ಮೇಲೆ (೧)ರಲ್ಲಿ ಓದಲಾದ ನಡವಳಿಯಲ್ಲಿ ದಿನಾಂಕ:೦೭.೦೫.೨೦೧೨ ಸನ್ಮಾನ್ಯ ಮುಖ್ಯಮಂತ್ರಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುವರ್ಣ ಭೂಮಿ ಅನುಷ್ಠಾನದ ಬಗ್ಗೆ ಚರ್ಚಿಸಿ, ಕಳೆದ ಸಾಲಿನ ಮಾರ್ಗಸೂಚಿ ಪ್ರಕಾರವೇ ಕಾರ್ಯಕ್ರಮ ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು.
ಮೇಲೆ (೨)ರಲ್ಲಿ ಓದಲಾದ ಕೃಷಿ ನಿರ್ದೇಶಕರ ಪತ್ರದಲ್ಲಿ ೨೦೧೨-೧೩ನೇ ಸಾಲಿನಲ್ಲಿಯೂ ಸಹ ಸುವರ್ಣಭೂಮಿ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ೨೦೧೧-೧೨ನೇ ಸಾಲಿನ ಮಾರ್ಗಸೂಚಿಗಳನ್ನೇ ಅನುಸರಿಸುವಂತೆ ತೀರ್ಮಾನಿಸಲಾಗಿದ್ದು, ವೇಳಾಪಟ್ಟಿಯನ್ನು ನೀಡಲಾಗಿದೆ.
ಕೃಷಿ ವಲಯಕ್ಕೆ ಸಂಬಂಧಿಸಿದಂತೆ ೨೦೧೨-೧೩ರಲ್ಲಿ “ಸುವರ್ಣ ಭೂಮಿ ಯೋಜನೆ”ಯನ್ನು ಈ ವರ್ಷವೂ ಮುಂದುವರೆಸಲು ನಿರ್ಧರಿಸಲಾಗಿದೆ. ಈ ವಿಸ್ತಾರವಾದ ಯೋಜನೆಯಡಿ ಪ್ರಸ್ತುತ ಸಾಲು ೨೦೧೨-೧೩ರಲ್ಲಿ ೬೪,೩೬೮ ಪರಿಶಿಷ್ಟ ಜಾತಿ ಹಾಗೂ ೨೬,೧೯೫ ಪರಿಶಿಷ್ಟ ವರ್ಗದ ರೈತ ಕುಟುಂಬಗಳು ಸೇರಿದಂತೆ ಒಟ್ಟು ೩,೯೭,೫೬೯ ರೈತ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಪಡಿಸಲಾಗುವುದು. ಯೋಜನೆಯ ಕಾರ್ಯ ನಿರ್ವಹಣಾ ವಿವರ ಈ ಕೆಳಕಂಡಂತಿದೆ.
ಕೃಷಿ: ೨,೪೫,೦೦೦ ರೈತ ಕುಟುಂಬಗಳು, ಹೆಚ್ಚು ಇಳುವರಿ ನೀಡುವ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯಗಳು, ಬಿ.ಟಿ. ಹತ್ತಿ ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದು.
ತೋಟಗಾರಿಕೆ: ೮೩,೬೪೯ ರೈತ ಕುಟುಂಬಗಳು (ಮಾವು, ದ್ರಾಕ್ಷಿ, ದಾಳಿಂಬೆ, ನಿಂಬೆ ಬಾಳೆ, ಅನಾನಸ್, ಸಪೋಟ, ಪಪಾಯ ಮತ್ತು ಇತರೆ) ಬೆಳೆಗಳನ್ನು ಬೆಳೆಯಲ್ಲು ಉತ್ತೇಜಿಸುವುದು.
ಜೈವಿಕ ಇಂಧನ: ೬೫,೦೦೦ ರೈತ ಕುಟುಂಬಗಳು (ಹೊಂಗೆ, ಸೀಮಾರೂಬ ಮತ್ತು ಇತರೆ) ಜೈವಿಕ ಇಂಧನ ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದು.
ಮೀನುಗಾರಿಕೆ: ೩,೯೨೦ ರೈತ ಕುಟುಂಬಗಳು, ಮೀನುಸಾಕಾಣಿಕೆ ಹೊಂಡಗಳನ್ನು ನಿರ್ಮಿಸಲು ಪೋತ್ಸಾಹಿಸುವುದು.
ಈ ಯೋಜನೆಯ ಗರಿಷ್ಠ ಪ್ರಯೋಜನವನ್ನು ರೈತರು ಪಡೆಯುವಂತೆ ಮಾಡಲು, ಯೋಜನೆಯ ಅನುಷ್ಠಾನವನ್ನು ಮುಂಗಾರು ಹಂಗಾಮಿನಿಂದ ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ. ಸನ್ಮಾನ್ಯ ಮುಖ್ಯ ಮಂತ್ರಿರವರ ಅಧ್ಯಕ್ಷತೆಯಲ್ಲಿ ದಿನಾಂಕ:೦೭.೦೫.೨೦೧೨ರಂದು ನಡೆದ ಸಭೆಯಲ್ಲಿ ಯೋಜನೆಯಡಿ ಆಯ್ಕೆಯಾದ ಪ್ರತಿ ಫಲಾನುಭವಿಯ ಬ್ಯಾಂಕ್ ಖಾತೆಗೆ ರೂ. ೧೦,೦೦೦/- ಸಹಾಯಧನವನ್ನು, ರೂ. ೫೦೦೦/- ರಂತೆ ಎರಡು ಕಂತುಗಳಲ್ಲಿ ಜಮಾ ಮಾಡಲು ನಿರ್ಧರಿಸಲಾಗಿರುತ್ತದೆ. ಪ್ರಾರಂಭಿಕ ಚಟುವಟಿಕೆಗಳಾದ ಸಸಿ, ಸುಧಾರಿತ ತಂತ್ರಜ್ಞಾನ, ಬಿತ್ತನೆ ಬೀಜ ಮತ್ತಿತರ ಪರಿಕರಗಳನ್ನು ರೈತರು ಖರೀದಿಸಲು ಅನುವಾಗಲು, ಮೊದಲನೇ ಕಂತಿನ ರೂ. ೫೦೦೦/-ವನ್ನು ಅನುದಾನವಾಗಿ ಒದಗಿಸಲಾಗುವುದು ಮತ್ತು ಎರಡನೆಯ ಕಂತಿನ ರೂ. ೫೦೦೦/- ಹಣವನ್ನು ಮೊದಲನೇ ಕಂತಿನ ಬಿಡುಗಡೆ ಸಮಯದಲ್ಲಿ ಸೂಚಿಸಲಾದ ಷರತ್ತುಗಳ ಅನುಷ್ಠಾನದ ಪರಿಶೀಲನೆಯ ನಂತರ ಒದಗಿಸಲಾಗುವುದು. ಒಂದು ವೇಳೆ ಬಿಡುಗಡೆ ಮಾಡಲಾದ ಮೊದಲನೇ ಕಂತಿನ ಹಣವನ್ನು ರೈತ ಸದ್ಬಳಕೆ ಮಾಡದೇ ಇದ್ದಲ್ಲಿ, ಅಂತಹ ರೈತರಿಗೆ ಇನ್ನು ಮುಂದೆ ವಿಪತ್ತು ಪರಿಹಾರ ನಿಧಿ ಹೊರತುಪಡಿಸಿ, ಉಳಿದ ಯಾವುದೇ ಕೃಷಿ ವಲಯದ ಯೋಜನೆಗಳಲ್ಲಿ (ಕೃಷಿ, ತೋಟಗಾರಿಕೆ, ಜೈವಿಕ ಇಂಧನ ಮತ್ತು ಮೀನುಗಾರಿಕೆ) ಮುಂದಿನ ಮೂರು ವರ್ಷ ಅವಧಿಯವರೆವಿಗೆ ಪ್ರಯೋಜನ ಪಡೆಯಲು ಅನರ್ಹಗೊಳಿಸಲಾಗುವುದು.
ಯೋಜನೆಯ ಅನುಷ್ಠಾನಕ್ಕೆ ೨೦೧೨-೧೩ರ ಆಯವ್ಯಯದಲ್ಲಿ ವಿವಿಧ ಇಲಾಖೆಗಳ ಆಯವ್ಯಯದ ಲೆಕ್ಕ ಶೀರ್ಷಿಕೆ ಅಡಿ ಒಟ್ಟು ರೂ. ೩೯೧.೪೨ ಕೋಟಿ ಅನುದಾನವನ್ನು ಒದಗಿಸಲಾಗಿದೆ. ಈ ಹಣವನ್ನು ಸಂಬಂಧಪಟ್ಟ ಇಲಾಖೆಯವರು ತಮಗೆ ಆಯವ್ಯಯದಲ್ಲಿ ನಿಗದಿಯಾಗಿರುವ ಗುರಿಯನ್ನು ನಿರ್ವಹಿಸಲು ಬೇಕಾದ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಬ್ಯಾಂಕಿಗೆ ಜಮಾ ಮಾಡಿಸುವ ಜವಾಬ್ದಾರಿ ನಿರ್ವಹಿಸಬೇಕಾಗಿರುತ್ತದೆ. ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳ ಗುರಿಯನ್ನು ಸಂಬಂಧಪಟ್ಟ ಕೃಷಿ, ತೋಟಗಾರಿಕೆ, ಜೈವಿಕ ಇಂಧನ ಮತ್ತು ಮೀನುಗಾರಿಕೆ ಚಟುವಟಿಕೆಗಳಲ್ಲಿ ನಿರ್ಧರಿಸಿ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ತಿಳಿಸುವುದು. ಫಲಾನುಭವಿಗಳನ್ನು ಆಯ್ಕೆ ಮಾಡಲು ಪ್ರತಿ ತಾಲ್ಲೂಕುಗಳನ್ನು ಘಟಕ ವೆಂದು ನಿರ್ಣಯಿಸಲಾಗಿದೆ. ಯೋಜನೆಯ ಮೇಲುಸ್ತುವಾರಿಗೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಪ್ರತಿ ಘಟಕದಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ,
ಸಂಬಂಧಿಸಿದ ಇಲಾಖೆ ಅಧಿಕಾರಿ, ಇತರರ ನೆರವಿನೊಂದಿಗೆ ಯೋಜನೆ ಅನುಷ್ಠಾನ ಮತ್ತು ಉಸ್ತುವಾರಿಗಾಗಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುವುದು. ಪ್ರಸ್ತಾಪಿಸಲಾದ ಸಮಿತಿಯು ಈ ಕೆಳಕಂಡಂತಿದೆ.
ಮೀನುಗಾರಿಕೆ ಇಲಾಖೆ
ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಸುಗಮವಾಗಿ ಅನುಷ್ಠಾನಗೊಳಿಸಲು ಪ್ರತಿ ತಾಲ್ಲೂಕು ಮಟ್ಟದಲ್ಲಿ ಇಂತಹದೇ ಆದ ಸಮಿತಿಯನ್ನು ಜಿಲ್ಲಾಧಿಕಾರಿಗಳು ರಚಿಸುವುದು ಮತ್ತು ಸಂಪೂರ್ಣ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಆಯಾ ಇಲಾಖೆಗಳ ಮೂಲಕ ಮಾಡಿಸಿ ಅದರ ಮೇಲ್ವಿಚಾರಣೆಗೆ ಕ್ರಮ ವಹಿಸತಕ್ಕದ್ದು.
ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಉಸ್ತುವಾರಿಗೆ ಲೇಖನ ಸಾಮಾಗ್ರಿ, ಪ್ರವಾಸ, ರೈತ ಅನುವುಗಾರರಿಗೆ ಗೌರವ ಧನ ಇತರೆ ವೆಚ್ಚಗಳನ್ನು ಪೂರೈಸಲು, ಒಟ್ಟು ಅನುದಾನದ ಶೇ. ೨ನ್ನು ಎಲ್ಲಾ ರೀತಿಯ ಸಾದಿಲ್ವಾರು ವೆಚ್ಚವನ್ನು ಭರಿಸಲು ಪ್ರತ್ಯೇಕವಾಗಿಡುವುದು. ಯೋಜನೆಯನ್ನು ಕಡಿಮೆ ಅವಧಿಯಲ್ಲಿ ಅನುಷ್ಠಾನ ಗೊಳಿಸಬೇಕಿರುವುದರಿಂದ, ಆದರೆ ವಿವಿಧ ಇಲಾಖೆಗಳಲ್ಲಿನ ಕ್ಷೇತ್ರ ಮಟ್ಟದ ಸಿಬ್ಬಂದಿಯವರ ಕೊರತೆ ಇರುವುದರಿಂದ, ಸಂಬಂಧಿಸಿದ ಇಲಾಖೆಗಳಿಗೆ, ಪ್ರತಿ ೩೦೦ ಫಲಾನುಭವಿಗಳಿಗೊಬ್ಬರಂತೆ ಸ್ಥಳೀಯ ರೈತ ಅನುವುಗಾರರನ್ನು ನೇಮಿಸಿಕೊಳ್ಳಲು ಅನುಮತಿಯನ್ನು ನೀಡಲಾಗಿದೆ. ಅನುವುಗಾರರ ವೆಚ್ಚವನ್ನು ಭರಿಸಲು ಪ್ರತ್ಯೇಕಿಸಿದ ಶೇ. ೨ ಸಾದಿಲ್ವಾರು ಅನುದಾನದಲ್ಲಿಯೇ ಬಳಸಿಕೊಳ್ಳಬಹುದಾಗಿದೆ.
ಕೃಷಿ ಚಟುವಟಿಕೆಯಡಿ, ಕಳೆದ ಸಾಲಿನಲ್ಲಿ ಫಲಾನುಭವಿಗಳಿಂದ ಬಂದಿದ್ದ ಅರ್ಜಿಗಳಲ್ಲಿ ಬಾಕಿ ಇರುವ ೧೩,೦೨,೦೨೩ (೨೫ ಜಿಲ್ಲೆ) ಅರ್ಜಿಗಳನ್ನೇ ಈ ಪ್ರಸ್ತುತ ಸಾಲಿಗೂ ಪರಿಗಣಿಸಿ ಲಾಟರಿ ಮುಖಾಂತರ ವರ್ಗವಾರು ಫಲಾನುಭವಿಗಳನ್ನು ಆಯ್ಕೆ ಮಾಡುವುದು. ಉಳಿದ ೫ ಜಿಲ್ಲೆಗಳಾದ ಬೆಂಗಳೂರು(ನ), ಉಡುಪಿ, ಕೊಡಗು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ವರ್ಷ ಗುರಿಗಿಂತ ಕಡಿಮೆ ಸಂಖ್ಯೆ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಕಳೆದ ಸಾಲಿನಂತೆಯೇ ಹೊಸದಾಗಿ ಅರ್ಜಿಗಳನ್ನು ಕರೆಯುವುದು. ನೂತನ ವೇಳಾಪಟ್ಟಿಯನ್ನು ಅನುಸರಿಸುವುದು. ಕಳೆದ ವರ್ಷದ ಅರ್ಜಿ ನಮೂನೆಯನ್ನೇ ಪರಿಗಣಿಸುವುದು. ನಿಗದಿತ ಗುರಿಗೆ ಮೀರಿ ಯಾವುದೇ ಇಲಾಖೆಯಲ್ಲಿ ಪ್ರತಿ ವರ್ಗ/ ಜಾತಿಯ ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದಲ್ಲಿ, ತಾಲ್ಲೂಕು ಮಟ್ಟದಲ್ಲಿ ’ಲಾಟರಿ’ಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವುದು. ತೋಟಗಾರಿಕೆ, ಜೈವಿಕ ಇಂಧನ ಮತ್ತು ಮೀನುಗಾರಿಕೆ ಚಟುವಟಿಕೆಯಲ್ಲಿ ಕಳೆದ ಸಾಲಿನಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲದ ಪ್ರಯುಕ್ತ ಹೊಸದಾಗಿ ಅರ್ಜಿಯನ್ನು ಸ್ವೀಕರಿಸಿ ವೇಳಾಪಟ್ಟಿ ಪ್ರಕಾರ ಫಲಾನುಭವಿಗಳ ಆಯ್ಕೆ ಮಾಡುವುದು.
– ೪ –
ಜೈವಿಕ ಇಂಧನಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ಜಾರಿ ಮಾಡುವ ಮತ್ತು ಉಸ್ತುವಾರಿ ಮಾಡುವುದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜವಾಬ್ದಾರಿಯಾಗಿರುತ್ತದೆ.
ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿ ಪರಿವೀಕ್ಷಣೆ, ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಮೌಲ್ಯಮಾಪನ ಮಾಡಲು, ಸರ್ಕಾರಿ/ಸರ್ಕಾರೇತರ ಸಂಸ್ಥೆಗಳನ್ನು ತೆಗೆದುಕೊಳ್ಳುವ ಬಗ್ಗೆ ಆಯವ್ಯಯ ಭಾಷಣದಲ್ಲಿ ಮಂಡಿಸಿರುವಂತೆ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಇದಕ್ಕಾಗಿ ಅನುದಾನವನ್ನು ಶೇಕಡಾ ೨ರ ಸಾದಿಲ್ವಾರು ವೆಚ್ಚದಲ್ಲಿ ವಿನಯೋಗಿಸಿಕೊಳ್ಳಲಾಗುವುದು.
ಆದೇಶ
೧. ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ೨೦೧೨-೧೩ನೇ ಸಾಲಿನಲ್ಲಿ ಸುವರ್ಣ ಭೂಮಿ ಯೋಜನೆಯನ್ನು ಲಗತ್ತಿಸಿರುವ ಮಾರ್ಗಸೂಚಿಯಂತೆ ೨೦೧೨-೧೩ನೇ ಸಾಲಿನಲ್ಲಿ ಈ ಕೆಳಕಂಡ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಜಾರಿಗೊಳಿಸತಕ್ಕದ್ದು:
(i) |
Suvarna Bhoomi -2401-00-800-1-66
(Agriculture Department) |
Rs.250.00 Crore |
(iii) |
Bioenergy – 2401-00-800-1-46 |
Rs. 50.00 Crore |
(iv) |
Horticulture – 2401-00-800-2-33 |
Rs. 87.50 Crore |
(v) |
Fisheries – 2405-00-800-0-23 |
Rs. 3.92 Crore |
Total |
Rs. 391.42Crore |
೨. (ಅ) ಕಡಿಮೆ ಆದಾಯ ನೀಡುವ ಬೆಳೆಗಳ ಬದಲಿಗೆ ಹೆಚ್ಚು ಇಳುವರಿ ಮತ್ತು ಆದಾಯವನ್ನು ನೀಡುವ ಬೆಳೆಗಳನ್ನು ಬೆಳೆಯುವಂತೆ ಮತ್ತು ಚಟುವಟಿಕೆಗಳನ್ನು ಕೈಗೊಳ್ಳುವಂತೆ ಒಟ್ಟು ೩,೯೭,೫೬೯ ರೈತ ಕುಟುಂಬಗಳನ್ನು ಉತ್ತೇಜಿಸಿ, ಉತ್ಪಾದಕತೆ ಹೆಚ್ಚಿಸುವಿಕೆ ಹಾಗೂ ಸುಧಾರಿತ ಪದ್ಧತಿಗಳನ್ನು ಅಳವಡಿಸುವ ಮೂಲಕ ಅವರ ಜೀವನ ಮಟ್ಟವನ್ನು ಈ ಕೆಳಕಂಡ ಕ್ಷೇತ್ರಗಳಡಿಯಲ್ಲಿ ಸುಧಾರಿಸುವುದು.
ಕೃಷಿ: ೨,೪೫,೦೦೦ ರೈತ ಕುಟುಂಬಗಳು, ಹೆಚ್ಚು ಇಳುವರಿ ನೀಡುವ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯಗಳು, ಬಿ.ಟಿ. ಹತ್ತಿ ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದು.
ತೋಟಗಾರಿಕೆ: ೮೩,೬೪೯ ರೈತ ಕುಟುಂಬಗಳು (ಮಾವು, ದ್ರಾಕ್ಷಿ, ದಾಳಿಂಬೆ, ನಿಂಬೆ ಬಾಳೆ, ಅನಾನಸ್, ಸಪೋಟ, ಪಪಾಯ ಮತ್ತು ಇತರೆ) ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದು.
ಜೈವಿಕ ಇಂಧನ: ೬೫,೦೦೦ ರೈತ ಕುಟುಂಬಗಳು (ಹೊಂಗೆ, ಸೀಮಾರೂಬ ಮತ್ತು ಇತರೆ) ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದು.
ಮೀನುಗಾರಿಕೆ: ೩,೯೨೦ ರೈತ ಕುಟುಂಬಗಳು, ಮೀನು ಸಾಕಾಣಿಕೆ ಹೊಂಡಗಳನ್ನು ನಿರ್ಮಿಸಲು ಪೋತ್ಸಾಹಿಸುವುದು.
(ಆ) ಪ್ರತಿ ರೈತನಿಗೆ ೫ ಎಕರೆಗಿಂತ ಕಡಿಮೆ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ
ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಪ್ರತಿ ಕುಟುಂಬಕ್ಕೆ ಗರಿಷ್ಠ ೨
– ೫ –
ಎಕರೆಗೆ ರೂ.೧೦,೦೦೦/- (ಎರಡು ಕಂತುಗಳಲ್ಲಿ ಪ್ರತಿ ಕಂತಿಗೆ ೫,೦೦೦/- ರೂ.ನಂತೆ) ಬ್ಯಾಂಕ್ ಮೂಲಕ ಸಹಾಯಧನವನ್ನು ನೀಡಲಾಗುವುದು. ಈ ಪ್ರಯೋಜನವನ್ನು ಪ್ರತಿ ರೈತನಿಗೆ ೨ ಎಕರೆಗೆ ಮಾತ್ರ ಸೀಮಿತಗೊಳಿಸಲಾಗುವುದು. ಒಂದು ವೇಳೆ ಹಿಡುವಳಿಯ ಗಾತ್ರ ೨ ಎಕರೆಗಿಂತ ಕಡಿಮೆ ಇದ್ದಲ್ಲಿ, ಹಿಡುವಳಿಗೆ ಅನುಗುಣವಾಗಿ ಸಹಾಯಧನ (ಗ್ರಾಂಟ್) ನೀಡಲಾಗುವುದು.
(ಇ) ಈ ಯೋಜನೆಯು, ಪ್ರಮುಖವಾಗಿ ಖುಷ್ಕಿ ಜಮೀನು ಹಿಡುವಳಿ ರೈತರಿಗೆ ಸೀಮಿತವಾಗಿದ್ದು, ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ವಯಿಸುವುದಿಲ್ಲ.
೩. ಈ ಯೋಜನೆಯ ಗರಿಷ್ಠ ಪ್ರಯೋಜನವನ್ನು ರೈತರು ಪಡೆಯುವಂತೆ ಮಾಡಲು, ಯೋಜನೆಯ ಅನುಷ್ಠಾನವನ್ನು ಮುಂಬರುವ ಮುಂಗಾರು ಹಂಗಾಮಿನಿಂದ ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ. ಸನ್ಮಾನ್ಯ ಮುಖ್ಯಮಂತ್ರಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿನಾಂಕ:೦೭.೦೫.೨೦೧೨ ಯೋಜನೆಯಡಿ ಆಯ್ಕೆಯಾದ ಪ್ರತಿ ಫಲಾನುಭವಿಯ ಬ್ಯಾಂಕ್ ಖಾತೆಗೆ ರೂ. ೧೦,೦೦೦/- ಸಹಾಯಧನವನ್ನು, ರೂ. ೫೦೦೦/- ರಂತೆ ಎರಡು ಕಂತುಗಳಲ್ಲಿ ಜಮಾ ಮಾಡಲು ನಿರ್ಧರಿಸಲಾಯಿತು. ಪ್ರಾರಂಭಿಕ ಚಟುವಟಿಕೆಗಳಾದ ಸಸಿ, ಸುಧಾರಿತ ತಂತ್ರಜ್ಞಾನ, ಬಿತ್ತನೆ ಬೀಜ ಮತ್ತಿತರ ಪರಿಕರಗಳನ್ನು ರೈತರು ಖರೀದಿಸಲು ಅನುವಾಗಲು, ಮೊದಲನೇ ಕಂತಿನ ರೂ. ೫೦೦೦/-ವನ್ನು ಅನುದಾನವಾಗಿ ಒದಗಿಸಲಾಗುವುದು ಮತ್ತು ಎರಡನೆಯ ಕಂತಿನ ರೂ. ೫೦೦೦/- ಹಣವನ್ನು ಮೊದಲನೇ ಕಂತಿನ ಬಿಡುಗಡೆ ಸಮಯದಲ್ಲಿ ಸೂಚಿಸಲಾದ ಷರತ್ತುಗಳ ಅನುಷ್ಠಾನದ ಪರಿಶೀಲನೆಯ ನಂತರ ಒದಗಿಸಲಾಗುವುದು. ಒಂದು ವೇಳೆ ಬಿಡುಗಡೆ ಮಾಡಲಾದ ಮೊದಲನೇ ಕಂತಿನ ಹಣವನ್ನು ರೈತ ಸದ್ಬಳಕೆ ಮಾಡದೇ ಇದ್ದಲ್ಲಿ, ಅಂತಹ ರೈತರಿಗೆ ಇನ್ನು ಮುಂದೆ ವಿಪತ್ತು ಪರಿಹಾರ ನಿಧಿ ಹೊರತುಪಡಿಸಿ, ಉಳಿದ ಯಾವುದೇ ಕೃಷಿ ವಲಯದ ಯೋಜನೆಗಳಲ್ಲಿ (ಕೃಷಿ, ತೋಟಗಾರಿಕೆ, ಜೈವಿಕ ಇಂಧನ ಮತ್ತು ಮೀನುಗಾರಿಕೆ) ಮುಂದಿನ ಮೂರು ವರ್ಷ ಅವಧಿಯವರೆವಿಗೆ ಪ್ರಯೋಜನ ಪಡೆಯಲು ಅನರ್ಹಗೊಳಿಸಲಾಗುವುದು.
೪. ಯೋಜನೆಯ ಅನುಷ್ಠಾನಕ್ಕೆ ೨೦೧೨-೧೩ರ ಆಯವ್ಯಯದಲ್ಲಿ ವಿವಿಧ ಇಲಾಖೆಗಳ ಆಯವ್ಯಯದ ಲೆಕ್ಕ ಶೀರ್ಷಿಕೆ ಅಡಿ ಒಟ್ಟು ರೂ. ೩೯೧.೪೨ ಕೋಟಿ ಅನುದಾನವನ್ನು ಒದಗಿಸಲಾಗಿದೆ. ಈ ಹಣವನ್ನು ಸಂಬಂಧಪಟ್ಟ ಇಲಾಖೆಯವರು ತಮಗೆ ಆಯವ್ಯಯದಲ್ಲಿ ನಿಗದಿಯಾಗಿರುವ ಗುರಿಯನ್ನು ನಿರ್ವಹಿಸಲು ಬೇಕಾದ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಬ್ಯಾಂಕಿಗೆ ಜಮಾ ಮಾಡಿಸುವ ಜವಾಬ್ದಾರಿ ನಿರ್ವಹಿಸಬೇಕಾಗಿರುತ್ತದೆ. ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳ ಗುರಿಯನ್ನು ಸಂಬಂಧಪಟ್ಟ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳು ನಿರ್ಧರಿಸಿ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ತಿಳಿಸುವುದು. ಫಲಾನುಭವಿಗಳನ್ನು ಆಯ್ಕೆ ಮಾಡಲು ಪ್ರತಿ ತಾಲ್ಲೂಕುಗಳನ್ನು ಘಟಕ ವೆಂದು ನಿರ್ಣಯಿಸಲಾಗಿದೆ. ಯೋಜನೆಯ ಮೇಲುಸ್ತುವಾರಿಗೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಪ್ರತಿ ಘಟಕದಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ, ಸಂಬಂಧಿಸಿದ ಇಲಾಖೆ ಅಧಿಕಾರಿ, ಇತರರ ನೆರವಿನೊಂದಿಗೆ ಯೋಜನೆ ಅನುಷ್ಠಾನ ಮತ್ತು ಉಸ್ತುವಾರಿಗಾಗಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ ಸಮಿತಿಯನ್ನು ರಚಿಸಲಾಗಿದೆ:-
(viii) ಜಿಲ್ಲಾಧಿಕಾರಿ . . . . . . . .. . . . . . ಅಧ್ಯಕ್ಷರು
(ix) ಮುಖ್ಯ ಕಾರ್ಯನಿರ್ವಹಣಾಧಿಕಾರಿ . . . . . ಸಹ ಅಧ್ಯಕ್ಷರು
– ೬ –
(x) ಜಂಟಿ ಕೃಷಿ ನಿರ್ದೇಶಕರು . . . . . . . . . . ಸದಸ್ಯರು
(xi) ತೋಟಗಾರಿಕೆ ಉಪ ನಿರ್ದೇಶಕರು . . . . . . ಸದಸ್ಯರು
(xii) ಸಹಾಯಕ / ಉಪ ನಿರ್ದೇಶಕರು . . . . . . ಸದಸ್ಯರು
ಮೀನುಗಾರಿಕೆ ಇಲಾಖೆ
(xiii) e – ಆಡಳಿತದ ಪ್ರತಿನಿಧಿಗಳು . . . . . . . . . ಸದಸ್ಯರು
(xiv) ಅಗತ್ಯತೆಯಂತೆ ಇತರೆ ಅಧಿಕಾರಿ/ಅಧಿಕಾರಿಗಳು
೫. ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಸುಗಮವಾಗಿ ಅನುಷ್ಠಾನಗೊಳಿಸಲು ಪ್ರತಿ ತಾಲ್ಲೂಕು ಮಟ್ಟದಲ್ಲಿ ಇಂತಹದೇ ಆದ ಸಮಿತಿಯನ್ನು ಜಿಲ್ಲಾಧಿಕಾರಿಗಳು ರಚಿಸುವುದು ಮತ್ತು ಸಂಪೂರ್ಣ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಆಯಾ ಇಲಾಖೆಗಳ ಮೂಲಕ ಮಾಡಿಸಿ, ಅದರ ಮೇಲ್ವಿಚಾರಣೆಗೆ ಕ್ರಮ ವಹಿಸತಕ್ಕದ್ದು.
೬. ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಉಸ್ತುವಾರಿಗೆ ಲೇಖನ ಸಾಮಾಗ್ರಿ, ಪ್ರವಾಸ, ರೈತ ಅನುವುಗಾರರಿಗೆ ಗೌರವ ಧನ ಇತರೆ ವೆಚ್ಚಗಳನ್ನು ಪೂರೈಸಲು, ಒಟ್ಟು ಅನುದಾನದ ಶೇ. ೨ನ್ನು ಎಲ್ಲಾ ರೀತಿಯ ಸಾದಿಲ್ವಾರು ವೆಚ್ಚವನ್ನು ಭರಿಸಲು ಪ್ರತ್ಯೇಕವಾಗಿಡುವುದು. ಯೋಜನೆಯನ್ನು ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸಬೇಕಿರುವುದರಿಂದ, ಆದರೆ ವಿವಿಧ ಇಲಾಖೆಗಳಲ್ಲಿನ ಕ್ಷೇತ್ರ ಮಟ್ಟದ ಸಿಬ್ಬಂದಿಯವರ ಕೊರತೆ ಇರುವುದರಿಂದ, ಸಂಬಂಧಿಸಿದ ಇಲಾಖೆಗಳಿಗೆ, ಪ್ರತಿ ೩೦೦ ಫಲಾನುಭವಿಗಳಿಗೊಬ್ಬರಂತೆ ಸ್ಥಳೀಯ ರೈತ ಅನುವುಗಾರರನ್ನು ನೇಮಿಸಿಕೊಳ್ಳಲು ಅನುಮತಿಯನ್ನು ನೀಡಲಾಗಿದೆ. ಅನುವುಗಾರರ ವೆಚ್ಚವನ್ನು ಭರಿಸಲು ಪ್ರತ್ಯೇಕಿಸಿದ ಶೇ. ೨ ಸಾದಿಲ್ವಾರು ಅನುದಾನದಲ್ಲಿಯೇ ಬಳಸಿಕೊಳ್ಳಬಹುದಾಗಿದೆ.
೭. ಕೃಷಿ ಚಟುವಟಿಕೆಯಡಿ ಕಳೆದ ಸಾಲಿನಲ್ಲಿ ಬಾಕಿ ಇರುವ ೧೩,೦೨,೦೨೩ (೨೫ ಜಿಲ್ಲೆ) ಅರ್ಜಿಗಳನ್ನೇ ಈ ಪ್ರಸಕ್ತ ಸಾಲಿಗೂ ಪರಿಗಣಿಸಿದ ಲಾಟರಿ ಮುಖಾಂತರ ವರ್ಗವಾರು ಫಲಾನುಭವಿಗಳನ್ನು ಆಯ್ಕೆ ಮಾಡುವುದು. ಉಳಿದ ೫ ಜಿಲ್ಲೆಗಳಾದ ಬೆಂಗಳೂರು(ನ), ಉಡುಪಿ, ಕೊಡಗು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ವರ್ಷ ಗುರಿಗಿಂತ ಕಡಿಮೆ ಸಂಖ್ಯೆ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಕಳೆದ ಸಾಲಿನಂತೆಯೇ ಹೊಸದಾಗಿ ಅರ್ಜಿಗಳನ್ನು ಕರೆಯುವುದು. ನೂತನ ವೇಳಾಪಟ್ಟಿಯನ್ನು ಅನುಸರಿಸುವುದು. ಕಳೆದ ವರ್ಷದ ಅರ್ಜಿ ನಮೂನೆಯನ್ನೇ ಪರಿಗಣಿಸುವುದು. ಮೂರು ಭಾಗದಲ್ಲಿರುವ ಒಂದು ಅರ್ಜಿ ನಮೂನೆಯನ್ನು ತಯಾರಿಸಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ಸಮಿತಿಯ ಅನುಮೋದನೆಯನ್ನು ಪಡೆದು ಎಲ್ಲಾ ಇಲಾಖೆಗಳಿಗೆ ಕಳುಹಿಸಿಕೊಡಲಾಗುವುದು. ನಿಗದಿತ ಗುರಿಗೆ ಮೀರಿ ಯಾವುದೇ ಇಲಾಖೆಯಲ್ಲಿ ಪ್ರತಿ ವರ್ಗ/ ಜಾತಿಯ ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದಲ್ಲಿ, ತಾಲ್ಲೂಕು ಮಟ್ಟದಲ್ಲಿ ’ಲಾಟರಿ’ಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವುದು. ತೋಟಗಾರಿಕೆ, ಜೈವಿಕ ಇಂಧನ ಮತ್ತು ಮೀನುಗಾರಿಕೆ ಚಟುವಟಿಕೆಯಲ್ಲಿ ಕಳೆದ ಸಾಲಿನಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲದ ಪ್ರಯುಕ್ತ ಹೊಸದಾಗಿ ಅರ್ಜಿಯನ್ನು ಸ್ವೀಕರಿಸಿ ವೇಳಾಪಟ್ಟಿ ಪ್ರಕಾರ ಫಲಾನುಭವಿಗಳ ಆಯ್ಕೆ ಮಾಡುವುದು.
೮. ಜೈವಿಕ ಇಂಧನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನೆಯನ್ನು ಜಾರಿ ಮಾಡುವ ಮತ್ತು ಉಸ್ತುವಾರಿ ಮಾಡುವುದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜವಾಬ್ದಾರಿಯಾಗಿರುತ್ತದೆ.
– ೭ –
೯. ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿ ಪರಿವೀಕ್ಷಣೆ, ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಮೌಲ್ಯಮಾಪನ ಮಾಡಲು, ಸರ್ಕಾರಿ/ಸರ್ಕಾರೇತರ ಸಂಸ್ಥೆಗಳನ್ನು ತೆಗೆದುಕೊಳ್ಳುವ ಬಗ್ಗೆ ಆಯವ್ಯಯ ಭಾಷಣದಲ್ಲಿ ಮಂಡಿಸಿರುವಂತೆ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಇದಕ್ಕಾಗಿ ಅನುದಾನವನ್ನು ಶೇಕಡಾ ೨ರ ಸಾದಿಲ್ವಾರು ವೆಚ್ಚದಲ್ಲಿ ವಿನಯೋಗಿಸಿಕೊಳ್ಳಲಾಗುವುದು.
೧೦. ಈ ಯೋಜನೆಯ ಅನುಷ್ಠಾನದಲ್ಲಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳೆನಾದರೂ ಉದ್ಭವಿಸಿದ್ದಲ್ಲಿ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸಬಹುದಾದ ಮೇಲುಸ್ತುವಾರಿ ಸಮಿತಿಯು ಅಂತಹ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಕುರಿತು ಸೂಕ್ತ ಪರಿಹಾರಗಳನ್ನು ಕಂಡು ಹಿಡಿದು, ಅವುಗಳಿಗೆ ಮಾನ್ಯ ಮುಖ್ಯಮಂತ್ರಿಯವರಿಂದ ಅನುಮೋದನೆ ಪಡೆದು ಅನುಷ್ಠಾನ ಗೊಳಿಸತಕ್ಕದ್ದು.
೧೧. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಈಆ ೧೧೧ ಇxಠಿ.-೪/೨೦೧೧ ದಿನಾಂಕ ೨೭.೦೬.೨೦೧೨ ಹಾಗೂ ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ: Pಆ/೦೧/Pಈಔ/೨೦೧೧, ದಿನಾಂಕ ೦೮.೦೬.೨೦೧೨ ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಬಿ.ಶ್ರೀರಾಮ್)
ಸರ್ಕಾರದ ಅಧೀನ ಕಾರ್ಯದರ್ಶಿ
ಕೃಷಿ ಇಲಾಖೆ.
ಇವರಿಗೆ:
ಸಂಕಲನಕಾರರು, ಕರ್ನಾಟಕ ರಾಜ್ಯ ವಾರಪತ್ರಿಕೆ, ಬೆಂಗಳೂರು-ಮುಂದಿನ ಗೆಜೆಟ್‌ನಲ್ಲಿ ಪ್ರಕಟಿಸಿ
೧೦೦೦ ಪ್ರತಿಯನ್ನು ಈ ಇಲಾಖೆಗೆ ಕಳುಹಿಸಿಕೊಡುವಂತೆ ಕೋರಿದೆ.
ಪ್ರತಿ:
೧. ಮಹಾಲೇಖಪಾಲರು(ಎ ಮತ್ತು ಎ), ಕರ್ನಾಟಕ, ಬೆಂಗಳೂರು.
೨. ಮಾನ್ಯ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು.
೩. ಮಾನ್ಯ ಕೃಷಿ ಸಚಿವರ ಆಪ್ತ ಕಾರ್ಯದರ್ಶಿಗಳು.
೪. ಮಾನ್ಯ ರೇಷ್ಮೆ ಸಚಿವರ ಆಪ್ತ ಕಾರ್ಯದರ್ಶಿಗಳು.
೫. ಮಾನ್ಯ ಪಶುಸಂಗೋಪನೆ ಸಚಿವರ ಆಪ್ತ ಕಾರ್ಯದರ್ಶಿಗಳು.
೬. ಮಾನ್ಯ ಮೀನುಗಾರಿಕೆ ಸಚಿವರ ಆಪ್ತ ಕಾರ್ಯದರ್ಶಿಗಳು.
೭. ಮಾನ್ಯ ತೋಟಗಾರಿಕೆ ಸಚಿವರ ಆಪ್ತ ಕಾರ್ಯದರ್ಶಿಗಳು.
೮. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು.
೯. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು.
೧೦. ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು.
೧೧. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ.
೧೨. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಯೋಜನಾ ಇಲಾಖೆ.
೧೩. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.
– ೮ –
೧೪. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆ.
೧೫. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಇಲಾಖೆ.
೧೬. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಹಕಾರ ಇಲಾಖೆ.
೧೭. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.
೧೮. ಆಯುಕ್ತರು/ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು.
೧೯. ಆಯುಕ್ತರು/ನಿರ್ದೇಶಕರು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು.
೨೦. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ನಂ.೧೧೬, ರೈಲ್ವೆ ಸಮಾನಾಂತರ ರಸ್ತ, ಕುಮಾರ ಪಾರ್ಕ್ ಪಶ್ವಿಮ, ಶೇಷಾದ್ರಿಪುರಂ, ಬೆಂಗಳೂರು-೨೦.
೨೧. ನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಬೆಂಗಳೂರು.
೨೨. ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಬೆಂಗಳೂರು.
೨೩. ನಿರ್ದೇಶಕರು, ತೋಟಗಾರಿಕೆ ಇಲಾಖೆ, ಬೆಂಗಳೂರು
೨೪. ಎಲ್ಲಾ ಜಿಲ್ಲಾಧಿಕಾರಿಗಳು(ಕೃಷಿ ಆಯುಕ್ತರ ಮುಖಾಂತರ).
೨೫. ಎಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಕೃಷಿ ಆಯುಕ್ತರ ಮುಖಾಂತರ).
೨೬. ಎಲ್ಲಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, (ಕೃಷಿ ಆಯುಕ್ತರ ಮುಖಾಂತರ).
೨೭. ಸಚಿವ ಸಂಪುಟ ಶಾಖೆ ಕಾರ್ಯಸೂಚಿ ಸಂಖ್ಯೆ:೧೪, ದಿನಾಂಕ: ೦೭.೦೩.೨೦೧೧.
೨೮. ಶಾಖೆಯ ರಕ್ಷಾ ಕಡತ/ಹೆಚ್ಚುವರಿ ಪ್ರತಿಗಳು.
ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ತಮ್ಮ ೨೦೧೨-೧೩ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ೩,೯೭,೫೬೯ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳ ಪುನರುಜ್ಜೀವನಕ್ಕೆ “ಸುವರ್ಣಭೂಮಿ ಯೋಜನೆ” ಯನ್ನು ಪ್ರಸಕ್ತ ಸಾಲಿಗೂ ಮುಂದುವರೆಸಲೂ ಘೋಷಿಸಿದ್ದಾರೆ. ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿಯ ೬೪,೩೬೮ ಹಾಗೂ ಪರಿಶಿಷ್ಟ ಪಂಗಡಗಳ ೨೬,೧೯೫ ರೈತ ಕುಟುಂಬಗಳು ಸೇರಿವೆ. ಈ ಯೋಜನೆಯಲ್ಲಿ ಖುಷ್ಕಿ ಜಮೀನನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ರೂ. ೧೦,೦೦೦/- ಗಳ ಪ್ರೋತ್ಸಾಹ ಧನವನ್ನು ನೇರವಾಗಿ ಬ್ಯಾಂಕುಗಳು ಹಾಗೂ ಸಹಕಾರ ಸಂಸ್ಥೆಗಳ ಮೂಲಕ ಎರಡು ಕಂತುಗಳಲ್ಲಿ ನೀಡಲಾಗುವುದು. ಈ ಪ್ರೋತ್ಸಾಹಧನವನ್ನು ಕಡಿಮೆ ಮೌಲ್ಯದ ಬೆಳೆ/ಚಟುವಟಿಕೆಗಳಿಂದ ಹೆಚ್ಚು ಮೌಲ್ಯದ ಬೆಳೆ/ಚಟುವಟಿಕೆಗಳಾದ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳು, ಜೈವಿಕ ಇಂಧನ ಬೆಳೆಗಳು, ತೋಟಗಾರಿಕೆ ಬೆಳೆಗಳು ಮತ್ತು ಸವಳು ಮತ್ತು ಜವಳು ಪ್ರದೇಶಗಳಲ್ಲಿ ಮೀನುಗಾರಿಕೆ ಕೈಗೊಳ್ಳುವ ರೈತರಿಗೂ ಸಹ ಈ ಸವಲತ್ತನ್ನು ನೀಡಲಾಗುವುದು.
ಯೋಜನೆಯ ಮಾರ್ಗಸೂಚಿಗಳು
೧. ಅರ್ಹತೆ ಷರತ್ತುಗಳು:
೫ ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ತೆರೆದ ಬಾವಿ, ಬೋರ್‌ವೆಲ್, ಕೆರೆ ಮುಂತಾದ ನೀರಾವರಿ ಮೂಲಗಳನ್ನು ಹೊಂದಿರುವ ರೈತರು ಈ ಯೋಜನೆಯ ಉಪಯೋಗ ಪಡೆಯಲು ಅರ್ಹರಾಗಿರುತ್ತಾರೆ. ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
ಅರ್ಜಿದಾರರು ಜಮೀನಿನ ಖಾತೆಯನ್ನು ತಮ್ಮ ಹೆಸರಿನಲ್ಲಿ ಹೊಂದಿರಬೇಕು.
ಜಂಟಿ ಖಾತೆಯನ್ನು ಹೊಂದಿದ ಅರ್ಜಿದಾರಲ್ಲಿ ಒಬ್ಬ ಮಾತ್ರ ಈ ಪ್ರಯೋಜನವನ್ನು ಪಡೆಯಬಹುದು ಹಾಗೂ ಈ ರೈತ ಇತರೆ ಹಿಸ್ಸೆದಾರರಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯತಕ್ಕದ್ದು.
೨. ಪ್ರೋತ್ಸಾಹಧನದ ಗರಿಷ್ಟ ಮೊತ್ತ:
ಪ್ರತಿ ರೈತನಿಗೆ ಪ್ರೋತ್ಸಾಹಧನವಾಗಿ ಒಟ್ಟು ರೂ. ೧೦,೦೦೦/- ಗಳನ್ನು ಎರಡು ಸಮಾನ ಕಂತುಗಳಲ್ಲಿ ಗರಿಷ್ಠ ೨ ಎಕರೆಗೆ ಮೀರದಂತೆ ನೀಡಲಾಗುವುದು. ಹಿಡುವಳಿ ಗಾತ್ರ ೨ ಎಕರೆಗಿಂತ ಕಡಿಮೆ ಇದ್ದಲ್ಲಿ ಹಿಡುವಳಿಗೆ ಅನುಗುಣವಾಗಿ ಸಹಾಯಧನವನ್ನು ನೀಡಲಾಗುವುದು.
೩. ಸಾದಿಲ್ವಾರು ನಿಧಿ ಮತ್ತು ರೈತ ಅನುವುಗಾರರ ನೇಮಕ:
ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಉಸ್ತುವಾರಿಗಾಗಿ ಬೇಕಾಗುವ ಲೇಖನ ಸಾಮಗ್ರಿಗಳು, ಪ್ರವಾಸದ ಖರ್ಚು, ಗೌರವಧನ, ರೈತ ಅನುವುಗಾರರಿಗೆ ಪಾವತಿ ಮತ್ತು ಸರ್ಕಾರಿ/ಸರ್ಕಾರೇತರ ಬಾಹ್ಯ ಸಂಸ್ಥೆಗಳಿಂದ ಮೌಲ್ಯಮಾಪನ ಮಾಡಿಸುವುದು ಮುಂತಾದ ಖರ್ಚುಗಳನ್ನು ಭರಿಸಲು ಇಲಾಖೆಗಳಿಗೆ ನಿಗದಿಪಡಿಸಿದ ಒಟ್ಟು ಮೊತ್ತದ ಶೇ. ೨ ರಷ್ಟು ಅನುದಾನವನ್ನು ಮೀಸಲಿಡಲಾಗಿದೆ.
೪. ರೈತ ಅನುವುಗಾರರ ನೇಮಕಾತಿ, ಪಾತ್ರ ಹಾಗೂ ಗೌರವಧನ ಪಾವತಿ:
ಕೃಷಿ ಹಾಗೂ ಇತರೆ ಇಲಾಖೆಗಳಲ್ಲಿ ಕ್ಷೇತ್ರ ಸಿಬ್ಬಂದಿಗಳ ಕೊರತೆಯಿದ್ದು, ಈ ಯೋಜನೆಯನ್ನು ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸಬೇಕಿರುವುದರಿಂದ ೩೦೦ ರೈತರಿಗೆ ಒಬ್ಬರಂತೆ ರೈತ ಅನುವುಗಾರರನ್ನು ನೇಮಿಸಲಾಗುವುದು.
ಯೋಜನೆಯ ಪ್ರಚಾರ, ಮಾಹಿತಿ ಸಂಗ್ರಹಣೆ, ಫಲಾನುಭವಿಗಳ ಆಯ್ಕೆ, ಕ್ಷೇತ್ರ ತಪಾಸಣೆ, ಉಸ್ತುವಾರಿ, ವರದಿ ನೀಡುವುದು ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ರೈತ ಅನುವುಗಾರರನ್ನು ಬಳಸಿಕೊಳ್ಳಲಾಗುವುದು.
ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ರೈತ ಅನುವುಗಾರರು ಅಧಿಕಾರಿಗಳಿಗೆ ಸಹಕಾರ ನೀಡುವರು.
ರೈತ ಅನುವುಗಾರರನ್ನು ಹೋಬಳಿ ಮಟ್ಟದ ಕಛೇರಿಗಳಲ್ಲಿ ನೇಮಿಸುವುದು ಹಾಗೂ ಅವರು ಹೋಬಳಿ ಮಟ್ಟದ ಅಧಿಕಾರಿಗೆ ವರದಿ ಮಾಡುವುದು.
ರೈತ ಅನುವುಗಾರರು ಆರೋಗ್ಯವಂತರು, ಸ್ನೇಹಪರರು, ಅಕ್ಷರಸ್ಥರು, ಉತ್ತಮ ಸಂವಾಹಕರಾಗಿರುವುದಲ್ಲದೇ ಅದೇ ಹೋಬಳಿಯ ನಿವಾಸಿಯಾಗಿರಬೇಕು.
ರೈತ ಅನುವುಗಾರರಿಗೆ ಪ್ರತಿ ದಿನಕ್ಕೆ ರೂ. ೧೫೦ ಗಳ ಗೌರವಧನವನ್ನು ಸಾದಿಲ್ವಾರು ನಿಧಿಯಿಂದ ನೀಡಬೇಕು ಹಾಗೂ ಇವರನ್ನು ಗರಿಷ್ಟ ೧೮೦ ದಿನಗಳವರೆಗೆ ಮಾತ್ರ ನೇಮಿಸಿಕೊಳ್ಳುವುದು.
೫. ಸಣ್ಣ ಮತ್ತು ಅತಿ ಸಣ್ಣ ರೈತ ಪಟ್ಟಿ ಸಂಗ್ರಹಣೆ ಹಾಗೂ ಕಂಪ್ಯೂಟರೀಕರಣ:
ಕಂದಾಯ ಇಲಾಖೆಯಿಂದ ದೃಢೀಕರಿಸಿದ ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿ ಪಡೆಯುವುದು
ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಹೋಬಳಿ ಮಟ್ಟದಲ್ಲಿ ಕಂಪ್ಯೂಟರೀಕರಣ ಮಾಡಲಾಗುವುದು ಹಾಗೂ ಕಂಪ್ಯೂಟರೀಕೃತ ಪ್ರತಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ದೃಢೀಕರಿಸಬೇಕು.
ದೃಢೀಕೃತ ಕಂಪ್ಯೂಟರೀಕೃತ ಪಟ್ಟಿಯನ್ನು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದು ಹಾಗೂ ಅಂತರ್ಜಾಲದಲ್ಲಿ ಅಳವಡಿಸುವುದು.
ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುವುದು.
೬. ಅರ್ಜಿಗಳನ್ನು ಕೊಡುವುದು ಹಾಗೂ ಸ್ವೀಕರಿಸುವುದು:
ಕೃಷಿ ಚಟುವಟಿಕೆಯಡಿ ಕಳೆದ ಸಾಲಿನಲ್ಲಿ ಬಾಕಿ ಇರುವ ೧೩,೦೨,೦೨೩ (೨೫ ಜಿಲ್ಲೆ) ಅರ್ಜಿಗಳನ್ನೇ ಈ ಪ್ರಸಕ್ತ ಸಾಲಿಗೂ ಪರಿಗಣಿಸಿ ಲಾಟರಿ ಮುಖಾಂತರ ವರ್ಗವಾರು ಫಲಾನುಭವಿಗಳನ್ನು ಆಯ್ಕೆ ಮಾಡುವುದು. ಉಳಿದ ೫ ಜಿಲ್ಲೆಗಳಾದ ಬೆಂಗಳೂರು(ನ), ಉಡುಪಿ, ಕೊಡಗು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ವರ್ಷ ಗುರಿಗಿಂತ ಕಡಿಮೆ ಸಂಖ್ಯೆ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಕಳೆದ ಸಾಲಿನಂತೆಯೇ ಹೊಸದಾಗಿ ಅರ್ಜಿಗಳನ್ನು ಕರೆಯುವುದು. ನೂತನ ವೇಳಾಪಟ್ಟಿಯನ್ನು ಅನುಸರಿಸುವುದು. ಕಳೆದ ವರ್ಷದ ಅರ್ಜಿ ನಮೂನೆಯನ್ನೇ ಪರಿಗಣಿಸುವುದು. ನಿಗದಿತ ಗುರಿಗೆ ಮೀರಿ ಯಾವುದೇ ಇಲಾಖೆಯಲ್ಲಿ ಪ್ರತಿ ವರ್ಗ/ ಜಾತಿಯ ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದಲ್ಲಿ, ತಾಲ್ಲೂಕು ಮಟ್ಟದಲ್ಲಿ ’ಲಾಟರಿ’ಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವುದು. ತೋಟಗಾರಿಕೆ, ಜೈವಿಕ ಇಂಧನ ಮತ್ತು ಮೀನುಗಾರಿಕೆ ಚಟುವಟಿಕೆಯಲ್ಲಿ ಕಳೆದ ಸಾಲಿನಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲದ ಪ್ರಯುಕ್ತ ಹೊಸದಾಗಿ ಅರ್ಜಿಯನ್ನು ಸ್ವೀಕರಿಸಿ ವೇಳಾಪಟ್ಟಿ ಪ್ರಕಾರ ಫಲಾನುಭವಿಗಳ ಆಯ್ಕೆ ಮಾಡುವುದು.
ವಿದ್ಯುನ್ಮಾನ ಅನುವರ್ತನಶೀಲವಾದ (e-ಛಿomಠಿಟiಚಿಟಿಛಿe) ಅರ್ಜಿಗಳು ೩ ವಿಭಾಗಗಳನ್ನು ಒಳಗೊಂಡಿರುತ್ತದೆ. ಮೊದಲ ವಿಭಾಗವು ಸಾಮಾನ್ಯ ಮಾಹಿತಿಯ ವಿಭಾಗವಾಗಿದ್ದು ಅದರಲ್ಲಿ ಕ್ರಮ ಸಂಖ್ಯೆ, ರೈತನ ಖಾಸಗಿ ವಿವರಗಳು, ಹಿಡುವಳಿ ವಿವರಗಳು, ಪ್ರಸ್ತುತ ಬೆಳೆ ಉತ್ಪಾದನಾ ಚಟುವಟಿಕೆಗಳು, ಪ್ರಸ್ತಾಪಿತ ಬೆಳೆ ಉತ್ಪಾದನಾ ಚಟುವಟಿಕೆಗಳು, ಪ್ರಸ್ತಾಪಿತ ತಗಲುವ ವೆಚ್ಚ, ಪ್ರಸ್ತಾಪಿತ ತಗಲುವ ವೆಚ್ಚವನ್ನು ಭರಿಸಲು ಸರ್ಕಾರದ ಸಹಾಯಧನವನ್ನು ಹೊರತುಪಡಿಸಿ ಬೇರೆ ಆರ್ಥಿಕ ಮೂಲ, ಅಂದಾಜು ವಾರ್ಷಿಕ ಆದಾಯ, ಬ್ಯಾಂಕ್ ಖಾತೆ ವಿವರ ಮುಂತಾದ ವಿವರಗಳನ್ನು ಒಳಗೊಂಡಿರುತ್ತದೆ. ಎರಡನೇ ವಿಭಾಗವು ಲಾಟರಿ ವಿಭಾಗವಾಗಿದ್ದು, ಲಾಟರಿ ಪ್ರಕ್ರಿಯೆಗೆ ಅವಶ್ಯವಿರುವ ಕ್ರಮ ಸಂಖ್ಯೆ ಹಾಗೂ ರೈತನ ಖಾಸಗಿ ವಿವರಗಳನ್ನು ಒಳಗೊಂಡಿರುತ್ತದೆ. ಮೂರನೇ ವಿಭಾಗವು ಸ್ವೀಕೃತಿ ಪ್ರತಿಯಾಗಿದ್ದು, ಕ್ರಮ ಸಂಖ್ಯೆ, ರೈತನ ಖಾಸಗಿ ವಿವರಗಳು, ದಿನಾಂಕ, ಅರ್ಜಿಯನ್ನು ಸ್ವೀಕರಿಸುವ ಅಧಿಕಾರಿಯ ಸಹಿ ಹಾಗೂ ಮುದ್ರೆಯನ್ನು ಹೊಂದಿದ್ದು, ಈ ಪ್ರತಿಯನ್ನು ಹರಿದು ರೈತನಿಗೆ ನೀಡಲಾಗುವುದು. ಈ ಅರ್ಜಿಗಳನ್ನು ಎಲ್ಲಾ ಗ್ರಾಮ ಪಂಚಾಯತ್ ಕಛೇರಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ಸಂಬಂದಿತ ಇಲಾಖೆಗಳಲ್ಲಿ ವಿತರಿಸಲಾಗುವುದು.
ರೈತರು ಬಿಳಿಯ ಹಾಳೆಯಲ್ಲಿ ಸ್ವಯಂಘೋಷಣೆ, ಸ್ವಯಂದೃಢೀಕೃತ ಪಹಣಿಯ ಜೆರಾಕ್ಸ್ ಪ್ರತಿಗಳು, ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಈ ಹಂತದಲ್ಲಿ ಅರ್ಜಿಗಳ ಪ್ರಾಥಮಿಕ ಪರಿಶೀಲನೆ ನಡೆಸಿ ಮಾಹಿತಿಗಳು ತಪ್ಪಿದ್ದಲ್ಲಿ ಅದನ್ನು ಸರಿಪಡಿಸಲಾಗುವುದು.
ರೈತ ಸಂಪರ್ಕ ಕೇಂದ್ರಗಳಲ್ಲಿ ಪೂರ್ಣಗೊಳಿಸಿದ ಅರ್ಜಿಗಳನ್ನು ಪಡೆಯುವ ಸಂದರ್ಭದಲ್ಲಿ ಅವುಗಳಿಗೆ ಪ್ರತ್ಯೇಕ ಮೆಷಿನ್ ಮುದ್ರಿತ ಒಂದೇ ಸಂಖ್ಯೆಯನ್ನು ಅರ್ಜಿಯ ಸಾಮಾನ್ಯ ವಿಭಾಗ, ಲಾಟರಿ ವಿಭಾಗ ಹಾಗೂ ಸ್ವೀಕೃತಿ ವಿಭಾಗಕ್ಕೆ ನೀಡುವುದು.
ಪ್ರತಿ ಸಣ್ಣ ಮತ್ತು ಅತಿ ಸಣ್ಣ ರೈತನು ತನ್ನ ಹೆಸರಿನಲ್ಲಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ರೈತನು ಬ್ಯಾಂಕ್ ಖಾತೆಯನ್ನು ಹೊಂದಿರದಿದ್ದಲ್ಲಿ ಆಯಾ ಇಲಾಖೆಗಳು ಬ್ಯಾಂಕ್ ಖಾತೆ ತೆರೆಸುವಂತೆ ಕ್ರಮ ಕೈಗೊಳ್ಳುವುದು.
೭. ರೈತರ ವಿವರಗಳ ಕಂಪ್ಯೂಟರೀಕರಣ, ಪರಿಶೀಲನೆ ಹಾಗೂ ವಿಂಗಡನೆ:
ಅರ್ಜಿಯಲ್ಲಿರುವ ರೈತರ ಸಂಪೂರ್ಣ ಮಾಹಿತಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಹೋಬಳಿ ಮಟ್ಟದಲ್ಲಿ ಕಂಪ್ಯೂಟರೀಕರಣಗೊಳಿಸಿ ಅಂತರ್ಜಾಲದಲ್ಲಿ ಅಳವಡಿಸುವುದು.(೫ ಜಿಲ್ಲೆಗಳು)
ಅರ್ಜಿಯಲ್ಲಿ ನೀಡಿರುವ ವಿವರಗಳು (ರೈತ ಮತ್ತು ಹಿಡುವಳಿ) ಹಾಗೂ ಕಂದಾಯ ಇಲಾಖೆಯು ನೀಡಿರುವ ವಿವರಗಳನ್ನು ಪರಿಶೀಲಿಸಲಾಗುವುದು.
ರೈತನು ಕೈಗೊಳ್ಳುವ ಪ್ರಮುಖ ಚಟುವಟಿಕೆಯ ಆಧಾರದ ಮೇಲೆ ಮಾಹಿತಿಯನ್ನು ಇಲಾಖಾವಾರು ವಿಂಗಡಿಸಲಾಗುವುದು.
ರೈತನು ಕೈಗೊಳ್ಳುವ ಪ್ರಮುಖ ಚಟುವಟಿಕೆಯ ಆಧಾರದ ಮೇಲೆ ಮಾಹಿತಿಯನ್ನು ಇಲಾಖಾವಾರು ವಿಂಗಡಿಸಿ ಅನುಷ್ಠಾನಕ್ಕಾಗಿ ಆಯಾ ಇಲಾಖೆಗಳಿಗೆ ಕಳುಹಿಸಲಾಗುವುದು (ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ).
ಜೈವಿಕ ಇಂಧನ ಚಟುವಟಿಕೆಯ ಸೌಲಭ್ಯಗಳನ್ನು ಪಡೆಯಲು ಏಕ ರೀತಿಯ ನಮೂನೆಯಲ್ಲಿ ಅರ್ಜಿಯನ್ನು ಪಡೆದು, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಆಯ್ಕೆ ಮತ್ತು ಉಸ್ತುವಾರಿ ಪ್ರಕ್ರಿಯೆಗಾಗಿ ವರ್ಗಾಯಿಸುವುದು.
ಜೈವಿಕ ಇಂಧನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನೆಯನ್ನು ಜಾರಿಗೊಳಿಸುವುದು ಮತ್ತು ಉಸ್ತುವಾರಿ ಮಾಡುವುದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ರೈತರು ತಮ್ಮ ಹೊಲಗಳಲ್ಲಿ ಬದುಗಳ ಮೇಲೆ ಮಾತ್ರ ಬೆಳೆಯದೆ ಒಂದು ಬ್ಲಾಕ್‌ನಲ್ಲಿ ಬೆಳೆಯನ್ನು ಬೆಳೆಯಲು ಮುಂಬರುವ ರೈತರನ್ನು ಈ ಯೋಜನೆಯಡಿಯಲ್ಲಿ ಪರಿಗಣಿಸುವುದು.
೮. ಫಲಾನುಭವಿಗಳ ಆಯ್ಕೆ:
ಕಂದಾಯ ಇಲಾಖೆಯ ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿಯಲ್ಲಿ ಹೆಸರಿರುವ ರೈತರ ಅರ್ಜಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು.
ಆಯಾ ಇಲಾಖೆಯ ಅಧಿಕಾರಿಗಳು ಅರ್ಜಿಗಳನ್ನು ವರ್ಗವಾರು/ ಜಾತಿವಾರು ವಿಂಗಡನೆ ಮಾಡುವರು.
ಅರ್ಹ ಮಹಿಳಾ ಅರ್ಜಿದಾರರಿಗೆ ಮೊದಲ ಆದ್ಯತೆ ನೀಡುವುದು. ಮಹಿಳೆಯರ ಸಂಖ್ಯೆಯು ಕಡಿಮೆ ಇದ್ದರೆ ಗುರಿಯನ್ನು ಅದೇ ವರ್ಗದ ಪುರುಷ ರೈತರಿಗೆ ವರ್ಗಾವಣೆ ಮಾಡಲಾಗುವುದು.
ಇಲಾಖೆಯು ನಿಗದಿಪಡಿಸಿದ ವರ್ಗವಾರು/ ಜಾತಿವಾರು ಗುರಿಗಿಂತ ಸ್ವೀಕರಿಸಿದ ಅರ್ಜಿಗಳು ಹೆಚ್ಚಿಗೆ ಇದ್ದಲ್ಲಿ ಫಲಾನುಭವಿಗಳನ್ನು ಲಾಟರಿ ಮಾದರಿಯಲ್ಲಿ ಆಯ್ಕೆ ಮಾಡಲಾಗುವುದು. ಇಲ್ಲದಿದ್ದ ಪಕ್ಷದಲ್ಲಿ ಅರ್ಜಿದಾರರೆಲ್ಲರನ್ನು ಆಯ್ಕೆ ಮಾಡಲಾಗುವುದು.
ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಗಣಕೀಕರಣಗೊಳಿಸಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಹಾಗೂ ಅಂತರ್ಜಾಲದಲ್ಲಿ ಅಳವಡಿಸುವುದು.
೯. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ:
ಫಲಾನುಭವಿಗಳ ಆಯ್ಕೆಯಲ್ಲಿ ಆದ್ಯತೆಯನ್ನು ಕ್ರಮವಾಗಿ ಕೃಷಿ, ತೋಟಗಾರಿಕೆ, ಜೈವಿಕ ಇಂಧನ ಮತ್ತು ಮೀನುಗಾರಿಕೆ ಚಟುವಟಿಕೆಗಳಿಗೆ ನೀಡಲಾಗುವುದು.
ಎಲ್ಲಾ ಚಟುವಟಿಕೆಗಳಿಗೆ (ಮಾಹಿತಿ ಕ್ರೋಢೀಕರಣ, ಉಸ್ತುವಾರಿ ಇತ್ಯಾದಿ) ತಾಲ್ಲೂಕನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಫಲಾನುಭವಿಗಳ ಆಯ್ಕೆಯನ್ನು ಮಾಡಲಾಗುವುದು.
ನಿಗದಿತ ಗುರಿಗಿಂತ ಅರ್ಜಿಗಳ ಸಂಖ್ಯೆಯು ಹೆಚ್ಚಿಗೆ ಇದ್ದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ (ಸ್ಥಳ, ದಿನಾಂಕ, ಇತರೆ) ಬಗ್ಗೆ ವ್ಯಾಪಕ ಪ್ರಚಾರ ನೀಡಲಾಗುವುದು.
ಲಾಟರಿಯ ಪ್ರಕ್ರಿಯೆಯನ್ನು ರೈತರಿಗೆ ಅನುಕೂಲವಾದ ಸ್ಥಳ ಹಾಗೂ ದಿನಾಂಕದಂದು ನಡೆಸಲಾಗುವುದು.
ಅರ್ಜಿಯ ಎರಡನೇ ಭಾಗವನ್ನು (ಲಾಟರಿ ವಿಭಾಗ) ಹರಿದು, ಮಡಚಿ ಡಬ್ಬಕ್ಕೆ ಹಾಕಲಾಗುವುದು.
ಸಾರ್ವಜನಿಕರ ಸಮ್ಮುಖದಲ್ಲಿ ಇಲಾಖೆಯ ಅಧಿಕಾರಿಗಳು ಲಾಟರಿ ಎತ್ತಿ ಫಲಾನುಭವಿಗಳನ್ನು ಆಯ್ಕೆ ಮಾಡುವರು.
ಈ ಲಾಟರಿ ಪ್ರಕ್ರಿಯೆಯನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಥವಾ ಅವರು ನೇಮಿಸಿದ ಅಧಿಕಾರಿಗಳು ಮೇಲ್ವಿಚಾರಣೆ ಮಾಡುವುದು.
೧೦. ಆಯ್ಕೆಯಾದ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಿಸುವ ವಿಧಾನ:
ಪ್ರೋತ್ಸಾಹಧನವನ್ನು ನೇರವಾಗಿ ಬ್ಯಾಂಕುಗಳು ಹಾಗೂ ಸಹಕಾರ ಬ್ಯಾಂಕುಗಳ ಮೂಲಕ ಎರಡು ಕಂತುಗಳಲ್ಲಿ ನೀಡಲಾಗುವುದು.
ಜಿಲ್ಲೆಗಳ ಗುರಿಯ ಆಧಾರದ ಮೇಲೆ ಇಲಾಖಾ ಮುಖ್ಯಸ್ಥರು ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡುತ್ತಾರೆ. ಜಿಲ್ಲಾ ಮುಖ್ಯಸ್ಥರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡುವರು. ತಾಲ್ಲೂಕು ಮಟ್ಟದ ಅಧಿಕಾರಿಯು ಬ್ಯಾಂಕ್ ವ್ಯವಸ್ಥಾಪಕರ ಮೂಲಕ ರೈತರ ಖಾತೆಗೆ ವರ್ಗಾವಣೆ ಮಾಡುವರು.
೧೧. ಮೊದಲನೇ ಕಂತಿನ ಅನುದಾನ ಪಾವತಿ:
ಹಣ ಬಿಡುಗಡೆ ಕಾರ್ಯವನ್ನು ನೇರವಾಗಿ ಸಂಬಂದಿತ ಇಲಾಖೆ ನಿರ್ವಹಿಸುವುದು.
ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕ್‌ವಾರು, ಶಾಖಾವಾರು ವಿಂಗಡಿಸಿ ಮೊದಲನೇ ಕಂತಿಗೆ ಬ್ಯಾಂಕ್‌ವಾರು, ಶಾಖಾವಾರು ಅವಶ್ಯವಿರುವ ಅನುದಾನವನ್ನು ನಿಗದಿಪಡಿಸುವುದು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಬ್ಯಾಂಕ್‌ವಾರು, ಶಾಖಾವಾರು ಚೆಕ್ಕುಗಳನ್ನು ನೀಡುವರು.
ಬ್ಯಾಂಕ್‌ವಾರು, ಶಾಖಾವಾರು ಚೆಕ್ಕುಗಳನ್ನು ಆಯಾ ಬ್ಯಾಂಕುಗಳ ವ್ಯವಸ್ಥಾಪಕರುಗಳಿಗೆ ಸಂದಾಯ ಸೂಚನೆಯೊಂದಿಗೆ (ಚಿಜviಛಿe) ಆಯ್ಕೆಯಾದ ಫಲಾನುಭವಿಗಳ ಹೆಸರು, ವಿಳಾಸ, ಬ್ಯಾಂಕ್ ವಿವರ ಹಾಗೂ ಸಂದಾಯ ಮಾಡಬೇಕಿರುವ ಮೊತ್ತವನ್ನು ತಿಳಿಸಬೇಕು.
ಸಂಬಂಧಪಟ್ಟ ವ್ಯವಸ್ಥಾಪಕರು ಸಂದಾಯ ಸೂಚನೆಯ (ಚಿಜviಛಿe) ಮೇರೆಗೆ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುವರು.
ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ ನಂತರ ವ್ಯವಸ್ಥಾಪಕರು ಸಂಬಂಧಪಟ್ಟ ತಹಸೀಲ್ದಾರರಿಗೆ ಫಲಾನುಭವಿಗಳ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ದಿನಾಂಕ ಹಾಗೂ ವರ್ಗಾವಣೆ ಮಾಡಿದ ಮೊತ್ತವನ್ನೊಳಗೊಂಡ ಪತ್ರವನ್ನು ನೀಡುವರು.
೧೨. ಎರಡನೇ ಕಂತಿನ ಅನುದಾನ ಪಾವತಿ:
ರೈತ ಅನುವುಗಾರರು ಆಯ್ಕೆಯಾದ ಫಲಾನುಭವಿಗಳ ಜಮೀನುಗಳಿಗೆ ಆಗಾಗ್ಗೆ ಭೇಟಿ ನೀಡಿ ರೈತನು ನೀಡಿರುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವರು.
ರೈತ ಅನುವುಗಾರರಿಗೆ ಆಯ್ಕೆಯಾದ ಫಲಾನುಭವಿಯು ಪ್ರಸ್ತುತ ಕೈಗೊಳ್ಳುತ್ತಿರುವ ಬೆಳೆ ಚಟುವಟಿಕೆ ಹಾಗೂ ಪ್ರಸ್ತಾಪಿಸಿದ ಬೆಳೆ ಚಟುವಟಿಕೆಗಳನ್ನು ಕೈಗೊಂಡಿರುವ ಬಗ್ಗೆ ಒಂದು ಚೆಕ್ ಲಿಸ್ಟ್‌ಅನ್ನು ನೀಡಿ ಭರ್ತಿ ಮಾಡಿದ ಚೆಕ್‌ಲಿಸ್ಟ್ ಅನ್ನು ಹೋಬಳಿ ಮಟ್ಟದ ಅಧಿಕಾರಿಗಳಿಗೆ ನೀಡುವುದು.
ಎರಡನೇ ಕಂತಿನ ಹಣ ಬಿಡುಗಡೆಯ ಮುನ್ನ, ಸಂಬಂಧಿತ ಇಲಾಖೆಗಳು ಇಲಾಖಾ ಅಧಿಕಾರಿಗಳು/ಬಾಹ್ಯ ಸಂಸ್ಥೆಗಳಿಂದ ರೈತರ ಕ್ಷೇತ್ರ ಪರಿಶೀಲನೆಯನ್ನು ಪ್ರತಿಶತ ೧೦೦%ರಷ್ಟು ಪರಿಶೀಲನೆ ಮಾಡಿಸುವುದು. ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಂದ ಪ್ರತಿ ಶತ ೧೦೦ರಷ್ಟು ಪರಿಶೀಲನೆ ಮಾಡಿಸುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಕಾರ್ಯ ನಿರ್ವಹಣಾಧಿಕಾರಿ ಮತ್ತು ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರರು ಮತ್ತು ತಾಲ್ಲೂಕು ನಿರ್ವಹಣಾಧಿಕಾರಿರವರು ಸಹಯೋಗದೊಂದಿಗೆ ಸಂಯೋಜಿಸುವುದು (ಣo ಛಿooಡಿಜiಟಿಚಿಣe).
ಜಿ.ಪಿ.ಎಸ್. ಪೂರಕ ಛಾಯಾ ಚಿತ್ರಗಳನ್ನು, ರೈತ ಆಯ್ಕೆ ಮಾಡಲಾದ ಚಟುವಟಿಕೆಯ ಅಥವಾ ತೋಟದ ಬದಲಾವಣೆಗೆ ಅಳವಡಿಸುವುದು ಮತ್ತು ಈ ತರಹದ ದಾಖಲಾತಿಯ ನಂತರವೇ ಎರಡನೇ ಕಂತಿನ ಹಣವನ್ನು ನೀಡುವುದು.
ಎರಡನೇ ಕಂತಿನ ಹಣ ಬಿಡುಗಡೆಯ ಮುನ್ನ ಸಂಬಂದಿತ ಆಡಳಿತ ಇಲಾಖೆಗಳು ವಿವರವಾದ ಚೆಕ್‌ಲಿಸ್ಟ್‌ಗಳನ್ನೊಳಗೊಂಡ ಮಾರ್ಗಸೂಚಿಗಳನ್ನು ಎರಡನೇ ಕಂತಿನ ಹಣದ ಬಿಡುಗಡೆ ಮಾಡಲು ರಚಿಸುವುದು.
ಫಲಾನುಭವಿಯು ತಾನು ಪ್ರಸ್ತಾಪಿಸಿದ ಬೆಳೆಗೆ ಚಟುವಟಿಕೆಯನ್ನು ಬದಲಿಸಿಕೊಂಡಿದ್ದರೆ ಮಾತ್ರ ಎರಡನೇ ಕಂತಿನ ಅನುದಾನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ರೈತ ಹಾಗೂ ಆತನು ಕೈಗೊಂಡ ಬೆಳೆ ಚಟುವಟಿಕೆಯ ಛಾಯಾಚಿತ್ರವನ್ನು ಉPS ಮಾಡುವುದು.
ಮೊದಲನೇ ಕಂತಿನ ಅನುದಾನವನ್ನು ಪಾವತಿ ಮಾಡಿದ ರೀತಿಯಲ್ಲಿಯೇ ಎರಡನೇ ಕಂತಿನ ಅನುದಾನವನ್ನು ಪಾವತಿಸುವುದು.
೧೩. ರೈತರು ತಪ್ಪು ಮಾಹಿತಿ ನೀಡಿದ್ದಲ್ಲಿ ಅಥವಾ ಸಹಾಯಧನವನ್ನು ದುರ್ಬಳಕೆ ಮಾಡಿದ್ದಲ್ಲಿ ತೆರಬೇಕಾದ ದಂಡ:
ಯಾವುದೇ ಸಂದರ್ಭದಲ್ಲಿ ರೈತನು ತನ್ನ ಅರ್ಜಿಯಲ್ಲಿ ತಪ್ಪು ಮಾಹಿತಿಯನ್ನು ನೀಡಿದ್ದಲ್ಲಿ ಅಥವಾ ತಾನು ಪ್ರಸ್ತಾಪಿಸಿದ ಚಟುವಟಿಕೆಯನ್ನು ಕೈಗೊಳ್ಳುವಲ್ಲಿ ವಿಫಲನಾದಲ್ಲಿ ಅಥವಾ ಸರ್ಕಾರವು ನೀಡಿರುವ ಸಹಾಯಧನವನ್ನು ದುರ್ಬಳಕೆ ಮಾಡಿದ್ದಲ್ಲಿ ಮುಂದಿನ ಮೂರು ವರ್ಷಗಳು ಇಲಾಖೆಯ ಯಾವುದೇ ಯೋಜನೆಯಡಿ ಸವಲತ್ತುಗಳನ್ನು ಪಡೆಯಲು ಅರ್ಹನಾಗಿರುವುದಿಲ್ಲ.
ವಿಶೇಷ ಸೂಚನೆ:-ಅಗತ್ಯವಿದ್ದಲ್ಲಿ ಸಂಬಂದಿತ ಆಡಳಿತ ಇಲಾಖೆಗಳು ಹೆಚ್ಚುವರಿ ಮಾರ್ಗಸೂಚಿಗಳನ್ನು ಹೊರಡಿಸುವುದು. ಇಲಾಖೆಗಳು ಚಟುವಟಿಕೆಗಳ ಮತ್ತು ಬೆಳೆಗಳಿಗೆ ನೆರವು ಇರುವುದರ/ ಇಲ್ಲದಿರುವುದರ ಬಗ್ಗೆ ಮಾಹಿತಿ ಒದಗಿಸುವುದು.
೧೪, ೨೦೧೧-೧೨ನೇ ಸಾಲಿನಲ್ಲಿ ಮೊದಲನೇ ಕಂತಿನ ಪ್ರೋತ್ಸಾಹಧನವನ್ನು ಪಡೆದು ಉದ್ದೇಶಿತ ಚಟುವಟಿಕೆಗಳಿಗೆ ಬಳಸದೇ ಸಹಾಯಧನವನ್ನು ದುರ್ಬಳಕೆ ಮಾಡಿದ ಫಲಾನುಭವಿಗಳು ಹಾಗೂ ಇತರೇ ಕಾರಣಗಳಿಂದ ಅನರ್ಹವಾದವರು ಪ್ರಸ್ತುತ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಅರ್ಹರಾಗುವುದಿಲ್ಲ, ಅಂತಹ: ಅರ್ಜಿಗಳನ್ನು ತಿರಸ್ಕರಿಸುವುದು.
೧೫. ೨೦೧೧-೧೨ನೇ ಸಾಲಿನಲ್ಲಿ ಸುವರ್ಣಭೂಮಿ ಯೋಜನೆಯಲ್ಲಿ ಇತರೆ ಘಟಕದಲ್ಲಿ ಪ್ರೋತ್ಸಾಹಧನ ಪಡೆದ ಫಲಾನುಭವಿರಗಳು ೨೦೧೨-೧೩ನೇ ಸಾಲಿನಲ್ಲಿ ಮತ್ತೊಮ್ಮೆ ಅಂತಹ ಪ್ರೋತ್ಸಾಹಧನ ಪಡೆಯಲು ಅರ್ಹರಲ್ಲ.
೧೬. ಕೃಷಿ ಚಟುವಟಿಕೆ ಹೊರತುಪಡಿಸಿ ಉಳಿದ ಚಟುವಟಿಕೆಗಳಾದ ತೋಟಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಮತ್ತು ಜೈವಿಕ ಇಂಧನ ಚಟುವಟಿಕೆಗಳಲ್ಲಿ ಆಯಾ ಇಲಾಖೆಗಳ ಮುಖಾಂತರವೇ ಯೋಜನೆಯ ಬಗ್ಗೆ ಪ್ರಚಾರ ಹಾಗೂ ಅರ್ಜಿಗಳ ವಿತರಣೆ ಮತ್ತು ಸ್ವೀಕೃತಿಯನ್ನು ನಿರ್ವಹಿಸತಕ್ಕದ್ದು.
ಮೂಲ : ಬಯೋ ಫ್ಯುಯೆಲ್ ಕರ್ನಾಟಕ
ಕೊನೆಯ ಮಾರ್ಪಾಟು : 5/6/2020