অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೊರತೆ ಪರಿಣಾಮ

ಕೊರತೆ ಪರಿಣಾಮ

•             ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದ ನಿರೀಕ್ಷಿತ ಮಟ್ಟದ ಬೆಳೆ ಉತ್ಪಾದನೆ ಆಗುತ್ತಿಲ್ಲ.

•             ಮುಖ್ಯವಾಗಿ ಸಾರಜನಕ, ರಂಜಕ, ಪೊಟಾಷ್, ಸುಣ್ಣ, ಗಂಧಕ, ಜಿಂಕ್, ಬೋರಾನ್ ಮತ್ತು ಕಬ್ಬಿಣದ ಕೊರತೆಯಿಂದ ಕೃಷಿ ಉತ್ಪಾದನೆಯಲ್ಲಿ ಇಳಿಮುಖ ಕಂಡು ಬಂದಿದೆ.

•             ರೈತರು ಸಾಮಾನ್ಯವಾಗಿ ಸಾರಜನಕಯುಕ್ತ ರಸಗೊಬ್ಬರಗಳನ್ನು ಮಾತ್ರ ಕೊಡುತ್ತಾರೆ. ಆದರೆ ಬೆಳೆಗಳಿಗೆ ಸಮತೋಲನವಾದ ಗೊಬ್ಬರ ದೊರಕದೆ ಕುಂಠಿತ ಇಳುವರಿಗೆ ಕಾರಣವಾಗುತ್ತದೆ.

•             ಹೆಚ್ಚಿನ ಸಂದರ್ಭಗಳಲ್ಲಿ ಬೆಳೆಗಳಿಗೆ ಉತ್ತಮ ಇಳುವರಿ ನೀಡಲು ಸಾಕಾಗುವಷ್ಟು ಪೋಷಕಾಂಶಗಳನ್ನು ಒದಗಿಸುವ ರಸಗೊಬ್ಬರಗಳನ್ನು ರೈತರು ನೀಡುವುದಿಲ್ಲ. ಇದರಿಂದ ಬೆಳೆಗಳ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

•             ಮಣ್ಣು ಪರೀಕ್ಷೆ ಮಾಡಿಸುವುದರಿಂದ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ತಿಳಿಯುತ್ತದೆ. ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊರಗಿನಿಂದ ಒದಗಿಸಲು ಮಣ್ಣು ಪರೀಕ್ಷೆ ಸಹಾಯಕವಾಗುತ್ತದೆ.

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate