অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಿರ್ವಹಣೆ

ಸಮಗ್ರ ಬೆಳೆ ನಿರ್ವಹಣೆ (ಐಸಿಎಂ) :

ಸಮಗ್ರ ಬೆಳೆ ನಿರ್ವಹಣೆ ಎಂದರೆ, ವ್ಯವಸಾಯ ವ್ಯವಸ್ಥೆಗಳಡಿಯಲ್ಲಿ ಬೀಜದಿಂದ ಬೀಜದವರೆಗಿನ ಗರಿಷ್ಟ ಸಂಭವನೀಯ ಫಸಲು ಬೆಳೆಯುವ ವ್ಯವಸ್ಥೆಗಳ ಒಟ್ಟಾರೆ ನಿರ್ವಹಣೆ ಕುರಿತ ಸಮಗ್ರ ಧೋರಣೆ ಮತ್ತು ವ್ಯವಸ್ಥೆ

  • ಸಮಗ್ರ ಪೋಷಕಾಂಶ ನಿರ್ವಹಣೆ (ಐ ಎನ್ ಎಂ) :
  • ಸಮಗ್ರ ತೇವಾಂಶ ನಿರ್ವಹಣೆ (ಐ ಎಂ ಎಂ) : ಸಮಗ್ರ ನೀರು ನಿರ್ವಹಣೆ (ಐ ಡಬ್ಲ್ಯೂ ಎಂ) :
  • ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ (ಐಪಿಡಿಎಂ) : ಸಮಗ್ರ ಪೋಷಕಾಂಶ ನಿರ್ವಹಣೆಯು, ಸಮಗ್ರ ಕಳೆ ನಿರ್ವಹಣೆಯನ್ನು ಅವಲಂಬಿಸಿದೆ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಸಮಗ್ರ ಪೋಷಕಾಂಶ ನಿರ್ವಹಣೆಯ ಮೇಲೆ ಅವಲಂಬಿಸಿದೆ. ಹಾಗೆಯೇ ಎಲ್ಲಾ ನಾಲ್ಕು ಅಂಶಗಳು ಪರಸ್ಪರ ಅವಲಂಬಿತವಾಗಿವೆ ಹಾಗೂ ಪರಸ್ಪರ ಪೂರಕವಾಗಿರುತ್ತವೆ.
  • ಐಎನ್‍ಎಂ. ಐಡಬ್ಲ್ಯೂಎಂ ಹಾಗೂ ಐಎಂಎಂ ಇಲ್ಲವೇ ಕೇವಲ ಐಪಿಡಿಎಂ ನಿಂದ ಸಂಭವನೀಯ ಫಸಲು ತೆಗೆಯಲು ಸಾಧ್ಯವಿಲ್ಲ. ಹಾಗಾಗಿ, ಜಲಾನಯನ ಯೋಜನೆಯಲ್ಲಿ ನಡೆಯುವ ಎಲ್ಲಾ ತರಬೇತಿಗಳು, ಕ್ಷೇತ್ರ ಪ್ರಯೋಗಗಳು, ಪ್ರಾತ್ಯಕ್ಷಿಕೆಗಳು, ವ್ಯವಸಾಯ ವ್ಯವಸ್ಥೆ ತೀವ್ರಗೊಳಿಸುವಲ್ಲಿ ಗುರಿಯಿಟ್ಟು ನ್ಯಾಯಬದ್ಧವಾಗಿ ಐಎನ್‍ಎಂ. ಐಎಂಎಂ, ಐಪಿಡಿಎಂ ಮತ್ತು ಐಡಬ್ಲ್ಯೂಎಂಗಳನ್ನು ಸಂಘಟಿತವಾಗಿ ನಡೆಸಬೇಕು.

ಸಮಗ್ರ ತೇವಾಂಶ ನಿರ್ವಹಣೆ (ಐಎಂಎಂ) :

ಯಾವುದೇ ವ್ಯವಸಾಯ ಪದ್ಧತಿಯಲ್ಲಿ, ಒಟ್ಟಾರೆ ಬೆಳವಣಿಗೆ ಹಾಗೂ ಉತ್ಪಾದಕತೆಗೆ ಮಣ್ಣಿನ ತೇವಾಂಶ ನಿರ್ವಹಣೆ ಬಹಳ ಮುಖ್ಯವಾದುದು. ಮಣ್ಣಿನ ತೇವಾಂಶವು ನೈಸರ್ಗಿಕ ಅತಿ ಮುಖ್ಯ ಋತು ಬದಲಾವಣೆಗಳಲ್ಲೊಂದು ಇದನ್ನು ವೈಜ್ಞಾನಿಕವಾಗಿ ಸಂರಕ್ಷಿಸಬೇಕು.

  • ಇದಕ್ಕೆ ಸಮಗ್ರ ತೇವಾಂಶ ನಿರ್ವಹಣೆ ಸಂಧಾನವಾಗಿದ್ದು ಇದರಲ್ಲಿ ನಿರ್ವಹಣೆಗಾಗಿ ಸೂಕ್ತ ಕಾಲದಲ್ಲಿ ವಿವಿಧ ನಿರ್ಧಾರಗಳನ್ನು ಮಿಶ್ರಗೊಳಿಸಲಾಗುತ್ತದೆ. ಅವು ಯಾವುದೆಂದರೆ, ಇಳಿಜಾರಿಗೆ ಅಡ್ಡಲಾಗಿ ಉಳುವುದು, ವಿವಿಧ ಮಣ್ಣು ಮತ್ತು ತೇವಾಂಶ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು.

ಬೆಳೆ ಕಟಾವು ಆದ ನಂತರ ಇಳಿಜಾರಿಗೆ ಅಡ್ಡಲಾಗಿ ಆಳವಾಗಿ ಮಾಗಿ ಉಳುಮೆ.

  1. 0-40 ಅಡಿಗಳಿಗೆ ಸಣ್ಣ ಬದುಗಳ ನಿರ್ವಹಣೆ.
  2. ಪ್ರತಿ 8-10 ಅಡಿ ಇಳಿಜಾರಿಗೆ ಅಡ್ಡಲಾಗಿ ದೋಣಿ ಸಾಲು ನಿರ್ಮಾಣ. ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮತ್ತು ಅಂತರ ಬೇಸಾಯ.

ಐಎಂಎಂನ ಅಗತ್ಯತೆ :

ಜಲಾನಯನ ಪ್ರದೇಶಗಳಲ್ಲಿ, ಮಳೆ ನೀರೇ ಮಣ್ಣಿನ ತೇವಾಂಶದ ಪ್ರಧಾನ ಸಾಧನೆ ಮಳೆ ನೀರು ಋತು ಮಾನಕ್ಕನುಗುಣವಾಗಿದ್ದು, ಏರುಪೇರಾಗಿರುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಮಳೆ ಹೆಚ್ಚು ಅಥವಾ ಕಡಿಮೆಯಾಗಿದ್ದು ಎರಡೂ ಹಾನಿಕಾರಕವೇ ಆಗಿದೆ.

  • ಜಮೀನನ್ನು ಸಿದ್ಧಪಡಿಸಲು ಮಣ್ಣಿನ ತೇವಾಂಶ ಪೂರ್ವ ನಿಶ್ಚಿತ ಸ್ಥಿತಿಯಲ್ಲಿರುತ್ತದೆ. ಜೊತೆಗೆ ನಿರಂತರ ಜೈವಿಕ ಚಟುವಟಿಕೆಗೂ ಅಗತ್ಯವಾಗಿದ್ದು ಅದು ನೈಸರ್ಗಿಕ ವ್ಯರ್ಥದ ಕೊಳೆಯುವಿಕೆಗೆ ಅತಿ ಮುಖ್ಯ ಅಂಶವಾಗಿರುತ್ತದೆ.
  • ಮಣ್ಣಿನಲ್ಲಿ ತೇವಾಂಶ ಲಭ್ಯವಿರುವುದನ್ನೇ ಪ್ರಧಾನವಾಗಿ ಬೀಜ ಬಿತ್ತನೆ ಮತ್ತು ಮೊಳಕೆಯೊಡೆಯುವಿಕೆ ಆಧರಿಸಿರುತ್ತದೆ.
  • ಬಿತ್ತನೆ ಪೂರ್ವ ಸಂರಕ್ಷಣೆ ಬಹಳ ಮುಖ್ಯ ಹಾಗೆಯೇ ಬೆಳೆ ಕಾಲದಲ್ಲಿ ಅತಿ ಮುಖ್ಯ ಹಂತಗಳಾದ ಉಳುವುದು, ಮೊದಲ ಹಸಿರೆಲೆ ಮಾಡುವುದು, ಬಿತ್ತುವುದು, ಮೊಳಕೆಯೊಡೆಯುವುದು. ಹೂ ಬಿಡುವುದು, ಕಾಳು ತುಂಬಿಕೊಳ್ಳುವುದು ಇತ್ಯಾದಿ ಸಂದರ್ಭಗಳಲ್ಲಿ ತೇವಾಂಶ ಕೊರತೆಯಿಂದ ಖಂಡಿತವಾಗಿ ಇಳುವರಿ ಕಡಿಮೆಯಾಗಿರುತ್ತದೆ.
  • ಅಲ್ಲದೆ, ಇದಕ್ಕೆ ಸಂಬಂಧಪಟ್ಟ ಕಳೆ ನಿರ್ವಹಣೆ ಮತ್ತು ಪೌಷ್ಟಿಕಾಂಶ ಹೀರಿಕೆಯನ್ನು ಒಳಗೊಂಡಂತೆ ಎಲ್ಲ ಅಂತರ ವ್ಯವಸಾಯ ಕಾರ್ಯಾಚರಣೆಗಳು ಮಣ್ಣಿನ ತೇವಾಂಶವನ್ನು ಆಧರಿಸಿರುತ್ತದೆ. ಇದಲ್ಲದೆ ಮಣ್ಣಿನ ತೇವಾಂಶದ ಏರಿಳಿತದ ಮೇಲೆ ಕೀಟ ಹಾಗೂ ರೋಗ ಪ್ರಸಂಗಗಳು ಹೆಚ್ಚುತ್ತದೆ ಅಥವಾ ಇಳಿಯುತ್ತದೆ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate