ಸಮಗ್ರ ಪೀಡೆ ನಿರ್ವಹಣೆಯಲ್ಲಿ ಕಳೆ ನಿರ್ವಹಣೆ ಒಂದು ಅಂಶವಾಗಿದೆ. ಎಲ್ಲಾ ಪೀಡೆಗಳಿಂದ ಬೆಳೆಗಳ ಉತ್ಪಾದನೆಯಲ್ಲಿ ಆಗುತ್ತಿರುವ ಒಟ್ಟು ನಷ್ಟದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಕಳೆಯಿಂದ ಆಗುತ್ತದೆ. ಎಂದು ತಿಳಿದುಬಂದಿದೆ. ಕಳೆಗಳು ಬೆಳೆಗಳ ಬೆಳವಣಿಗೆಗೆ ಬೇಕಾಗುವ ಬೆಳಕು. ತೇವಾಂಶ, ಪೋಷಕಾಂಶಗಳು ಮತ್ತು ಜಾಗಕ್ಕೂ ಪೈಪೋಟಿ ನಡೆಸುವುದರ ಕಾರಣ ಬೆಳೆಗಳ ಇಳುವರಿ ಮತ್ತು ಗುಣಮಟ್ಟವು ಕಡಿಮೆಯಾಗುತ್ತದೆ.
ಕಳೆಗಳು ಬೆಳೆಗಳಿಗಿಂತ ಪೈಪೋಟಿಯಲ್ಲಿ ಮುಂದೆ ಇವೆ, ಕಾರಣ ಇವುಗಳಲ್ಲಿರುವ ವೈವಿಧ್ಯತೆಗಳು ಅಂದರೆ :
ಸಮಗ್ರ ಕಳೆ ನಿರ್ವಹಣಾ ಪದ್ದತಿ ಎಂದರೇನು ?
ಒಂದು ಬೆಳೆ ಅಥವಾ ಬೆಳೆ ಪದ್ದತಿಯಲ್ಲಿ ಆರ್ಥಿಕ ಹಾನಿ ಮಟ್ಟಕ್ಕಿಂತ ಇಳುವರಿ ಕಡಿಮೆಯಾಗದಂತೆ ಕಳೆಗಳ ಪೈಪೋಟಿಯನ್ನು ಕಡಿಮೆ ಖರ್ಚಿನ ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಳೆ ನಿರ್ವಹಣಾ ಪದ್ಧತಿಗಳನ್ನು ಸಂಯೋಜಿಸಿ, ಕಳೆ ನಿಯಂತ್ರಣ ಮಾಡುವುದಕ್ಕೆ ಸಮಗ್ರ ಕಳೆ ನಿರ್ವಹಣಾ ಪದ್ಧತಿ ಎಂದು ಹೇಳುತ್ತೇವೆ.
ಈ ಸಮಗ್ರ ಕಳೆ ನಿರ್ವಹಣಾ ಪದ್ಧತಿಯು ಪರಿಣಾಮಕಾರಿಯಾದ, ಅವಲಂಬಿಸ ಬಹುದಾದ, ಅನುಷ್ಠಾನಕ್ಕೆ ತರಲು ಸಾಧ್ಯವಾದ ಮತ್ತು ಪರಿಸರಕ್ಕೆ ಧಕ್ಕೆ ಮಾಡದಂತಹ ಸಂಯೋಜಿತವಾದಂತಹ ಪದ್ಧತಿಯಾಗಿರಬೇಕು
ಮೂಲ :
ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 7/19/2020