ಜಲಾನಯನ ಸಮಿತಿಯ ಮಟ್ಟದಲ್ಲಿ ಕ್ರಿಯಾ ಯೋಜನೆ ಮತ್ತು ಉಪಯೋಜನೆ ತಯಾರಿಸುವಾಗ, ಅನುದಾನದ ಲಭ್ಯತೆಯ ಆಧಾರದ ಮೇಲೆ, ಕ್ಷೇತ್ರ ಪದ್ದತಿಯಲ್ಲಿ ಸಮಗ್ರತೆ ಮತ್ತು ಜೀವನಾಧಾರ ಸುಸ್ಥಿರತೆ ಆಧಾರದ ಮೇಲೆ
ಸೂಚನೆ:ಈ ಕೆಳಕಂಡ ಚಟುವಟಿಕೆಗಳ ಘಟಕ ವೆಚ್ಚ, ಅಂದಾಜು ವಿವರ ಹಾಗೂ ಅನುಷ್ಠಾನ ವಿಧಾನ ಕುರಿತು ಕೇಂದ್ರ ಕಚೇರಿಯಿಂದ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು.
ಜಲಾನಯನ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಿರುವ ರೈತರಿಗೆ 10 ಗುಂಟೆ ಜಮೀನಿನಲ್ಲಿ ಸುಧಾರಿತ ಬಹುವಾರ್ಷಿಕ ಮೇವು ಬೆಳೆಸಲು, ಅಂದರೆ, ಕೋ-1, ಸಿಗ್ನಲ್, ರೋಡ್ಸ್, ಗಿನಿ ಇತ್ಯಾದಿ. ಮಳೆಗಾಲದಲ್ಲಿ ಅನುಷ್ಠಾನ ಮಾಡಬಹುದು.
ಸೂಚನೆ
ಬಹುವಾರ್ಷಿಕ ಹುಲ್ಲು ಬೇರುಗಳನ್ನು ಯಾವುದೇ ಪಶು ಸಂಗೋಪನೆ ಕ್ಷೇತ್ರಗಳಿಂದ/ ಕೇಂದ್ರ ಸರ್ಕಾರದ ಕೇಂದ್ರೀಯ ಮೇವು ಬೀಜ ಉತ್ಪಾದನಾ ಕ್ಷೇತ್ರ ಹೆಸರಘಟ್ಟ, ಬೆಂಗಳೂರಿನಿಂದ/ ಕರ್ನಾಟಕ ಹಾಲು ಒಕ್ಕೂಟದಿಂದ/ ಪಶುವೈದ್ಯಕೀಯ ಕಾಲೇಜುಗಳಿಂದ/ ಕೃಷಿ ವಿಶ್ವವಿದ್ಯಾನಿಲಯಗಳಿಂದ/ ಕೃಷಿ ವಿಸ್ತರಣಾ ಕೇಂದ್ರಗಳಿಂದ/ ಸ್ಥಳೀಯ ಪ್ರಗತಿಪರ ರೈತರಿಂದ ಖರೀದಿಸಬಹುದು.
ಹಾಲವಾಣ, ಗೊಬ್ಬರದ ಗಿಡ, ನುಗ್ಗೆ, ಮುಂತಾದ ಬಹುವಾರ್ಷಿಕ ಮೇವು ಪೊದೆಗಳು, ರೋಡ್ಸ್, ಸಿಗ್ನಲ್, ಅಂಜನ್ ಮುಂತಾದ ಹುಲ್ಲು, ಹಾಗೂ ಸೆರಾಟ್ರೋ, ಸೆಂಟ್ರೋಸೀಮ, ಗ್ಲೈಸೀನ್ ಮುಂತಾದ ದ್ವಿದಳ ಮೇವಿನ ಬಳ್ಳಿಗಳು, ರೈತನ ಕೃಷಿ ಬೆಳೆಗಳ ಅಂಚಿನಲ್ಲಿ ಬೆಳೆಯಲು – ಇದರಿಂದ ವರ್ಷವಿಡೀ ಮೇವು ಲಭ್ಯವಾಗುತ್ತದೆ. ಮೇವಿನ ಮರ ಮತ್ತು ಪೊದೆಗಳು ಗಾಳಿ ತಡೆಯಾಗಿ ಕೊಡ ಉಪಯೋಗವಾಗುತ್ತವೆ. ಸುಧಾರಿತ ಹುಲ್ಲು ನೆಡುವುದರಿಂದ ಬದುಗಳ ಸ್ಥಿರತೆಯನ್ನು ಕಾಪಾಡಬಹುದು.
100 ಮೀಟರ್
1 ಹೆಕ್ಟೇರ್ ಪ್ರದೇಶ
100 ಮೀಟರ್
100 ಮೀಟರ್
ಜಲಾನಯನ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ನಿರ್ಮಿಸುವ ವಿವಿಧ ಬದುಗಳ ಮೇಲೆ ಬಹುವಾರ್ಷಿಕ ಮೇವನ್ನು ಬೆಳೆಯುವುದು.
10 ಗುಂಟೆ ವ್ಯವಸಾಯ ಯೋಗ್ಯ ಜಮೀನಿನಲ್ಲಿ ಬೆಳೆಯಲು ಸುಧಾರಿತ ಮೇವು ಬೀಜಗಳು, ಅಂದರೆ ಆಫ್ರಿಕನ್ ಟಾಲ್ ಮುಸುಕಿನ ಜೋಳ, ಮಲ್ಟಿಕಟ್ ಸೋರ್ಗಮ್, ಮೇವಿನ ಅಲಸಂದೆ, ಮುಂತಾದವುಗಳನ್ನು ರೈತರಿಗೆ ಸರಬರಾಜು ಮಾಡಲಾಗುವುದು.
ಮಾದರಿ 1:
ಆಫ್ರಿಕನ್ ಟಾಲ್ ಮುಸುಕಿನ ಜೋಳ 4 ಕಿಲೊ + ಮೇವಿನ ಅಲಸಂದೆ 3 ಕಿಲೊ.
ಮಾದರಿ 2:
ಬಹು ಕಟಾವು ಜೋಳ 4 ಕಿಲೊ + ಮೇವಿನ ಅಲಸಂದೆ 3 ಕಿಲೊ.
ಸ್ಥಳೀಯವಾಗಿ ರೈತರಿಗೆ/ ಬಳಕೆದಾರರ ಗುಂಪುಗಳಿಗೆ ವಿವಿಧ ಹುಲ್ಲುಬೇರುಗಳ ಲಭ್ಯತೆಗಾಗಿ ಈ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ಈ ಕಾರ್ಯಕ್ರಮವನ್ನು ಆದಾಯ ಉತ್ಪನ್ನ ಚಟುವಟಿಕೆಯಾಗಿ ಆರಿಸಿಕೊಳ್ಳಲು ರೈತರಿಗೆ ಪ್ರೋತ್ಸಾಹ ನೀಡಲಾಗುವುದು. ಇಲ್ಲಿ ಬೆಳೆದಿರುವ ಸುಧಾರಿತ ಹುಲ್ಲು ಬೇರು ಮತ್ತು ದ್ವಿದಳ ಮೇವಿನ ಬೀಜಗಳನ್ನು ಬೇರೆ ರೈತರಿಗೆ, ಸಮುದಾಯ ಭೂಮಿಯಲ್ಲಿ ಸ್ಥಾಪಿಸಲು ಮತ್ತು ಸಂಘಗಳಿಗೆ ಮಾರಾಟ ಮಾಡಬಹುದು. ಮೇವಿನ ಮರಗಳ ಸಸಿಗಳನ್ನು ಅರಣ್ಯ ಘಟಕದ ನರ್ಸರಿಗಳಲ್ಲಿ ಬೆಳೆಸುವರು.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 2/15/2020
ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನುವಾರು ಸಂವರ್...
ಸಮುದಾಯ ಆಧಾರಿತ ಚಟುವಟಿಕೆಗಳ ಬಗ್ಗೆ ಕೆಲವು ವಿವರಗಳು
ಜಾನುವಾರುಗಳ ಅಭಿವೃದ್ಧಿಗಾಗಿ ಸಾಮಥ್ರ್ಯ ಹೆಚ್ಚಿಸಲು ತರಬೇತಿ...
ಕೃಷಿ ಆಧಾರಿತ ಗ್ರಾಮೀಣ ರೈತರ ಆರ್ಥಿಕ ಅಭಿವೃದ್ಧಿಗೆ, ಜಾನುವ...