অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತಳಿಗಳು

ಗುಣಮಟ್ಟದ ರೇಷ್ಮೆ ಉತ್ಪಾದನೆ ಮತ್ತು ಉತ್ಪಾದಕತೆ ಗಮನದಲ್ಲಿಟ್ಟುಕೊಂಡು ರೇಷ್ಮೆ ಸಂಶೋಧನಾಲಯಗಳು ರೇಷ್ಮೆ ಹುಳುವಿನ ಹಲವಾರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿವೆ. ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆಯಾಶ್ರಿತ ಪ್ರದೇಶ, ಬಯಲು ಸೀಮೆ, ಮಲೆನಾಡು ಹಾಗೂ ಅಧಿಕ ಉಷ್ಣಾಂಶವುಳ್ಳ ಪ್ರದೇಶಗಳಿದ್ದು ರಾಜ್ಯದ ಎಲ್ಲಾ ಭೌಗೋಳಿಕ ಹಾಗೂ ವಿವಿಧ ಹವಾಮಾನಗಳಿಗೆ ಹೊಂದಿಕೊಂಡು ಉತ್ತಮ ಫಲಿತಾಂಶ ನೀಡುವ ಗಡಸು ತಳಿಗಳನ್ನು ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ತಳಿ ಶಾಸ್ತ್ರ್ರಜ್ಞರು ಹಲವಾರು ದ್ವಿತಳಿ / ಸಂಕರಣ ತಳಿಗಳನ್ನು ಹೊರತಂದಿರುತ್ತಾರೆ. ಇವುಗಳಲ್ಲಿ ಕೆಲವು ತಳಿಗಳು ರೈತರಲ್ಲಿ ಜನಪ್ರಿಯಗೊಂಡಿವೆ. ಅಧಿಕ ಇಳುವರಿ ನೀಡುವ ರೇಷ್ಮೆ ಹುಳುವಿನ ತಳಿಗಳು ಆಧುನಿಕ ರೇಷ್ಮೆ ಕೃಷಿಯ ಸಾಧನೆ. ಇತ್ತೀಚಿಗೆ ಅಭಿವೃದ್ಧಿಪಡಿಸಿರುವ ಕೆಲವು ರೇಷ್ಮೆ ಹುಳುವಿನ ತಳಿಗಳ ಗುಣಲಕ್ಷಣಗಳನ್ನು ಇಲ್ಲಿ ವಿವರಿಸಲಾಗಿದೆ.
ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ತಲಘಟ್ಟಪುರ ಇವರು ಅಭಿವೃದ್ಧಿಪಡಿಸಿರುವ ತಳಿಗಳು

ದ್ವಿತಳಿಗಳು :

ಎನ್‍ಪಿ2
ಈ ತಳಿಯ ಹುಳುಗಳು ಮಚ್ಚೆ ಹೊಂದಿರುವುದಿಲ್ಲ. ಸೊಪ್ಪನ್ನು ಚುರುಕಾಗಿ ತಿನ್ನುತ್ತವೆ. ಹುಳು ಹಂತದ ಅವಧಿಯು ಬಳಕೆಯಲ್ಲಿರುವ ದ್ವಿತಳಿಗಳಿಗೆ ಹೋಲಿಸಿದರೆ 1-2 ದಿನ ಕಡಿಮೆ ಇರುತ್ತದೆ. ಹುಳುಗಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದ್ದು ಕಡಿಮೆ ಅವಧಿಯಲ್ಲಿ ಹಣ್ಣಾಗುತ್ತವೆ. ಗೂಡುಗಳು ಗಿಡ್ಡವಾಗಿ, ಕಡಲೆಕಾಯಿ ಆಕಾರವನ್ನು ಹಾಗೂ ದುಂಡಾದ ತುದಿಗಳನ್ನು ಹೊಂದಿದ್ದು ಸಂಪೀಡನವು ಆಳವಾಗಿರುವುದಿಲ್ಲ.
ಕೆಎಸ್‍ಓ1
ಈ ತಳಿಯ ಹುಳುಗಳೂ ಸಹ ಮಚ್ಚೆಯನ್ನು ಹೊಂದಿರುವುದಿಲ್ಲ ಹಾಗೂ ಚುರುಕಾಗಿ ಸೊಪ್ಪನ್ನು ತಿನ್ನುತ್ತದೆ. ಈಗ ಬಳಕೆಯಲ್ಲಿರುವ ದ್ವಿತಳಿಗಿಂತ 1-2 ದಿನ ಕಡಿಮೆ ಹುಳುಸಾಕಾಣಿಕೆ ಅವಧಿಯನ್ನು ಹೊಂದಿರುತ್ತದೆ ಹುಳುಗಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದ್ದು, ಕಡಿಮೆ ಸಮಯದಲ್ಲಿ ಹಣ್ಣಾಗಿ ಅಂಡಾಕಾರದ ಗೂಡನ್ನು ಕಟ್ಟುತ್ತವೆ. ಗೂಡಿನ ಕವಚವು ಗಟ್ಟಿಯಾಗಿದ್ದು ಮಧ್ಯಮ ಸಂಪೀಡನ ಹೊಂದಿರುತ್ತದೆ.
ಎಚ್‍ಎನ್‍ಡಿ
ಈ ತಳಿಯ ಗೂಡುಗಳ ಕವಚದ ಪಮಾಣ ಹೆಚ್ಚಾಗಿದ್ದು, ಉಷ್ಣವಲಯ ಪ್ರದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ತಳಿಯು ಕಡಲೆಕಾಯಿ ಆಕಾರದ ಗೂಡನ್ನು ಕಟ್ಟುತ್ತವೆ. ಉಷ್ಣವಲಯದ ಇತರೆ ಬಹುಸಂತತಿ ಮತ್ತು ದ್ವಿಸಂತತಿ ತಳಿಗಳಿಗೆ ಹೋಲಿಸಿದಾಗ ಈ ತಳಿಯ ಸಾಕಾಣಿಕಾ ಅವಧಿಯು 1-1ಳಿ ದಿನಗಳನ್ನು ಕಡಿಮೆ ಇರುತ್ತದೆ. ಇವುಗಳು ರೋಗನಿ ರೋಧಕ ಶಕ್ತಿ ಹೊಂದಿದ್ದು ಇತರೆ ಸಂಕರಣ ತಳಿಗಳಿಗೆ ಹೋಲಿಸಿದಲ್ಲಿ ಕಡಿಮೆ ಸೊಪ್ಪು ತಿನ್ನುತ್ತವೆ. ಕರಗಿದ ಗೂಡುಗಳ ಸಂಖ್ಯೆ ಕಡಿಮೆ ಇರುತ್ತದೆ.
ಎನ್‍ಕೆ2
ಈ ತಳಿಯ ಗೂಡುಗಳ ಕವಚದ ಪ್ರಮಾಣ ಹೆಚ್ಚಾಗಿದ್ದು ಉಷ್ಣವಲಯ ಪ್ರದೇಶಗಳಲ್ಲಿ ಸಾಕಣೆ ಮಾಡಬಹುದಾಗಿದೆ. ಈ ತಳಿಯು ಅಂಡಾಕಾರದ ಗೂಡನ್ನು ಕಟ್ಟುತ್ತವೆ. ಎಚ್‍ಎನ್‍ಡಿ ತಳಿಯಂತೆ ಈ ತಳಿಯು ಸಾಕಾಣಿಕಾ ಅವಧಿಯು 1-1ಳಿ ದಿನಗಳಷ್ಟು ಕಡಿಮೆ ಇರುತ್ತದೆ. ಇವುಗಳು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದು ಇತರ ಸಂಕರಣ ತಳಿಗಳಿಗೆ ಹೋಲಿಸಿದಲ್ಲಿ ಕಡಿಮೆ ಸೊಪ್ಪು ತಿನ್ನುತ್ತವೆ. ಇವುಗಳ ಕೋಶಗಳು ಉತ್ತಮವಾಗಿದ್ದು ಕರಗಿದ ಗೂಡುಗಳ ಸಂಖ್ಯೆ ಕಡಿಮೆ ಇರುತ್ತದೆ.
ಸಿ 104 ಮತ್ತು ಸಿ 110 (ಅ 104, ಅ 110)
ಈ ತಳಿಗಳ ಹುಳುಗಳು ಮಚ್ಚೆಯಿಲ್ಲದೆ ಸಾದಾ ಇದ್ದು, ಕಡಲೆಕಾಯಿ ಆಕಾರದ ಬಿಳಿ ಗೂಡು ಕಟ್ಟುವ ಗುಣ ಧರ್ಮವನ್ನು ಹೊಂದಿರುತ್ತವೆ. ಈ ತಳಿಗಳನ್ನು ಮಳೆ ಆಶ್ರಿತ ಪ್ರದೇಶಗಳಿಗೆ ಅಭಿವೃದ್ಧಿ ಪಡಿಸಲಾಗಿದೆ. ಈಗ ಪ್ರಚಲಿತದಲ್ಲಿರುವ ಸಿ.ನಿಚಿ ತಳಿಗಿಂತಲೂ ಉತ್ತಮವಾಗಿದ್ದು ಶುದ್ಧ ಮೈಸೂರು ತಳಿಯೊಂದಿಗೆ ಉತ್ತಮ ಸಂಕರಣ ಸಾಮಥ್ರ್ಯವನ್ನು ಹೊಂದಿರುತ್ತವೆ.

ಬಹುಸಂತತಿ ತಳಿಗಳು :

ಎಂ.ಹೆಚ್1
ಈ ತಳಿಯ ಹುಳುಗಳು ಮಚ್ಚೆಯನ್ನು ಹೊಂದಿದ್ದು, ಬಿಳಿ ಬಣ್ಣದ, ಕಡಿಮೆ ಚೂಪಿನ ಆಕಾರವುಳ್ಳ, ಗಟ್ಟಿ ಕವಚವುಳ್ಳ ಗೂಡು ಹೊಂದಿರುತ್ತವೆ. ಈ ತಳಿಗಳು ರೋಗ ನಿರೋಧಕ ಶಕ್ತಿಯನ್ನು ಮತ್ತು ಅಧಿಕ ಗೂಡಿನ ಇಳುವರಿ ಹಾಗೂ ಹೆಚ್ಚಿನ ರೇಷ್ಮೆ ಅಂಶಗಳನ್ನು ಹೊಂದಿವೆ. ಈ ತಳಿಯ ಸಾಕಾಣಿಕಾ ಅವಧಿಯು ಶುದ್ಧ ಮೈಸೂರು ತಳಿಗಿಂತ ಎರಡು ದಿನಗಳಷ್ಟು ಕಡಿಮೆ ಇರುತ್ತದೆ.
ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಮೈಸೂರು, ಇವರು ಅಭಿವೃದ್ಧಿ ಪಡಿಸಿರುವ ತಳಿಗಳು
ದ್ವಿತಳಿಗಳು :
ಸಿಎಸ್‍ಆರ್ 2
ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣವು ಸರಾಸರಿ 500-550 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಮಚ್ಚೆಯನ್ನು ಹೊಂದಿರುವುದಿಲ್ಲ. ಒಟ್ಟು ಹುಳುವಿನ ಕಾಲಾವಧಿಯು ಸುಮಾರು 23-24 ದಿನಗಳು. ಗೂಡು ಬಿಳಿ ಬಣ್ಣ ಮತ್ತು ಅಂಡಾಕಾರವಾಗಿದ್ದು ಗೂಡಿನಲ್ಲಿ ಕವಚದ ಪ್ರಮಾಣವು ಸುಮಾರು ಶೇ.20ಕ್ಕೂ ಹೆಚ್ಚು ಇರುತ್ತದೆ.
ಸಿಎಸ್‍ಆರ್ 2
ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣವು ಸರಾಸರಿ 500-550 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಮಚ್ಚೆಯನ್ನು ಹೊಂದಿರುವುದಿಲ್ಲ. ಒಟ್ಟು ಹುಳುವಿನ ಕಾಲಾವಧಿಯು ಸುಮಾರು 23-24 ದಿನಗಳು. ಗೂಡು ಬಿಳಿ ಬಣ್ಣ ಮತ್ತು ಅಂಡಾಕಾರವಾಗಿದ್ದು ಗೂಡಿನಲ್ಲಿ ಕವಚದ ಪ್ರಮಾಣವು ಸುಮಾರು ಶೇ.20ಕ್ಕೂ ಹೆಚ್ಚು ಇರುತ್ತದೆ.
ಸಿಎಸ್‍ಆರ್ 3
ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣವು ಸರಾಸರಿ 475-525 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಲಿಂಗ ಸೀಮಿತ ತಳಿಗಳಾಗಿದ್ದು, ನೀಲಿ ಮಿಶ್ರಿತ ಬಿಳಿ ಬಣ್ಣದ್ದಾಗಿವೆ. ಹುಳುವಿನ ಒಟ್ಟು ಕಾಲಾವಧಿ ಸುಮಾರು 23-24 ದಿನಗಳು. ಗೂಡುಗಳು ಬಿಳಿಯದಾಗಿದ್ದು, ಅಂಡಾಕಾರವನ್ನು ಹೊಂದಿರುತ್ತವೆ. ಗೂಡಿನಲ್ಲಿ ರೇಷ್ಮೆ ಪ್ರಮಾಣವು ಶೇ.18-20 ಇರುತ್ತದೆ.
ಸಿಎಸ್‍ಆರ್ 4
ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣವು ಸರಾಸರಿ 470-500ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಮಚ್ಚೆಯಿಲ್ಲದೆ ನೀಲಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಹುಳುವಿನ ಒಟ್ಟು ಕಾಲಾವಧಿ ಸುಮಾರು 24-25 ದಿನಗಳು. ಗೂಡುಗಳು ಬಿಳಿಯದಾಗಿದ್ದು, ಕಡಲೆಕಾಯಿ ಆಕಾರವನ್ನು ಹೊಂದಿರುತ್ತವೆ. ಗೂಡಿನಲ್ಲಿ ಕವಚದ ಪ್ರಮಾಣವು ಶೇ.17-18 ರಷ್ಟು ಇರುತ್ತದೆ.
ಸಿಎಸ್‍ಆರ್ 5
ಈ ತಳಿಯು ಸಿಎಸ್‍ಆರ್ 4ರ ಗುಣಲಕ್ಷಣಗಳನ್ನೇ ಹೊಂದಿದ್ದು ಗೂಡಿನಲ್ಲಿ ಕವಚದ ಪ್ರಮಾಣವು ಸರಾಸರಿ 19-20 ರಷ್ಟಿರುತ್ತದೆ.
ಸಿಎಸ್‍ಆರ್ 6
ಈ ತಳಿಯ ಚಟ್ಟೆ ಇಡುವ ಮೊಟ್ಟೆಗಳ ಪ್ರಮಾಣ 475-525 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಮಚ್ಚೆಗಳನ್ನು ಹೊಂದಿದ್ದು ನೀಲಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಹುಳುವಿನ ಒಟ್ಟು ಕಾಲಾವಧಿ 23-24 ದಿನಗಳು. ಗೂಡು ಬಿಳಿಯ ಬಣ್ಣದ್ದಾಗಿದ್ದು, ಕಡಲೆಕಾಯಿ ಆಕಾರವನ್ನು ಹೊಂದಿರುತ್ತವೆ. ಗೂಡಿನಲ್ಲಿ ರೇಷ್ಮೆ ಪ್ರಮಾಣ ಶೇ.18-20 ರಷ್ಟು ಇರುತ್ತದೆ.
ಸಿಎಸ್‍ಆರ್ 12 (ಅSಖ 12)
ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣ ಸರಾಸರಿ 475-550 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಲಿಂಗಸೀಮಿತ ತಳಿಗಳಾಗಿದ್ದು, ನೀಲಿಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಹುಳುವಿನ ಒಟ್ಟು ಕಾಲಾವಧಿ 23-24 ದಿನಗಳು. ಗೂಡು ಬಿಳಿಯ ಬಣ್ಣದ್ದಾಗಿದ್ದು, ಅಂಡಾಕಾರವನ್ನು ಹೊಂದಿರುತ್ತದೆ. ಗೂಡಿನಲ್ಲಿ ಕವಚದ ಪ್ರಮಾಣ ಶೇ.18-20 ರಷ್ಟು ಇರುತ್ತದೆ.

ಬಹುಸಂತತಿ ತಳಿಗಳು :

ಬಿಎಲ್ 23
ಈ ತಳಿಯು ಶುದ್ಧ ಮೈಸೂರು ತಳಿಗಿಂತಲೂ ಉತ್ತಮ ಗುಣಲಕ್ಷಣಗಳನ್ನು ಹೊಂದಿದೆ. ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣ ಸಮಾರು 460-490 ರಷ್ಟು ಇರುತ್ತದೆ. ಹುಳುಗಳು ಮಚ್ಚೆಗಳನ್ನು ಹೊಂದಿರುವುದಿಲ್ಲ. ಹುಳುಗಳ ಒಟ್ಟು ಕಾಲಾವಧಿ 22-24 ದಿನಗಳು. ಗೂಡುಗಳು ಅಂಡಾಕಾರವಿದ್ದು, ಕಡು ಹಸಿರು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತವೆ. ಈ ತಳಿಯನ್ನು ನೀರಾವರಿ ಪ್ರದೇಶಗಳಲ್ಲಿ ಸಾಕಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಬಿಎಲ್ 24
ಈ ತಳಿಯ ಬಿಎಲ್ 23 ತಳಿಯಂತಯೇ ಉತ್ತಮ ಗುಣಗಳನ್ನು ಹೊಂದಿದೆ. ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣ ಸಮಾರು 480-500 ರಷ್ಟು ಇರುತ್ತದೆ. ಹುಳುಗಳು ಮಚ್ಚೆಗಳನ್ನು ಹೊಂದಿರುವುದಿಲ್ಲ. ಹುಳುಗಳ ಒಟ್ಟು ಕಾಲಾವಧಿ 22-24 ದಿನಗಳು. ಗೂಡುಗಳು ಅಂಡಾಕಾರವಿದ್ದು ಕಡು ಹಸಿರು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತವೆ. ಈ ತಳಿಯನ್ನು ಮಳೆ ಆಶ್ರಿತ ಪ್ರದೇಶಗಳಲ್ಲಿ ಸಾಕಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.
ದ್ವಿ ಸಂಕರಣ ತಳಿಗಳು:
(ಸಿಎಸ್‍ಆರ್6 ಘಿ ಸಿಎಸ್‍ಆರ್26) ಘಿ (ಸಿಎಸ್‍ಆರ್2 ಘಿ ಸಿಎಸ್‍ಆರ್27)
ಈ ತಳಿಯು ಎರಡು ಸಂಕರಣ ತಳಿಗಳ ಫಲಿತಾಂಶವಾಗಿದೆ ಹಾಗೂ ಉತ್ತಮ ಗೂಡಿನ ಇಳುವರಿಯನ್ನು ನೀಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಈ ಹುಳುಗಳು ಸಾಮಾನ್ಯ ಮಚ್ಚೆಗಳನ್ನು ಹೊಂದಿದ್ದು, ಗೂಡುಗಳು ಬಿಳಿ ಬಣ್ನದ್ದಾಗಿರುತ್ತವೆ. 22-23 ದಿನಗಳಲ್ಲಿ ಹುಳುಗಳು ಹಣ್ಣಾಗುತ್ತವೆಯಲ್ಲದೆ ಉತ್ತಮ ರೇಷ್ಮೆ ಅಂಶವನ್ನು ಹೊಂದಿರುತ್ತವೆ.
ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು :
ಪ್ರಯೋಗಾಲಯದ ಗುಣಾತ್ಮಕ ಫಲಿತಾಂಶಗಳು ಕ್ಷೇತ್ರಮಟ್ಟದಲ್ಲಿ ಯಶಸ್ವಿಯಾದಲ್ಲಿ ಪ್ರಯೋಗಗಳ ಯತ್ನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ರೇಷ್ಮೆ ಸಂಶೋಧನಾಲಯಗಳು ಅಭಿವೃದ್ಧಿಪಡಿಸಿರುವ ರೇಷ್ಮೆ ಹುಳುವಿನ ಹೊಸ ತಳಿಗಳನ್ನು ಕ್ಷೇತ್ರಮಟ್ಟದಲ್ಲಿ ಜನಪ್ರಿಯಗೊಳಿಸಲು ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಜೈಕ (ಎIಅಂ)
ಜಪಾನ್ ಅಂತರರಾಷ್ಟ್ರೀಯ ಸಹಕಾರ ನಿಯೋಗ (ಎIಅಂ) ಎಂಬ ಯೋಜನೆಯಡಿಯಲ್ಲಿ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಹೊಸ ಬೈವೋಲ್ಟೈನ್ ಸಿಎಸ್‍ಆರ್ (ಅSಖ) ಎಂಬ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಳಿಗಳ ಸಾಕಣೆ ತಾಂತ್ರಿಕತೆಗಳನ್ನು ಜೈಕ ನಿಯೋಗದ ಸಹಯೋಗದೊಂದಿಗೆ ಇಲಾಖೆಯು ಆಯ್ಕೆ ಮಾಡಿದ ರೈತರಲ್ಲಿ ಪ್ರಚಾರಪಡಿಸುತ್ತಿದೆ.

ದ್ವಿತಳಿ ಪ್ರೇರಣಾ ಕಾರ್ಯಕ್ರಮ :

ಜೈಕಾ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ರೇಷ್ಮೆ ಉತ್ಪಾದಿಸಿ ವಿಶ್ವವ್ಯಾಪಾರ ಒಪ್ಪಂದದಿಂದ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಒದಗಬಹುದಾದ ಸವಾಲನ್ನು ಎದುರಿಸಲು ಸಿಎಸ್‍ಆರ್ ಸಂಕರಣ ತಳಿಗಳ ಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾರ್ಯಕ್ರಮದಿಂದಾಗಿ ರಾಜ್ಯದಲ್ಲಿ ಅಂತರರಾಷ್ಟೀಯ ಗುಣಮಟ್ಟದ ದ್ವಿತಳಿ ರೇಷ್ಮೆ ಉತ್ಪಾದಿಸಲು ಸಹಾಯಕವಾಗುತ್ತದೆ.

ಗುಣಮಟ್ಟದ ರೇಷ್ಮೆ ಉತ್ಪಾದನೆ ಮತ್ತು ಉತ್ಪಾದಕತೆ ಗಮನದಲ್ಲಿಟ್ಟುಕೊಂಡು ರೇಷ್ಮೆ ಸಂಶೋಧನಾಲಯಗಳು ರೇಷ್ಮೆ ಹುಳುವಿನ ಹಲವಾರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿವೆ. ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆಯಾಶ್ರಿತ ಪ್ರದೇಶ, ಬಯಲು ಸೀಮೆ, ಮಲೆನಾಡು ಹಾಗೂ ಅಧಿಕ ಉಷ್ಣಾಂಶವುಳ್ಳ ಪ್ರದೇಶಗಳಿದ್ದು ರಾಜ್ಯದ ಎಲ್ಲಾ ಭೌಗೋಳಿಕ ಹಾಗೂ ವಿವಿಧ ಹವಾಮಾನಗಳಿಗೆ ಹೊಂದಿಕೊಂಡು ಉತ್ತಮ ಫಲಿತಾಂಶ ನೀಡುವ ಗಡಸು ತಳಿಗಳನ್ನು ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ತಳಿ ಶಾಸ್ತ್ರ್ರಜ್ಞರು ಹಲವಾರು ದ್ವಿತಳಿ / ಸಂಕರಣ ತಳಿಗಳನ್ನು ಹೊರತಂದಿರುತ್ತಾರೆ. ಇವುಗಳಲ್ಲಿ ಕೆಲವು ತಳಿಗಳು ರೈತರಲ್ಲಿ ಜನಪ್ರಿಯಗೊಂಡಿವೆ. ಅಧಿಕ ಇಳುವರಿ ನೀಡುವ ರೇಷ್ಮೆ ಹುಳುವಿನ ತಳಿಗಳು ಆಧುನಿಕ ರೇಷ್ಮೆ ಕೃಷಿಯ ಸಾಧನೆ. ಇತ್ತೀಚಿಗೆ ಅಭಿವೃದ್ಧಿಪಡಿಸಿರುವ ಕೆಲವು ರೇಷ್ಮೆ ಹುಳುವಿನ ತಳಿಗಳ ಗುಣಲಕ್ಷಣಗಳನ್ನು ಇಲ್ಲಿ ವಿವರಿಸಲಾಗಿದೆ.ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ತಲಘಟ್ಟಪುರ ಇವರು ಅಭಿವೃದ್ಧಿಪಡಿಸಿರುವ ತಳಿಗಳುದ್ವಿತಳಿಗಳು :ಎನ್‍ಪಿ2ಈ ತಳಿಯ ಹುಳುಗಳು ಮಚ್ಚೆ ಹೊಂದಿರುವುದಿಲ್ಲ. ಸೊಪ್ಪನ್ನು ಚುರುಕಾಗಿ ತಿನ್ನುತ್ತವೆ. ಹುಳು ಹಂತದ ಅವಧಿಯು ಬಳಕೆಯಲ್ಲಿರುವ ದ್ವಿತಳಿಗಳಿಗೆ ಹೋಲಿಸಿದರೆ 1-2 ದಿನ ಕಡಿಮೆ ಇರುತ್ತದೆ. ಹುಳುಗಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದ್ದು ಕಡಿಮೆ ಅವಧಿಯಲ್ಲಿ ಹಣ್ಣಾಗುತ್ತವೆ. ಗೂಡುಗಳು ಗಿಡ್ಡವಾಗಿ, ಕಡಲೆಕಾಯಿ ಆಕಾರವನ್ನು ಹಾಗೂ ದುಂಡಾದ ತುದಿಗಳನ್ನು ಹೊಂದಿದ್ದು ಸಂಪೀಡನವು ಆಳವಾಗಿರುವುದಿಲ್ಲ.ಕೆಎಸ್‍ಓ1ಈ ತಳಿಯ ಹುಳುಗಳೂ ಸಹ ಮಚ್ಚೆಯನ್ನು ಹೊಂದಿರುವುದಿಲ್ಲ ಹಾಗೂ ಚುರುಕಾಗಿ ಸೊಪ್ಪನ್ನು ತಿನ್ನುತ್ತದೆ. ಈಗ ಬಳಕೆಯಲ್ಲಿರುವ ದ್ವಿತಳಿಗಿಂತ 1-2 ದಿನ ಕಡಿಮೆ ಹುಳುಸಾಕಾಣಿಕೆ ಅವಧಿಯನ್ನು ಹೊಂದಿರುತ್ತದೆ ಹುಳುಗಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದ್ದು, ಕಡಿಮೆ ಸಮಯದಲ್ಲಿ ಹಣ್ಣಾಗಿ ಅಂಡಾಕಾರದ ಗೂಡನ್ನು ಕಟ್ಟುತ್ತವೆ. ಗೂಡಿನ ಕವಚವು ಗಟ್ಟಿಯಾಗಿದ್ದು ಮಧ್ಯಮ ಸಂಪೀಡನ ಹೊಂದಿರುತ್ತದೆ.ಎಚ್‍ಎನ್‍ಡಿಈ ತಳಿಯ ಗೂಡುಗಳ ಕವಚದ ಪಮಾಣ ಹೆಚ್ಚಾಗಿದ್ದು, ಉಷ್ಣವಲಯ ಪ್ರದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ತಳಿಯು ಕಡಲೆಕಾಯಿ ಆಕಾರದ ಗೂಡನ್ನು ಕಟ್ಟುತ್ತವೆ. ಉಷ್ಣವಲಯದ ಇತರೆ ಬಹುಸಂತತಿ ಮತ್ತು ದ್ವಿಸಂತತಿ ತಳಿಗಳಿಗೆ ಹೋಲಿಸಿದಾಗ ಈ ತಳಿಯ ಸಾಕಾಣಿಕಾ ಅವಧಿಯು 1-1ಳಿ ದಿನಗಳನ್ನು ಕಡಿಮೆ ಇರುತ್ತದೆ. ಇವುಗಳು ರೋಗನಿ ರೋಧಕ ಶಕ್ತಿ ಹೊಂದಿದ್ದು ಇತರೆ ಸಂಕರಣ ತಳಿಗಳಿಗೆ ಹೋಲಿಸಿದಲ್ಲಿ ಕಡಿಮೆ ಸೊಪ್ಪು ತಿನ್ನುತ್ತವೆ. ಕರಗಿದ ಗೂಡುಗಳ ಸಂಖ್ಯೆ ಕಡಿಮೆ ಇರುತ್ತದೆ.ಎನ್‍ಕೆ2ಈ ತಳಿಯ ಗೂಡುಗಳ ಕವಚದ ಪ್ರಮಾಣ ಹೆಚ್ಚಾಗಿದ್ದು ಉಷ್ಣವಲಯ ಪ್ರದೇಶಗಳಲ್ಲಿ ಸಾಕಣೆ ಮಾಡಬಹುದಾಗಿದೆ. ಈ ತಳಿಯು ಅಂಡಾಕಾರದ ಗೂಡನ್ನು ಕಟ್ಟುತ್ತವೆ. ಎಚ್‍ಎನ್‍ಡಿ ತಳಿಯಂತೆ ಈ ತಳಿಯು ಸಾಕಾಣಿಕಾ ಅವಧಿಯು 1-1ಳಿ ದಿನಗಳಷ್ಟು ಕಡಿಮೆ ಇರುತ್ತದೆ. ಇವುಗಳು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದು ಇತರ ಸಂಕರಣ ತಳಿಗಳಿಗೆ ಹೋಲಿಸಿದಲ್ಲಿ ಕಡಿಮೆ ಸೊಪ್ಪು ತಿನ್ನುತ್ತವೆ. ಇವುಗಳ ಕೋಶಗಳು ಉತ್ತಮವಾಗಿದ್ದು ಕರಗಿದ ಗೂಡುಗಳ ಸಂಖ್ಯೆ ಕಡಿಮೆ ಇರುತ್ತದೆ.ಸಿ 104 ಮತ್ತು ಸಿ 110 (ಅ 104, ಅ 110)ಈ ತಳಿಗಳ ಹುಳುಗಳು ಮಚ್ಚೆಯಿಲ್ಲದೆ ಸಾದಾ ಇದ್ದು, ಕಡಲೆಕಾಯಿ ಆಕಾರದ ಬಿಳಿ ಗೂಡು ಕಟ್ಟುವ ಗುಣ ಧರ್ಮವನ್ನು ಹೊಂದಿರುತ್ತವೆ. ಈ ತಳಿಗಳನ್ನು ಮಳೆ ಆಶ್ರಿತ ಪ್ರದೇಶಗಳಿಗೆ ಅಭಿವೃದ್ಧಿ ಪಡಿಸಲಾಗಿದೆ. ಈಗ ಪ್ರಚಲಿತದಲ್ಲಿರುವ ಸಿ.ನಿಚಿ ತಳಿಗಿಂತಲೂ ಉತ್ತಮವಾಗಿದ್ದು ಶುದ್ಧ ಮೈಸೂರು ತಳಿಯೊಂದಿಗೆ ಉತ್ತಮ ಸಂಕರಣ ಸಾಮಥ್ರ್ಯವನ್ನು ಹೊಂದಿರುತ್ತವೆ.ಬಹುಸಂತತಿ ತಳಿಗಳು :ಎಂ.ಹೆಚ್1ಈ ತಳಿಯ ಹುಳುಗಳು ಮಚ್ಚೆಯನ್ನು ಹೊಂದಿದ್ದು, ಬಿಳಿ ಬಣ್ಣದ, ಕಡಿಮೆ ಚೂಪಿನ ಆಕಾರವುಳ್ಳ, ಗಟ್ಟಿ ಕವಚವುಳ್ಳ ಗೂಡು ಹೊಂದಿರುತ್ತವೆ. ಈ ತಳಿಗಳು ರೋಗ ನಿರೋಧಕ ಶಕ್ತಿಯನ್ನು ಮತ್ತು ಅಧಿಕ ಗೂಡಿನ ಇಳುವರಿ ಹಾಗೂ ಹೆಚ್ಚಿನ ರೇಷ್ಮೆ ಅಂಶಗಳನ್ನು ಹೊಂದಿವೆ. ಈ ತಳಿಯ ಸಾಕಾಣಿಕಾ ಅವಧಿಯು ಶುದ್ಧ ಮೈಸೂರು ತಳಿಗಿಂತ ಎರಡು ದಿನಗಳಷ್ಟು ಕಡಿಮೆ ಇರುತ್ತದೆ.
ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಮೈಸೂರು, ಇವರು ಅಭಿವೃದ್ಧಿ ಪಡಿಸಿರುವ ತಳಿಗಳುದ್ವಿತಳಿಗಳು :ಸಿಎಸ್‍ಆರ್ 2ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣವು ಸರಾಸರಿ 500-550 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಮಚ್ಚೆಯನ್ನು ಹೊಂದಿರುವುದಿಲ್ಲ. ಒಟ್ಟು ಹುಳುವಿನ ಕಾಲಾವಧಿಯು ಸುಮಾರು 23-24 ದಿನಗಳು. ಗೂಡು ಬಿಳಿ ಬಣ್ಣ ಮತ್ತು ಅಂಡಾಕಾರವಾಗಿದ್ದು ಗೂಡಿನಲ್ಲಿ ಕವಚದ ಪ್ರಮಾಣವು ಸುಮಾರು ಶೇ.20ಕ್ಕೂ ಹೆಚ್ಚು ಇರುತ್ತದೆ.ಸಿಎಸ್‍ಆರ್ 2ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣವು ಸರಾಸರಿ 500-550 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಮಚ್ಚೆಯನ್ನು ಹೊಂದಿರುವುದಿಲ್ಲ. ಒಟ್ಟು ಹುಳುವಿನ ಕಾಲಾವಧಿಯು ಸುಮಾರು 23-24 ದಿನಗಳು. ಗೂಡು ಬಿಳಿ ಬಣ್ಣ ಮತ್ತು ಅಂಡಾಕಾರವಾಗಿದ್ದು ಗೂಡಿನಲ್ಲಿ ಕವಚದ ಪ್ರಮಾಣವು ಸುಮಾರು ಶೇ.20ಕ್ಕೂ ಹೆಚ್ಚು ಇರುತ್ತದೆ.ಸಿಎಸ್‍ಆರ್ 3ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣವು ಸರಾಸರಿ 475-525 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಲಿಂಗ ಸೀಮಿತ ತಳಿಗಳಾಗಿದ್ದು, ನೀಲಿ ಮಿಶ್ರಿತ ಬಿಳಿ ಬಣ್ಣದ್ದಾಗಿವೆ. ಹುಳುವಿನ ಒಟ್ಟು ಕಾಲಾವಧಿ ಸುಮಾರು 23-24 ದಿನಗಳು. ಗೂಡುಗಳು ಬಿಳಿಯದಾಗಿದ್ದು, ಅಂಡಾಕಾರವನ್ನು ಹೊಂದಿರುತ್ತವೆ. ಗೂಡಿನಲ್ಲಿ ರೇಷ್ಮೆ ಪ್ರಮಾಣವು ಶೇ.18-20 ಇರುತ್ತದೆ.ಸಿಎಸ್‍ಆರ್ 4ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣವು ಸರಾಸರಿ 470-500ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಮಚ್ಚೆಯಿಲ್ಲದೆ ನೀಲಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಹುಳುವಿನ ಒಟ್ಟು ಕಾಲಾವಧಿ ಸುಮಾರು 24-25 ದಿನಗಳು. ಗೂಡುಗಳು ಬಿಳಿಯದಾಗಿದ್ದು, ಕಡಲೆಕಾಯಿ ಆಕಾರವನ್ನು ಹೊಂದಿರುತ್ತವೆ. ಗೂಡಿನಲ್ಲಿ ಕವಚದ ಪ್ರಮಾಣವು ಶೇ.17-18 ರಷ್ಟು ಇರುತ್ತದೆ.ಸಿಎಸ್‍ಆರ್ 5ಈ ತಳಿಯು ಸಿಎಸ್‍ಆರ್ 4ರ ಗುಣಲಕ್ಷಣಗಳನ್ನೇ ಹೊಂದಿದ್ದು ಗೂಡಿನಲ್ಲಿ ಕವಚದ ಪ್ರಮಾಣವು ಸರಾಸರಿ 19-20 ರಷ್ಟಿರುತ್ತದೆ.ಸಿಎಸ್‍ಆರ್ 6ಈ ತಳಿಯ ಚಟ್ಟೆ ಇಡುವ ಮೊಟ್ಟೆಗಳ ಪ್ರಮಾಣ 475-525 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಮಚ್ಚೆಗಳನ್ನು ಹೊಂದಿದ್ದು ನೀಲಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಹುಳುವಿನ ಒಟ್ಟು ಕಾಲಾವಧಿ 23-24 ದಿನಗಳು. ಗೂಡು ಬಿಳಿಯ ಬಣ್ಣದ್ದಾಗಿದ್ದು, ಕಡಲೆಕಾಯಿ ಆಕಾರವನ್ನು ಹೊಂದಿರುತ್ತವೆ. ಗೂಡಿನಲ್ಲಿ ರೇಷ್ಮೆ ಪ್ರಮಾಣ ಶೇ.18-20 ರಷ್ಟು ಇರುತ್ತದೆ.ಸಿಎಸ್‍ಆರ್ 12 (ಅSಖ 12)ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣ ಸರಾಸರಿ 475-550 ರಷ್ಟು ಇರುತ್ತದೆ. ಈ ತಳಿಯ ಹುಳುಗಳು ಲಿಂಗಸೀಮಿತ ತಳಿಗಳಾಗಿದ್ದು, ನೀಲಿಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಹುಳುವಿನ ಒಟ್ಟು ಕಾಲಾವಧಿ 23-24 ದಿನಗಳು. ಗೂಡು ಬಿಳಿಯ ಬಣ್ಣದ್ದಾಗಿದ್ದು, ಅಂಡಾಕಾರವನ್ನು ಹೊಂದಿರುತ್ತದೆ. ಗೂಡಿನಲ್ಲಿ ಕವಚದ ಪ್ರಮಾಣ ಶೇ.18-20 ರಷ್ಟು ಇರುತ್ತದೆ.ಬಹುಸಂತತಿ ತಳಿಗಳು :ಬಿಎಲ್ 23ಈ ತಳಿಯು ಶುದ್ಧ ಮೈಸೂರು ತಳಿಗಿಂತಲೂ ಉತ್ತಮ ಗುಣಲಕ್ಷಣಗಳನ್ನು ಹೊಂದಿದೆ. ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣ ಸಮಾರು 460-490 ರಷ್ಟು ಇರುತ್ತದೆ. ಹುಳುಗಳು ಮಚ್ಚೆಗಳನ್ನು ಹೊಂದಿರುವುದಿಲ್ಲ. ಹುಳುಗಳ ಒಟ್ಟು ಕಾಲಾವಧಿ 22-24 ದಿನಗಳು. ಗೂಡುಗಳು ಅಂಡಾಕಾರವಿದ್ದು, ಕಡು ಹಸಿರು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತವೆ. ಈ ತಳಿಯನ್ನು ನೀರಾವರಿ ಪ್ರದೇಶಗಳಲ್ಲಿ ಸಾಕಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.ಬಿಎಲ್ 24ಈ ತಳಿಯ ಬಿಎಲ್ 23 ತಳಿಯಂತಯೇ ಉತ್ತಮ ಗುಣಗಳನ್ನು ಹೊಂದಿದೆ. ಈ ತಳಿಯ ಚಿಟ್ಟೆ ಇಡುವ ಮೊಟ್ಟೆಗಳ ಪ್ರಮಾಣ ಸಮಾರು 480-500 ರಷ್ಟು ಇರುತ್ತದೆ. ಹುಳುಗಳು ಮಚ್ಚೆಗಳನ್ನು ಹೊಂದಿರುವುದಿಲ್ಲ. ಹುಳುಗಳ ಒಟ್ಟು ಕಾಲಾವಧಿ 22-24 ದಿನಗಳು. ಗೂಡುಗಳು ಅಂಡಾಕಾರವಿದ್ದು ಕಡು ಹಸಿರು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತವೆ. ಈ ತಳಿಯನ್ನು ಮಳೆ ಆಶ್ರಿತ ಪ್ರದೇಶಗಳಲ್ಲಿ ಸಾಕಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.ದ್ವಿ ಸಂಕರಣ ತಳಿಗಳು:(ಸಿಎಸ್‍ಆರ್6 ಘಿ ಸಿಎಸ್‍ಆರ್26) ಘಿ (ಸಿಎಸ್‍ಆರ್2 ಘಿ ಸಿಎಸ್‍ಆರ್27)ಈ ತಳಿಯು ಎರಡು ಸಂಕರಣ ತಳಿಗಳ ಫಲಿತಾಂಶವಾಗಿದೆ ಹಾಗೂ ಉತ್ತಮ ಗೂಡಿನ ಇಳುವರಿಯನ್ನು ನೀಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಈ ಹುಳುಗಳು ಸಾಮಾನ್ಯ ಮಚ್ಚೆಗಳನ್ನು ಹೊಂದಿದ್ದು, ಗೂಡುಗಳು ಬಿಳಿ ಬಣ್ನದ್ದಾಗಿರುತ್ತವೆ. 22-23 ದಿನಗಳಲ್ಲಿ ಹುಳುಗಳು ಹಣ್ಣಾಗುತ್ತವೆಯಲ್ಲದೆ ಉತ್ತಮ ರೇಷ್ಮೆ ಅಂಶವನ್ನು ಹೊಂದಿರುತ್ತವೆ.ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು :ಪ್ರಯೋಗಾಲಯದ ಗುಣಾತ್ಮಕ ಫಲಿತಾಂಶಗಳು ಕ್ಷೇತ್ರಮಟ್ಟದಲ್ಲಿ ಯಶಸ್ವಿಯಾದಲ್ಲಿ ಪ್ರಯೋಗಗಳ ಯತ್ನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ರೇಷ್ಮೆ ಸಂಶೋಧನಾಲಯಗಳು ಅಭಿವೃದ್ಧಿಪಡಿಸಿರುವ ರೇಷ್ಮೆ ಹುಳುವಿನ ಹೊಸ ತಳಿಗಳನ್ನು ಕ್ಷೇತ್ರಮಟ್ಟದಲ್ಲಿ ಜನಪ್ರಿಯಗೊಳಿಸಲು ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.ಜೈಕ (ಎIಅಂ)ಜಪಾನ್ ಅಂತರರಾಷ್ಟ್ರೀಯ ಸಹಕಾರ ನಿಯೋಗ (ಎIಅಂ) ಎಂಬ ಯೋಜನೆಯಡಿಯಲ್ಲಿ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಹೊಸ ಬೈವೋಲ್ಟೈನ್ ಸಿಎಸ್‍ಆರ್ (ಅSಖ) ಎಂಬ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಳಿಗಳ ಸಾಕಣೆ ತಾಂತ್ರಿಕತೆಗಳನ್ನು ಜೈಕ ನಿಯೋಗದ ಸಹಯೋಗದೊಂದಿಗೆ ಇಲಾಖೆಯು ಆಯ್ಕೆ ಮಾಡಿದ ರೈತರಲ್ಲಿ ಪ್ರಚಾರಪಡಿಸುತ್ತಿದೆ.ದ್ವಿತಳಿ ಪ್ರೇರಣಾ ಕಾರ್ಯಕ್ರಮ :ಜೈಕಾ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ರೇಷ್ಮೆ ಉತ್ಪಾದಿಸಿ ವಿಶ್ವವ್ಯಾಪಾರ ಒಪ್ಪಂದದಿಂದ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಒದಗಬಹುದಾದ ಸವಾಲನ್ನು ಎದುರಿಸಲು ಸಿಎಸ್‍ಆರ್ ಸಂಕರಣ ತಳಿಗಳ ಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾರ್ಯಕ್ರಮದಿಂದಾಗಿ ರಾಜ್ಯದಲ್ಲಿ ಅಂತರರಾಷ್ಟೀಯ ಗುಣಮಟ್ಟದ ದ್ವಿತಳಿ ರೇಷ್ಮೆ ಉತ್ಪಾದಿಸಲು ಸಹಾಯಕವಾಗುತ್ತದೆ.

ಮೂಲ : ಕರ್ನಾಟಕ  ರೇಷ್ಮೆ  ಇಲಾಖೆ

ಕೊನೆಯ ಮಾರ್ಪಾಟು : 10/26/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate