ಜಲಾನಯನ ಯೋಜನೆಯಡಿಯಲ್ಲಿ ಸಹಭಾಗಿತ್ವ, ಪ್ರಾತ್ಯಕ್ಷತೆ ಮತ್ತು ವಿಸ್ತರಣೆಗೆ ಒತ್ತು ನೀಡುವುದರಿಂದ, ಹಮ್ಮಿಕೊಂಡಿರುವ ಚಟುವಟಿಕೆಗಳು ವಿಶಿಷ್ಠವಾಗಿರುತ್ತವೆ. ವಿವಿಧ ಹಂತಗಳಲ್ಲಿ ಅಂದರೆ, ರೈತರಿಂದ ಪ್ರಾರಂಭಿಸಿ, ಜಲಾನಯನ ಮಿತ್ರರಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ಅಧಿಕಾರಿಗಳಿಗೆ ಜಾನುವಾರು ಮತ್ತು ಮೇವು ಅಭಿವೃದ್ಧಿ ಕುರಿತು ತಿಳುವಳಿಕೆ ನೀಡಿ, ಸಾಮಥ್ರ್ಯ ಹೆಚ್ಚಿಸಲು ಮತ್ತು ಕೌಶಲ್ಯಗಳನ್ನು ಉನ್ನತೀಕರಿಸಲು ಹಾಗೂ ಜಾನುವಾರುಗಳಲ್ಲಿ ಉತ್ಪಾದನೆ ಹೆಚ್ಚಳಕ್ಕಾಗಿ ತರಬೇತಿ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸುವುದು.
ಈ ತರಬೇತಿಯನ್ನು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುವುದು. ಸಂಪನ್ಮೂಲ ವ್ಯಕ್ತಿಗಳಾದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು, ಸ್ಥಳೀಯ ಪಶುವೈದ್ಯರು, ಜಾನುವಾರು ವಿಸ್ತರಣಾಧಿಕಾರಿಗಳು, ಜಾನುವಾರು ವಿಸ್ತರಣಾ ಸಹಾಯಕರು ಮತ್ತು ಸರ್ಕಾರೇತರ ಸಂಸ್ಥೆಯ ಸಿಬ್ಬಂದಿಗೆ ಜಿಲ್ಲಾ ಮಟ್ಟದಲ್ಲಿ ಒಂದು ದಿನದ ತರಬೇತಿ ನೀಡಲಾಗುವುದು. ಸದರಿ ತರಬೇತಿಯಲ್ಲಿ ತರಬೇತಿ ಕೈಪಿಡಿಯನ್ನು ಬಳಸಿಕೊಂಡು ವಿವಿಧ ಮಾಹಿತಿಗಳನ್ನು ಜಾನುವಾರು ಸಾಕಣೆ ರೈತರಿಗೆ ಹಾಗೂ Sಊಉ ಸದಸ್ಯರಿಗೆ ಯಾವ ರೀತಿಯಲ್ಲಿ ಗ್ರಾಮ ಮಟ್ಟದ ತರಬೇತಿಗಳನ್ನು ನೀಡಬೇಕು ಎಂಬುವನ್ನು ಕೂಲಂಕುಷವಾಗಿ ತಿಳಿಸಲಾಗುವುದು. ಈ ಕಾರ್ಯಾಗಾರದಲ್ಲಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರು ಸಹ ಭಾಗವಹಿಸುವರು.
ಗ್ರಾಮ ಮಟ್ಟದಲ್ಲಿ ತರಬೇತಿ-1: ಸ್ಥಳೀಯವಾಗಿ ಗ್ರಾಮ ಮಟ್ಟದಲ್ಲಿಯೇ 50 ಜಾನುವಾರು ಸಾಕಣೆ ರೈತರಿಗೆ/ Sಊಉ ಸದಸ್ಯರಿಗೆ ಜಾನುವಾರುಗಳ ಖರೀದಿಗೆ ಮುನ್ನ ಒಂದು ದಿನದ ತರಬೇತಿಯನ್ನು ನೀಡಲಾಗುವುದು. ಉತ್ತಮ ತಳಿಯ ಜಾನುವಾರುಗಳ ಆಯ್ಕೆ, ದರ ನಿಗದಿ, ಖರೀದಿ ಮತ್ತು ಸುರಕ್ಷಿತವಾಗಿ ಸಾಗಾಣಿಕೆ ಮಾಡುವ ಬಗ್ಗೆ ತರಬೇತಿ ನೀಡಲಾಗುವುದು. ಈ ತರಬೇತಿಯನ್ನು ಕಾರ್ಯಕಾರಿ ಸಮಿತಿಯವರು ಏರ್ಪಡಿಸುತ್ತಾರೆ.
ಜಾನುವಾರುಗಳ ಖರೀದಿಯ ನಂತರ ಸ್ಥಳೀಯವಾಗಿ ಗ್ರಾಮ ಮಟ್ಟದಲ್ಲಿಯೇ 50 ಜಾನುವಾರು ಸಾಕಣೆ ರೈತರಿಗೆ/ Sಊಉ ಸದಸ್ಯರಿಗೆ, ವಿವಿಧ ಜಾನುವಾರು ಸಾಕಣೆ ಕೌಶಲ್ಯಗಳು ಅಂದರೆ, ಹಸಿರು ಮೇವು ಪೂರೈಕೆ, ಸಮತೋಲನ ಆಹಾರದ ಬಗ್ಗೆ, ಜಾನುವಾರು ರೋಗಗಳನ್ನು ತಡೆಗಟ್ಟುವ ಬಗ್ಗೆ ಹಾಗೂ ಉತ್ಪಾದನೆ ಹೆಚ್ಚಳಕ್ಕಾಗಿ ಒಂದು ದಿನದ ತರಬೇತಿ ನೀಡಲಾಗುವುದು
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 6/9/2020
ಜಾನುವಾರು ಚಟುವಟಿಕೆಗಳ ಅನುಷ್ಠಾನ ವಿಧಾನ
ಸಮುದಾಯ ಆಧಾರಿತ ಚಟುವಟಿಕೆಗಳ ಬಗ್ಗೆ ಕೆಲವು ವಿವರಗಳು
ಗರ್ಭಸ್ಥ ರಾಸುವಿನ ಲಾಲನೆ- ಪಾಲನೆ
ಕೃಷಿ ಆಧಾರಿತ ಗ್ರಾಮೀಣ ರೈತರ ಆರ್ಥಿಕ ಅಭಿವೃದ್ಧಿಗೆ, ಜಾನುವ...