ನೀವು ಗಾರ್ಡನಿಂಗ್ ವಿಷಯದಲ್ಲಿ ಹೊಸಬರಾಗಿದ್ದರೆ ನಿಮಗೆ ಸ್ವಲ್ಪ ಶ್ರಮವಾಗುವುದಂತೂ ಖಂಡಿತ. ಬಿಸಿಲಿನ ಝಳಕ್ಕೆ ಬಾಡಿ ಬಸವಳಿದಿರುವ ನಿಮ್ಮ ತೋಟದ ಗಿಡಗಳಿಗೆ ಹೊಸ ಜೀವ ನೀಡಲು ನೀವು ಪ್ರಯತ್ನಪಡಲೇಬೇಕು. ಗಾರ್ಡನಿಂಗ್‌ಗೆ ಬೇಕಾಗಿರುವ ಸೂಕ್ತವಾದ ಮಾಹಿತಿ ಮೊದಲೇ ಪಡೆದಿದ್ದರೆ ಹುಳುಗಳು ಬಂದಾಗ ಅಥವಾ ಗಿಡ ಒಣಗುತ್ತಿದ್ದರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಮಾಸ್ಟರ್ ಗಾರ್ಡನರ್ ಪೌಲ್ ಜೇಮ್ಸ್ ಗಾರ್ಡನಿಂಗ್ ಮಾಡಲು ಬೇಕಾಗುವ ಸರಳ ಸಲಹೆ ಮತ್ತು ಟ್ರಿಕ್ಸ್ ಬಗ್ಗೆ ತಿಳಿಸಿದ್ದಾರೆ.
ಹಾಗಾದರೆ ಪೌಲ್ ಜೇಮ್ಸ್ ತಿಳಿಸಿದ ಇತ್ತೀಚಿನ ಸಲಹೆಗಳು ಮತ್ತು ಟ್ರಿಕ್ಸ್‌ನಲ್ಲಿ ಏನಿದೆ ? ಎಂಬುದನ್ನು ತಿಳಿಯಲು ಮುಂದೆ ಓದಿ:
ಮಣ್ಣಿನ ಪಾಟ್‌ಗಳಲ್ಲಿರುವ ನೀರಿನ ಅಂಶವನ್ನು ತೆಗೆಯಿರಿ:
ಸಾಮಾನ್ಯವಾಗಿ ಮಣ್ಣಿನ ಪಾಟ್‌ಗಳಲ್ಲಿ ನೀರು ಮಿಶ್ರಿತ ಉಪ್ಪಿನ ಅಂಶ ಇರುವುದರಿಂದ ಅದನ್ನು ವೈಟ್ ವಿನೆಗರ್ ಮತ್ತು ಅಲ್ಕೋಹಾಲ್, ಜೊತೆಗೆ ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಬೇಕು. ನಂತರ ಇದನ್ನು ಪಾಟ್‌ಗೆ ಹಚ್ಚಿ ಬ್ರಶ್‌ನಿಂದ ತಿಕ್ಕಬೇಕು. ಹಾಗೂ ಇದರಲ್ಲಿ ಯಾವುದಾದರು ಗಿಡ ನೆಡುವ ಮೊದಲು ಇದನ್ನು ಸಂಪೂರ್ಣವಾಗಿ ಒಣಗಲು ಬಿಡಿ. ಅಲ್ಲದೆ ಯಾವುದೇ ಕಾರಣಕ್ಕೂ ನೀರಿನ ಅಂಶ ಮಣ್ಣಿನ ಪಾಟ್‌ಗಳಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನೀವು ಗಾರ್ಡನಿಂಗ್ ಮಾಡುವಾಗ ನಿಮ್ಮ ಉಗುರುಗಳ ಕೆಳಗೆ ಮಣ್ಣು ಸೇರುವುದನ್ನು ತಪ್ಪಿಸಲು ಸೋಪ್ನಲ್ಲಿ ಉಗುರುಗಳನ್ನು ತಕ್ಷಣವೇ ಚೆನ್ನಾಗಿ ಶುಚಿಗೊಳಿಸಿ. ಇಲ್ಲದಿದ್ದರೆ ಗಾರ್ಡನಿಂಗ್ ಮುಗಿದ ನಂತರ ಉಗುರಿಗೆ ಅಂಟಿಕೊಂಡ ಮಣ್ಣನ್ನು ಸೋಪ್ ಆಯಿಲ್ ಮುಲಕ ತೆಗೆಯಿರಿ ಇದರಿಂದ ಉಗುರುಗಳು ಸ್ವಚ್ಚವಾಗಿರುತ್ತದೆ.
ಗಿಡಗಳನ್ನು ಟ್ರಿಮ್ ಮಾಡುವಾಗ ಟ್ರಿಮ್ಮರ್‌ಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡರೆ ಗಿಡ ತುಂಡಾಗುವುದು ಅಥವಾ ಜ್ಯಾಮ್ ಆಗುವುದು ತಪ್ಪುತ್ತದೆ. ಉದ್ದವಾಗಿರುವ ಒಂದು ಕೋಲನ್ನು ಅಳತೆ ಕೋಲಾಗಿ ಬಳಸಿ. ಗಾರ್ಡನ್‌ನಲ್ಲಿ ಉದ್ದವಾಗಿರುವ ಒಂದು ಕೋಲನ್ನು ಕೆಳಗೆ ಅಡ್ಡವಾಗಿ ಇಡಿ ಮತ್ತು ಅಳತೆ ಟೇಪ್‌ನಲ್ಲಿ ಇದರ ಅಳತೆ ತೆಗೆದುಕೊಳ್ಳಿ.
ಅದರ ಮೇಲೆ ಇಂಚು ಮತ್ತು ಅಡಿ ಅಂಕಗಳನ್ನು ಗುರುತು ಮಾಡಿಟ್ಟುಕೊಳ್ಳಿ. ನಿರ್ಧಿಷ್ಟ ಅಳತೆಯಲ್ಲಿ ಗಿಡಗಳನ್ನು ನೆಡಬೇಕೆಂದಾಗ ಪದೇ ಪದೇ ಅಳತೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಮೊದಲೇ ಮಾಡಿಟ್ಟುಕೊಂಡ ಗುರುತುಗಳ ಆಧಾರದ ಮೇಲೆ ಗಿಡ ನೆಡಬಹುದು.
ಶಾಶ್ವತ ಗುರುತನ್ನು ಮಾಡಲು ಗಿಡಗಳ ಹೆಸರುಗಳನ್ನು ಕಲ್ಲುಗಳನ್ನು ಅಳವಡಿಸಿ ಕೆಳಗೆ ನೆಲದ ಮೇಲೆ ಆ ಗಿಡಕ್ಕೆ ಸರಿಯಾಗಿ ಬರೆಯಿರಿ.
ಗಿಡಗಳಲ್ಲಿ ಹುಳುಗಳು ಹೆಚ್ಚುತ್ತಿವೆಯೇ?ಕೀಟಾಣುನಾಶಕಗಳನ್ನು ಸಿಂಪಡಿಸುವುದರ ಮೂಲಕ ಇದನ್ನು ಹೋಗಲಾಡಿಸಬಹುದು.ಇನ್ನೊಂದು ಆಸಕ್ತಿಕರ ಕೆಲಸವೆಂದರೆ ಒಂದು ಉದ್ದ ಟೇಪ್ ತೆಗೆದುಕೊಂಡು ಅದನ್ನು ನಿಮ್ಮ ಕೈಗೆ ಸುತ್ತಿಕೊಳ್ಳಿ ನಂತರ ಗಿಡಗಳ ಮೇಲೆ ಅದನ್ನು ನಿಧಾನವಾಗಿ ಭಾರಿಸಿ ಇದರಿಂದ ಗಿದದಲ್ಲಿರುವ ಎಳೆಗಳ ಅಡಿಯಲ್ಲಿರುವ ಹುಳುಗಳು ಕೆಳಗೆ ಬೀಳುವುದನ್ನು ಕಾಣಬಹುದು.
ತರಕಾರಿಗಳ ನೀರನ್ನು ವ್ಯಯಿಸಬೇಡಿ:
ನೀವು ತರಕಾರಿಗಳನ್ನು ಬೇಯಿಸಿ ಉಳಿದ ನೀರನ್ನು ಹಾಗೆಯೇ ಚೆಲ್ಲಬೇಕಾಗಿಲ್ಲ. ಅದನ್ನು ಗಿಡಗಳ ಬುಡದಲ್ಲಿ ಹಾಕಿ ನೋಡಿ ಇದರಿಂದ ಗಿಡ ಬೇಗ ಬೆಳೆಯುವುದನ್ನು ಕಾಣಬಹುದು.
ಕಾಫಿ ಮತ್ತು ಟೀ ಮಾಡಿ ಉಳಿದ ಮಡ್ದನ್ನು ಗಿಡಗಳಿಗೆ ಬಳಸಿ:
ಕಾಫಿ ಮತ್ತು ಟೀ ಮಾಡಿ ಉಳಿದ ಮಡ್ದನ್ನು ಗಿಡದಲ್ಲಿ ಇರುವ ಹುಳುವನ್ನು ಹೋಗಲಾಡಿಸಲು ಮತ್ತು ಬೆರ್ರಿ ಹಣ್ಣುಗಳು, ರೊಡೊಡೆಂಡ್ರೋನ್ಸ್, ಲೆಮರೀ ಮುಂತಾದ ಗಿಡಗಳಿಗೆ ಬಳಸಬಹುದು. ತಿಂಗಳಿಗೊಮ್ಮೆ ಇದನ್ನು ಗಿಡಗಳಿಗೆ ಸಿಂಪಡಿಸುವುದರಿಂದ ಗಿಡಗಳು ಚೆನ್ನಾಗಿ ಬೆಳಯುತ್ತದೆ.
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 2/15/2020