অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೊಳ್ಳೆ ನಿವಾರಕ ಸಸ್ಯಗಳು

ಸೊಳ್ಳೆ ನಿವಾರಕ ಸಸ್ಯಗಳು

ಮನೆಯಲ್ಲಿಯೇ ಬೆಳೆಸಬಹುದಾದ ಅದ್ಭುತ ಸೊಳ್ಳೆ ನಿವಾರಕ ಸಸ್ಯಗಳು

ಮನೆಯಲ್ಲಿ ಸೊಳ್ಳೆಗಳಿಂದ ದೂರವಿಡಲು ನಾವು ಸೊಳ್ಳೆ ಬತ್ತಿಗಳು (ಕಾಯ್ಲ್ ಗಳು), ಸೊಳ್ಳೆ ನಿವಾರಕ ಕ್ರೀಮ್ ಗಳು, ವಿದ್ಯುನ್ಮಾನ ಸೊಳ್ಳೆ ನಿವಾರಕಗಳು, ಹಾಗೂ ಗಿಡಮೂಲಿಕೆಯ ಸೊಳ್ಳೆ ನಿವಾರಕಗಳನ್ನು ಬಳಸುತ್ತೇವೆ. ಕೆಲವರು ಇ೦ತಹ ಸೊಳ್ಳೆ ನಿವಾರಕಗಳಿಗೆ ಅಲರ್ಜಿಯುಳ್ಳವರಾಗಿದ್ದು, ಇವುಗಳ ಉಪಯೋಗದಿ೦ದ ಮೂಗಿನ ಸೊಳ್ಳೆಗಳು, ತ್ವಚೆ, ಹಾಗೂ ಗ೦ಟಲಿನ ಸಮಸ್ಯೆಗಳಿಗೆ ತುತ್ತಾಗುತ್ತಾರೆ.

ಸೊಳ್ಳೆಗಳನ್ನು ನಿಯ೦ತ್ರಿಸುವುದಕ್ಕಾಗಿ ಜನರು ರಾಸಾಯನಿಕಗಳನ್ನೂ ಬಳಸುತ್ತಾರೆ. ಆದರೆ, ಇವು ಆರೋಗ್ಯ ಹಾಗೂ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು೦ಟು ಮಾಡುತ್ತವೆ. ಸೊಳ್ಳೆಗಳನ್ನು ನೀವು ನೈಸರ್ಗಿಕವಾದ ವಿಧಾನದಿ೦ದ ನಿಯ೦ತ್ರಿಸಬಯಸುವಿರಾದರೆ, ನಿಮ್ಮ ಮನೆಯ ಕೈತೋಟ ಅಥವಾ ಅ೦ಗಳದಲ್ಲಿ ಲಭ್ಯವಿರಬಹುದಾದ ಜಾಗದಲ್ಲಿ ಕೆಲವು ಸೊಳ್ಳೆ ನಿವಾರಕ ಸಸಿಗಳನ್ನು ನೆಟ್ಟು ಬೆಳೆಸಿರಿ.
ಸಸಿಗಳು ಸೊಳ್ಳೆಗಳನ್ನು ದೂರವಿಡುವುದು ಮಾತ್ರವಲ್ಲದೇ ನಿಮ್ಮ ಕೈತೋಟದ ಅ೦ದವನ್ನೂ ಕೂಡ ಹೆಚ್ಚಿಸುತ್ತವೆ. ಬನ್ನಿ ಕೆಲವು ಸೊಳ್ಳೆ ನಿವಾರಕ ಸಸ್ಯಗಳ ಬಗ್ಗೆ ನೋಡೋಣ..

  1. ಕಾಟ್‌ನಿಪ್ (Catni)
  2. ಮೂಲಿಕೆಯು ಪುದಿನದ ಪ್ರಭೇದಕ್ಕೆ ಸೇರಿದ ಸಸ್ಯವರ್ಗವಾಗಿದೆ. ಈ ಸಸಿಯನ್ನು ಸೊಳ್ಳೆ ನಿವಾರಕವೆ೦ದು ಇತ್ತೀಚೆಗಷ್ಟೇ ಘೋಷಿಸಲಾಯಿತು. ಇತ್ತೀಚಿಗಿನ ಅಧ್ಯಯನವೊ೦ದರ ಪ್ರಕಾರ, DE ಇದು ಸೊಳ್ಳೆಯ ನಿವಾರಣೆಯಲ್ಲಿ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. Catnip ಗಿಡವು ಒ೦ದು ದೀರ್ಘಾವಧಿಯ ಸಸ್ಯವಾಗಿದ್ದು, ಒ೦ದು ವೇಳೆ ಅದನ್ನು ಸಾಕಷ್ಟು ಸೂರ್ಯನ ಬೆಳಕು ಬೀಳುವ ಇಲ್ಲವೇ ಭಾಗಶ: ನೆರಳಿರುವ ಜಾಗದಲ್ಲಿ ನೆಟ್ಟರೆ, ಗಿಡವು ಸರಿಸುಮಾರು ಮೂರು ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. Catnip ಸಸ್ಯವು ಬಿಳಿಯ ಅಥವಾ ಲ್ಯಾವೆ೦ಡರ್ ಬಣ್ಣದ ಹೂಗಳನ್ನು ಹೊ೦ದಿರುತ್ತದೆ. ಸೊಳ್ಳೆಗಳು ಹಾಗೂ ಇತರ ಕೀಟಗಳನ್ನು ನಿಯ೦ತ್ರಿಸಲು, Catnip ಅನ್ನು ನಿಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ಡೆಕ್ ನಲ್ಲಿ ಬೆಳೆಯಿರಿ. Catnip ಸಸಿಯ ವಿಶಿಷ್ಟವಾದ ಪರಿಮಳವನ್ನು ಬೆಕ್ಕುಗಳು ಬಹಳ ಇಷ್ಟಪಡುತ್ತವೆಯಾದ್ದರಿ೦ದ, ಗಿಡಗಳನ್ನು ಬೆಕ್ಕುಗಳಿ೦ದ ರಕ್ಷಿಸಲು ನೀವು ಗಿಡದ ಸುತ್ತಲೂ ಬೇಲಿಯನ್ನು ಹಾಕಬೇಕಾಗಬಹುದು. ಸೊಳ್ಳೆಗಳನ್ನು ನಿಯ೦ತ್ರಿಸಲು ನೀವು Catnip ಸಸಿಯನ್ನು ನಾನಾ ರೀತಿಯಲ್ಲಿ ಬಳಸಬಹುದು. ಈ ಸಸಿಯ ತಾಜಾ ಎಲೆಗಳನ್ನು ಚೆನ್ನಾಗಿ ಜಜ್ಜಿಯೋ ಅಥವಾ ಅದರಿ೦ದ ಪಡೆದ ದ್ರವವನ್ನು ತ್ವಚೆಯ ಮೇಲೆ ಲೇಪಿಸಿಕೊಳ್ಳಬಹುದು. .

  3. Ageratum
  4. ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಗುಣವುಳ್ಳ ಮತ್ತೊ೦ದು ಸಸಿಯು Ageratum ಆಗಿದೆ. ಈ ಸಸ್ಯವು ತಿಳಿ ನೀಲಿ ಹಾಗೂ ಬಿಳಿ ಬಣ್ಣದ ಹೂಗಳನ್ನು ಹೊ೦ದಿದ್ದು ಅವು Coumarin ಎ೦ಬ ರಾಸಾಯನಿಕವನ್ನು೦ಟು ಮಾಡುತ್ತವೆ. ಈ ರಾಸಾಯನಿಕವು ಸಹಿಸಲಸಾಧ್ಯವಾದ ವಾಸನೆಯನ್ನು (ಸೊಳ್ಳೆಗಳ ಪಾಲಿಗೆ) ಹೊ೦ದಿದ್ದು, ಅದು ಸೊಳ್ಳೆಗಳನ್ನು ಓಡಿಸಿಬಿಡುತ್ತದೆ. Coumarin ಅನ್ನು ಸಾಮಾನ್ಯವಾಗಿ ವಾಣಿಜ್ಯಾತ್ಮಕ ಸೊಳ್ಳೆ ನಿವಾರಕ ಉತ್ಪನ್ನಗಳಲ್ಲಿ ಹಾಗೂ ಸುಗ೦ಧದ್ರವ್ಯ ಉದ್ಯಮಗಳಲ್ಲಿ ಬಳಸುತ್ತಾರೆ. ತ್ವಚೆಗೆ ಇಷ್ಟವಿಲ್ಲದ ಕೆಲವೊ೦ದು ಧಾತುಗಳು Ageratum ಸಸಿಯಲ್ಲಿರುವುದರಿ೦ದ ಅದನ್ನೆ೦ದಿಗೂ ದೇಹದ ಮೇಲೆ ಉಜ್ಜಿಕೊಳ್ಳಬೇಡಿರಿ. ಈ ಸಸಿಯು ಪೂರ್ಣವಾದ ಅಥವಾ ಭಾಗಶ: ಸೂರ್ಯನ ಬೆಳಕಿನಲ್ಲಿ ಬೆಳೆಯುತ್ತದೆ ಹಾಗೂ ಬೇಸಿಗೆಯುದ್ದಕ್ಕೂ ಹೂಗಳನ್ನು ಬಿಡುತ್ತದೆ.

  5. ಹಾರ್ಸ್ ಮಿ೦ಟ್
  6. ಸೊಳ್ಳೆಗಳನ್ನು ನಿಯ೦ತ್ರಿಸುವಲ್ಲಿ ಹಾರ್ಸ್ ಮಿ೦ಟ್ ಸಸಿಯೂ ಕೂಡ ಸಹಕಾರಿಯಾಗಿದೆ. ಹಾರ್ಸ್ ಮಿ೦ಟ್ ಒ೦ದು ದೀರ್ಘಕಾಲೀನ ಸಸಿಯಾಗಿದ್ದು, ಅದಕ್ಕೇನೂ ವಿಶೇಷವಾದ ಆರೈಕೆಯ ಅಗತ್ಯವಿಲ್ಲ. ಹಾರ್ಸ್ ಮಿ೦ಟ್ ಸಸಿಯ ಸುಗ೦ಧವು citronella ದ೦ತೆಯೇ ಇರುತ್ತದೆ. ಬೆಚ್ಚಗಿನ ವಾತಾವರಣ ಹಾಗೂ ಉಸುಕಿನ೦ತಿರುವ ಮಣ್ಣಿನಲ್ಲಿ ಹಾರ್ಸ್ ಮಿ೦ಟ್ ಹುಲುಸಾಗಿ ಬೆಳೆಯುತ್ತದೆ. ಈ ಸಸಿಯು ಗುಲಾಬಿ ವರ್ಣದ ಹೂಗಳನ್ನು ಬಿಡುತ್ತದೆ. ಹಾರ್ಸ್ ಮಿ೦ಟ್ ಸಸಿಯ ತೈಲದಲ್ಲಿ ಕ್ರಿಯಾಶೀಲ ಘಟಕವಾದ thymol ಸ೦ಯುಕ್ತವಿರುವುದರಿ೦ದ, ಹಾರ್ಸ್ ಮಿ೦ಟ್ ಸಸಿಯು ಫ೦ಗಸ್ ಘಾತಕ ಹಾಗೂ ಸೂಕ್ಷ್ಮಾಣು ಪ್ರತಿರೋಧಕ ಗುಣಲಕ್ಷಣಗಳನ್ನು ನೈಸರ್ಗಿಕವಾಗಿ ಹೊ೦ದಿದೆ. ಮಾತ್ರವಲ್ಲ, ಹಾರ್ಸ್ ಮಿ೦ಟ್ ಸಸಿಯನ್ನು ಫ್ಲೂ ಜ್ವರದ ಚಿಕಿತ್ಸೆಯಲ್ಲಿಯೂ ಬಳಸಿಕೊಳ್ಳಲಾಗುತ್ತದೆ.

  7. ಲ್ಯಾವೆ೦ಡರ್
  8. ಸೊಳ್ಳೆಗಳನ್ನು ಓಡಿಸುವ ನಿಟ್ಟಿನಲ್ಲಿ ಲ್ಯಾವೆ೦ಡರ್ ಒ೦ದು ಚಮತ್ಕಾರಿಕ ಸಸ್ಯವಾಗಿದೆ. ಈ ಸಸಿಯ ಬೆಳವಣಿಗೆಗೆ ಅ೦ತಹ ಆರೈಕೆಯ ಅಗತ್ಯವೇನೂ ಇಲ್ಲದಿರುವುದರಿ೦ದ ಇದನ್ನು ಬೆಳೆಸುವುದು ಸುಲಭ. ಇದು ಸುಮಾರು ನಾಲ್ಕು ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದಾಗಿದ್ದು, ಸೂರ್ಯನ ಬೆಳಕು ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ. ರಾಸಾಯನಿಕಗಳಿ೦ದ ಮುಕ್ತವಾಗಿರುವ ಸೊಳ್ಳೆ ನಿವಾರಕ ದ್ರಾವಣವನ್ನು ಪಡೆಯುವ೦ತಾಗಲು, ಲ್ಯಾವೆ೦ಡರ್ ಸಸಿಯಿ೦ದ ಪಡೆದ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಅದನ್ನು ನೇರವಾಗಿ ತ್ವಚೆಯ ಮೇಲೆ ಲೇಪಿಸಿಕೊಳ್ಳಬಹುದು. ಸೊಳ್ಳೆಗಳನ್ನು ನಿವಾರಿಸುವುದಕ್ಕಾಗಿ ಲ್ಯಾವೆ೦ಡರ್ ಸಸಿಯ ಗಿಡಗಳ ಕು೦ಡಗಳನ್ನು ನೀವು ಕುಳಿತುಕೊಳ್ಳುವ ಸ್ಥಳಗಳಲ್ಲಿರಿಸಿರಿ. ಸೊಳ್ಳೆಗಳನ್ನು ದೂರದಲ್ಲಿರಿಸಲು, ನೀವು ಲ್ಯಾವೆ೦ಡರ್ ಸಸಿಯಿ೦ದ ಪಡೆದ ಎಣ್ಣೆಯನ್ನು ಕುತ್ತಿಗೆ, ಮೊಣಕೈಗಳು, ಹಾಗೂ ಕಾಲುಗಳ ಗ೦ಟುಗಳ ಮೇಲೆ ಹಚ್ಚಿಕೊಳ್ಳಬಹುದು.

  9. ಮಳೆಗಾಲದಲ್ಲಿ ಸೊಳ್ಳೆ ಕಾಟ : ಪಾರಾಗಲು ಸರಳ ಸೂತ್ರ
  10. ಈ ಮಳೆಗಾಲ ಬಂತೆಂದರೆ ಹಾಗೆ, ಮನೆ ಮುಂದೆ ಹಿಂದೆ ಎಲ್ಲ ನೀರು ತುಂಬಿಕೊಂಡು ಏನೋ ಕೊಳಕು ವಾತಾವರಣ, ಅದು ಸಾಲದು ಅಂತ ಈ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಬೇರೆ ಹೆಚ್ಚು. ಮನೆಯಲ್ಲಿ ನೆಮ್ಮದಿಯಾಗಿ ಕೂರಲಿಕ್ಕೂ ಆಗದಷ್ಟು ಸೊಳ್ಳೆ ಕಾಟ. ಮಲಗಿದರೂ, ಎದ್ದರೂ, ಕೂತರೂ ಸೊಳ್ಳೆಗಳ ಗಾನ ಹುಚ್ಚು ಹಿಡಿಸುತ್ತೆ. ಹೊಡೆದು ಹೊಡೆದು ಸಾಕಾಗಿ ಕೈ ಚೆಲ್ಲಿ ಕುಳಿತುಕೊಳ್ಳುವಷ್ಟು ಬೇಜಾರಾಗಿ ಹೋಗುತ್ತೆ.ಆದರೂ ಅದನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ, ಮಲೇರಿಯಾ, ಎಚ್ 1 ಎನ್ 1, ಡೆಂಗ್ಯೂ, ಚಿಕನ್ ಗುನ್ಯಾ ಮುಂತಾದ ಜಲಸಂಬಂಧಿ ರೋಗಗಳು ಹೆಚ್ಚಾಗಿ ಹರಡೋದು ಈ ಸೊಳ್ಳೆಗಳಿಂದಲೇ. ಒಮ್ಮೆ ಈ ರೋಗ ಬಂತೆಂದರೆ ರೋಗಿ ತಿಂಗಳುಗಟ್ಟಲೆ ಹಾಸಿಗೆ ಹಿಡಿಯೋದು ಗ್ಯಾರಂಟಿ. ಆದ್ದರಿಂದ ಈ ಸೊಳ್ಳೆಗಳಿಂದ ದೂರವಿದ್ದಷ್ಟು ನಮಗೇ ಒಳಿತು. ಈ ಸಮಯದಲ್ಲಿ ಸೊಳ್ಳೆಗಳನ್ನು ನಿಯಂತ್ರಣ ಮಾಡುವುದು ಹೇಗೆ ಎಂದು ತಿಳಿದುಕೊಂಡರೆ ಸೊಳ್ಳೆ ಕಾಟದಿಂದ ಮುಕ್ತಿ ಹೊಂದಬಹುದು

    • ಮನೆಯ ಹೊರಗೆ ಮತ್ತು ಒಳಗೆ ನೀರು ತುಂಬಿರದಂತೆ ನೋಡಿಕೊಳ್ಳಿ. ನೀರು ತುಂಬಿದ್ದ ಡ್ರಮ್, ಬಕೆಟ್, ಪಾತ್ರೆ, ಮತ್ತು ಗಿಡದ ಪಾಟುಗಳನ್ನು ಆದಷ್ಟು ಸ್ವಲ್ಪ ಒಣಗಿದಂತಿರುವಂತೆ ನೋಡಿಕೊಳ್ಳಿ, ಇದರಿಂದ ಸೊಳ್ಳೆಗಳು ಬಂದು ಕೂರುವುದನ್ನು ತಡೆಯಬಹುದು. ಪಾಟ್ ಗಳಿಗೆ ಸೊಳ್ಳೆ ನಾಶಕಗಳನ್ನು ಸಿಂಪಡಿಸಿ.
    • ಮನೆ ವಾತಾವರಣ ಶುದ್ಧವಾಗಿರಲಿ. ಕಸ ಕಡ್ಡಿ, ಪೇಪರ್ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳಿಂದ ಮುಕ್ತವಾಗಿದ್ದಷ್ಟು ಸೊಳ್ಳೆಗೆ ಆಯಸ್ಸು ಕಡಿಮೆ. ಮಳೆ ನೀರು ಸುಲಭವಾಗಿ ಹೊರಗಿನ ಚರಂಡಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಆದಷ್ಟು ಆ ಜಾಗ ತಗ್ಗಾಗಿದ್ದು, ನೀರು ಸರಾಗವಾಗಿ ಹರಿದು ಹೋಗಲಿ.

    • ಸೊಳ್ಳೆ ಪರದೆ ಮತ್ತು ಕಿಟಕಿಗಳಿಂದ ಸೊಳ್ಳೆಗಳು ನುಗ್ಗದಂತೆ ಜಾಲರಿ ಹಾಕಿಸಿದರೆ ಉತ್ತಮ.
    • ಸೊಳ್ಳೆ ಬತ್ತಿ, ಸೊಳ್ಳೆ ಅಥವಾ ಕ್ರಿಮಿ ನಾಶಕ, ಬೇವಿನ ಹೊಗೆ ಮುಂತಾದ ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಿದರೆ ಒಳ್ಳೆಯದು.
    • ಒಳಗಿನ ನೀರಿರುವ ವಸ್ತುಗಳು ಮತ್ತು ಹೊರಗೆ ಸ್ವಿಮ್ಮಿಂಗ್ ಪೂಲ್ ಇದ್ದರೆ ಅದು ಶುದ್ಧವಾಗಿರುವಂತೆ ಎಚ್ಚರವಹಿಸಿ. ಆಗಾಗ್ಗೆ ಅದರ ನೀರನ್ನು ಬದಲಾಯಿಸುವುದನ್ನು ಮರೆಯಬೇಡಿ.
    • ಪುಟ್ಟ ಮಕ್ಕಳಿಗೆ ಇದರ ಅಗತ್ಯ ತುಂಬಾ ಇದೆ. ಮಕ್ಕಳಿಗೆ ಸೊಳ್ಳೆ ನಿರೋಧಕ ಲೋಶನ್ ಹಚ್ಚಬಹುದು. ಈ ಮೇಲಿನ ಅಂಶಗಳನ್ನು ಪಾಲಸಿದರೆ ಖಂಡಿತ ಸ್ವಲ್ಪ ಮಟ್ಟಿಗಾದರೂ ಸೊಳ್ಳೆಗಳು ನಿಯಂತ್ರಣಕ್ಕೆ ಬರುತ್ತವೆ.

ಸೊಳ್ಳೆಯ ಸಾಮರ್ಥ್ಯವನ್ನು ನಿರ್ಲಕ್ಷಿಸಿದರೆ ಜೋಕೆ! ಇಂದು ವಿಶ್ವ ಸೊಳ್ಳೆ ದಿನಾಚರಣೆ ಎಂದು ಕೇಳಿದಾಗ ಸೊಳ್ಳೆಗಳ ಬಗ್ಗೆಯೂ ಒಂದು ದಿನಾಚರಣೆಯೇ?  ಎಂದು ನಮಗೆ ಆಶ್ಚರ್ಯದ ಜೊತೆ ಇದು ವಿನೋದವಾದ ವಿಷಯ  ಅನಿಸಿದರೂ ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳನ್ನು ತಂದು ಮನುಷ್ಯರ ನೆಮ್ಮದಿಯನ್ನು ಹಾಳು ಮಾಡಿ, ಮನದಲ್ಲಿ ಭಯ ಹುಟ್ಟಿಸುವ ತಾಕತ್ತು ಸೊಳ್ಳೆಗಿದೆ ಎಂದ ಮೇಲೆ ಸೊಳ್ಳೆಯ ಸಾಮರ್ಥ್ಯವನ್ನು ನಿರ್ಲಕ್ಷ್ಯ ಮಾಡುವುದು ಸರಿಯೇ?

ನಮಗೆ ಗೊತ್ತಿರುವುದು ಪರಿಸರ ದಿನಾಚರಣೆ, ಮಕ್ಕಳ ದಿನಾಚರಣೆ, ಏಡ್ಸ್ ದಿನಾಚರಣೆ, ಶಿಕ್ಷಕರ ದಿನಾಚರಣೆಯಂಥ ಕೆಲವೇ ಕೆಲವು ಆಚರಣೆಗಳು. ಆದರೆ ನಿಮಗೆ ಗೊತ್ತಿರಲಿ, ವರ್ಷದ 365 ದಿನಗಳಲ್ಲಿ ಒಂದಿಲ್ಲೊಂದು ದಿನಾಚರಣೆ ಇದ್ದೇ ಇರುತ್ತದೆ. ಕೈತೊಳೆಯಲೊಂದು ದಿನ, ಕಾಲು ತೊಳೆಯಲೊಂದು, ಪ್ರಾರ್ಥಿಸಲೊಂದು ದಿನ.ಒಂದೆ ಎರಡೆ.

ಆದರೆ, ವಿಶ್ವ ಸೊಳ್ಳೆ ದಿನಾಚರಣೆ ಎಂಬ ಆಚರಣೆಯ ಬಗ್ಗೆ ಕೇಳಿದ್ದೀರಾ? ಕೇಳಿದ್ದೀರಾದರೆ ಇದರ ಬಗ್ಗೆ ನಿಮಗೆ ಎಷ್ಟು ಗೊತ್ತು? ಕಿವಿಯಲ್ಲಿ ಗುಂಯ್ ಅಂದಾಗ ಚಪ್ಪಾಳೆ ಬಾರಿಸಿ ಸೊಳ್ಳೆಯನ್ನು ಕೊಲ್ಲುವುದೊಂದು ಗೊತ್ತೇ ಹೊರತು, ಈ ರಕ್ತ ಹೀರುವ ಪುಟಾಣಿ ಕೊಲೆಗಡುಕ ಮಾಡುವ ಅನಾಹುತಗಳ ಬಗ್ಗೆ ನಮಗೆ ಎಷ್ಟು ಅರಿವಿದೆ? ಇಂಥದೊಂದು ದಿನಾಚರಣೆ ಇದೆ ಎಂದು ಊಹಿಸಿರುವುದು ಕೂಡ ಅಸಾಧ್ಯ. ಹೌದು, ಅಂಥೊಂದು ದಿನಾಚರಣೆಯನ್ನು ಆಗಸ್ಟ್ 20, ಸೋಮವಾರ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಮಲೇರಿಯಾ, ಡೆಂಗ್ಯೂ ಮುಂತಾದ ಮಾರಕ ರೋಗಗಳನ್ನು ಹಬ್ಬುತ್ತ ವಿಶ್ವದಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿರುವ ಅನಾಹುತಕಾರಿ ಸೊಳ್ಳೆ ಬಗ್ಗೆ ಆಚರಣೆ ಏಕೆ ಎಂಬ ಪ್ರಶ್ನೆ ಉದ್ಭವವಾಗಬಹುದು. ಆದರೆ, ಈ ದಿನಾಚರಣೆ ಸೊಳ್ಳೆಯನ್ನು ವೈಭವೀಕರಿಸಲು ಅಲ್ಲ, ಪ್ರಾಣಿ ದಯಾ ಸಂಘದವರು ಕೂಡ ದ್ವೇಷಿಸುವ ಸೊಳ್ಳೆ ಹರಡುವ ಮಾರಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲೆಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತಿದೆ. ನಗಬೇಡಿ, ಉದಾಸೀನವನ್ನೂ ಮಾಡಬೇಡಿ.

ಮಲೇರಿಯಾ ರೋಗ ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಹಬ್ಬುತ್ತದೆ ಎಂದು ರೊನಾಲ್ಡ್ ರಾಸ್ 1897ರಲ್ಲಿ ಕಂಡು ಹಿಡಿದ ದಿನವನ್ನು ಕಳೆದ 114 ವರ್ಷಗಳಿಂದ ವಿಶ್ವದಾದ್ಯಂತ 'ವಿಶ್ವ ಸೊಳ್ಳೆ ದಿನ' ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಶೋಧಕ್ಕಾಗಿ ರೊನಾಲ್ಡ್ ರಾಸ್ ಅವರಿಗೆ ನೋಬೆಲ್ ಪಾರಿತೋಷಕವೂ ಲಭ್ಯವಾಯಿತು. ಆದರೆ, ಮಲೇರಿಯಾ ರೋಗ ನಿರ್ಮೂಲನವಾಗಿದೆಯಾ? ಇನ್ನೂ ಇಲ್ಲ. ಈ ರೋಗದಿಂದ ಈಗಲೂ ಕೂಡ ಪ್ರತಿವರ್ಷ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ.

ಇನ್ನು ಇದೇ ಸೊಳ್ಳೆಯಿಂದಾಗಿ ಡೆಂಗ್ಯೂ ರೋಗ ಪ್ರಪಂಚದೆಲ್ಲೆಡೆ ತಾಂಡವವಾಡುತ್ತಿದೆ.

ಕರ್ನಾಟಕದಲ್ಲಿಯೇ ಈ ವರ್ಷ 16ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಬಿಬಿಎಂಪಿಗೆ ಇದು ನಿಜಕ್ಕೂ ಸವಾಲಾಗಿ ಪರಿಣಮಿಸಿದೆ. ಈ ದೃಷ್ಟಿಯಿಂದಲಾದರೂ ವಿಶ್ವ ಸೊಳ್ಳೆ ದಿನದಂದು ಸೊಳ್ಳೆಗಳ ಬಗ್ಗೆ ಮಾತನಾಡುತ್ತ, ರೋಗದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಎಲ್ಲರೂ ಕೈಹಾಕಬೇಕಿದೆ. ಸೊಳ್ಳೆಯನ್ನು ನಿರ್ನಾಮ ಮಾಡಲಾಗದಿದ್ದರೂ ಸೊಳ್ಳೆ ಕಡಿತದಿಂದ ಸಾಧ್ಯವಾದಷ್ಟು ದೂರವಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಡೆಂಗ್ಯೂ ಹೆಚ್ಚಾಗಿ ಉಲ್ಬಣಿಸುತ್ತಿರುವುದು ಈ ರೋಗದ ಬಗ್ಗೆ ಜಾಸ್ತಿ ಜಾಗೃತಿ ಇಲ್ಲದಿರುವುದು ಮತ್ತು ಅಗತ್ಯವಾದ ಎಚ್ಚರಿಕೆಗಳನ್ನು ತೆಗೆದುಕೊಳ್ಳದಿರುವುದರಿಂದ ಎಂಬುದು ಸರ್ವವಿದಿತವಾಗ ಸಂಗತಿ. ಹಾಗಾಗಿ, ಸೊಳ್ಳೆಗೂ ಒಂದು ದಿನವೆ ಎಂದು ವ್ಯಂಗ್ಯವಾಗಿ ನಕ್ಕು ತಮಾಷೆ ಮಾಡುವ ಬದಲು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜನರಲ್ಲಿ ಜಾಗೃತಿ ಹೆಚ್ಚಿದಷ್ಟೂ ರೋಗ ಹಬ್ಬುವಿಕೆ ನಿಯಂತ್ರಣಕ್ಕೆ ಬರುತ್ತದೆ. ಇದು ಸಾಧ್ಯವಾಗಬೇಕಾದರೆ ಕೆಳಗಿನ ಸಂಗತಿಗಳು ಗಮನದಲ್ಲಿರಲಿ.

  • ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
  • ನೀರು ಹೂಕುಂಡಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ, ತಗಡಿನ ಡಬ್ಬಿಗಳಲ್ಲಿ ನಿಲ್ಲದಂತೆ ನಿಗಾವಹಿಸಬೇಕು.
  • ಸೊಳ್ಳೆಗಳನ್ನು ತಪ್ಪಿಸಲು ಕಾಯ್ಲ್ ಅಥವಾ ಲಿಕ್ವಿಡ್ ಅಥವಾ ಸೊಳ್ಳೆ ಪರದೆಗಳನ್ನು ತಪ್ಪದೆ ಬಳಸಬೇಕು.
  • ಮುಸ್ಸಂಜೆಯ ಹೊತ್ತು ಮನೆಯ ಬಾಗಿಲು ಮುಚ್ಚಿಡುವುದು ಒಳಿತು.
  • ಜ್ವರದ ಲಕ್ಷಣಗಳು ಕಾಣಿಸಿದರೆ ಕೂಡಲೆ ವೈದ್ಯರನ್ನು ಸಂಪರ್ಕಿಸುವುದು.
  • ಆ ಸಂದರ್ಭದಲ್ಲಿ ಮನೆಮಂದಿಯೆಲ್ಲ ಕಾದು ಆರಿಸಿದ ನೀರನ್ನು ಕುಡಿಯುವುದು.
  • ಮತ್ತು ಸಾಧ್ಯವಾದ ಮಟ್ಟಿಗೆ ವಿಶ್ವ ಸೊಳ್ಳೆ ದಿನಾಚರಣೆ ಬಗ್ಗೆ ಪ್ರಚಾರ ಮಾಡುವುದು ಮತ್ತು ತಿಳಿವಳಿಕೆ ಹೇಳುವುದು.

ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಹಾಡುಗಳನ್ನು ಹಾಡುತ್ತಾ ರೂಮನ್ನು ಪ್ರವೇಶಿಸುತ್ತಿದ್ದ ಹಾಗೇ ನಾವು ಡ್ಯಾನ್ಸ್ ಮಾಡಲೇಬೇಕಾಗುತ್ತದೆ. ಸೊಳ್ಳೆ ಸಹವಾಸದಿಂದ ಕಷ್ಟ ಪಡುವುದಕ್ಕಿಂತ ಅದನ್ನು ನಾಶ ಪಡಿಸುವುದೇ ನಮಗೆ ಉಳಿದಿರುವ ಮಾರ್ಗ. ಸೊಳ್ಳೆಯನ್ನು ನಾಶ ಮಾಡಲು ತುಂಬಾ ಕೆಮಿಕಲ್ ಬಳಸಿದರೆ ಅವುಗಳು ನಮ್ಮ ದೇಹಕ್ಕೆ ಸೇರಿ ನಮಗೆ ಮತ್ತಷ್ಟು ಅಪಾಯ ತರಬಹುದು.

ಆದ್ದರಿಂದ ನಮ್ಮ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ಸೊಳ್ಳೆಯನ್ನು ಕೊಲ್ಲುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ:

  1. ಸೊಳ್ಳೆಗೆ ವಾಸಸ್ಥಾನ ಕಲ್ಪಿಸಬೇಡಿ: ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಕಾಯಿಲೆಗಳು ಹರಡುವಂತೆ ಮಾಡುತ್ತದೆ. ಆದ್ದರಿಂದ ಮನೆ ಸುತ್ತ ಮುತ್ತ ನೀರು ನಿಲ್ಲಲು ಬಿಡಬಾರದು. ಪಾತ್ರೆಯಲ್ಲಿ ತುಂಬಿಟ್ಟ ನೀರನ್ನು 2-3 ದಿನಕ್ಕೊಮ್ಮೆ ಬದಲಾಯಿಸಬೇಕು. ಕಸ, ಗಾಡಿಯ ಟೈರ್ ಇವುಗಳನ್ನು ಮನೆಯ ಸುತ್ತ, ಮುತ್ತ ಬಿಸಾಡಬಾರದು. ಟಾಯ್ಲೆಟ್, ಬಾತ್ ರೂಮ್ ಮತ್ತು ಅಡುಗೆ ಕೋಣೆಯನ್ನು ದಿನ ನಿತ್ಯ ಶುಚಿ ಮಾಡಬೇಕು.
  2. ಸೊಳ್ಳೆಗೆ ಹಗಲು ಹೊತ್ತಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಡಿ! ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕೊಳೆತ ತರಕಾರಿ ಮತ್ತು ಕಸದ ಬುಟ್ಟಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತವೆ. ಆದ್ದರಿಂದ ಮನೆಯ ಸಮೀಪ ತರಕಾರಿ ತೋಟವಿದ್ದರೆ ಅದರಲ್ಲಿ ಕಳೆಗಳು ಬೆಳೆಯಲು ಬಿಡಬೇಡಿ ಮತ್ತು ಕೊಳೆತ ತರಕಾರಿಗಳನ್ನು ಮನೆಯ ಸಮೀಪ ಬಿಸಾಡಬಾರದು.ಕಸದ ಬುಟ್ಟಿಯನ್ನು ಪ್ರತಿನಿತ್ಯ ಶುಚಿ ಮಾಡಬೇಕು. ಬೇಡದ ಬಟ್ಟೆ, ಪೇಪರ್ , ಪ್ಲಾಸ್ಟಿಕ್ ಕವರ್ ಗಳನ್ನು ಮನೆಯ ಅಕ್ಕ ಪಕ್ಕ ಬಿಸಾಡಬೇಡಿ, ಕಸದ ಬುಟ್ಟಿಗೆ ಹಾಕಿ. ಅಲ್ಲದೆ ಸೊಳ್ಳೆಗಳು ನಮ್ಮನ್ನು ಕಚ್ಚದಿರಲು DEET, Picaridin, Oil of Lemon Eucalyptus ಮತ್ತು IR3535 ಬಳಸಿದರೆ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲವೆಂದು ಯು.ಎಸ್ ಪರಿಸರ ಸಂರಕ್ಷಣಾ ಘಟಕವು ಹೇಳಿದೆ.

ಆದರೆ ಸೊಳ್ಳೆಗಳ ನಾಶಕ್ಕೆ ಈ ವಸ್ತುಗಳನ್ನು ಬಳಸುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಒಳ್ಳೆಯದು.

  1. ಈ ವಸ್ತುಗಳನ್ನು ಚರ್ಮಕ್ಕೆ ಅಥವಾ ಬಟ್ಟೆಯ ಒಳಗೆ ಹಾಕದೆ ಬಟ್ಟೆಯ ಮೇಲೆ ಹಾಕಬೇಕು.
  2. ಇವುಗಳನ್ನು ಕಣ್ಣು, ಮೂಗು ಮತ್ತು ಬಾಯಿಯ ಹತ್ತಿರ ಸ್ಪ್ರೇ ಮಾಡಬಾರದು.
  3. ಗಾಯಗಳಿದ್ದರೆ ಆ ಭಾಗಕ್ಕೆ ಈ ಸೊಳ್ಳೆ ನಾಶಕಗಳನ್ನು ತಾಗಿಸಬೇಡಿ.
  4. ಈ ಸೊಳ್ಳೆ ನಾಶಕ ಸ್ಪ್ರೇಗಳನ್ನು ಹೊರಗೆ ಹೋಗುವಾಗ ಬಳಸಿ, ನಂತರ ಮನೆಗೆ ಬಂದ ತಕ್ಷಣ ಸೋಪ್ ಹಾಕಿ ಕೈ ಮತ್ತು ಕಾಲುಗಳನ್ನು ಶುಚಿಗೊಳಿಸಿ. ಈ ಸ್ಪ್ರೇಗಳಲ್ಲಿ DEET ಅನ್ನು 2 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಹಾಕಬಾರದು. lemon eucalyptus ಅನ್ನು ದೊಡ್ಡವರು ಮಾತ್ರ ಬಳಸಬೇಕು.

ಮೂಲ : ಬೋಲ್ಡ್ ಸ್ಕೈ

ಕೊನೆಯ ಮಾರ್ಪಾಟು : 6/6/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate