অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಉತ್ಪಾದನಾ ಪದ್ದತಿಗಳು

ಉತ್ಪಾದನಾ ಪದ್ದತಿಗಳು

  • ಜಲಾನಯನ ಚಟುವಟಿಕೆಗಳ ಅನುಷ್ಠಾನದ ಮುಖ್ಯ ಉದ್ಧೇಶವು ನೈಸರ್ಗಿಕ ಸಂಪನ್ಮೂಲಗಳ ಸದ್ಭಳಕೆಯಿಂದ ಆಹಾರ, ಮೇವು, ಉರುವಲು ಮುಂತಾದ ಅವಶ್ಯ ಉತ್ಪನ್ನಗಳ ಒತ್ಪಾದನೆ ಹೆಚ್ಚಿಸುವುದಾಗಿದೆ.
  • ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆಗಳ ಅನುಷ್ಠಾನದ ನಂತರ ಉತ್ಪಾದನಾ ಪದ್ಧತಿಗಳು ಹಾಗೂ ಕಿರು ಉದ್ಧಿಮೆ ಚಟುವಟಿಕೆಗಳನ್ನು ಕೈಗೊಳ್ಳಬೇಕು. ವಿಶ್ವ ವಿದ್ಯಾನಿಲಯಗಳು, ಸರ್ಕಾರದ ಇಲಾಖೆಗಳಲ್ಲಿ ಅಭಿವೃದ್ಧಿಪಡಿಸಿರುವ, ಸಂಶೋಧಿಸಿರುವ ಉತ್ತಮ ಹಾಗೂ ಅಳವಡಿಸಲು ಸೂಕ್ತವಾದ ತಾಂತ್ರಿಕತೆಗಳನ್ವಯ ವಿವಿಧ ಉತ್ಪಾದನಾ ಪದ್ದತಿಗಳು ಹಿಡುವಳಿದಾರರ ಕ್ಷೇತ್ರದಲ್ಲಿ ಕೈಗೊಳ್ಳಬೇಕು.

ಉತ್ಪಾದನಾ ಪದ್ಧತಿಗಳು

ಸ್ಥಳೀಯ ಹವಾಮಾನ, ಮಣ್ಣಿನ ವಿಧ, ಬೆಳೆ ಪದ್ಧತಿ, ಮಾರುಕಟ್ಟೆ ಸೌಲಭ್ಯ, ಬೇಡಿಕೆ ಇತ್ಯದಿ ಅಂಶಗಳನ್ನು ಪರಿಗಣಿಸಿ ಈ ಕೆಳಕಾಣಿಸಿರುವ ಉತ್ಪಾದನಾ ಪದ್ಧತಿಗಳನ್ನು ಯೋಜನೆಯಡಿ ಕೈಗೊಳ್ಳಬಹುದಾಗಿದೆ.

ಈ ಯೋಜನೆಯಡಿ ಕೈಗೊಳ್ಳಬಹುದಾದ ಮುಖ್ಯವಾದ ಉತ್ಪಾದನಾ ಪದ್ಧತಿಗಳನ್ನು ಈ ಮುಂದೆ ನೀಡಿದೆ.

  1. ಬೆಳೆ ಪ್ರಾತ್ಯಕ್ಷಿಕೆಗಳು
  2. ವೈಜ್ಞಾನಿಕ ಪದ್ಧತಿಯಲ್ಲಿ ಕಾಂಪೋಸ್ಟ್ ತಯಾರಿಕೆ
  3. ಕಿರು ನೆರಳು ಮನೆ ಸ್ಥಾಪನೆ ಹಾಗೂ ತರಕಾರಿ ಸಸಿಗಳ/ಅಲಂಕಾರಿಕ ಗಿಡಗಳ ಉತ್ಪಾದನೆ.
  4. ತೋಟಗಾರಿಕೆ/ಅರಣ್ಯ ಸಸಿಗಳ ನರ್ಸರಿ ಸ್ಥಾಪನೆ
  5. ಹೆಚ್ಚಿನ ಸಾಂದ್ರತೆಯ ಮಿಶ್ರ ಬೆಳೆ ತೋಟಗಳ ಸ್ಥಾಪನೆ (ಒಂದು ಎಕರೆಯಲ್ಲಿ ಮಾವು ಬೆಳೆ ಹಾಗೂ 0.2 ಹೆಕ್ಟೇರ್‍ನಲ್ಲಿ ಸೀಬೆ ಬೆಳೆ ಪ್ರಾತ್ಯಕ್ಷಿಕೆ)
  6. ಅಣಬೆ ಬೇಸಾಯ
  7. ಎರಡು ಹಸುಗಳಿಗೆ ಕೊಟ್ಟಿಗೆ ಮತ್ತು ಮೇವಿನ ಚರಣಿ ನಿರ್ಮಾಣ
  8. ಕುರಿ ಹಟ್ಟಿ ನಿರ್ಮಾಣ (ಕುರಿ/ಮೇಕೆ ಸ್ಟಾಲ್ ಫೀಡಿಂಗ್)
  9. ಹಿತ್ತಲು ಕೋಳಿ ಸಾಕಣೆ (ಗಿರಿರಾಜ, ಗಿರಿರಾಣಿ ಇತ್ಯಾದಿ ಸುಧಾರಿತ ತಳಿಗಳ ಸಾಕಣೆ)
  10. ರಸಮೇವು ತಯಾರಿಕೆ ಘಟಕ ಸ್ಥಾಪನೆ
  11. ಅಜೋಲ ಉತ್ಪಾದನೆ ಹಾಗೂ ಬಳಕೆ
  12. ಕೃಷಿ ಹೊಂಡ, ಕೆರೆ, ಕಟ್ಟೆಗಳಲ್ಲಿ ಮೀನು ಸಾಕಣೆ, ಇತ್ಯಾದಿ
  13. ಜೇನು ಸಾಕಣೆ
  14. ಸ್ಥಳೀಯ ಅರಿಸ್ಥಿತಿಗೆ ಸೂಕ್ತವಾಗಿರುವ ಇತರೆ ಚಟುವಟಿಕೆ.

ಮೇಲೆ ನಮೂದಿಸಿರುವ ಉತ್ಪಾದನಾ ಪದ್ಧತಿಗಳ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲು ಇಲಾಖೆಯಿಂದ ನೀಡುವ ಸುತ್ತೋಲೆ/ಮಾರ್ಗಸೂಚಿಯನ್ವಯ ಆಯಾ ಜಲಾನಯನಗಳ ಉಪಚರಿಸುವ ವಿಸ್ತೀರ್ಣಕ್ಕೆ ಅನುಸಾರವಾಗಿ ಅನುದಾನದ ಮೊತ್ತವನ್ನು ನಿರ್ಧರಿಸಬೇಕು.

ಬೆಳೆ ಪ್ರಾತ್ಯಕ್ಷಿಕೆಗಳು: ಜಲಾನಯನಗಳಲ್ಲಿ ಕೈಗೊಳ್ಳುವ ವಿವಿಧ ಉಪಚಾರ ಕ್ರಮಗಳ ಮುಖ್ಯ ಉದ್ಧೇಶವು ಆಹಾರ ಧಾನ್ಯ ಹಾಗೂ ಇತರೆ ಉತ್ಪನ್ನಗಳ ಉತ್ಪಾದಕತೆ ಹೆಚ್ಚಿಸುವುದಾಗಿದೆ. ಇವುಗಳಲ್ಲಿ ಬೆಳೆ ಉತ್ಪಾದನೆ ಹೆಚ್ಚಿಸುವುದು ಮುಖ್ಯ ಉದ್ಧೇಶವಾಗಿದೆ.

ಬೆಳೆ ಉತ್ಪಾದನೆ ಹೆಚ್ಚಿಸಬೇಕಾದರೆ ಮಣ್ಣಿನ ಸವಕಳಿಯನ್ನು ತಡೆಗಟ್ಟಿ/ಕಡಿಮೆ ಮಾಡಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳನ್ನು ಹಾಗೂ ಮಣ್ಣಿನ ತೇವಾಂಶ ಹೆಚ್ಚಿಸುವ ಕ್ರಮಗಳನ್ನು ಕೈಗೊಂಡು ಆ ಮೂಲಕ ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಅದಕ್ಕಾಗಿ ಈ ಕೆಳಕಾಣಿಸಿರುವ ಕ್ರಮಗಳನ್ನು ಅನುಸರಿಸಿ ಬೆಳೆ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಬೇಕು.

ಕೃಷಿ ಉತ್ಪಾದಕತೆ ಹೆಚ್ಚಿಸಲು ಪೂರಕ ಕ್ರಮಗಳು, ಮಣ್ಣು ಪರೀಕ್ಷೆ ಮತ್ತು ಮಳೆ ಮುನ್ಸೂಚನೆ

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate