অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪರಂಪರಾಗತ ಕೃಷಿ ವಿಕಾಸ ಯೋಜನೆ

ಪರಂಪರಾಗತ ಕೃಷಿ ವಿಕಾಸ ಯೋಜನೆ

 

ಪರಂಪರಾಗತ ಕೃಷಿ ವಿಕಾಸ ಯೋಜನೆ ಯು  ಕೃಷಿ ಪ್ರಮುಖ ರಾಷ್ಟ್ರೀಯ ಮಿಷನ್ ಮಣ್ಣು ಫಲವತ್ತತೆ ನಿರ್ವಹಣೆ ( SHM ) ನ್ಯಾಷನಲ್ ಮಿಷನ್ ಆಫ್ ಸಸ್ ಸ್ಟೇನಬಲ್ ಅಗ್ರಿಕಲ್ಚರ್  (NMSA) ನ ಒಂದು ಅತಿ ಮುಖ್ಯ ವಾದ ಯೋಜನೆ. ಪರಂಪರಾಗತ ಕೃಷಿ ವಿಕಾಸ ಯೋಜನೆ ( PKVY) ಅಡಿಯಲ್ಲಿ ಸಾವಯವ ಹಳ್ಳಿ ಗಳನ್ನು ದತ್ತು ಪಡೆದು ಅಲ್ಲಿ ಸಾವಯವ ಕೃಷಿ ಯನ್ನು ಮತ್ತು  PGS   ಸರ್ಟಿಫಿಕೇಷನ್ ಉತ್ತೇಜಿಸುವ ಉದ್ದೇಶಹೊಂದಿದೆ.

ನಿರೀಕ್ಷಿತ ಫಲಿತಾಂಶಗಳು

ಸಾವಯವ ಕೃಷಿ ಮೂಲಕ ವಾಣಿಜ್ಯ ಜೈವಿಕ ಉತ್ಪಾದನೆಯ ಪ್ರಚಾರ

ಗ್ರಾಹಕ ಆರೋಗ್ಯ ಸುಧಾರಿಸಲು ಕೀಟನಾಶಕ ಮುಕ್ತ ಉತ್ಪನ್ನಗಳು

ಕಾರ್ಯಕ್ರಮ ಅನುಷ್ಠಾನ

  • ರೈತನ ಆದಾಯ ಹೆಚ್ಚಿಸುವುದು ಮತ್ತು ವ್ಯಾಪಾರಿಗಳಿಗೆ ಸಮರ್ಥ ಮಾರುಕಟ್ಟೆ ರಚಿಸುವುದು
  • ಇದು ರೈತರನ್ನು ನೈಸರ್ಗಿಕ ಸಂಪನ್ಮೂಲಗಳ ಉತ್ಪಾದನೆಗೆ ಮತ್ತು ಕ್ರೋಢೀಕರಣಕ್ಕೆ ಪ್ರೇರೇಪಿಸುವುದು
  • ರೈತರ ಗುಂಪುಗಳನ್ನು ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಾವಯವ ಕೃಷಿ ಮಾಡುವಂತೆ ಪ್ರೇರೇಪಿಸುವುದು • ಐವತ್ತು ಎಕರೆ ಹೊಂದಿರುವ ಐವತ್ತು ಅಥವಾ ಹೆಚ್ಚು ರೈತರು ಸಮೂಹ ರಚಿಸಿಕೊಂಡು ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಾವಯವ ಕೃಷಿ ಮಾಡಬಹುದು ಮೂರು ವರ್ಷಗಳಲ್ಲಿ ಈ ರೀತಿಯಲ್ಲಿ 10,000 ಸಮೂಹಗಳ 5.0 ಲಕ್ಷ ಸಾವಯವ ಕೃಷಿ ನಡೆಯುತ್ತಿರುವ ಎಕರೆ ಪ್ರದೇಶವನ್ನಾಗಿ ರೂಪುಗೊಳಿಸಬಹುದು.
  • ಪ್ರಮಾಣೀಕರಣ ಪತ್ರ ಕ್ಕೆ ಯಾವುದೇ ರೀತಿಯಾದ ಖರ್ಚು ವೆಚ್ಚ ಮಾಡುವ ಅಗತ್ಯ ವಿರುವುದಿಲ್ಲ • ಪ್ರತಿ ರೈತರಿಗೆ ಬೆಳೆಗಳ ಬೀಜ ಕೊಯ್ಲುಮಾಡಲು ಮತ್ತು ಮಾರುಕಟ್ಟೆಗೆ ಉತ್ಪನ್ನಗಳು ಸಾಗಿಸಲು.ಮುರುವರ್ಷ ಗಳಲ್ಲಿ ಪ್ರತಿ ಎಕರೆಗೆ ೨೦,೦೦೦ ರೂಪಾಯಿ ಗಳನ್ನು ನೀಡಲಾಗುವುದು
  • ಸಾವಯವ ಕೃಷಿಯನ್ನು ಸಾಂಪ್ರದಾಯಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಶಿಫಾರಸ್ಸು ಮಾಡಲಾಗುವುದು ಮತ್ತು ಸಾವಯವ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಇತರ ಉತ್ತಪನ್ನ ಗಳ ಜೊತೆ ಪ್ರಚಾರಮಾಡುವುದು
  • ರೈತ ಒಳಗೊಂಡಂತೆ ಈ ಮೂಲಕ ದೇಶೀಯ ಉತ್ಪಾದನೆ ಮತ್ತು ಸಾವಯವ ಉತ್ಪನ್ನಗಳ ಪ್ರಮಾಣೀಕರಣ ಹೆಚ್ಚಾಗುತ್ತದೆ ಘಟಕಗಳು ಮತ್ತು ನೆರವು ಮಾದರಿ ಸಮೂಹಗಳ ಮುಲಕ ಪಾಲ್ಗೊಳ್ಳುವಿಕೆಯಖಾತರಿ (PGS) ವಿಧಾನವನ್ನು ಅಳವಡಿಸಿಕೊಳ್ಳವುದು

ರೈತನ್ನು ಮತ್ತು ಸ್ಥಳೀಯರನ್ನು ೫೦ ಎಕರೆ ಯಲ್ಲಿ ಸಾವಯವ ಬೆಳೆ ಬೆಳೆಯಲು ಸಮೂಹ ಗಳನ್ನು ರಚಿಸಿಸುವುದು ಮತ್ತು PGS ಸರ್ಟಿಫಿಕೇಷನ್ ಹೊಂದಲು ಸಜ್ಜು ಗೊಳಿಸುವುದು ಸಾವಯವ ಕೃಷಿ ಸಮೂಹ ರೂಪಿಸಲು ನಿರ್ದಿಷ್ಟ ಪ್ರದೇಶಗಳಲ್ಲಿ ಸಭೆಗಳು ಮತ್ತು ರೈತರ ಚರ್ಚೆಗಳನ್ನು ನಡೆಸುವುದು - ರೂ.೨೦೦ ಪ್ರತಿ ರೈತರಿಗೆ

ಮಾನ್ಯತೆ ಪಡೆದ ಸಮೂಹದ ಸದಸ್ಯರಿಗೆ ಸಾವಯವ ಕೃಷಿಕ್ಷೇತ್ರ ಗಳಿಗೆ ಭೇಟಿನೀಡಲು - ರೂ.೨೦೦ ಪ್ರತಿ ರೈತರಿಗೆ

ಸಮೂಹಗಳನ್ನು ರಚಿಸುವುದು,PGS ಮೇಲೆ ಪ್ರಮಾಣಮಾಡಲು ರೈತರನ್ನು ಪ್ರೇರೇಪಿಸುವುದು ಸಮೂಹದ ಮುಖ್ಯ ಕುಶಲವ್ಯಕ್ತಿ (LRP) ಯನ್ನು ಆರಿಸುವುದು ಸಮೂಹದ ಸದಸ್ಯರಿಗೆ ಸಾವಯವ ಕೃಷಿ ಬಗ್ಗೆ ತರಬೇತಿ ನೀಡುವುದು ( ೩ ತರಬೇತಿ ತರಗತಿಗಳು - ಪ್ರತಿಯೊಂದಕ್ಕೆ ರೂ ೨೦,೦೦೦ ದಂತೆ

PGS ಪ್ರಮಾಣೀಕರಣ ಮತ್ತು ಗುಣಮಟ್ಟ ನಿಯಂತ್ರಣ : PGS ಪ್ರಮಾಣೀಕರಣ ತರಬೇತಿ ಗಾಗಿ ರೂ ೨೦೦ ರಂತೆ ಪ್ರತಿ LRPಗೆ ತರಬೇತಿದಾರರಿಗೆ ತರಬೇತಿ (೨೦) ಲೀಡ್ ರಿಸೋರ್ಸ್ ಪರ್ಸನ್ ರೂ ೨೫೦ /ದಿನಕ್ಕೆ /ಸಮೂಹದಲ್ಲಿ ೩ ದಿನಕ್ಕೆ

ಆನ್ ಲೈನ್ ಮುಖಾಂತರ ರೈತರ ನೋಂದಾವಣಿ - ರೂ ೧೦೦ ಸಮೂಹದ ಪ್ರತಿ ಸದಸ್ಯರಿಗೆ ೫೦ ಜನರಿಗೆ ಮಣ್ಣಿನ ಮಾದರಿ ಸಂಗ್ರಹ ಮತ್ತು ಪರೀಕ್ಷೆ - ೨೧ ಮಾದರಿ/ ವರ್ಷ / ಸಮೂಹ - ರೂ ೧೯೦ ರಂತೆ ಪ್ರತಿ ಮಾದರಿಗೆ ೩ ವರ್ಷಕ್ಕೆ PGS ಪರಿವರ್ತನೆ ಪ್ರಕ್ರಿಯೆ ದಸ್ತಾವೇಜು ರೂ ೧೦೦ ಸಮೂಹದ ಪ್ರತಿ ಸದಸ್ಯ ರಿಗೆ (೫೦ ಸದಸ್ಯ ರಿಗೆ ಸೀಮಿತ )

ಸದಸ್ಯರ ಜಾಮೀನು ತಪಾಸಣೆ ರೂ ೪೦೦ ಪ್ರತಿ ತಪಾಸಣೆಗೆ (೩ ತಪಾಸಣೆ ಪ್ರತಿವರ್ಶಕ್ಕೆ )

ಮೂಲ : ಭಾರತ ಸರಕಾರದ ಕೃಷಿ ಇಲಾಖೆ, ಸಹಕಾರ ಮತ್ತು ರೈತರು ಕಲ್ಯಾಣ ಕೃಷಿ ಸಚಿವಾಲಯ ಮತ್ತು ರೈತರು ಕಲ್ಯಾಣ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate