ಸಿರಿಧಾನ್ಯಗಳಾದರಾಗಿ, ನವಣೆ, ಹಾರಕ, ಸಾಮೆ, ಬರಗು, ಮತ್ತು ಊದಲು ಬಹು ಉಪಯೋಗಿ ಹಾಗು ರೋಗವಿಮುಕ್ತ ಶಕ್ತಿ ಹೊ೦ದಿರುವುದರಿ೦ದ ಮು೦ದೆ
ಪ್ರಧಾನ ಆಹಾರ ಧಾನ್ಯಗಳಾಗುತ್ತವೆ .
ಸಾಮಾನ್ಯವಾಗಿ ಮಾನವ ಕ್ಯಾಲೋರಿ ಬಗ್ಗೆ ಚಿ೦ತಿಸುತ್ತಾರೆ. ಆದರೆ ದೇಹದಲ್ಲಿರಬೇಕಾದ ರಾಸಾಯನಿಕಗಳ ಲೆಕ್ಕಮಾಡುವುದಿಲ್ಲ.ಬೆಳೆವಿಧಾನ/ಆಹಾರನೋಟ/ ಬಣ್ನ/ಸ೦ಸ್ಕರಣೆ/ಪರಿಸರ/ಎಲ್ಲಾ ಹ೦ತದಲ್ಲೂ ವಿಷಸೇರುವಸಾಧ್ಯತೆಇದೆ. "ತಡೆಯಿರಿ ಅನವಶ್ಯಕ ರಾಸಾಯನಿಕ ಬಳಕೆ –ನೀವಿರುವಿರಿ ಸದಾ ಆರೋಗ್ಯವಾಗಿ"https://static.vikaspedia.in/media_vikaspedia/kn/images/agriculture/caccc6cb3cc6-c89ca4ccdcaacbeca6ca8cc6-ca4c82ca4ccdcb0c97cb3cc1/navane.png"text-align: justify; ">ಆತೀವ ರಾಸಾಯನಿಕ ಗೊಬ್ಬರ ಹಾಗು ಕೀಟನಾಶಕ ಬಳಕೆ ಹೆಚ್ಚಾದರೆರಕ್ಸಣಾ ಖನಿಜಾ೦ಶಗಳ ಪ್ರಮಾಣ ಕಡಿಮೆಯಾಗುತ್ತದೆ. ಅನಾರೊಗ್ಯ ಕಾಡುತ್ತದೆ.ಸಾಮಾನ್ಯವಾಗಿ ಮ್ಯೆಉರಿ, ನಿಶ್ಯಕ್ತಿ, ಜ್ವರ, ತಲೆನೋವು, ಉಸಿರುಕಟ್ಟುವುದು, ಉಬ್ಬಳಿಕೆ, ವಾ೦ತಿ, ಚರ್ಮಉರಿ, ನವೆ, ಕೆರೆತ, ದ್ರುಷ್ಟಿದೋಶ, ಕಣುರಿ/ನೀರು, ಹೀಗೆ ವಿವಿಧ ಲಕ್ಷಣಗಳನ್ನು ಆಹಾರದ ಮುಖೇನ ರಾಸಾಯನಿಕ ಸೇವಿಸಿದಾಗ ಅನುಭವಿಸಬೇಕಾಗುತ್ತದೆhttps://static.vikaspedia.in/media_vikaspedia/kn/images/agriculture/caccc6cb3cc6-c89ca4ccdcaacbeca6ca8cc6-ca4c82ca4ccdcb0c97cb3cc1/navane.png"text-align: justify; ">
ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ವಿವಿಧ ಖನಿಜಾ೦ಶಗಳು. ಇವುಗಳನ್ನು ಬಳಸಿಕೊ೦ಡೆ ಸಸ್ಯಜನ್ಯ,ಪ್ರಾಣಿಜನ್ಯ ಜೀವಗಳು ಬೆಳೆದು ತಕ್ಕ ಪ್ರಮಾಣದಲ್ಲಿ ಜಲಜನಕ, ಆಮ್ಲಜನಕ, ಪ್ರೋಟೀನು, ಶರ್ಕರ ಹೀಗೆ ಜ್ಯೆವಿಕ ಕ್ರಿಯೆಯ ಸ೦ಚಲನ ನಡೆಯತ್ತಾ ಇರುತ್ತದೆ. ಇದರಲ್ಲಿ ಏರುಪೇರಾಗುವ೦ತೆ ಕಾರ್ಯ ಕ್ಯೆಗೊ೦ಡಾಗ, ವಾತಾವರಣಬದಲಾವಣೆಗೆ ಒಳಗಾಗುತ್ತದೆ. ಇದರ ಪರಿಣಾಮದಿ೦ದಾಗಿ ಶಾಖ ಹೆಚ್ಚಾಗುವುದು,ಭೂಮಿಒಣಗುವುದು, ಮಳೆಇಲ್ಲದ೦ತಾಗುವುದು. ಇನ್ನೊ೦ದೆಡೆ ಭೂಕ೦ಪನ, ಜ್ವಾಲಾಮುಖಿ, ಭೂಬಿರುಕು ಮತ್ತಿತರೆ ಭಯಾನಕ ಪರಿಸರ ಶ೦ಕೆ ಉ೦ಟಾಗುತ್ತದೆ.ಇದರ ಪರಿಣಾಮ ಬೆಳೆಬೆಳೆಯಲಾಗದಿರುವುದು, ಆಹಾರಕೊರತೆಗೆ ನಾ೦ದಿಯಾಗುತ್ತದೆ. ಈ ನಾನಾ ಆಘಾತಗಳು ನೇರವಾಗಿ ಮನುಕುಲದ ಆಹಾರ ಸೌಲಭ್ಯಕ್ಕೆ ನಿಸರ್ಗ ನೇರಪ್ರಭಾವವಾಗಿ ಬೆಳೆಗಳ ರೂಪಕ ಆತ೦ಕಕ್ಕೆ ಒಳಗಾಗುತ್ತದೆ. ಕೆಲವೊಮ್ಮೆ ಈ ನಿಟ್ಟಿನಲ್ಲಿಯೂ ಮಾನವ ಜಾಣತನದ ಬೆಳೆಗೆ ದಾರಿಹುಡುಕಬೇಕಾಗುತ್ತದೆ. ಪುರಾತನಕಾಲದ ಹುಲ್ಲಿನ ಜಾತಿಗೆಸೇರಿದ “ಕಿರುಧಾನ್ಯ”ಗಳೆ೦ದು ಪ್ರಚಲಿತವಾಗಿದ್ದನವಣೆ, ಸಜ್ಜೆ, ಸಾಮೆ, ಊದಲು,ಹಾರಕ, ಬರಗು,ರಾಗಿ ಇ೦ದು ಪರಿಸರ ಏರುಪೇರ ಎದುರಿಸಿ ಬೆಳೆದು ಸೇವಿಸುವ ಗ್ರಾಹಕರಿಗೆ ಆರೊಗ್ಯ ಸಿರಯನ್ನೂ ರಕ್ಷಿಸುವ “ಸಿರಿಧಾನ್ಯಗಳಾಗಿವೆ’.
ಹಿ೦ದೆ ಪ್ರಕೃತಿವಿಕೊಪಕ್ಕೆ ಮನುಕುಲ ತೊಡಕಿಗೆ ಸಿಲುಕುತ್ತಿತ್ತು. ಆದರೆ ಈಗ ಅದರ ಜೊತೆಗೆ ಸ್ವಯ೦ ಆರೋಗ್ಯ ವಿಕೋಪಕ್ಕೂ ತಾವೇ ನಾ೦ದಿಯಾಗಿದ್ದಾರೆ. ಇದಕ್ಕೆ ಮೂಲಕಾರಣ ಬಹುಆಕರ್ಷಿತ “ಜೀವನಶ್ಯೆಲಿ” ಹಾಗೂ ಅದಕ್ಕೆ ಹೊದುವ೦ತೆಯೇ ಸೇವಿಸುವ ನವೀನ ಸ್ಯೆಲಿಯಆಹಾರಗಳುhttps://static.vikaspedia.in/media_vikaspedia/kn/images/agriculture/caccc6cb3cc6-c89ca4ccdcaacbeca6ca8cc6-ca4c82ca4ccdcb0c97cb3cc1/navane.png"text-align: justify; ">ಹಿರಿಯರು ಸೇವಿಸುತ್ತಿದ್ದ ಆಹಾರಪದ್ದತಿ ಕಾಲಾನುಸಾರವಾದ ಪೂರ್ಣಧಾನ್ಯ, ಸಾವಯವ ತರಕಾರಿ ಹಣ್ನುಗಳು, ಸಾವಯವ ಸ೦ಸ್ಕರಣೆ, ವಿವಿಧ ಆಹಾರ ಸಮ್ಮಿಲನಗಳು ಅತ್ಯ೦ತ ಉತ್ತಮವಾಗದ್ದರಿ೦ದಲೇ ಅವರು ಆರೋಗ್ಯವಾಗಿದ್ದರು. ಈಗಿನ ನವೀನ ಜೀವನ ಹಾಗು ಆಹಾರ ಶ್ಯೆಲಿಯ ಪ್ರಭಾವದ ಆರೋಗ್ಯಧಕ್ಕೆ ಸ೦ಕೇತಗಳಾದ “ಮಧುಮೇಹ”, ಸ್ಥೂಲಕಾಯ, ಹ್ರುದ್ರೋಗ, ಕ್ಯಾನ್ಸರ್, ಆಮ್ಲೀಯತೆ, ರಕ್ತದೊತ್ತಡ, ಮೆದುಳು ಮಾ೦ದ್ಯತೆ-ಡಿಮೆನ್ಸಿಯಾ /ಅಲ್ಜೆಮೀರ್ , ಪಾರ್ಶವವಾಯು, ಹೀಗೆ ಇವುಗಳ ಪ್ರಕರಣ ಕೇಳಿಬರುತ್ತಿರಲಿಲ್ಲ.
ಮಾನವದೇಹವೇ ಯ೦ತ್ರಗಳ೦ತೆ ಬಲೀಷ್ಟವಾಗಿ ಹೊಲ, ಜಮೀನು, ಕೃಷಿಸ೦ಸ್ಕರಣೆ ಕೆಲಸನೆರವೇರಿಸುತ್ತಾ ಇದ್ದವು. ಅ೦ದರೆ ಉತ್ತಮ ಆಹಾರ, ಉತ್ತಮಪರಿಸರ, ಉತ್ತಮಸೊಸ್ಕರಣೆ, ಉತ್ತಮ ಆರೋಗ್ಯ ಹಾಗೂ ದುಡಿಮೆ ಶಕ್ತಿಯಿತ್ತು.
ಆದರೆ, ಇ೦ದಿನ ಜೀವನಶ್ಯೆಲಿ ಹಾಗೂ ಆಹಾರಪದ್ದತಿ ಮಾನವಶರೀರದಲ್ಲಿಯೂ ವಿವಿಧ ಪೋಷಕಾ೦ಶಗಳ ನಡುವಿನ ಸ್ಪರ್ಧೆಯ ಕಾರಣದಿ೦ದಾಗಿ ಕ೦ಪನ, ಜ್ವಾಲೆ, ಬಿರುಕು, ಒತ್ತಡ, ಹೀಗೆ ಶರೀರದಲ್ಲಿ ವಿವಿಧವಿಕೋಪಗಳು ಉ೦ಟಾಗುವ ಸ೦ಭವ ಹೆಚ್ಚಾಗಿದೆ.ಮನುಕುಲದಕ್ರಿಯಾಶೀಲತೆ, ದ್ಯೆಹಿಕ ಹಾಗೂ ಮಾನಸಿಕವಾಗಿಕ್ಷೀಣಿಸುತ್ತಿದೆ.
ಪಾರ್ಕಿನ್ಸನ್ಸ್ಕಾಯಿಲೆಯ ಸ೦ಭವವನ್ನು ಹೆಚ್ಚಿಸುವುದು ಆಹಾರಬೆಳೆಗಳಲ್ಲಿ ಉಳಿದುಕೊ೦ಡಕೀಟನಾಶಕಗಳು. (February 3, 2014.University of California, Los Angeles (UCLA), Health)ಹೆಚ್ಚಾಗಿ ಕೀಟನಾಶಕಗಳಿಗೆ ತುತ್ತಾಗುವ ಜನರು ಬೆಳೆಗಾರ ಮತ್ತು ಸೇವಿಸುವ ಜನಸಾಮಾನ್ಯರುhttps://static.vikaspedia.in/media_vikaspedia/kn/images/agriculture/caccc6cb3cc6-c89ca4ccdcaacbeca6ca8cc6-ca4c82ca4ccdcb0c97cb3cc1/navane.png"text-align: justify; ">
ಒ೦ದೆಡೆ ನ್ಯೂನಪೋಷಣೆಸಮಸ್ಯೆಯಾದರೆ, ಇನ್ನೊ೦ದೆಡೆ ಸ್ತೂಲಕಾಯ, ಹ್ರುದಯಾಗಾತ, ಮೆದುಳು ಮಾ೦ದ್ಯತೆ, ಮರೆಗುಳಿಕೆ ಕಾರಣಗಳಿ೦ದ ಕ್ರಿಯಾಶೀಲತೆ ಕ್ಷೀಣಿಸುತ್ತಿದೆ. ಇವೆಲ್ಲದಕ್ಕೂ ಮೊಟ್ಟಮೊದಲ ಕಾರಣನಮಗೆ ತಿಳಿದೋ ತಳಿಯದೆಯೋ ಪರಿಸರದ ಮುಖಾ೦ತರ ಹಾಗೂ ಆಹಾರದ ಮೂಲಕ ರಾಸಾಯನಿಕ ನಮ್ಮ ಶರೀರಸೇರುತ್ತಿರುವುದು.
ಸಮಸ್ಯೆಗೆ ಪ್ರಥಮಪರಿಹಾರ “ಸಾವಯವ ಪರಿಸರ ನಿರ್ವಹಣೆ, ಆಹಾರಉತ್ಪಾದನೆ, ಸ೦ಸ್ಕರಣೆ ಹಾಗೂ ಸಮತೋಲನ ಆಹಾರಸೇವನೆ. ಈ ನಿಟ್ಟನಲ್ಲಿ ನಿಸರ್ಗದತ್ತವಾಗಿ ಒದಗಿ ಬ೦ದಿರುವ ಆಹಾರ ಧಾನ್ಯಗಳೆ೦ದರೆ “ಸಿರಿಧಾನ್ಯಗಳು”. ಅತ್ಯ೦ತ ಕಡಿಮೆನೀರಿನಲ್ಲಿ, ಯಾವುದೇ ರಾಸಾಯನಿಕ ಸಿ೦ಪಡಿಕೆಯಿಲ್ಲದೆ ಬೆಳೆಯುವ ಮೂಲ ಆಹಾರಧಾನ್ಯಗಳು.
ಪ್ರಾಚೀನ ಪದ್ದತಿಯಿ೦ದ ಕ್ರೂಡೀಕರಿಸಿಕೊ೦ಡು ಬ೦ದ್ದಿದ್ದ ಧಾನ್ಯಗಳು. ಆದರೆ ಜನಸ೦ಖ್ಯೆ ಹೆಚ್ಚಾದ೦ತೆ ಆಹಾರಕೊರತೆ ನಿವಾರಿಸಲುನೆರವೇರಿಸಿದ ಹಸಿರುಕ್ರಾ೦ತಿ ಗೋಧಿಯನ್ನು ಇಳುವರಿಕೆಯ ಹೆಚ್ಚಳಕ್ಕಾಗಿ ಪ್ರಚಲಿತಪಿಸಿದರು. ಮನುಕುಲ ಕ್ರಮೇಣ ಅದನ್ನೇ ಮೂಲಾಹಾರಧಾನ್ಯವಾಗಿ ಮು೦ದುವರಿಸಿತು. ಆದರೆ ಸುಲಭ, ಯಾ೦ತ್ರಿಕ ಶ್ಯೆಲಿಗೆಪರಿವರ್ತನೆಯಾಗುತ್ತಾ ,ಆಹಾರಶ್ಯೆಲಿಯೂ “ಪಶ್ಚಾತ್ಯಶ್ಯೆಲಿ” ಪ್ರಭಾವತುಳಿತಕ್ಕೆ ಒಳಗಾಗಿ ಪೂರ್ಣಧಾನ್ಯ ಆಧಾರಿತಮುದ್ದೆ, ರೊಟ್ಟಿ,ಅನ್ನ ಮರೆತುಹೋಯಿತು. ನಾರುರಹಿತ ,ಆಕರ್ಷಿತಶ್ಯಲಿ ತಿನಿಸುಗಳಾದ ಬ್ರೆಡ್ , ಪಿಝಾ , ನೂಡಲ್ಸ್ , ಪಾಸ್ಟಾ ,ಹೀಗೆಬದಲಾದವು. ಈ ಖಾದ್ಯಗಳು ದಿಢೀರ್ ತಯಾರಿಸಬಹುದಾದರಿ೦ದ ಮಾರಕಟ್ಟೆ ಕ೦ಡುಕೊ೦ಡಿವೆ. ಯುವಜನತೆಯ ಆಕರ್ಷಣೆಗೆಒಳಗಾಗಿವೆ, ಅನೇಕರು ಇವುಗಳನ್ನೇ ಆಧರಿಸಿ ಮುನ್ನಡೆದಿದ್ದಾರೆ ಹಾಗೆಯೇ ಅನಾರೋಗ್ಯದಭಯದಲ್ಲಿಯೂ ಆತ೦ಕಕೊಳಗಾಗಿದ್ದಾರೆ.
ಈ ಹ೦ತದಲ್ಲಿ ಬೆಳೆ ಮತ್ತು ಆಹಾರ ಸ೦ಸ್ಕರಣೆ ಎರಡೂ ಉದ್ದಿಮೆಗಳು ಎದುರಿಸಬೇಕಾದ ಸವಾಲು ಎ೦ದರೆ- ಬದಲಾದ ಪರಿಸರದಲ್ಲಿಯೇ ಉತ್ಪಾದಿಸಬಹುದಾದ ಮೂಲ ಸಾವಯವ ಆಹಾರಬೆಳೆ. ಆವುಗಳನ್ನೇ ಆಧರಿಸಿ ಯಾವುದೇ ರಾಸಾಯನಿಕ ಇಲ್ಲದೆ, ಉತ್ತಮ ನಾರಿನ೦ಶ, ಮೇದಾಮ್ಲ, ಕಡಿಮೆ ಗ್ಲೂಕೋಸ್ಪ್ರಚೋದಕ ಕ್ಲಿಷ್ಟಶಕ್ರರಯುಕ್ತ, ಅವಶ್ಯಕ ಖನಿಜ ಮತ್ತು ಜೀವಸತ್ವ ಹೊ೦ದಿದ್ದೂ ,ಆಕರ್ಷಕ ರೀತಿಯಲ್ಲಿ ಒದಗಿಸಬಹುದಾದ ಖಾದ್ಯಗಳ ತಯಾರಿ ತ೦ತ್ರಜ್ನಾನhttps://static.vikaspedia.in/media_vikaspedia/kn/images/agriculture/caccc6cb3cc6-c89ca4ccdcaacbeca6ca8cc6-ca4c82ca4ccdcb0c97cb3cc1/navane.png"text-align: justify; ">ಈ ನಿಟ್ಟಿನಲ್ಲಿ “ಸಿರಿಧಾನ್ಯಗಳೇ“ ಮೂಲ. ಜೊತೆಗೂಡಬೇಕು ಸಾವಯವತರಕಾರಿ, ಸೊಪ್ಪು, ಹಣ್ನುಗಳು. ಸಿರಿಧಾನ್ಯಗಳು ವಿಶೇಷ ಶರ್ಕರಗಳನ್ನು ಒಳಗೊಡಿರುವುದರಿ೦ದ ,ಆಹಾರವಾಗಿ ಬಳಸಿದಾಗ ಮಾನವ ಶರೀರದ ತೇವಾ೦ಶ ರಕ್ಷಕವಾಗಿರುತ್ತದೆ. ಮಾನವ ಶರೀರದಲ್ಲಿ ಒಟ್ಟಾರೆ ಶೇಕಡ೭೦ ರಷ್ಟು ತೂಕ ನೀರಿನಭಾಗವಾಗಿರುತ್ತದೆ. ಮಾ೦ಸಖ೦ಡಗಳಲ್ಲಿ
ಶೇಕಡ೭೫ ಭಾಗನೀರು, ಮೂಳೆಯಲ್ಲಿಶೇಕ ೨೨ ಭಾಗನೀರು, ರಕ್ತದಶೇಕಡ ೯೨ ಭಾಗ ನೀರಿನಿ೦ದ ಮಾಡಲ್ಪ್‌ಟ್ಟಿರುತ್ತದೆ. ಈ ತೇವಾ೦ಶ ಸಮತೋಲನೆ ರಕ್ಷಿಸಿದಾಗ ಮಾತ್ರವೇ ಆರೊಗ್ಯ ಸ೦ಪೂರ್ಣವಾಗಿರುತ್ತದೆ.
ಸಿರಿಧಾನ್ಯಗಳ ತವಡುಭಾಗದಲ್ಲಿ ಆರೋಗ್ಯರಕ್ಷಕ ಮೇದಾಮ್ಲಗಳಾದ ಒಮೆಗಾ ೩:೬ ಸರಿಯಾದ ಭಾಗಾ೦ಶದಲ್ಲಿರುತ್ತವೆ, ಆದ್ದರಿ೦ದ ನಿರ೦ತರವಾಗಿ ರೂಢಿಸಿಕೊ೦ಡು ಸೇವಿಸಿದಾಗ ಕೊಲೆಸ್ಟ್ರಾಲ್ ಪ್ರಮಾಣ ನಿಯ೦ತ್ರಿಸುವ ಸಾದ್ಯತೆಯೆದೆ . ಈ ಮೂಲಕ ಹೃದಯಾಘಾತ ತಡೆಯುವಲ್ಲಿ ನೆರವಾಗುತ್ತದೆ.
ಜೊತೆಗೆ ಉತ್ತಮ ಪ್ರಮಾಣದಲ್ಲಿ ಪ್ರೋಟೀನು , ಕಬ್ಬಿಣಾ೦ಶ, ಸುಣ್ನಾ೦ಶಒದಗಿಸುವಮೂಲಕಮೂಳೆಗಳಧ್ರುಡತೆ , ಅನೀಮಿಯಾ ಉ೦ಟಾಗದ೦ತೆ ರಕ್ಚಿಸಬಹುದು.
ಸಿರಿಧಾನ್ಯದ ಹಿಟ್ಟನ್ನು ಮಾನವನು ಆಹಾರವಾಗಿ ಸೇವಿಸಲು ಸಿರಿಧಾನ್ಯಗಳಿ೦ದಲೇ ಮಾಡಿರಬೇಕು. ಧಾನ್ಯವನ್ನು ಕಲ್ಲು, ಕಡ್ಡಿ, ಕಬ್ಬಿನದತುಣುಕುಗಳಿ೦ದ, ಇತರೆ ಕಲ್ಮಶಗಳಿ೦ದ ಶುದ್ದೀಕರಿಸಿದ ನ೦ತರ , ಬೂಸ (ಒರಟಾದಹೊರಕವಚ) ಭಾಗವನ್ನುತೆಗೆದು, ಪೋರ್ಣಕಾಳನ್ನು ಹೊಟ್ಟಿನ ಪದರೊಗ್ಗೂಡಿನುಣುಪಾದ ಹಿಟ್ಟಿನ೦ತೆ ಪುಡಿಮಾಡಿರಬೇಕು.ಆಹಾರನಿಯಮಾವಳಿ ಪ್ರಕಾರ ಸಿರಿಧಾನ್ಯಪದಾರ್ಥ ಎ೦ದು “ ಲೇಬಲ್”ನಮೂದಿಸಬೇಕಾದರೆ –ಆ ಪದಾರ್ಥದಲ್ಲಿಕನಿಷ್ಟ ೭೫ % ಪೂರ್ಣಸಿರಿಧಾನ್ಯ /ಹಿಟ್ಟುಬಳಸಿರಬೇಕು.ಇದನ್ನುಅನುಸರಿಸದೆಇದ್ದರೆ , ನ೦ಬಿಕೆಇಟ್ಟು ಇಟ್ಟು ತಿನಿಸು ಸೇವಿಸುವ ಗ್ರಾಹಕ ತೊಡಕು ಎದುರಿಸಬೇಕಾದೀತು. (ನಿಯಮ: 16 (1761) - Bureau of Indian Standards).
ಇತ್ತೀಚೆಗೆ ಜನಸಾಮಾನ್ಯರಲ್ಲಿ ಒ೦ದು ಆತ೦ಕ ಹರಿದಾಡುತ್ತಿರುವುದೆ೦ದರೆ, ಕೆಲವುಸಿರಿಧಾನ್ಯಗಳಲ್ಲಿ “ಸಿಲಿಖಾ” ಎನ್ನುವಕಠಿಣ ಖನಿಜವಿದೆ ಹಾಗೂ ಅದು ಹಾನಿಕಾರಕ ಎನ್ನುವಭಯ .ಸಿರಿಧಾನ್ಯಗಳ ಹೊಟ್ಟಿನಲ್ಲಿ ಒಟ್ಟಾರೆ ಖನಿಜಗಳ ಕೇವಲ ಶೇಕಡ ೨.೦ ಕ್ಕಿ೦ತ ಕಡಿಮೆ ಸಿಲಿಖಾಇದ್ದರೂ, ಅದು ಜ್ಯೆವಿಕ ಕ್ರಿಯಾಶೀಲ ರೂಪದಲ್ಲಿದ್ದು, ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ನಿಗದಿತ ಪ್ರೋಟೀನು ಹಾಗೂ ಸುಣ್ನಾ೦ಶವನ್ನು ಜೊತೆಗೂಡಿಸಿಕೊ೦ಡು ಮೂಳೆಯೊಳ ಹೊಕ್ಕು ಸಧೃಡಮೂಳೆ ರಚನೆಗೆ ನಾ೦ದಿಯಾಗುತ್ತದೆ. ಆನವಶ್ಯಕವಾದುದನ್ನು ಮಲದ ಮುಖಾ೦ತರ ೪-೮ ಗ೦ಟೆ ಒಳಗೆ ಸಿಲಿಸಿಕ್ಆ ಮ್ಲವಾಗಿ ಸುಲಭವಾಗಿ ವಿಸರ್ಜನೆಯಾಗುತ್ತದೆ ಎ೦ದು ಅದ್ಯಯನಗಳು ಸಾಭೀತುಮಾಡಿವೆ. ಸಿಲಿಕಾ ಖನಿಜಾ೦ಶವು ಉಗುರುಪುಡಿಯಾಗುವುದು, ಮೂಳೆಪೊಳ್ಲಾಗುವದು, ಚರ್ಮ ಸುಕ್ಕುಗಟ್ಟುವುದು, ಕೂದಲುಉದುರುವುದು, ಹೀಗೆ ಕೆಲವುಸಮಸ್ಯೆಗಳಿಗೆ ನೆರವುನೀಡುವುದು.
ಇಷ್ಟೊ೦ದು ಶಕ್ತಿಯುತವಾದ ಮೂಲ ಆಹಾರಧಾನ್ಯವನ್ನು ದಿನನಿತ್ಯದ ಆಹಾರದಲ್ಲಿ ಅನೇಕರೂಪದಲ್ಲಿ ಬಳಸಬಹುದು. ಶಿಶುವಿಗೆ ಪೂರಕಆಹಾರ, ಮಕ್ಕಳಿಗೆಪುಷ್ಟಿರೊಟ್ಟಿ, ಪಾಸ್ತಾ, ಪಿಝಾ, ಬನ್ , ಶಾವಿಗೆ, ನೂಡಲ್ಸ್, ಸೂಪ್, ಇಡ್ಲಿ, ದೋಸೆ, ಬಿಸ್ಕತ್ತು, ಸಿರಿಅಕ್ಕಿತಿನಿಸುಗಳಾದ –ಚಿತ್ರಾನ್ನ, ಪುಲಾವ್, ಪುಲಿಯೋಗರೆ,ಮಿಲೆಟ್ಮಸಾಲಪುಷ್ಟಿಗೋಲಿ, ಮಿಲೆಟ್ನಗೆಟ್ಸ್, ಸಿರಿಧಾನ್ಯ ಗೋಲಿಚಾಟ್ಸ್, ಸಿರಿಪಾನಿಪುರಿ, ಸಿರಿಖಾಖ್ರಾ, ಸಿರಿಚಾಕೊಲೇಟ್ಸ್, ಶ೦ಕರ್ ಪೋಳಿ, ಪಾಯಸ, ಸಜ್ಜಿಗೆ, ಹೋಳಿಗೆ, ಜ್ಯೆವಿಕಕ್ರಿಯಾಶೀಲ ಚಟ್ನಿ, ಹೀಗೆ ನವ್ಯಶೈಲಿಯಲ್ಲಿ ಸಿರಿಧಾನ್ಯ ಊಟಹಾಗು ತಿನಿಸು ಎಲ್ಲವಯಸ್ಸಿನವರಿಗೂ ಸೂಕ್ತವಾಗಿಸೇವಿಸುವುದುಸಾದ್ಯ.ಜೊತೆಗೆ ಸಾವಯವಸೊಪ್ಪು, ತರಕಾರಿಗಳನ್ನು, ಹಣ್ನುಗಳನ್ನು ಸೂಕ್ತರೀತಿಯಲ್ಲಿ ಸೇರಿಸಿದಾಗ ನಿಸರ್ಗದತ್ತ ಸಾವಯವಬಣ್ನದ ಲೇಪನವನ್ನೂಕೊಡಬಹುದು.
“ಸಿರಿಧಾನ್ಯಗಳು ಕೇವಲ ಆರ್ಥಿಕಸಿರಿಯಲ್ಲ, ಭೂ ಪರಿಸರಸಿರಿಯೂ ಹಾಗೂ ಆಹಾರಸೇವನೆಯಲ್ಲಿ ಅಳವಡಿಸಿಕೊ೦ಡರೆ ನಮ್ಮೆಲ್ಲರ ಆರೊಗ್ಯ ಸಿರಿಯೂ ಆಗುತ್ತದೆ. ಸಿರಿಧಾನ್ಯಸೇವಿಸಿ ನಿಮ್ಮ ಹೃದಯ ಆರೋಗ್ಯ ನಿಮ್ಮ ಕ್ಯೆಯಲ್ಲಿರುತ್ತದೆ.
ಮೂಲ: ಹೆಚ್.ಬಿ.ಶಿವಲೀಲಾ
ಕೊನೆಯ ಮಾರ್ಪಾಟು : 6/27/2020