অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಮಲದ ಗಿಡ

ಕಮಲದ ಗಿಡ

ಮನೆಯಲ್ಲೇ ಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು

ಭಾರತೀಯ ಮಹಿಳಾ ದೇವತೆಗಳ ಮೆಚ್ಚಿನ ಪುಷ್ಪ ಕಮಲ. ಹಾಗೆಂದೇ ನಮ್ಮಲ್ಲಿ ಕಮಲದ ಹೂವಿಗೆ ವಿಶೇಷವಾದ ಸ್ಥಾನವಿದೆ. ಕಮಲದ ಹೂವು ಮನೆಯಲ್ಲಿದ್ದರೆ ಆ ಕುಟುಂಬಕ್ಕೆ ಆಯಸ್ಸು,ಆರೋಗ್ಯ, ಸಕಲ ಸಮೃದ್ಧಿಗಳು ಲಭಿಸುತ್ತವೆ ಎನ್ನುವ ನಂಬಿಕೆಯಿದೆ. ಅದಕ್ಕಾಗಿಯೇ ಅನೇಕ ಮನೆಗಳ ಹಜಾರದ ಮೂಲೆಯೊಂದರಲ್ಲಿ ಸಣ್ಣ ಕಮಲವೊಂದು ನಗುತ್ತಿರುವುದನ್ನ ನೀವು ಕಾಣಬಹುದು.

ಈ ಅದೃಷ್ಟದ ಹೂವು ಸದಾ ನಗುತ್ತಾ ಇರಬೇಕು ಅಂದರೆ, ಅದು ಒಣಗದಂತೆ ಕಳೆಗುಂದದಂತೆ ನಾವು ಎಚ್ಚರಿಕೆ ವಹಿಸಬೇಕು. ನಿಮ್ಮ ಮನೆಯ ಕಮಲ ಕಳೆ ಕಳೆಯಾಗಿರುವಂತೆ ಮಾಡಲು ನಾವು ಕೆಲವು ತೋಟಗಾರಿಕಾ ಸಲಹೆಗಳನ್ನು ನಿಮಗಾಗಿ ತಂದಿದ್ದೇವೆ.

ಮನೆ ಕಮಲದ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ ಏಕೆಂದರೆ ಅವು ತುಂಬಾನೇ ಸೂಕ್ಷ್ಮವಾದವುಗಳು. ಕಮಲ ನೀರಿನಲ್ಲಿ ಬೆಳೆಯುವ ಸಸ್ಯವಾಗಿದ್ದರೂ ಅಗತ್ಯಕ್ಕಿಂತ ಹೆಚ್ಚಿನ ನೀರಿದ್ದರೆ ಈ ಗಿಡಗಳು ಸತ್ತುಹೋಗುತ್ತವೆ! ಹಾಗಿದ್ದರೆ ಬನ್ನಿ ಕಮಲವನ್ನು ಕಾಪಾಡುವದು ಹೇಗೆ ಅನ್ನುವುದನ್ನು ನೋಡೋಣ.

  1. ದೊಡ್ಡದಾದ ಪಾತ್ರೆಯಲ್ಲಿ

     

    ಕಮಲದ ಆರೈಕೆಯತ್ತ ಮೊದಲ ಹೆಜ್ಜೆಯೆಂದರೆ, ಕಮಲದ ಗಿಡವನ್ನು ಒಂದು ದೊಡ್ಡ ಪಾತ್ರೆಯಲ್ಲಿ ನೆಡುವುದು. ಬಟ್ಟಲು ಎಷ್ಟು ದೊಡ್ಡದಿರುತ್ತದೋ ಗಿಡವೂ ಅಷ್ಟು ದೊಡ್ಡದಾಗಿ ಬೆಳೆಯುತ್ತದೆ.

  2. ಬೇರೆ ಪುಷ್ಪಗಳೊಂದಿಗೆ ಬೆರೆಸದಿರಿ
  3. ಮನೆಯಲ್ಲಿ ಬೆಳೆಸುವ ಕಮಲದ ಜೊತೆಗೆ ಬೇರೆ ಯಾವ ಹೂವುಗಳನ್ನೂ ಬೆರೆಸಬೇಡಿರಿ. ಕಮಲದ ಗಿಡಗಳು ತುಂಬಾ ಸೂಕ್ಷ್ಮ ರೀತಿಯವಾಗಿದ್ದು ಅವು ಆರಾಮವಾಗಿ, ಸಮೃದ್ಧವಾಗಿ ಬೆಳೆಯಬೇಕೆಂದರೆ, ಈ ಗಿಡಗಳನ್ನು ಇರಿಸಿದ್ದ ಬಟ್ಟಲಲ್ಲಿ ಯಾವುದೇ ಹೂವುಗಳನ್ನು ಬೆಳೆಸಬೇಡಿ.

  4. ಒಂದು ಚಿಟಿಕೆ ಉಪ್ಪು
  5. ನಿಮ್ಮ ಮನೆಯ ಕಮಲದ ಗಿಡ ಹೆಚ್ಚು ದಿನ ಜೀವಿಸಬೇಕೆಂದಿದ್ದರೆ, ಅದನ್ನು ಇರಿಸಿದ್ದ ಬಟ್ಟಲಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿಡಲು ಮರೆಯದಿರಿ. ಈ ಚಿಟಿಕೆ ಉಪ್ಪು ನಿಮ್ಮ ಕಮಲದ ಗಿಡವನ್ನು ಹೆಚ್ಚು ದಿನಗಳ ಕಾಲ ಬಾಳಿಸಬಲ್ಲದು.

  6. ನೀರನ್ನು ಬದಲಾಯಿಸುತ್ತಿರಿ
  7. ಕಮಲವು ದೀರ್ಘಕಾಲ ಉಳಿಯಲು ಬಟ್ಟಲಿನಲ್ಲಿನ ನೀರನ್ನು ನಿಯಮಿತವಾಗಿ ಬದಲಾಯಿಸುತ್ತಿರಿ. ನೀರನ್ನು ಬದಲಾಯಿಸುವದರಿಂದ ಹಾಗೂ ತಾಜಾ ನೀರನ್ನು ಹಾಕುವದರಿಂದ ಬಟ್ಟಲಲ್ಲಿ ಫಂಗಸ್ ಬೆಳೆಯುವುದನ್ನು ತಪ್ಪಿಸಬಹುದು

  8. ಕೀಟಗಳನ್ನು ದೂರವಿರಿಸಿ
  9. ಬಟ್ಟಲಲ್ಲಿ ನೀರು ತುಂಬಿ ಗಿಡ ಬೆಳೆಸುವದು ಅಂದರೆ ಕೀಟಗಳನ್ನೂ ಬೆಳೆಸಿದಂತೆಯೆ. ಬಟ್ಟಲಿನ ನಿಂತ ನೀರಿನಲ್ಲಿ ಹುಟ್ಟಿಕೊಳ್ಳುವ ಕೀಟಗಳು ನಿಮ್ಮ ಕಮಲದ ಗಿಡವನ್ನು ತಿಂದು ಹಾಕುತ್ತವೆ. ಅದಕ್ಕೆ ಈ ಕೀಟಗಳನ್ನು ಆದಷ್ಟು ದೂರವಿರಿಸಿ. ಈ ಹೂ ಗಿಡಗಳಿಗೆ ಬಿಸಿಲು ಇಷ್ಟ, ನೆರಳು ಕಷ್ಟ ಮೇಲಿನ ಕೆಲವು ಸರಳ ಸೂಚನೆಗಳನ್ನು ಪಾಲಿಸಿ ಕಮಲದ ಗಿಡವನ್ನು ದೀರ್ಘಕಾಲದವರೆಗೆ ಚನ್ನಾಗಿ ಬೆಳೆಸಿರಿ. ಆರೋಗ್ಯವಂತ ಗಿಡದಲ್ಲಿ ನಳನಳಿಸುವ ಹೂವುಗಳು ಅರಳಲಿ. ಆ ಹೂವಿನಂತೆಯೇ ನಿಮ್ಮ ಮನೆ ಸಮೃದ್ಧಿಯಿಂದ ನಳನಳಿಸಲಿ. ಈ ಹೂ ಗಿಡಗಳಿಗೆ ಬಿಸಿಲು ಇಷ್ಟ, ನೆರಳು ಕಷ್ಟ

    ನಗರ ಪ್ರದೇಶದಲ್ಲಿ ಮನೆ ಮುಂದೆ ಹೂ ತೋಟ ಮಾಡಲು ಸ್ಥಳಾವಕಾಶವಿರುವುದಿಲ್ಲ. ಆದ್ದರಿಂದ ಹೆಚ್ಚಿನವರು ಮನೆಯ ಆವರಣದಲ್ಲಿ ಹೂ ಕುಂಡವಿಟ್ಟು ಬೆಳೆಯುತ್ತಾರೆ. ಆದರೆ ಎಲ್ಲಾ ಹೂ ಗಿಡಗಳನ್ನು ಹೂ ಕುಂಡದಲ್ಲಿ ಬೆಳೆಯಲು ಸೂಕ್ತವಲ್ಲ.

    ಇಲ್ಲಿ ನಾವು ಕೆಲವೊಂದು ಗಿಡಗಳ ಬಗ್ಗೆ ಹೇಳಲಾಗಿದೆ. ಹೂ ಕುಂಡದಲ್ಲಿ ಬೆಳೆಯಲು ಸೂಕ್ತವಾದ ಹೂ ಗಿಡಗಳೆಂದು ನಾವು ಬೆಳೆಯುತ್ತೇವೆ. ಆದರೆ ಈ ಗಿಡಗಳು ಚೆನ್ನಾಗಿ ಬೆಳೆಯಲು ಹೂ ತೋಟದಲ್ಲಿ ನೆಡುವುದು ಸೂಕ್ತ, ಏಕೆಂದರೆ ಈ ಗಿಡಗಳು ಸೊಂಪಾಗಿ ಬೆಳೆದು ಸುಂದರವಾದ ಹೂಗಳನ್ನು ಬಿಡಲು ಇವಕ್ಕೆ ಬಿಸಿಲು ಚೆನ್ನಾಗಿ  ಬೀಳಬೇಕು.  ಆದ್ದರಿಂದ ಬಿಸಿಲು  ತುಂಬಾ ಅಗತ್ಯವಿರುವ  ಗಿಡಗಳನ್ನು ಮನೆಯೊಳಗೆ ಬೆಳೆಯಬಾರದು.

    ಯಾವ ಗಿಡಗಳನ್ನು ಮನೆಯೊಳಗೆ ಬೆಳೆಯಬಾರದೆಂದು ನೋಡೋಣ ಬನ್ನಿ:

    ಆಡಂಮ್ಸ್ ನೀಡಲ್

    ಈ ಗಿಡದ ಹೂ ನೋಡಲು ತುಂಬಾ ಸುಂದರವಾಗಿರುತ್ತದೆ. ಈ ಗಿಡ ಹೂ ಬಿಡಲು ಸರಿಯಾದ ಬಿಸಿಲು ಅವಶ್ಯಕ. ಆದ್ದರಿಂದ ಇದನ್ನು ಹೂ ತೋಟದಲ್ಲಿ ಬೆಳೆಯುವುದು ಒಳ್ಳೆಯದು.

    ಲೋಳೆಸರ

    ಹೆಚ್ಚಿನವರು ಲೋಳೆಸರವನ್ನು ಮನೆಯೊಳಗೆ ಬೆಳೆಯುತ್ತಾರೆ. ಆದರೆ ಈ ಗಿಡ ಸಮೃದ್ಧಿಯಾಗಿ ಬೆಳೆಯಲು ಮನೆಯ ಹೊರಗಡೆ ಬೆಳೆಯುವುದು ಒಳ್ಳೆಯದು. ಆದರೆ ಈ ಗಿಡವನ್ನು ತುಂಬಾ ತಂಪಾದ ಪ್ರದೇಶದಲ್ಲಿ ನೆಡಬೇಡಿ. ಈ ಗಿಡ ಸೊಗಸಾಗಿ ಬೆಳೆಯಲು ಸೂರ್ಯನ ಕಿರಣಗಳು ಬೀಳುವಂತಿರಬೇಕು, ಒಣ ಮಣ್ಣಾಗಿರಬೇಕು.

    ಬೋನ್ಸಾಯಿ

    ಬೀನ್ಸಾಯಿ ಗಿಡಗಳನ್ನು ಬೆಳೆಸಲು ಇಚ್ಛೆ ಪಡುವುದಾದರೆ ಅದನ್ನು ಚೆನ್ನಾಗಿ ಬಿಸಿಲು ಬೀಳುವ ಕಡೆ ಇಡಿ. ಬೋನ್ಸಾಯಿ ಗಿಡಗಳಿಗೆ ಬಿಸಿಲು ಸರಿಯಾಗಿ ಬೀಳದಿದ್ದರೆ ಅವುಗಳು ಸೊರಗಿ ಹೋಗುತ್ತದೆ.

    ಬುಷ್ ಕ್ಲೋವರ್

    ಬುಷ್ ಕ್ಲೋವರ್ ನ ಹೂ ಬೇಸಿಗೆಯಲ್ಲಿ ಹೆಚ್ಚಾಗಿ ಅರಳುತ್ತದೆ. ಈ ಗಿಡಕ್ಕೆ ಒಂದು ವಾರಕ್ಕೊಮ್ಮೆ ನೀರು ಹಾಕಿದರೆ ಸಾಕು, ಸೂರ್ಯನ ಬಿಸಿಲು ನೇರವಾಗಿ ಬೀಳುವಂತಹ ಜಾಗದಲ್ಲಿ ಈ ಗಿಡವನ್ನು ನೆಡುವುದು ಒಳ್ಳೆಯದು.

    ಮೂಲ : ಬೋಲ್ಡ್ ಸ್ಕೈ(http://kannada.boldsky.com/ )

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate