ಸುಮಾರು 650 ಮಿ.ಮೀ. ವರೆಗೂ ಮಳೆಯಾಗುವ ಪ್ರದೇಶಗಳಲ್ಲಿ ಮಳೆಯ ಕಾಲಾವಧಿ ಸಹ ಕಡಿಮೆ (20 ವಾರಗಳು) ಇದ್ದಾಗ, ಮಳೆಗಾಲದಲ್ಲಿ ಒಂದೇ ಬೆಳೆಯನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ ಪ್ರತಿ ವರ್ಷ ರಾಗಿಯನ್ನೇ ಬೆಳೆದುಕೊಳ್ಳದೆ ಬೆಳೆಗಳ ಬದಲಾವಣೆ ಮಾಡಿ ರಾಗಿ-ಅವರೆ, ರಾಗಿ-ತೊಗರಿ, ರಾಗಿ-ಕಡಲೆಕಾಯಿ ಬೆಳೆಗಳನ್ನು ಬೆಳೆಯುವುದು ಅನುಕೂಲಕರ ಮುಂಚಿತವಾದ ಬಿತ್ತನೆಗೆ ದೀರ್ಘಾವಧಿ ತಳಿಗಳನ್ನು ಮತ್ತು ತಡವಾದ ಬಿತ್ತನೆಗೆ ಅಲ್ಪಾವಧಿ ತಳಿಗಳನ್ನು ಆಯ್ದುಕೊಳ್ಳಬೇಕು.
ಕ್ರ.ಸಂ |
ಬಿತ್ತನೆಯ ತಿಂಗಳು |
ಬೆಳೆಗಳು |
1 |
ಮೇ |
ಎಳ್ಳು, ಅಲಸಂದೆ, ತೊಗರಿ, ಹರಳು, |
2
|
ಜೂನ್ |
ತೊಗರಿ, ಕಡಲೆಕಾಯಿ, ಹರಳು |
3 |
ಜುಲೈ |
ಮುಸುಕಿನ ಜೋಳ, ಕಡಲೆಕಾಯಿ, ರಾಗಿ |
4 |
ಆಗಸ್ಟ್ |
ರಾಗಿ, ಸೋಯಾಅವರೆ, ಸೂರ್ಯಕಾಂತಿ, ಅಲಸಂದೆ |
5 |
ಸೆಪ್ಟೆಂಬರ್ |
ಅಲಸಂದೆ, ಹುರುಳಿ, ನಾಟಿರಾಗಿ |
6 |
ಅಕ್ಟೋಬರ್
|
ನಾಟಿರಾಗಿ, ಕಡಲೆ, ದನಿಯಾ, ಹುಚ್ಚೆಳ್ಳು
|
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 2/15/2020