ಕೃಷಿ ಇಲಾಖೆಯು ರಾಜ್ಯದ ಪ್ರಮುಖ ಅಭಿವೃದ್ದಿ ಇಲಾಖೆಗಳಲ್ಲಿ ಒಂದಾಗಿದ್ದು, ರೈತರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ವಿವಿಧ ಮೂಲಗಳಿಂದ ಹೊರಹೊಮ್ಮುವ ಸಂಶೋಧನಾ ಫಲಿತಾಂಶಗಳನ್ನು ಆಧುನಿಕ ತಂತ್ರಜ್ಞಾನವನ್ನು ಮಳೆ ಹಾಗೂ ನೀರಾವರಿ ಆಶ್ರಯದ ಸುಮಾರು ಒಟ್ಟು ೧೨೪ ಲಕ್ಷ ಹೆಕ್ಟೇರು ಗಳಲ್ಲಿ ಸಾಗುವಳಿ ಮಾಡುತ್ತಿರುವ ೭೮.೩೨ ಲಕ್ಷ ರೈತ ಕುಟುಂಬಗಳಿಗೆ ಪರಿಣಾಮಕಾರಿಯಾಗಿ ವರ್ಗಾಯಿಸುವ ಮೂಲಕ ಇವರುಗಳು ತಮ್ಮ ಹಿಡುವಳಿಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಇಳುವರಿ ಪಡೆಯಲು ನೆರವು ನೀಡುತ್ತಿದೆ. ರಾಜ್ಯದ ಒಟ್ಟಾರೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಇಲಾಖೆಯು
ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ೨೦೧೪-೧೫ ನೇ ಸಾಲಿನಲ್ಲಿ ಕೃಷಿ ಭಾಗ್ಯ, ಕೆ .ಕಿಸಾನ್, ರಾಷ್ಟ್ರೀಯ ಇ ಆಡಳಿತ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಪರಿಕರಗಳ ನಿರ್ವಹಣೆ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ, ಭೂಚೇತನ-ಪ್ಲಸ್ ಮುಂತಾದ ಹೊಸ ಕಾರ್ಯಕ್ರಮಗಳೊಂದಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಭೂ ಚೇತನ, ಸ್ವಬಿಜಾಭಿವ್ರುದ್ದಿ ಯೋಜನೆ, ಮುಂತಾದ ವಿಶಿಷ್ಟ ಕಾರ್ಯಕ್ರಮಗಳ ಅನುಷ್ಠಾನದಿಂದ ಹಾಗೂ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಲಘು ಪೋಷಕಾಂಶ, ಜೈವಿಕ ಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷದಿಗಳ ಸಕಾಲಿಕ ಸರಬರಾಜಿನಿಂದಾಗಿ ೨೦೧೪-೧೫ ರಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಬರಗಾಲ ಪರಿಸ್ಥಿತಿ
ಇದ್ದರೂ ಸಹ ೧೩೦ ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಭಾಗ 1
ಮೂಲ : ರೈತ ಮಿತ್ರ
ಕೊನೆಯ ಮಾರ್ಪಾಟು : 6/27/2020
ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹ...
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.