ಅರಣ್ಯ ಇಲಾಖೆಯು 11-01-1864 ರಂದು ಜನ್ಮತಾಳಿತು. ಆಗ ಐದು ಅಧಿಕಾರಿಗಳನ್ನೊಳಗೊಂಡು ಅದರಲ್ಲಿ ಮೇಜರ್ ಹಂಟರ್ ಅವರು ಸಂರಕ್ಷಣಾಧಿಕಾರಿಗಳೆಂದು, ಅವರಿಗೆ ನಾಲ್ಕು ಅಧಿಕಾರಿಗಳು ಸಹಾಯಕರೆಂದು, ಐಣ. ಜಿ.ಜೆ. ವ್ಯಾನ ಸೋಮರ್ಸೆನ್, ಐಣ. ಇ.ಡಬ್ಲ್ಯೂ.ಸಿ.ಹೆಚ್. ಮಿಲ್ಲರ್, ಶ್ರೀ ಸಿ.ಎ. ಡಾಬ್ಸ್ ಅವರು ಸಹಾಯಕ ಸಂರಕ್ಷಣಾಧಿಕಾರಿಗಳೆಂದು ಮತ್ತು ಶ್ರೀ ಮಾಧವರಾವ್, ಉಪ ಸಹಾಯಕ ಸಂರಕ್ಷಣಾಧಿಕಾರಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಇದನ್ನು ಆಧುನಿಕ ಮೈಸೂರಿನ ಆರಂಭ ಎಂದು ಪರಿಗಣಿಸಬಹುದಾಗಿದೆ. 1886 ರಲ್ಲಿ ಶ್ರೀ ಎಲ್. ಎಕೆಟ್ಸ್ ಅವರನ್ನು ಮೈಸೂರಿನ ಇನ್ಸ್‍ಪೆಕ್ಟರ್ ಜನರಲ್ ಆಫ್ ಫಾರೆಸ್ಟ್ ಎಂದು ನೇಮಕ ಮಾಡಲಾಯಿತು. ಈ ಹೊಸ ಇನ್ಸ್‍ಪೆಕ್ಟರ್ ಜನರಲ್ ಆಫ್ ಫಾರೆಸ್ಟ್ ಅವರು ಇಲಾಖೆಯ ಪುನರ್ ಸಂಘಟನಾ ಕಾರ್ಯವನ್ನು ಪ್ರಾರಂಭಿಸಿದರು. ಜಿಲ್ಲಾಧಿಕಾರಿಗಳು ಅರಣ್ಯದ ಜಿಲ್ಲಾ ಆಡಳಿತಕ್ಕೆ ಜವಾಬ್ದಾರರನ್ನಾಗಿ ಮಾಡಲಾಯಿತು. ಅದಲ್ಲದೆ ವಲಯ ಅರಣ್ಯ ಅಧಿಕಾರಿ, ವನಪಾಲಕರು ಮತ್ತು ವೀಕ್ಷಕರಿಗೆ ಚಿಕ್ಕ ಪ್ರಮಾಣದ ಆಡಳಿತ ವ್ಯವಸ್ಥೆ ಮಾಡಲಾಯಿತು. 1-11-1900 ರಲ್ಲಿ ಶ್ರೀ ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ಎಕ್ಸ್-ಅಫಿಸಿಯೋ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ನಂತರ 1901 ರಲ್ಲಿ ಶ್ರೀ ಪಿಗೋಟ್ ಅವರು ನಿವೃತ್ತರಾದ ಸ್ವಲ್ಪ ಅವಧಿಯಲ್ಲಿಯೇ ಶ್ರೀ ಮುತ್ತಣ್ಣ ಅವರು ಇಲಾಖೆಯ ಮುಖ್ಯಸ್ಥರಾದರು. ಶ್ರೀ ಮುತ್ತಣ್ಣ ಅವರು 12 ವರ್ಷದ ದೀರ್ಘಾವಧಿಯ ಸೇವೆಯನ್ನು ಮಾಡಿ 1913 ರಲ್ಲಿ ನಿವೃತ್ತರಾದರು. ನಂತರ 1914 ರಲ್ಲಿ ಶ್ರೀ ಎಮ್.ಜಿ. ರಾಮರಾವ್ ಅವರು ಉತ್ರರಾಧಿಕಾರಿ ಎನಿಸಿದರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಗಿದ್ದರಿಂದ 1313 ಟನ್ ರಫ್ತಾಗುತ್ತಿದ್ದ ಶ್ರೀಗಂಧ 70 ಟನ್ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯಲ್ಲಿ ಬಹಳ ಹಿನ್ನೆಡೆ ಆಯಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ವಿ ಪಡೆಯಿತು. ಇದು ಮೈಸೂರು ಶ್ರೀಗಂಧದ ವಿಷಯದಲ್ಲಿ ಅತ್ಯಂತ ಮಹತ್ವದ ಘಟನೆ ಇನಿಸಿದೆ. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921 ರಲ್ಲಿ ಸಂರಕ್ಷಣಾಧಿಕಾರಿಯೆಂದು ಕೆಲಸ ನಿರ್ವಹಿಸಿದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯಲ್ಲಿ ಸಂರಕ್ಷಣಾಧಿಕಾರಿಯೆಂದು 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು.
ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯನ್ನು ಬದಲಾಯಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯೆಂಬ ಹುದ್ದೆಯನ್ನಾಗಿ ಪರಿವರ್ತಿಸಿ ಇಲಾಖಾ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಅದಲ್ಲದೆ ಆಡಳಿತಾತ್ಮಕವಾದ ಹುದ್ದೆಯಿಂದ ಅರಣ್ಯದ ವ್ಯೆಜ್ಞಾನಿಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಾಯಿತು. 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಊತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ದಿನಗಳಲ್ಲಿ ಶ್ರೀ ಜಬ್ಬಾರ್ ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೆಂದು ಕೆಲಸ ನಿರ್ವಹಿಸಿ 1945 ರಲ್ಲಿ ನಿವೃತ್ತಿಯಾದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪ್ರರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಅರಣ್ಯ ಕೃಷಿಕ ಹುದ್ದೆಯನ್ನು ನೇಮಕ ಮಾಡಲಾಯಿತು, ಅದಲ್ಲದೆ ರಾಜ್ಯ ಭೂಸಾರ ಸಂರಕ್ಷಣಾಧಿಕಾರಿ ಬೋರ್ಡನ್ನು ಸ್ಥಾಪಿಸುವುದಲ್ಲದೆ ಶ್ರೀಗಂಧ ಸ್ಟ್ರ್ಯೆಕ್ ಕಮಿಟಿ ಸ್ಥಾಪಿಸಲಾಯಿತು. 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರವು ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃಧ್ದಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಲಾಯಿತು.
ಈ ದಶಕದಲ್ಲಿ ಅತ್ಯಂತ ಪ್ರಮುಖ ವಿಷಯವಾದ ಹೊಸ ಮೈಸೂರು ರಾಜ್ಯ (ಕರ್ನಾಟಕ ರಾಜ್ಯ) 1-11-1956 ರಲ್ಲಿ ಉದಯವಾಯಿತು. ಈ ಅವಧಿಯಲ್ಲಿ ಮೈಸೂರು ಇಲಾಖೆಯು ಅತ್ಯಂತ ಮುಖ್ಯ ಬದಲಾವಣೆಗಳನ್ನು ಪಡೆಯಿತು. ಕರ್ನಾಟಕ ಸಂಘಟನೆಯಿಂದ ಐದು ಅರಣ್ಯ ಆಡಳಿತಗಳು (ಹಳೇ ಮೈಸೂರು ರಾಜ್ಯ, ಮುಂಬೈ, ಮದ್ರಾಸ್, ಹ್ಯೆದರಾಬಾದ್ ಮತ್ತು ಕೊಡಗು) ಒಂದೇ ಘಟಕದಲ್ಲಿ ಬೆಸುಗೆ ಆಗಬೇಕಾದುದರಿಂದ ದೊಡ್ಡ ಪ್ರಮಾಣದ ತಾಂತ್ರಿಕ ಮತ್ತು ಆಡಳಿತದ ಸಮಸ್ಯೆಗಳು ಉದ್ಭವಿಸಿದವು. ಅರಣ್ಯ ಖಾಯ್ದೆ ಕಾನೂನುಗಳು, ಪದ್ಧತಿಗಳು ರೂಢಿಗಳು ಮತ್ತು ಸಿಬ್ಬಂದಿಗಳು ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಲು 1962 ರವರೆಗೆ ಕಾಯಬೇಕಾಯಿತು.
ಇಂದಿನ ಮತ್ತು ಮುಂದಿನ ಪೀಳಿಗೆಗಳಿಗಾಗಿ ನಿರಂತರವಾಗಿ ಅರಣ್ಯಗಳನ್ನು ಸಂರಕ್ಷಿಸುವುದು, ನಿರ್ವಹಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮತ್ತು ಮರಗಳನ್ನು ಬೆಳೆಸುವುದು.
ಮೂಲ : ಅರಣ್ಯ ಇಲಾಖೆ
ಕೊನೆಯ ಮಾರ್ಪಾಟು : 7/18/2020
ದಾಳಿಯ ಸಂದರ್ಭದಲ್ಲಿ ಆತನು ಅರಣ್ಯ ಪ್ರದೇಶದಲ್ಲಿ ಯಾವುದೇ ಕಾ...
ಅರಣ್ಯ ಹಕ್ಕು ಕಾಯ್ದೆ 2006 ರ ಸಂಕ್ಷಿಪ್ತ ಮಾರ್ಗಸೂಚಿ
ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಕರ್ನಾಟಕ...
ಅರಣ್ಯ ಹಕ್ಕು ಮಾನ್ಯ ಮಾಡುವ ಕಾರ್ಯದಲ್ಲಿ ಅರಣ್ಯ ಹಕ್ಕು ಸಮಿ...