ಬೆಳೆಗಳಿಗೆ ಬೀಜ ಹಂತದಿಂದ ಕೊಯ್ಲು ಮಾಡಿ ಸಂಗ್ರಹಣೆ ಹಂತದವರೆಗೆ ವಿವಿಧ ತರದ ಪೀಡೆಗಳಿಂದ ತೊಂದರೆಯುಂಟಾಗಿ, ಬೆಳೆಯ ಇಳುವರಿ ಹಾಗೂ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ತೊಂದರೆಗಳು ಕೀಟ, ನುಸಿ, ಪಶು-ಪಕ್ಷಿ, ಶಿಲೀಂಧ್ರ, ದುಂಡಾಣು, ನಂಜಾಣು, ಜಂತು, ಕಳೆ ಹಾಗೂ ನಿಸರ್ಗ ವಿಕೋಪಗಳಿಂದುಂಟಾಗುವುದು ಕಂಡು ಬಂದಿದೆ. ನಮ್ಮ ದೇಶದಲ್ಲಿ ಅಂದಾಜು ಶೇ. 15-20 ರಷ್ಟು ನಷ್ಟವು ಕೀಟ, ರೋಗ ಹಾಗೂ ಕಳೆಗಳಿಂದ ಆಗುವುದೆಂದು ಅಂದಾಜು ಮಾಡಲಾಗಿದೆ.
ಸಾಮಾನ್ಯವಾಗಿ ಬೆಳೆಗಳನ್ನು ಪೀಡೆಗಳಿಂದ ರಕ್ಷಿಸಲು ಕೀಟ ರೋಗ ನಿರೋಧಕ ತಳಿಗಳ ಬಳಕೆ, ಸರಿಯಾದ ಬೇಸಾಯ ಕ್ರಮಗಳು (ಬಿತ್ತುವ ಸಮಯ, ಕಾಲಗೈ ಇತ್ಯಾದಿ, ಕಾನೂನು ಕ್ರಮಗಳು ಹಾಗೂ ಕೊನೆಯ ಹಂತವಾಗಿ ರಾಸಾಯನಿಕ ಪೀಡೆನಾಶಕಗಳ ಬಳಕೆ (ಕೀಟ/ರೋಗ/ಕಳೆನಾಶಕಗಳು) ಇತ್ಯಾದಿ ಪದ್ಧತಿಗಳನ್ನು ಆಳವಡಿಸಿಕೊಳ್ಳಲಾಗುತ್ತಿದೆ. ಹಿಡಿತವಿಲ್ಲದ ರಾಸಾಯನಿಕ ಪೀಡೆನಾಶಕಗಳ ಬಳಕೆಯಿಂದ ಆಹಾರ, ನೀರು, ಗಾಳಿ, ಮಣ್ಣು ಹಾಗೂ ವಾತಾವರಣ ಕಲುಷಿತವಾಗಿದ್ದು, ಪೀಡೆಗಳಲ್ಲಿ ನೀರೋಧಕ ಶಕ್ತಿ ಬೆಳವಣಿಗೆಯಾಗಿ, ಮಿತ್ರ ಕೀಟ/ಸೂಕ್ಷ್ಮಾಣುಗಳು ನಾಶವಾಗಿವೆ. ಹೀಗಾಗಿ ಜೈವಿಕ ಪೀಡೆ ಹತೋಟಿಗೆ ಮಹತ್ವ ಬರುತ್ತಿದೆ. ಪ್ರತಿಯೊಂದು ಜೀವಿಗೂ ನಿಸರ್ಗದಲ್ಲಿ ತನ್ನದೆಯಾದ ಶತ್ರುಗಳಿರುವುದು ಸೃಷ್ಟಿಯ ನಿಯಮ. ಅವುಗಳನ್ನು ನೈಸರ್ಗಿಕ ಶತ್ರುಗಳೆಂದು ಕರೆಯಲಾಗುತ್ತಿದೆ.
ಜೈವಿಕ ಪೀಡೆನಾಶಕ ಎಂಬ ಶಬ್ದದಲ್ಲಿ ಪೀಡೆ ಅಂದರೆ ಕೀಟ, ರೋಗ, ಕಳೆಕಸ ಇತ್ಯಾದಿಗಳನ್ನು ಹತೋಟಿಮಾಡಲು ಸಾಮಾನ್ಯವಾಗಿ ಬಳಸುವ ಎಲ್ಲಾ ಜೈವಿಕ ವಸ್ತು ಹಾಗೂ ಸೂಕ್ಷ್ಮಜೀವಿಗಳಿಗೆ ಅನ್ವಯಿಸುತ್ತದೆ. ಜೈವಿಕ ಪೀಡೆನಾಶಕಗಳನ್ನು ಕೆಳಗಿನಂತೆ ವಿಂಗಡಿಸಬಹುದು. ಇವುಗಳಲ್ಲಿ ಮುಖ್ಯವಾಗಿ ಟ್ರೈಕೋಗ್ರಾಮ, ಗೋನಿಯೋಜಸ್, ಬ್ರಕಾನ್ ಪರತಂತ್ರ ಜೀವಿಗಳು, ಪರಭಕ್ಷಕ ಜೀವಿಗಳಾದ ಹೇನು ಸಿಂಹ, ಗುಲಗಂಜಿ ಹುಳು, ಮತ್ತು ಪಕ್ಷಿಗಳಲ್ಲಿ, ಕೀಟಗಳಲ್ಲಿ ರೋಗ ಉತ್ಪತ್ತಿ ಮಾಡುವಂತಹ ನಂಜಾಣುಗಳು ಲಭ್ಯವಿರುವ ಹಾಗೂ ಪರಿಸರಕ್ಕೆ ಧಕ್ಕೆ ಮಾಡದಂತಹ ವಿವಿಧ ಕೀಟ ನಿರ್ವಹಣಾ ವಿಧಾನಗಳನ್ನು ಬಳಸಿಕೊಂಡು ಕೀಟ ಪೀಡೆಗಳನ್ನು ಜೈವಿಕ ಶತ್ರುವಿನ ಸಹಾಯದಿಂದ ಸಕಾಲಿಕವಾಗಿ ನಿರ್ವಹಿಸುವುದು ಜೈವಿಕ ಕೀಟ ನಿಯಂತ್ರಣ ಈ ನೈಸರ್ಗಿಕ ಶತ್ರುಗಳನ್ನು ಜೈವಿಕ ಪೀಡೆನಾಶಕಗಳೆಂದು ಕರೆಯಲಾಗುವುದು, ಇವು ಶಿಲೀಂಧ್ರ, ದುಂಡಾಣು ಮುಂತಾದವುಗಳಾಗಿವೆ ಈ ಮೇಲೆ ತಿಳಿಸಿದ ಪರಿಣಾಮಕಾರಿ ನೈಸರ್ಗಿಕ ಶತ್ರುಗಳನ್ನು ಬೇರೆ ಬೇರೆ ಬೆಳೆಗಳಲ್ಲಿ ಯಾವ ಕೀಟ ಪೀಡೆಗಳಿಗೆ ಉಪಯೋಗಿಸಬೇಕೆಂಬ ವಿವರವಾದ ಮಾಹಿತಿಯನ್ನು ಕೆಳಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ.
ಜೈವಿಕ ಕೀಟನಾಶಕಗಳು | |
ಪರೋಪಜೀವಿಗಳು/ ಪರಭಕ್ಷಕಗಳು : | ಟ್ರೈಕೋಗ್ರಾಮಾ, ಗೋನಿಯೋಜಸ್, ಬ್ರೇಕಾನ್ ಗುಲಗಂಜಿಹುಳು ಲೇಡಿ ಬರ್ಡ್ ದುಂಬಿ, ಹಸಿರು ಹೇನು ಸಿಂಹ (ಕ್ರೈಸೋಪೆರ್ಲಾ), ಕಂದು ಹೇನು ಸಿಂಹ (ಮೈಕ್ರೋಮಸ್) ಇತ್ಯಾದಿ. |
ಸೂಕ್ಷ್ಮಜೀವಿಗಳು |
ನಂಜಾಣು-ನ್ಯೂಕ್ಲಿಯರ್ ಪಾಲಿಹೈಡ್ರೋಸಿಸ್ ವೈರಸ್ (ಎನ್.ಪಿ.ವಿ) ಗ್ರಾನುಲೋಸಿಸ್ ವೈರಸ್. ದುಂಡಾಣು-ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (ಬಿ.ಟಿ), ಬ್ಯಾಸಿಲಸ್ ಪ್ಯಾಪಿಲೆ. ಶಿಲೀಂಧ್ರ- ಮೆಟಾರೈಜಿಯಂ ಅನೈಸೊಪ್ಲಿಯೆ ಪ್ರೋಟೋಜೋವಾ- ರ್ಯಾಬ್ಡಿಟಿಸ್ ಸ್ಟಿ, ವೈರಿಮಾರ್ಫಾ ನೆಕ್ಟಾರಿಕ್ಸ್, ಸ್ಪೇನೇರ್ನಿಮಾ ಫೇಲ್ಟಿಯೋ |
ಸಸ್ಯ ಜನ್ಯ | ಬೇವು, ತಂಬಾಕು, ಹೊಂಗೆ, ಅಡಸಾಲ, ಲೆಕ್ಕಿ, ಎಕ್ಕಿ ಸೀತಾಫಲ, ಚೈನಾ ಬೆರ್ರಿ ಇತ್ಯಾದಿ. |
ವಿವಿಧ ಬೆಳೆಗಳಿಗೆ ಹಾನಿಮಾಡುವ ಕೀಟಗಳು ಮತ್ತು ಅವುಗಳ ಜೈವಿಕ ಹತೋಟಿ ಕ್ರಮಗಳನ್ನು ಕೋಷ್ಟಕ 1.2.3.4 ಮತ್ತು 5 ರಲ್ಲಿ ಕೊಡಲಾಗಿದೆ. ಜೈವಿಕ ಪೀಡೆನಾಶಕಗಳ ಕುರಿತು ಸಾಕಷ್ಟು ಸಂಶೋಧನೆಗಳು ಈಗ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿವೆ. ಈ ರೋಗನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ರೈತರು ತಾವೇ ತಯಾರು ಮಾಡಿಕೊಳ್ಳಬಹುದಾದಂತಹ ಕೆಲವು ಮುಖ್ಯ ರೋಗನಾಶಕಗಳ ಬಗೆಗೆ ವಿವರ ಕೆಳಗಿನಂತಿವೆ.
ಜೈವಿಕ ರೋಗನಾಶಕಗಳು
1. ಟ್ರೈಕೋಡರ್ಮಾ ಹಾರ್ಜಿಯಾನಮ್ ಮತ್ತು ಟ್ರೈಕೋಡರ್ಮಾ ವಿರಿಡೆ
2. ಸುಡೋಮೊನಾಸ್ ಪ್ಲುರೋಸೆನ್ಸ್
ಟ್ರೈಕೋಡರ್ಮಾ
ಟ್ರೈಕೋಡರ್ಮಾ ಎಂಬ ಶಿಲೀಂಧ್ರದಿಂದ ಮಣ್ಣಿನಿಂದ ಬರುವ ಸಸ್ಯ ರೋಗಗಳ ಜೈವಿಕ ಹತೋಟಿ ಸಾಧ್ಯ ಎನ್ನುವದರ ಬಗ್ಗೆ ಸಸ್ಯರೋಗ ಉಂಟುಮಾಡುವ ಸೂಕ್ಷ್ಮಾಣುಗಳ ಸಂಖ್ಯೆ ಕಡಿಮೆ ಮಾಡಲು, ಅಥವಾ ದೂರವಿಡಲು, ಟ್ರೈಕೋಡರ್ಮಾ ಬಗ್ಗೆ ಜಗತ್ತಿನಾದ್ಯಂತ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಟ್ರೈಕೋಡರ್ಮಾ ಶಿಲೀಂಧ್ರ ಬಹಳ ಶೀಘ್ರವಾಗಿ ಬೆಳೆಯುವ ಗುಣ ಹೊಂದಿದೆ. ಇವುಗಳಲ್ಲಿ ಜಾತಿಗಳು ಈ ರೀತಿ ಇವೆ-1 ಟ್ರೈಕೋಡರ್ಮಾ ಹಾರ್ಜಿಯಾನಂ 2. ಟ್ರೈಕೋಡರ್ಮಾ ವಿರಿಡೆ 3. ಟ್ರೈ. ಹೆಮಾಟಂ 4. ಟ್ರೈ. ಕೊನಿಂಗೈ 5. ಟ್ರೈ. ಸೂಡೊಕೊನಿಂಗೈ 6. ಟ್ರೈ. ಲಾಂಗಿಬ್ರಾಕಿಯೆಟಂ 7. ಟ್ರೈ. ಸಿಟ್ರಿನೊವಿರ್ಡೆ 8. ಟ್ರೈ. ಆಟ್ರಾಕ್ಷಿರೈಡ್ 9. ಟ್ರೈ. ಆರಿಯೊವಿರಿಡೆ 10. ಟ್ರೈ. ಪೊಲಿಸೋರಂ ಮತ್ತು 11. ಟ್ರೈ. ಪಿಲುಲಿಫೆರಂ ಹೆಚ್ಚಾಗಿ ಬಳಕೆಯಲ್ಲಿರುವ ಜಾತಿಗಳೆಂದರೆ ಟ್ರೈಕೋಡರ್ಮಾ ಹಾರ್ಜಿಯಾನಂ, ಟ್ರೈ. ವಿರಿಡೆ, ಟ್ರೈ ಕೊನಿಂಗೈ ಮತ್ತು ಟ್ರೈಕೋಡರ್ಮಾ ಸೂಡೋಕೊನಿಂಗೈ.
ಟ್ರೈಕೋಡರ್ಮಾ ಒಂದು ಮಾದರಿ ಸರಳ ಉಪಯೋಗದ ಜೈವಿಕ ಶಿಲೀಂಧ್ರನಾಶಕವಾಗಿದೆ. ಇದನ್ನು ಬೇರ್ಪಡಿಸಿ ಪ್ರಯೋಗ ಶಾಲೆಗಳಲ್ಲಿ ಬೆಳೆಸುವುದು ಸರಳ. ಯಾವದೇ ವಸ್ತುವಿನ ಮೇಲೆ ಬೇಗನೆ ಬೆಳೆಯುತ್ತದೆ ಹಾಗೂ ಹೆಚ್ಚಿನ ರೋಗಾಣುಗಳಿಗೆ ಮಾರಕವಾಗಿದೆ.
ಟ್ರೈಕೋಡರ್ಮಾ ತಯಾರಿಸುವುದು
ಬೇರೆ ಬೇರೆ ವಿಧಾನಗಳಿಂದ ಟ್ರೈಕೋಡರ್ಮಾ ತಯಾರಿಸಬಹುದು. ತಯಾರಿಕೆಯ ಹಂತಗಳು 1. ಇನಾಕ್ಯುಲಂ ಉತ್ಪಾದನೆ, 2. ಕಲ್ಚರ್ ಮೀಡಿಯಂ ಆರಿಸುವುದು (ಟ್ರೈಕೋಡರ್ಮಾಗೆ ಬೇಕಾದದ್ದು) 3. ಬೆಳವಣಿಗೆ 4. ರಾಶಿ ಮಾಡಿ ಒಣಗಿಸುವುದು 5. ಸ್ಕೇಲಿಂಗ್ ಅಪ್ ಮತ್ತು ಫಾರ್ಮುಲೇಶನ್ಸ್. ಸಧ್ಯಕ್ಕೆ ಗೋಧಿ ತೌಡು, ಕಟ್ಟಿಗೆ ಪುಡಿ ಮತ್ತು ನೀರಿನ (3:1:4) ಮಾಧ್ಯಮವನ್ನು ಟ್ರೈಕೋಡರ್ಮಾ ಉತ್ಪಾದನೆಗೆ ಬಳಸಲಾಗುತ್ತಿದೆ. ಟ್ರೈಕೋಡರ್ಮಾ ಬೇರೆ ಬೇರೆ ರೂಪಗಳಲ್ಲಿ ದೊರಕುತ್ತಿದೆ (ಪುಡಿ, ದ್ರ ಇತ್ಯಾದಿ).
ಬಳಸುವ ಪದ್ಧತಿ
3. ಗ್ಲೈಯೋಕ್ಲಾಡಿಯಂ ವೈರನ್ಸ್
4. ಬೆಸಿಲಸ್ ಸಬಟಿಲಿಸ್
Source : ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು
ಮೂಲ : ಉಅಸ್ರ್ ಆಗ್ರೋ ಪೀಡಿಯಾ
ಕೊನೆಯ ಮಾರ್ಪಾಟು : 7/12/2020