ಮನಸ್ಸು ಮಾಡಿದರೆ ಮಾನವ ಏನನ್ನಾದರೂ ಸಾಧಿಸಬಲ್ಲ ಎಂಬುದಕ್ಕೆ ಹಲವಾರು ಉದಾಹರಣೆಗಳು ನಮಗೆ ಸಿಗುತ್ತವೆ. ಎಲ್ಲರೂ ಮಾಡಿದ್ದನ್ನೇ ತಾನೂ ಮಾಡುವವನು ಸಾಮಾನ್ಯ. ಆದರೆ ಸ್ವಲ್ಪ ವಿಭಿನ್ನವಾಗಿ ಚಿಂತಿಸಿದರೆ, ವಿಶೇಷವಾಗಿ ಕೃಷಿಯಲ್ಲಿ, ಅಸಾಮಾನ್ಯರೆನಿಸಿಕೊಳ್ಳಲು ಸಾಧ್ಯ. ಕೃಷಿಕರಿಗೆ ಸ್ಫೂರ್ತಿ ನೀಡುವ ಈ ಯಶೋಗಾಥೆಗಳ ಸರಮಾಲೆಯನ್ನು ಲೇಖಕರು ತುಂಬಾ ರಸವತ್ತಾಗಿ ಪೋಣಿಸಿದ್ದಾರೆ. ನೈಪುಣ್ಯದಿಂದ ಹೆಣೆದಿರುವ ಈ ಲೇಖನ ರೈತರನ್ನು ಆಲೋಚನೆಗೆ ಹೆಚ್ಚುತ್ತದೆ.
ಅಂದು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ, ರಾಜ್ಯ ಸಭಾ ಸದಸ್ಯ ಶ್ರೀ ಬಸವರಾಜ ಪಾಟೀಲ ಸೇಡಂ ಇವರು ಸಿದ್ದಾಪುರ ಗ್ರಾಮ ನಿವಾಸಿ ಮತ್ತು ರೈತ ಮಹಿಳೆ ಶ್ರೀಮತಿ ಜಯಶ್ರೀ (ಜಯಮ್ಮ) ಅವರನ್ನು ಭೇಟಿಯಾಗಲೆಂದು ಕರೆಯಿಸಿದ್ದರು. ಬಡವರಿಗಾಗಿ, ದೀನ ದಲಿತರಿಗೆ, ಕೃಷಿಕರಿಗಾಗಿ ಮಿಡಿಯುವ ಹೃದಯವಂತರು, ಧೀಮಂತರು ಆದ ಪಾಟೀಲರು ಸಾಮಾನ್ಯರಂತೆ ಕಾಣುವ ಜಯಮ್ಮನವರನ್ನು ಏಕೆ ಕರೆಯಿಸಿರಬಹುದೆಂದು ನಮಗೂ ಕುತೂಹಲ. ಬಹುಷಃ ಏನಾದರೂ ಸಹಾಯ ಯಾಚಿಸಿ ಬಂದಿರಬಹುದೇನೋ ಎಂದು ತಿಳಿದಿದ್ದ ನನಗೂ ಮತ್ತು ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿಗಳಿಗೂ ಶ್ರೀ ಬಸವರಾಜ ಪಾಟೀಲ ಸೇಡಂ ರ ಮಾತು ಇನ್ನೂ ಆಶ್ಚರ್ಯ ನೀಡಿತು. "ನೋಡಿ ಕುಲಪತಿಗಳೇ, ಇವಳು ಜಯಮ್ಮ ಅಂತ. ಕೃಷಿ ಇವಳ ಜೀವನೋಪಾಯ. ಇವಳ ಸಾಧನೆಯ ಕುರಿತು ಶ್ರೀ ಸಿದ್ದೇಶ್ವರ ಸ್ವಾಮಿಗಳು ತುಂಬಾ ಮಾತನಾಡಿದಾಗ ಇವರನ್ನು ಮಾತನಾಡಿಸಬೇಕೆಂಬ ಇಚ್ಚೆಯಿಂದ ವಿಚಾರಿಸಿದಾಗ ಅವರೇ ನನ್ನಲ್ಲಿಗೆ ಬಂದಿದ್ದಾರೆ".
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಇರಲಿ ಕಾರ್ಯದಲಿ ಕ್ಷಮತೆ, ಚಿಂತನೆಯಲಿ ವಿಭಿನ್ನತೆ
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 12/4/2019