ಅರಣ್ಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ; ಅವುಗಳನ್ನು ಅಲ್ಲಿಂದ ಪಡೆದುಕೊಳ್ಳಬಹುದು.
ಯಾವುದೇ ರೈತ/ಸಾಮಾನ್ಯ ವ್ಯಕ್ತಿ/ಸಂಘಸಂಸ್ಥೆಗಳು ಅರಣ್ಯ ಇಲಾಖೆಯಿಂದ ಸಸಿಗಳಿಗಾಗಿ ಮನವಿ ಮಾಡಬಹುದು.
ಸಸಿಗಳನ್ನು ಪಡೆದುಕೊಳ್ಳಲು ವ್ಯಾಪ್ತಿ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕು.
ನರೇಗಾ (ಎನ್ಆರ್ಇಜಿಎ) ಅಡಿಯಲ್ಲಿ ಕಾರ್ಯಕ್ರಮವು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಿಂದ ಅನುಮೋದಿಸಲ್ಪಟ್ಟಿದ್ದಲ್ಲಿ, ಸಸಿಗಳನ್ನು ಇಲಾಖೆಯ ನರ್ಸರಿಗಳಲ್ಲಿ ಬೆಳೆಸಲಾಗುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಡಲು ರೈತರಿಗೆ ಸಸಿಗಳನ್ನು ನೆಡುವ ಮತ್ತು ನಿರ್ವಹಿಸುವ ವೆಚ್ಚವನ್ನು ನೀಡಲಾಗುವುದು. ಆದಾಗ್ಯೂ, ರಾಜ್ಯ ವಲಯ/ಜಿಲ್ಲಾ ವಲಯ ಯೋಜನೆ ಅಡಿಯಲ್ಲಿ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದಿಲ್ಲ.
ದಿನಾಂಕ 25-02-2009ರ ಸರ್ಕಾರದ ಆದೇಶದಂತೆ ವಿವಿಧ ರೀತಿಯ ಸಸಿಗಳಿಗೆ ಅನ್ವಯವಾಗುವ ದರಗಳು ಕೆಳಕಂಡಂತಿವೆ :
ಕ್ರ ಸಂ. |
ಪಾಲಿಥೀನ್ ಚೀಲದ ಗಾತ್ರ |
2008-09ರಿಂದ ಅನ್ವಯವಾಗುವ ದರಗಳು |
1 |
4” x 6” |
ಪ್ರತಿ ಸಸಿಗೆ ರೂ. 1.00 |
2 |
5” x 6” |
ಪ್ರತಿ ಸಸಿಗೆ ರೂ. 1.50 |
3 |
8” x 12” |
ಪ್ರತಿ ಸಸಿಗೆ ರೂ. 3.00 |
ಪ್ರಾಂತೀಯ ವಿಭಾಗಗಳು - ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಆರ್ಎಸ್ಪಿಡಿ) – ರಾಜ್ಯ ವಲಯ ಯೋಜನೆ.
ಸಾಮಾಜಿಕ ಅರಣ್ಯೀಕರಣ ವಿಭಾಗಗಳು - ಎನ್ಆರ್ಇಜಿಎ (ನರೇಗಾ).
ಹೌದು. ಯಾವುದೇ ಸಂಘಸಂಸ್ಥೆಗೆ ಸಸಿಗಳ ಅಗತ್ಯವಿದ್ದಲ್ಲಿ ಅದು ಅವಶ್ಯಕವಾದ ಹಣವನ್ನು ಸಂಬಂಧಪಟ್ಟ ಅರಣ್ಯ ವಿಭಾಗದಲ್ಲಿ ಠೇವಣಿಯಾಗಿ ಇಡಬಹುದು. ಆದಾಗ್ಯೂ, ಸಸಿಗಳನ್ನು ಬೆಳೆಸಲು ಕನಿಷ್ಠ 10 ರಿಂದ 12 ತಿಂಗಳುಗಳು ಬೇಕಾಗುವುದರಿಂದ ಒಂದು ವರ್ಷ ಮುಂಚಿತವಾಗಿ ಹಣವನ್ನು ಠೇವಣಿಯಾಗಿ ಇಡಬೇಕು.
ನಿಧಿಯ ಹಂಚಿಕೆಯ ಆಧಾರದ ಮೇಲೆ ವಿವಿಧ ವಿಭಾಗಗಳು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಸಸಿಗಳನ್ನು ಬೆಳೆಸುತ್ತವೆ. ಮುಖ್ಯವಾಗಿ ಮಳೆಗಾಲದಲ್ಲಿ ಸಸಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಹಾಗೂ ಇದರಿಂದಾಗಿ ಸಸಿಗಳು ಬಹು ಬೇಗನೆ ಉಪಯೋಗಿಸಲ್ಪಡುತ್ತವೆ. ಆದ್ದರಿಂದ ಸಸಿಗಳ ಅವಶ್ಯಕತೆಯ ಬೇಡಿಕೆಗಳನ್ನು ಒಂದು ವರ್ಷ ಮುಂಗಡವಾಗಿ ಸಲ್ಲಿಸಲು ಸಲಹೆ ಮಾಡಲಾಗಿದೆ.
ಕೊನೆಯ ಮಾರ್ಪಾಟು : 2/15/2020
ಕಾಡು ಮೃಗಗಳಿಂದ ಜಾನುವಾರು ಸಾವಿಗೆ
ಅರಣ್ಯ ಹಕ್ಕು ಮಾನ್ಯ ಮಾಡುವ ಕಾರ್ಯದಲ್ಲಿ ಅರಣ್ಯ ಹಕ್ಕು ಸಮಿ...
ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಕರ್ನಾಟಕ...
ಅರಣ್ಯ ಹಕ್ಕು ಕಾಯ್ದೆ 2006 ರ ಸಂಕ್ಷಿಪ್ತ ಮಾರ್ಗಸೂಚಿ