ವಿಜ್ಞಾನಿ ಡಾ: ನಾರ್‍ಮ್ಯಾನ್ ಪ್ರಕಾರ : ಬೇಸಾಯ ಶಾಸ್ತ್ರ ಎಂದರೆ ಬೆಳೆಯುವ ವಾತಾವರಣ ಸಂಕೀರ್ಣವನ್ನು ಮಾರ್ಪಾಡು ಮಾಡಿ ಬೆಳೆ ಉತ್ಪಾದನೆ ಮಾಡುವ ಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳುವ ವಿಜ್ಞಾನದ ವಿಭಾಗಕ್ಕೆ ಬೇಸಾಯ ಶಾಸ್ತ್ರ ಎನ್ನುವರು.
`ಬೇಸಾಯ ಶಾಸ್ತ್ರ` ಎಂಬ ಪದವನ್ನು `ಲ್ಯಾಟೀನ್` ಭಾಷೆಯಿಂದ ಆರಿಸಿಕೊಳ್ಳಲಾಗಿದೆ. `ಏಜರ್` ಎಂದರೆ ಮಣ್ಣು `ಕಲ್ಚರ್` ಎಂದರೆ `ಸಾಗುವಳಿ`. `ಕೃಷಿ` ಎಂಬ ಪದವು ಗ್ರೀಕ್ ಮೂಲ ಶಬ್ದವಾಗಿದ್ದು, `ಅಗರೋಸ್` ಎಂದರೆ `ಜಮೀನು` ಮತ್ತು `ಕಲ್ಚರ್` ಎಂದರೆ `ಸಾಗುವಳಿ` ಎಂಬ ಅರ್ಥ ಕೊಡುತ್ತದೆ.
ವ್ಯಾಪ್ತಿ : ಬೇಸಾಯ ಶಾಸ್ತ್ರವು ಕ್ರಿಯಾತ್ಮಕ ವಿಷಯವಾಗಿದ್ದು ಜ್ಞಾನದಲ್ಲಿ ಪ್ರಗತಿ ಹೊಂದಿದಂತೆ ಹಾಗೂ ಬೆಳೆ ಮತ್ತು ವಾತಾವರಣವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಂತೆ, ಹೆಚ್ಚು ಉತ್ಪಾದನೆಯನ್ನು ಪಡೆಯುವಲ್ಲಿ ಕೃಷಿ ಉತ್ಪಾದನೆಗಳನ್ನು ಬದಲಾಯಿಸುತ್ತದೆ.
ಬೆಳೆ ಉತ್ಪಾದನೆ ಮೇಲೆ ಪ್ರಭಾವ ಬೀರುವ ಅಂಶಗಳು
ಕೃಷಿ ಮತ್ತು ಹವಾಮಾನ
ಬಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಶೇ. 60 (85 ಮಿ.ಹೆ.) ರಷ್ಟು ಭಾಗ ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿದೆ. ಹವಾಮಾನ ಬದಲಾವಣೆಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಳೆಯ ಅನಿಶ್ಚಿತತೆಯಿಂದಾಗಿ ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾದ ಮಳೆ ನೀರಿನ ಸಮರ್ಥ ಬಳಕೆ, ಬೆಳೆ ಪದ್ಧತಿ ಹಾಗೂ ಉತ್ಪಾದನಾ ತಾಂತ್ರಿಕತೆಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹೊಸ ಆವಿಷ್ಕಾರಗಳು, ವಿವಿಧ ತಳಿಗಳು, ಅಧಿಕ ಇಳುವರಿಗಾಗಿ ಸುಧಾರಿತ ಬೇಸಾಯ ಕ್ರಮಗಳು ಅಥವಾ ಯಾವುದೇ ತರಹದ ಬೆಳೆ ಮತ್ತು ಮಣ್ಣಿಗೆ ಸೂಕ್ತವಾದ ತಂತ್ರಜ್ಞಾನ ವಾತಾವರಣಕ್ಕೆ ಹೊಂದಿಕೊಂಡಲ್ಲಿ ಮಾತ್ರ ಉತ್ಪಾದನೆ ಹೆಚ್ಚಿಸಲು ಸಾಧ್ಯ.
ಕೃಷಿಯ ಮೇಲೆ ಪರಿಣಾವi ಬೀರುವ ವಾತಾವರಣದ ಅಂಶಗಳು
ಕರ್ನಾಟಕ ರಾಜ್ಯದಲ್ಲಿ 16 ವರ್ಷಗಳಿಗೊಮ್ಮೆ ಮಳೆಯ ಪುನರಾವರ್ತನೆಯ ಚಕ್ರ ಕಂಡುಬರುತ್ತದೆ. ಮೊದಲ 8 ವರ್ಷ ವಾಸ್ತವ ಮಳೆಯ ಪ್ರಮಾಣಕ್ಕಿಂತ ಮಳೆಯ ಏರಿಕೆ, ನಂತರ ಮಳೆಯ ಇಳಿಮುಖ ಕಂಡುಬಂದಿರುತ್ತದೆ. ಕರ್ನಾಟಕ ರಾಜ್ಯದ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 1148.1 ಮಿ.ಮೀ. ಇದ್ದು ಕರ್ನಾಟಕದ 10 ಕೃಷಿ ವಲಯದಲ್ಲಿ ಈ ಮಳೆಯ ಪ್ರಮಾಣ ಬೇರೆಬೇರೆಯಾಗಿರುತ್ತದೆ.
ಮುಂಗಾರು ಮಳೆಯ ಗುಣಲಕ್ಷಣಗಳು (ನೈರುತ್ಯ ಮಾರುತ)
ಹಿಂಗಾರು ಮಳೆ ಗುಣಲಕ್ಷಣಗಳು
ಕೃಷಿ ಹವಾಮಾನ ಸಲಹಾ ವರದಿಯಿಂದಾಗುವ ಪ್ರಯೋಜನೆಗಳು
ತೊಗರಿ : ತೊಗರಿ ಬೆಳೆಯಲ್ಲಿ ಹೂ ಮತ್ತು ಕಾಯಿ ಬಿಡುವ ಹಂತದಲ್ಲಿ ಸತತ ಒಂದು ಅಥವಾ ಎರಡು ವಾರ ಕಡಿಮೆ ಇಸಿಲು ಹಾಗೂ ಗಾಳಿಯಲ್ಲಿನ ಹೆಚ್ಚು ತೇವಾಂಶದಿಂದ ಕೀಟದ ( ಕಾಂಡ ಕೊರೆಯುವ ಹಾಗೂ ಕಾಯಿಕೊರಕ ಹುಳುವಿ) ತೀಕ್ಷ್ಣತೆ ಹೆಚ್ಚಾಗುತ್ತದೆ.
ರಾಗಿ : ರಾಗಿ ಬೆಳೆಯಲ್ಲಿ ತೆನೆ ಹಾಗೂ ಕಾಳುಕಟ್ಟವ ಹಂತದಲ್ಲಿ ಸತತ ಒಂದು ಅಥವಾ ಎರಡು ವಾರ ಮೋಡಕವಿದ ವಾತಾವರಣ ಹೆಚ್ಚಿದ್ದು ಗಾಳಿಯಲ್ಲಿ ತೇವಾಂಶ ಹೆಚ್ಚಾದಾಗ ಇಲಕು ರೋಗ ಹರಡುವ ಸಂಭವ ಹೆಚ್ಚು.
ನೆಲಗಡಲೆ : ನೆಲಗಡಲೆ ಬಿತ್ತನೆ ಮಾಡಿದ 6 ರಿಂದ 8 ನೇ ವಾರದಲ್ಲಿ, (ತಡವಾಗಿ ಬಿತ್ತಿದ ಬೆಳೆಯಲ್ಲಿ ) ಉಷ್ಣಾಂಶ ಏರಿಳಿತ ಮತ್ತು ಕಡಿಮೆ ಬಿಸಿಲಿನ ಅವಧಿಯಿಂದ ಎಲೆ ಚುಕ್ಕೆ ರೋಗ ಹರಡುವಿಕೆ ಸಂಭವ ಹೆಚ್ಚು. ಹಾಗೂ ಕಾಳು ಪಕ್ವ ಹಂತದಲ್ಲಿ ಮಣ್ಣಿನ ತೇವಾಂಶ ಕೊರತೆಯಿದ್ದಲ್ಲಿ ಕಾಂಡ ಸುಳಿಕೊಳೆರೋಗ ಮತ್ತು ಡೊರೈಲಸ್ ಇರುವೆಯಿಂದ ಕಾಯಿಗೆ ಹಾನಿಹೆಚ್ಚು..
ಮೂಲ :
ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 2/18/2020
ಚರ್ಮದ ಸತ್ತ ಜೀವಕೋಶಗಳು ಉದುರಿದಂತೆ ಎನಿಸುತ್ತದೆ. ಕೈ ಆಡಿಸ...
ಚಳಿಗಾಲದಲ್ಲಿ ಹೂ ಗಿಡಗಳ ಆರೈಕೆಗೆ ಸರಳ ಸಲಹೆಗಳು ಚಳಿಗಾಲದ ಅ...
ತೋಟಗಾರಿಗೆ ತುಂಬಾ ತಾಳ್ಮೆ ಮತ್ತು ದೃಢತೆ ಬೇಕಾಗುತ್ತದೆ. ಇದ...
ಬೇಸಿಗೆಯಲ್ಲಿ ಬಾನಿಂದಲೇ ಕೆಂಡ ಕಾರುವ ಸೂರ್ಯ, ಧರೆಯಲ್ಲಿ ದಾ...