অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಟೆರೆಸ್ ಕಿಚನ್ ಗಾರ್ಡನ್

ಟೆರೆಸ್ ಕಿಚನ್ ಗಾರ್ಡನ್

ಬೆಂಗಳೂರಿನಲ್ಲಿ ಕೈತೋಟ ಮಾಡಿಕೊಳ್ಳುವಷ್ಟು ಜಾಗ ಇರುವವರು ಬಹಳಕಡಿಮೆ ಮಂದಿ. ಈ ಜಾಗದ ಸಮಸ್ಯೆ ಕಂಡುಕೊಂಡ ಉಪಾಯ`ಟೆರೆಸ್‌ ಕಿಚನ್‌ಗಾರ್ಡನ್‌'.

ಟೆರೆಸ್‌ ಮೇಲೆ ಗಾರ್ಡನ್‌ಮಾಡುವ ಪದ್ಧತಿ ಹೊಸತೇನಲ್ಲ. ಆದರೆ ಕೇವಲತರಕಾರಿ ಬೆಳೆಸುವ ಕ್ರಮ ಹೊಸತು. ಟೆರೆಸ್‌ ಕಿಚನ್‌ ಗಾರ್ಡನ್‌ ಮಾಡುವುದರಲ್ಲೂಕೆಲವಷ್ಟು ವಿಧಾನಗಳಿವೆ. ಕುಂಡದಲ್ಲಿ ಮಣ್ಣನ್ನು ಬಳಸಿ ಮಾಡುವಂಥದ್ದು ಒಂದುಕ್ರಮ. ಆದರೆ ಇದರಿಂದ ತೂಕ ಹೆಚ್ಚಾಗಿ ಟೆರೆಸ್‌ಗೆ ತೊಂದರೆಯಾಗುವ ಸಾಧ್ಯತೆಯುಇದೆ. ಅದಕ್ಕಾಗಿ ಹೊಸ ರೀತಿಯಲ್ಲಿ ತರಕಾರಿ ಬೆಳೆಸುವ ವಿಧಾನವನ್ನು ಪೂರ್ಣಆರ್ಗಾನಿಕ್‌ ಎನ್ನುವ ಸಂಸ್ಥೆ ಪ್ರಾರಂಭಿಸಿದೆ.

ಈ ಸಂಸ್ಥೆಯ ಮುಖ್ಯಸ್ಥ ಟಿ. ಎಂ. ಮಲ್ಲೇಶ್‌ ಅವರು ಮೂಲತಃ ಸಾಪ್ಟ್‌ವೇರ್‌ಇಂಜನಿಯರ್‌. ಎನಾದರೂ ಸಾಧನೆ ಮಾಡುವ ತುಮುಲದಿಂದ ಕೃಷಿ ಕ್ಷೇತ್ರವನ್ನುಆಯ್ಕೆ ಮಾಡಿಕೊಂಡರು. ನಂಜನಗೂಡು ಸಮೀಪ ಬಾಳೆ ತೋಟ ಮಾಡಿಕೊಂಡರು.ಆ ಸಂದರ್ಭದಲ್ಲಿ ಅವರಿಗೆ ಬಂದ ಆಲೋಚನೆಯೇ ಟೆರೆಸ್‌ ಗಾರ್ಡನ್‌. ಮಣ್ಣು ಮತ್ತುಕುಂಡದಿಂದ ಟೆರೆಸ್‌ಗೆ ಭಾರವಾಗಬಹುದೆಂದು ತಿಳಿದು ಅದನ್ನು ಬಹಳ ಕಡಿಮೆ ತೂಕಬರುವಂತಹ ವಸ್ತುಗಳನ್ನು ಬಳಸಿ ಮಾಡಲು ಪ್ರಾರಂಭಿಸಿದರು. ಅದು ಹೇಗೆ?

ಟರೆಸ್‌ ಗಾರ್ಡನ್‌ ಹೀಗಿರುತ್ತದೆ:

ನೇರವಾಗಿ ಟೆರೆಸ್‌ ಮೇಲೆ ಯಾವುದನ್ನೂಬೆಳೆಯುವ ಕ್ರಮ ಇಲ್ಲಿಲ್ಲ.ಒಂದು ಅಡಿ ಎತ್ತರ ಮತ್ತುನಾಲ್ಕು x ನಾಲ್ಕು ಅಡಿಅಗಲದ ಕಡಿಮೆ ತೂಕದಮರದ ಬಾಕ್ಸ್‌ಗೆಪ್ಲಾಸ್ಟಿಕ್‌ನ್ನುಮುಚ್ಚುತ್ತಾರೆ. ನಂತರಮಣ್ಣಿನ ಬದಲು ತೆಂಗಿನನಾರಿನ ಪುಡಿ ( ಕೊಕೊಪಿಟ್‌) ಬಳಸಲಾಗುತ್ತದೆ.ಇದರಲ್ಲಿ ತರಕಾರಿಯನ್ನುಬೆಳೆಸಲಾಗುತ್ತದೆ.

ಒಂದು ಬಾಕ್ಸ್‌ 16 ಚದರ ಅಡಿ ಇರುತ್ತದೆ. ಇದರಲ್ಲಿ ಒಂದು ಚದರ ಅಡಿಯಲ್ಲಿಒಂದೊಂದು ಬಗೆಯ ತರಕಾರಿಯನ್ನು ಬೆಳೆಸಲಾಗುತ್ತದೆ. ಇದನ್ನು ತುಂಬಾಯೋಜನಾ ಬದ್ದವಾಗಿ ಮಾಡಲಾಗುತ್ತದೆ. ಟೆರಸ್‌ ಗಾರ್ಡನ್‌ ಮಾಡುವವರು ತಮಗೆಬೇಕಾದ ತರಕಾರಿಯ ಪಟ್ಟಿಯನ್ನು ನೀಡಬೇಕು. ಅದನ್ನು ಗಮನದಲ್ಲಿಟ್ಟುಕೊಂಡುಅವರಿಗೆ ಬೇಕಾದ ತರಕಾರಿಗಳನ್ನು ನಾಟಿಮಾಡಲಾಗುತ್ತದೆ.

ಈ ಪದ್ಧತಿಯಲ್ಲಿ ಕೃಷಿ ಮಾಡುವಾಗ ಯಾವುದೇ ರೀತಿಯ ರಾಸಾಯನಿಕ ಬಳಕೆಮಾಡಲಾಗುವುದಿಲ್ಲ. ಸಂಪೂರ್ಣ ಸಾವಯವ ಪದ್ದತಿ. ಟ್ರೈಕೋಡರ್ಮಾ, ನಿಮ್‌ಕೇಕ್‌, ಹೊಂಗೆ ಹಿಂಡಿ, ಕಡ್ಲೆಕಾಯಿ ಹಿಂಡಿಯನ್ನು ಪೋಷಕಾಂಶಗಳಾಗಿ ಬಳಸುತ್ತಾರೆ.ತರಕಾರಿ ಬೆಳೆಗೆ ರೋಗ ಮತ್ತು ಕೀಟ ಬಂದರೆ ಬೆಳ್ಳುಳ್ಳಿ ರಸ, ಮೆಣಸಿನ ರಸವನ್ನುಬಳಸಿ ನಿಯಂತ್ರಣಕ್ಕೆ ತರುತ್ತಾರೆ. ರೋಗ ನಿಯಂತ್ರಕ್ಕೆ ಬರದಿದ್ದರೆ ರೋಗ ಬಂದಗಿಡವನ್ನು ಕಿತ್ತು ಹಾಕಿ, ಅಲ್ಲಿ ಬೇರೆ ಗಿಡ ನಾಟಿ ಮಾಡಲಾಗುತ್ತದೆ. ನೀರಾವರಿಗಾಗಿಇನರ್‌ ಡ್ರಿಫ್‌ ವ್ಯವಸ್ಥೆಯನ್ನು ಮಾಡಿದ್ದಾರೆ. ಹೆಚ್ಚಿಗೆ ನೀರು ವ್ಯಯವಾಗುವುದಿಲ್ಲ.ಬೆಳಗಿನ ಅವಧಿಯಲ್ಲಿ ನೀರು ಬಿಡಬೇಕಾಗುತ್ತದೆ. ಹೀಗೆ ಮಾಡಿದಾಗ ತೇವಾಂಶಉಳಿಯುತ್ತದೆ.

ಟೆರೆಸ್‌ ತರಕಾರಿ ತೋಟದಲ್ಲಿ ನಾಟಿ ಮಾಡಿದ 30 ದಿನಗಳಲ್ಲಿ ತರಕಾರಿಕೊಯ್ಲಿಗೆ ಬರುತ್ತದೆ. ಅಡುಗೆಗೆ ಫ್ರೆಶ್‌ ತರಕಾರಿ ನಿತ್ಯವೂ ಸಿಗುವುದು ಈ ಟೆರೆಸ್‌ಗಾರ್ಡನ್‌ನ ವೈಶಿಷ್ಟ್ಯ.

‘ಶುದ್ಧ ಮತ್ತು ಫ್ರೆಶ್‌ ತರಕಾರಿಯನ್ನು ನೇರವಾಗಿ ಅಡುಗೆ ಮನೆಗೆ ನೀಡಬೇಕುಎನ್ನುವ ಕನಸನ್ನು ಕಂಡೆ. ಅದನ್ನು ಈ ರೀತಿಯಲ್ಲಿ ಸಾಕಾರ ಗೊಳಿಸುವ ಯತ್ನವನ್ನುಮಾಡುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಲ್ಲಿ ಬಹಳಷ್ಟು ಜನ ಟೆರೆಸ್‌ ಕಿಚನ್‌ಗಾರ್ಡನ್‌ ಬಗ್ಗೆ ಆಸಕ್ತಿನ್ನು ತೋರಿಸಿದ್ದಾರೆ. ಕೆಲವರು ತಮ್ಮ ಮನೆಯ ಮೇಲೆ ಕಿಚನ್‌ಗಾರ್ಡನ್‌ ಮಾಡುತ್ತಿದ್ದಾರೆ’ ಎಂದು ಮಲ್ಲೇಶ್‌ ಅವರು ಹೇಳುತ್ತಾರೆ.

ಈಗಾಗಲೇ ಟೆರೆಸ್‌ ಕಿಚನ್‌ಗಾರ್ಡನ್‌ ಮಾಡುತ್ತಿರುವಮುರುಗವೇಲ್‌ ಅವರು `ಇದೊಂದುಅನುಕೂಲಕರ ಕೃಷಿ. ನನಗೆ ಹಸಿರಮೇಲೆ ಪ್ರೀತಿ ಇತ್ತು. ಇಂತಹ ಕಾನ್ಸೆಪ್ಟ್‌ತಿಳಿದಾಗ ನಾನು ನಮ್ಮ ಮನೆಯಮೇಲೆ ಕಿಚನ್‌ ಗಾರ್ಡನ್‌ಮಾಡಿಕೊಂಡೆ. ತುಂಬಾಉಪಯೋಗವಿದೆ.ದಿನಾಲೂ ಫ್ರೆಶ್‌ತರಕಾರಿ ಸಿಗುತ್ತದೆ ಎನ್ನುತ್ತಾರೆ. ವಿಜಯಾ ಅವರು ಟೆರೆಸ್‌ ಗಾರ್ಡನ್‌ ಮಾಡಿಕೊಂಡುತರಕಾರಿಯನ್ನು ನಿತ್ಯ ಬಳಸುತ್ತಿದ್ದಾರೆ.

ಅಂದ ಹಾಗೆ ಟೆರೇಸ್‌ ಗಾರ್ಡನ್‌ ಅನ್ನು 30 ಚದರ್‌ ಅಡಿಯಿಂದ 80 ಚದರಅಡಿಯವರೆಗೆ ಮಾಡುತ್ತಿದ್ದಾರೆ. 80 ಚದರ ಅಡಿ ಕಿಚನ್‌ ಗಾರ್ಡನ್‌ ಮಾಡಲು 20. 000 ರೂಪಾಯಿ ವೆಚ್ಚ ತಗಲುತ್ತದೆ. 15 ದಿನಕ್ಕೊಮ್ಮೆ ಕಂಪನಿಯಿಂದ ಹೋಗಿತರಕಾರಿ ಗಿಡಗಳ ದೇಖರೇಖು ನೋಡಿಕೊಂಡು ಬರುತ್ತಾರೆ. ಟೆರೆಸ್‌ ಗಾರ್ಡನ್‌ನಗರದಲ್ಲಿ ಒಂದು ಹೊಸ ಬೆಳವಣಿಗೆ ಇದರ ಬಗ್ಗೆ ಮಾಹಿತಿಗಾಗಿ: ಟಿ. ಎಂ. ಮಲ್ಲೇಶ್‌ ೯೯೭೨೩೨೨೯೨೨

ಮೂಲ : ರೈತಾಪಿ

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate