂದ ನಿರೀಕ್ಷಿತ ಗುರಿ ಮುಟ್ಟಿ ಆದಾಯವೂ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.
ಸಾಗೂವಳಿ ಮಾಡುತ್ತಿರುವ ಭೂ ಪ್ರದೇಶದ ಮಣ್ಣನ್ನು ವಿಶ್ಲೇಶಿಸಿ, ಅಸರಲ್ಲಿರುವ ವಿವಧ ಪೋಷಕಾಂಶಗಳ ಪ್ರಮಾಣವನ್ನು ಕಂಡುಹಿಡಿದು, ಉತ್ತಮ ಇಳುವರಿಯನ್ನು ಪಡೆಯಲು ಬೆಳೆಗೆ ಪೂರೈಸಬೇಕಾದ ಪೋಷಕಾಂಶಗಳನ್ನು ಮತ್ತು ಅವುಗಳ ಪ್ರಮಾಣವನ್ನು ಅಂದಾಜು ಮಾಡುವ ಪದ್ಧತಿಯು ಹಲವು ವರ್ಷಗಳಿಂದ ರೂಡಿಯಲ್ಲಿದೆ. ಪೂರೈಸಬೇಕಾದ ಪೋಷಕಾಂಶಗಳ ಪ್ರಮಾಣವನ್ನು ನಿರ್ಧರಿಸುವ ಇತರ ವಿಧಾನಗಳಿಗಿಂತ ಮಣ್ಣಿನ ವಿಶ್ಲೇಷಣಾ ಪದ್ಧತಿಯು ಕೃಷಿಕರಲ್ಲಿ ಹೆಚ್ಚು ಪ್ರಚಲಿತವಾಗಲು ಈ ವಿಧಾನದಲ್ಲಿರುವ ಕೆಲವು ವೈಶಿಷ್ಟ್ಯಗಳು ಮತ್ತು ಸರಕಾರ ಹಾಗೂ ಹಲವು ಖಾಸಗೀ ಕಂಪನಿಗಳು ಮಾಡಿರುವ ನಿರಂತರ ಪ್ರಯತ್ನಗಳು ಕಾರಣವೆನ್ನಬಹುದು.
ಮಣ್ಣು ಪರೀಕ್ಷೆಯ ನಂತರ ಸಿಗುವ ತಿಳುವಳಿಲಕೆ ಮಾಹಿತಿ ಪತ್ರದಲ್ಲಿ ತಿಳಿಸಿರುವಂತೆ ಬೆಳೆಗಳಿಗೆ ಪೋಷಕಾಂಶಗಳನ್ನು ಕೊಡಬೇಕು. ಮಣ್ಣಿನಲ್ಲಿ ಹುಳಿ, ಚೌಳು ಅಥವಾ ಕ್ಷಾರದ ತೊಂದರೆ ಇದ್ದರೆ ಅದಕ್ಕೆ ಸೂಕ್ತ ಪರಿಹಾರ ಕ್ರಮ ಅನುಸರಿಸಬೇಕಕು.
ವಿವಿಧ ಬೆಳೆಗಳಿಗೆ ಕೊಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣ ಈ ಕೆಳಗಿನ ಎರಡು ಅಂಶಗಳನ್ನು ಅವಲಂಬಿಸಿರುತ್ತದೆ.
ಹೈಬ್ರಿಡ್ ಮತ್ತು ಅಧಿಕ ಇಳುವರಿ ಕೊಡುವ ಸುಧಾರಿತ ತಳಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಸ್ಯ ಪೋಷಕಾಂಶಗಳನ್ನು ಬಳಸಿಕೊಳ್ಳುವ ಸಾಮಥ್ರ್ಯವಿದೆ. ಸಂಶೋಧನೆಯ ಆಧಾರದ ಮೇಲೆ ವಿವಿಧ ಬೆಳೇಗಳಿಗೆ ಸಾಧಾರಣ ಫಲವತ್ತತೆಯ ಸನ್ನಿವೇಶದಲ್ಲಿ ಕೊಕಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಿ ಶಿಫಾರಸ್ಸು ಮಾಡಲಾಗಿದೆ. ಆದರೆ ಈ ಶಿಫಾರಸ್ಸುಗಳನ್ನು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕ.
ಸರಿಯಾದ ಕ್ರಮದಲ್ಲಿ ಮಣ್ಣಿನ ಮಾದರಿ ತೆಗೆದು ರಾಸಾಯನಿಕ ವಿಶ್ಲೇಷಣೆಗಾಗಿ ಹತ್ತಿರದ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ. ಮಣ್ನು ಪರೀಕ್ಷಾ ಕೇಂದ್ರದಲ್ಲಿ 3 ಪ್ರಧಾನ ಸಸ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್‍ಗಳ ದೊರೆಯುವ ಪ್ರಮಾಣವನ್ನು ನಿರ್ಧರಿಸಲಾಗುವುದು, ಇವುಗಳ ಆಧಾರದ ಮೇಲೆ ಮಣ್ಣನ್ನು ಕಡಿಮೆ, ಮಧ್ಯಮ ಅಥವಾ ಅಧಿಕ ಫಲವತ್ತತೆ ಇರುವ ಮಣ್ಣು ಎಂದು ಈ ಕೆಳಗಿನಂತೆ ವಿಂಗಡಿಸಲಾಗುವುದು.
ಮುಖ್ಯ ಪೋಷಕಾಂಶಗಳು ಯಾವ ಫಲವತ್ತತೆಯ ಗುಂಪಿಗೆ ಸೇರಿವೆ ಎಂದು ನಿರ್ಧರಿಸಿದ ನಂತರ ಶಿಫಾರಸ್ಸು
(ನಿಗಧಿತ) ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಫಲವತ್ತತೆ ಮಧ್ಯಮ ವರ್ಗಕ್ಕೆ ಸೇರಿದ್ದರೆ, ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಯಾವ ಬದಲಾವಣೆಗಳನ್ನೂ ಮಾಡುವ ಅವಶ್ಯಕತೆ ಇಲ್ಲ. ಪೋಷಕಾಂಶಗಳು ಕಡಿಮೆ ಅಥವಾ ಅಧಿಕ ವರ್ಗಕ್ಕೆ ಸೇರಿದ್ದರೆ ಈ ಕೆಳಗಿನಂತೆ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಬದಲಾಯಿಸಬೇಕು.
ಕೋಷ್ಟಕ 1 : ಮಣ್ಣಿನ ಫಲವತ್ತತೆಯ ವಿಂಗಡಣೆ
ಗುಣಗಳು
ಕಡಿಮೆ ಮಧ್ಯಮ ಅಧಿಕ
ರಸಸಾರ < 6.3 (ಹುಳಿ) 6.3 - 8.3 (ಸಮಧಾತು) > 8.3 (ಕ್ಷಾರ)
ಲವಣಾಂಶ (ಡೆಸಿ. ಸೈಮಾನ್ / ಮೀ) < 1 - -
(ಸಮಸ್ಥಿತಿ) 1 - 2 - -
ಕಡಿಮೆ ಹಾನಿಕಾರಕ (ಹಾನಿಕಾರಕ) > 2 - -
ಪೋಷಕಾಂಶಗಳು ಕಡಿಮೆ ಫಲವತ್ತತೆ ಮಧ್ಯಮ ಫಲವತ್ತತೆ ಅಧಿಕ ಫಲವತ್ತತೆ
ಸಾವಯವ ಇಂಗಾಲ (%)
< 0.5
0.5 - 0.75
> 0.75
ದೊರೆಯುವ ಸಾರಜನಕ (ಕಿ.ಗ್ರಂ/ಎಕರೆಗೆ) < 112 112 -224 > 224
ದೊರೆಯುವ ರಂಜಕ (ಕಿ.ಗ್ರಾಂ/ಎಕರೆಗೆ) < 9 9 - 22 > 22
ದೊರೆಯುವ ಪೊಟ್ಯಾಷ್ (ಕಿ.ಗ್ರಾಂ/ಎಕರೆಗೆ) < 56 56 -132 > ೧೩೨
ಕೋಷ್ಟಕ 2 : ಮಣ್ಣಿನ ಫಲವತ್ತತೆಗೆ ಅನುಗುಣವಗಿ ಬಳಸಭೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣ
ಯಾವುದೇಬೆಳೇಗೆ ಶಿಫಾರಸ್ಸು ಕಡಿಮೆ ಮಾಡಿದ ರಾಸಾಯನಿಕ ಗೊಬ್ಬರ (ಹೆಕ್ಟೇರ್‍ಗೆ) ಕಡಿಮೆ ಫಲವತ್ತತೆ ಶಿಫಾರಸ್ಸಿನ ಮೇಲೆ ಹೆಚ್ಚಿಸಬೇಕಾದ ಪ್ರಮಾಣ (ಹೆಕ್ಟೇರ್‍ಗೆ) ಅಧಿಕ ಫಲವತ್ತತೆ ಶಿಫಾರಸ್ಸಿನಲ್ಲಿ ಕಡಿಮೆ ಮಾಡಬೇಕಾದ ಪ್ರಮಾಣ (ಹೆಕ್ಟೇರ್‍ಗೆ)
ಸಾರಜನಕ
50 ಕಿ. ಗ್ರಾಂ ಗಿಂತ ಕಡಿಮೆ ಯಾವಬದಲಾವಣೆ ಮಾಡಬೇಕಿಲ್ಲ
51 - 100 ಕಿ. ಗ್ರಾಂ. + 12.5 ಕಿ. ಗ್ರಾಂ. - 12.5 ಕಿ. ಗ್ರಾಂ
100 - 75 ಕಿ. ಗ್ರಾಂ. + 25 ಕಿ. ಗ್ರಾಂ - 25 ಕಿ. ಗ್ರಾಂ
175 -250 ಕಿ. ಗ್ರಾಂ + 37.5 ಕಿ. ಗ್ರಾಂ - 37.5 ಕಿ. ಗ್ರಾಂ
250 325 ಕಿ. ಗ್ರಾಂ + 50 ಕಿ. ಗ್ರಾಂ - 50 ಕಿ. ಗ್ರಾಂ
ರಂಜಕ
25 ಕಿ. ಗ್ರಾಂ ಗಿಂತ ಕಡಿಮೆ ಯಾವ ಬದಲಾವಣೆ ಮಾಡಬೀಕಿಲ್ಲ
26 - 75 ಕಿ. ಗ್ರಾಂ + 12.5 ಕಿ. ಗ್ರಾಂ - 12.5 ಕಿ. ಗ್ರಾಂ
76 - 125 ಕಿ. ಗ್ರಾಂ + 25 ಕಿ. ಗ್ರಾಂ - 25 ಕಿ. ಗ್ರಾಂ
ಪೊಟ್ಯಾಷ್
25 ಕಿ. ಗ್ರಾಂ ಗಿಂತ ಕಡಿಮೆ ಯಾವ ಬದಲಾವಣೆ ಮಾಡಬೇಕಿಲ್ಲ
25 - 50 ಕಿ. ಗ್ರಾಂ` + 12.5 ಕಿ. ಗ್ರಾಂ - 12.5 ಕಿ. ಗ್ರಾಂ
51 - 100 ಕಿ. ಗ್ರಾಂ + 25 ಕಿ. ಗ್ರಾಂ - 25 ಕಿ. ಗ್ರಾಂ
101 - 175 ಕಿ. ಗ್ರಾಂ + 37.5 ಕಿ. ಗ್ರಾಂ - 37.5 ಕಿ. ಗ್ರಾಂ
ಉದಾ : ತೊಗರಿ ಬೆಳೆಗೆ ಹೆಕ್ಟೇರ್‍ಗೆ 25 ಕಿ.ಗ್ರಂ. ಸಾರಜನಕ ಶಿಫಾರಸ್ಸು ಮಾಡಲಾಗಿದೆ. ಅದೇ ರೀತಿ ಕಡಲೆಕಾಯಿ ಬೆಳೆಗೆ (ಖುಷ್ಕಿ) ಹೆಕ್ಟೇರಿಗೆ 25 ಕಿ.ಗ್ರಾಂ. ಸಾರಜನಕ ಶಿಫಾರಸ್ಸು ಮಾಡಲಾಗಿದೆ. ಇಂತಹ ಬೆಳೆಗಳಿಗೆ ಶಿಫಾರಸ್ಸು ಮಾಡಿರುವ ಸಾರಜನಕ ಪ್ರಮಾಣ 50 ಕಿ.ಗ್ರಾಂ ಗಿಂತ ಕಡಿಮೆ ಇರುವುದರಿಂದ ಮಣ್ಣಿನಲ್ಲಿಸಾರಜನಕ ಫಲವತ್ತತೆ ಯಾವುದೇ ವರ್ಗಕ್ಕೆ ಸೇರಿದ್ದರೂ ರಾಸಾಯನಿಕ ಗೊಬ್ಬರದ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಬೇಕಿಲ್ಲ.
ಬತ್ತಕ್ಕೆ ಮುಂಗಾರಿನಲ್ಲಿ ಹೆಕ್ಟೇರಿಗೆ 100 ಕಿ.ಗ್ರಾಂ ಸಾರಜನಕ ಶೊಫಾರಸ್ಸು ಮಾಡಲಾಗಿದೆ. ಮಣ್ಣಿನ ಫಲವತ್ತತೆ ಮಧ್ಯಮ ವರ್ಗಕ್ಕೆ ಸೇರಿದ್ದರೆ, ನಿಗದಿತ (100 ಕಿ.ಗ್ರಾಂ) ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಬೇಕಿಲ್ಲ. ಮಣ್ಣಿನಲ್ಲಿ ಸಾರಜನಕದ ಪ್ರಮಾಣ ಕಡಿಮೆ ಫಲವತ್ತತೆ ವರ್ಗಕ್ಕೆ ಸೇರಿದ್ದರೆ, ಶಿಫಾರಸ್ಸು ಮಾಡಿರುವ ಸಾರಜನಕದ ಜೊತೆಗೆ 12.5 ಕಿ.ಗ್ರಾಂ. ಹೆಚ್ಚಿಗೆ ಸಾರಜನಕ ಕೊಡಬೇಕು. ಅಂದರೆ ಒಟ್ಟು 112.5 ಕಿ.ಗ್ರಾಂ ಕೊಡಬೇಕು. ಆದರೆ ಮಣ್ಣಿನಲ್ಲಿ ಸಾರಜನಕದ ಪ್ರಮಾಣ ಅಧಿಕ ಫಲವತ್ತತೆ ವರ್ಗಕ್ಕೆ ಸೇರಿದ್ದರೆ, ಶಿಫಾರಸ್ಸು ಮಾಡಿದ ಸಾರಜನಕದಲ್ಲಿ 12.5 ಕಿ.ಗ್ರಾಂ ಕಡಿಮೆ ಮಾಡಿಕೊಳ್ಳಬೇಕು. ಅಂದರೆ 87.5 ಕಿ.ಗ್ರಾಂ ಕೊಡಬೇಕು. ಹೀಗೆ ಮೂರು ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್‍ನಲ್ಲೂ ಮಣ್ಣಿನ ಫಲವತ್ತತೆ ಆಧಾರದ ಮೇಲೆ, ಮೇಲೆ ಸೂಚಿಸಿರುವ ಕೋಷ್ಟಕದ ಪ್ರಕಾರ ಕೊಡಬೇಕಾದ ರಾಸಾಯನಿಕ ಗೊಬ್ಬರಗಳಲ್ಲಿ ಮಾರ್ಪಾಟು ಮಾಡಿಕೊಳ್ಳಬೇಕಾಗುತ್ತದೆ.
ಮಣ್ಣಿನಲ್ಲಿ ಸಾವಯವ ವಸ್ತುವಿನ ಪ್ರಮಾಣ ಅತ್ಯಲ್ಪ. ಆದರೂ ಅದರ ಭೌತಿಕ ಹಾಗೂ ರಾಸಾಯನಿಕ ಗುಣಗಳ ಮೇಲಿನ ಪ್ರಭಾವ ಅಸಾಧಾರಣ. ಇದು ಸಾಮಾನ್ಯವಾಗಿ ಮಣ್ಣುಗಳ, ಧನ ವಿಧ್ಯುತ್ ಕಣ ವಿನಿಮಯ ಶಕ್ತಿಯನ್ನು ಬಹಳ ಪ್ರಮಾಣದಲ್ಲಿ ವೃದ್ಧಿ ಮಾಡುತ್ತದೆ. ಮತ್ತು ಮಣ್ಣಿನ ಸ್ಥಿರತೆಗೆ ಇತರ ಯಾವುದೇ ಅಂಶಕ್ಕಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಅಲ್ಲದೆ, ಹೆಚ್ಚಾಗಿ ಇದು ಸೂಕ್ಷ್ಮಾಣುಜೀವಿಗಳಿಗೆ, ಶರೀರ ಪೋಷಕ ಅಂಶಗಳನ್ನು ಮತ್ತು ಶಕ್ತಿಯನ್ನು ಒದಗಿಸುತ್ತದೆ.
ಮಣ್ಣಿನ ಸಾವಯವ ವಸ್ತು ಮುಖ್ಯವಾಗಿ ಸಸ್ಯ ಎಲೆ, ರೆಂಬೆ, ಕಾಂಡ, ಬೇರು ಇತ್ಯಾದಿಗಳಿಂದ ಉತ್ಪತ್ತಿಯಾಗುತ್ತದೆ. ಪ್ರಕೃತಿಯಲ್ಲಿ, ಮರಗಳ ಮೇಲ್ಭಾಗ ಮತ್ತು ಬೇರುಗಳು, ಪೊದೆಗಳು, ಹುಲ್ಲುಗಳು ಮತ್ತು ಸ್ಥಳೀಯ ಸಸ್ಯಗಳು, ವರ್ಷ ವರ್ಷ ಸಾವಯವ ಉಳಿಕೆಯ ಅತಿ ಹೆಚ್ಚಿನ ಭಾಗವನ್ನು ಒದಗಿಸುತ್ತದೆ. ಸಸ್ಯಗಳ ಹೆಚ್ಚಿನ ಭಾಗವನ್ನು ಸಾಮಾನ್ಯವಾಗಿ ಕೃಷಿ ಮಾಡುತ್ತಿರುವ ಜಮೀನುಗಳಿಂದ ಕೊಯಿಲು ಮಾಡಿ ಹೊರಗೆ ಹಾಕಲಾಗುತ್ತದೆ. ಆದರೆ, ಸಸ್ಯಗಳ ಕೊಳೆ ಮತ್ತು ಬೇರಿನ ಎಲ್ಲಾ ಭಾಗಗಳು ಮಣ್ಣಿನಲ್ಲಿ ಉಳಿಯುತ್ತದೆ. ಈ ಸಾಮಗ್ರಿಗಳು ಅನೇಕ ಬಗೆಯ ಸೂಕ್ಷ್ಮಜೀವಿಗಳಿಂದ ವಿಭಜನೆ ಮತ್ತು ವಿಘಟನೆಗೊಳ್ಳುತ್ತವೆ. ಹೀಗೆ ಮೇಲ್ವರ್ಗದ ಸಸ್ಯಗಳು ಮಣ್ಣಿನಲ್ಲಿರುವ ವಿವಿಧ ಜೀವಿಗಳಿಗೆ ಆಹಾರಕ್ಕೆ ಮಾತ್ರವಲ್ಲದೆ ಸಾವಯವ ವಸ್ತುವಿಗೂ ಸಹ ಪ್ರಾಥಮಿಕ ಮೂಲವಾಗಿರುತ್ತದೆ.
ಸಾಮಾನ್ಯವಾಗಿ ಪ್ರಾಣಿಗಳನ್ನು ಸಾವಯವ ವಸ್ತುವಿನ ಎರಡನೆಯ ಮೂಲವೆಂದು ಭಾವಿಸಲಾಗುತ್ತದೆ. ಅವುಗಳು ಸಸ್ಯಗಳ ಉಳಿಕೆ ವಸ್ತುಗಳ ಮೇಲೆ ಧಾಳಿ ಮಾಡಿ ಜೀವನ ಚಕ್ರ ಪೂರ್ತಿಯಾದ ನಂತರ ನಮ್ಮ ದೇಹಗಳನ್ನೇ ಸೇರಿಸಿ ಉಳಿಕೆ ವಸ್ತು ಕೊಡುಗೆಗೆ ನೆರವಾಗುತ್ತವೆ. ಎರೆಗುಳುಗಳು, ಶತಪದಿಗಳು ಮತ್ತು ಇರುವೆ ಮೊದಲಾದ ಕೆಲವು ಜೀವಿಗಳೂ ಸಹ ಸಸ್ಯ ಉಳಿಕೆಗಳು ಸ್ಥಳಾಂತರವಾಗುವುದರಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.
ಸಾವಯವ ವಸ್ತುಗಳು ಮಣ್ಣಿನ ಗುಣಗಳ ಮೇಲೆ ಪ್ರಭಾವವನ್ನು ಹಲವಾರು ರೀತಿಯಲ್ಲಿ ಬೀರುತ್ತವೆ. ಅವೆಂದರೆ :
ವ್ಯವಸಾಯಕ್ಕೆ ಯೋಗ್ಯವಾದ ಮಣ್ಣಿನಲ್ಲಿ ಸಾರಜನಕ ಮತ್ತು ಇಂಗಾಲದ ಪ್ರಮಾಣವು ಸಾಮಾನ್ಯವಾಗಿ 8:1 ರಿಂದ 5:1 ರವರೆಗಿದ್ದು, ಮಧ್ಯಸ್ಥವು 10:1 ಮತ್ತು 12:1 ನಡುವೆ ಇರುತ್ತದೆ. ಒಂದು ಪ್ರದೇಶದ ಹವಾಗುಣದ ಮೇಲೆ ಇದು ವ್ಯತ್ಯಾಸವಾಗುತ್ತದೆ. ಈ ರೀತಿಯಾಗಿ ಉಂಟಾಗುವ ವ್ಯತ್ಯಾಸಗಳು ಸಾಮಾನ್ಯ ರೀತಿಯಲ್ಲಿ ವಾಯುಗುಣ ಸ್ಥಿತಿಗಳೊಂದಿಗೆ ವಿಶೇಷವಾಗಿ ಉಷ್ಣಾಂಶ ಮತ್ತು ಮಳೆ ಬೀಳುವಿಕೆಯ ಮೊತ್ತ ಮತ್ತು ಅದರ ಹಂಚಿಕೆಗಳಿಗೆ ಸಂಬಂಧಪಟ್ಟಿರುತ್ತದೆ.
ಉದಾ : ಇಂಗಾಲ ಸಾರಜನಕದ ಪ್ರಮಾಣ, ವಾರ್ಷಿಕ ಉಷ್ಣಾಂಶ ಒಂದೇ ಆಗಿದ್ದಾಗ, ಆದ್ರ್ರ ಪ್ರದೇಶದ ಮಣ್ಣಿಗಿಂತ ಒಣ ಪ್ರದೇಶದ ಮಣ್ಣಿನಲ್ಲಿ ಕಡಿಮೆಯಾಗಿರುತ್ತದೆ. ಅಲ್ಲದೆ ಅನುಪಾತ ಒಂದೇ ಪ್ರಮಾಣದಲ್ಲಿದ್ದಾಗ ಶೀತ ಪ್ರದೇಶಗಳಿಗಿಂತ, ಬೆಚ್ಚನೆ ಪ್ರದೇಶಗಳಲ್ಲಿ ಕಡಿಮೆಯಾಗಿರುತ್ತದೆ. ಹಾಗಯೇ ಸಾಧಾರಣವಾಗಿ ಈ ಪ್ರಮಾಣ ಮೇಲ್ಭಾಗದ ಪದರಗಳಿಗಿಂತ, ಕೆಳಮಣ್ಣುಗಳಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಅದೇ ರೀತಿ ಸಸ್ಯ ಸಾಮಗ್ರಿಯ ಇಂಗಾಲ ಸಾರಜನಕ ಪ್ರಮಾಣ ಸಹ ವ್ಯತ್ಯಾಸ ಹೊಂದುವಂಥದ್ದಾಗಿರುತ್ತದೆ. ಈ ವ್ಯತ್ಯಾಸ ದ್ವಿದಳ ಸಸ್ಯಗಳು ಮತ್ತು ಕೊಟರ್ಟಿಗೆ ಗೊಬ್ಬರಗಳಲ್ಲಿ 20:1 ರಿಂದ 30:1 ರವರೆಗಿರುತ್ತದೆ. ಕೆಲವು ಹುಲ್ಲಿನ ಬೆಳೆಗಳಲ್ಲಿ ಅನುಪಾತ ಈ 100:1 ರಷ್ಟು ಹೆಚ್ಚಾಗಿರುತ್ತದೆ. ಇನ್ನೊಂದು ಕಡೆ ಸೂಕ್ಷ್ಮಜೀವಿ ಅಂಗಗಳ ಇಂಗಾಲ ಸಾರಜನಕದ ಪ್ರಮಾಣ ಸ್ಥಿರವಾಗಿರುವುದಲ್ಲದೆ ಸಾಮಾನ್ಯವಾಗಿ 4:1 ರಿಂದ 9:1 ರಷ್ಟು ಇರುತ್ತದೆ.
ಮಣ್ಣಿನ ಸಾವಯವ ವಸ್ತುವಿನಲ್ಲಿ ಇಂಗಾಲ ಸಾರಜನಕದ ಪ್ರಮಾಣ 2 ಮುಖ್ಯ ಕಾರಣಗಳಿಂದಾಗಿ ಮುಖ್ಯವಾಗಿರುತ್ತದೆ:
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 2/19/2020
ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಅಧ್ಯಾ...
ಮಣ್ಣು ಮತ್ತು ನೀರು ಸಂರಕ್ಷಣೆ
ಯಾವುದೇ ಜಮೀನನ್ನು ಬೇಸಾಯಕ್ಕೊಳಪಡಿಸುವಾಗ ಒಂದು ಅಥವಾ ಒಂದಕ್...
ಮಣ್ಣು, ಭೂಮಿಯ ಮೇಲ್ಭಾಗದಲ್ಲಿರುವ ಹವಾಮಾನ ಕ್ರಿಯೆಗೊಂಡ ತೆಳ...